ಲಾಲ್‌ಬಾಗ್ ಇತಿಹಾಸ ಹೇಳಲಿದೆ ಅಶರೀರವಾಣಿ
Team Udayavani, Sep 16, 2019, 3:08 AM IST
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) “ಬೆಂಗಳೂರು ದರ್ಶನ’ ಬಸ್ ಮಾದರಿಯಲ್ಲೇ “ಲಾಲ್‌ಬಾಗ್ ದರ್ಶನ’ಕ್ಕೆ ಪರಿಸರ ಸ್ನೇಹಿ “ಬಗ್ಗೀಸ್’ ಸಜ್ಜಾಗಿದೆ. ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನ ಪ್ರೇಕ್ಷಣಿಯ ಸ್ಥಳಗಳ ಇತಿಹಾಸ ಹೇಳುವ ಆಡಿಯೋ ತಂತ್ರಜ್ಞಾನವನ್ನು ಈ ಪರಿಸರ ಸ್ನೇಹಿ ವಾಹನದಲ್ಲಿ ಅಳವಡಿಸಲು ಮುಂದಾಗಿದೆ.
ಬಗ್ಗೀಸ್‌ನಲ್ಲಿ ಕುಳಿತು ಲಾಲ್‌ಬಾಗ್‌ನ ರಸ್ತೆಗಳಲ್ಲಿ ಸಂಚರಿಸುವಾಗ ಆ ರಸ್ತೆಯ ಇತಿಹಾಸ ಮಾತ್ರವಲ್ಲದೇ, ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಆಡಿಯೋ ಮಾಹಿತಿ ಪ್ರವಾಸಿಗರಿಗೆ ಸಿಗಲಿದೆ. ಮೆಟ್ರೋ ರೈಲಿನಲ್ಲಿ ನಿಲ್ದಾಣಗಳ ಬಗ್ಗೆ ಮಾಹಿತಿ ನೀಡಲು ಇರುವ ಆಡಿಯೋ ವ್ಯವಸ್ಥೆ ಮಾದರಿಯನ್ನೇ ಬಗ್ಗೀಸ್ ವಾಹನದಲ್ಲಿ ಬಳಸಲಾಗಿದೆ. ಸೇವೆ ಆರಂಭವಾದರೆ, ಆಡಿಯೋ ಮೂಲಕ ಇತಿಹಾಸ ತಿಳಿಸುವ ರಾಜ್ಯದ ಮೊದಲ ಪ್ರಯತ್ನ ಇದಾಗಲಿದೆ.
ಎರಡು ವಾರದಲ್ಲಿ ಆಡಿಯೋ ಅಳವಡಿಕೆ: ಈಗಾಗಲೇ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ವಾಹನಗಳಿಗೆ ಆಡಿಯೋ ಅಳವಡಿಕೆಯಾಗಲಿದೆ. ಲಾಲ್‌ಬಾಗ್‌ನ ಇತಿಹಾಸ, ಸಸ್ಯಗಳ ತಳಿ, ಲಾಲ್‌ಬಾಗ್ ತೆರೆ ಹಿಂದಿರುವ ಸಾಧಕರ ಬಗ್ಗೆ ತಿಳಿಸುವ ಮಹತ್ವದ ಉದ್ದೇಶಕ್ಕೆ ತೋಟಗಾರಿಕೆ ಇಲಾಖೆ ಕೈ ಹಾಕಿದೆ. ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಗೋಪುರ, ಫಲಪುಷ್ಪ ಪ್ರದರ್ಶನ ನಡೆಯುವ ಗಾಜಿನಮನೆ, ಲಾಲ್‌ಬಾಗ್ ಕೆರೆ, 4 ದ್ವಾರ, ಹೂದೋಟ, ಸಭಾಂಗಣ ಸೇರಿ ಸುಮಾರು 20ಕ್ಕೂ ಅಧಿಕ ಪ್ರೇಕ್ಷಣಿಕ ಸ್ಥಳಗಳಲ್ಲಿ ವಾಹನ ಸಂಚರಿಸಿ ಮಾಹಿತಿ ನೀಡಲಿದೆ.
