ದಕ್ಷಿಣ ಆಫ್ರಿಕಾದಿಂದ ಬರಲಿವೆ ಬಿಳಿ ಸಿಂಹ, ಈಲಂಡ್ಸ್‌


Team Udayavani, Aug 19, 2018, 11:59 AM IST

dakshina.jpg

ಆನೇಕಲ್‌: ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