ಲಾಲ್‌ಬಾಗ್‌ನಲ್ಲಿ ಈಗಾಗಲೇ ಇರುವ 5 ಪರಿಸರ ಸ್ನೇಹಿ ವಾಹನಗಳಲ್ಲಿ ಆಡಿಯೋ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಒಂದು ವಾಹನದಲ್ಲಿ 16 ಜನ ಕುಳಿತುಕೊಳ್ಳಲು ಸ್ಥಳವಿದ್ದು, ಒಬ್ಬರಿಗೆ 100 ರೂ. ಶುಲ್ಕವಿದೆ. 240 ಎಕರೆ, 4 ಕಿ.ಮೀ. ವ್ಯಾಪ್ತಿಯ ಲಾಲ್‌ಬಾಗ್ ಸುತ್ತಲು 45 ನಿಮಿಷಗಳಿಂದ 1 ಗಂಟೆ ಸಮಯ ಬೇಕಾಗುತ್ತದೆ. ಈ ಪರಿಸರ ಸ್ನೇಹಿ ವಾಹನವೊಂದಕ್ಕೆ 5 ಲಕ್ಷ ರೂ. ವೆಚ್ಚವಾಗಿದ್ದು, 8 ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ 20 ಕಿ.ಮೀ. ಸಂಚರಿಸುತ್ತದೆ. ಪ್ರಸ್ತುತ ಈ ವಾಹನಗಳು ದಿನಕ್ಕೆ 3-4 ಟ್ರಿಪ್ ಮಾಡಲಿದ್ದು, ನಿತ್ಯ 250ರಿಂದ 300 ಜನ ಪ್ರಯಾಣಿಸುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ 500ರ ಗಡಿ ದಾಟುತ್ತದೆ.
ವಾರ್ಷಿಕ 24 ಲಕ್ಷ ರೂ. ಆದಾಯ: ಲಾಲ್‌ಬಾಗ್‌ನಲ್ಲಿ 4 ದೊಡ್ಡ 1 ಸಣ್ಣ ಬಗ್ಗೀಸ್ ವಾಹನವನ್ನು ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ತೋಟಗಾರಿಕೆ ಇಲಾಖೆಗೆ ಒಂದು ವಾಹನಕ್ಕೆ ಒಂದು ತಿಂಗಳಿಗೆ 50 ಸಾವಿರ ರೂ. ನೀಡಲಿದ್ದು, ವರ್ಷಕ್ಕೆ ಇಲಾಖೆಗೆ 24 ಲಕ್ಷ ರೂ. ಆದಾಯ ಬರಲಿದೆ.
ಕನ್ನಡ- ಇಂಗ್ಲಿಷ್‌ನಲ್ಲಿ ಮಾಹಿತಿ: ಸಸ್ಯಕಾಶಿಗೆ ಭೇಟಿ ನೀಡುವ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯ, ವಿದೇಶಿ ಪ್ರವಾಸಿಗರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಾಲ್‌ಬಾಗ್‌ನ ಇತಿಹಾಸ ತಿಳಿಸುವ ಚಿಂತನೆಯಿದೆ. ಪ್ರಸ್ತುತ ವಾಹನ ಚಾಲಕರೇ ಎಲ್ಲಾ ಸ್ಥಳಗಳ ಮಾಹಿತಿ ನೀಡುತ್ತಿದ್ದು, ಆಡಿಯೋ ಅಳವಡಿಸಿದರೆ ಸಸ್ಯಕಾಶಿಯ ಇತಿಹಾಸ ಆಡಿಯೋ ಮೂಲಕವೇ ಕೇಳಬಹುದು. ಈ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಲಾಲ್‌ಬಾಗ್‌ನಲ್ಲಿರುವ ಗೋಪುರ, ಗಾಜಿನಮನೆ ಇತಿಹಾಸ ಬಹುತೇಕರಿಗೆ ತಿಳಿದಿಲ್ಲ. ಪರಿಸರ ಸ್ನೇಹಿ ಬಗ್ಗೀಸ್ ವಾಹನಗಳಿಗೆ ಆಡಿಯೋ ವ್ಯವಸ್ಥೆ ಅಳವಡಿಸಿದರೆ ಪ್ರವಾಸಿಗರಿಗೆ ಲಾಲ್‌ಬಾಗ್‌ನ ಇತಿಹಾಸ ತಿಳಿಸಲು ಸುಲಭವಾಗುತ್ತದೆ.
-ಸುನೀಲ್, ಬಗ್ಗೀಸ್ ವಾಹನ ಚಾಲಕ
* ಮಂಜುನಾಥ್ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.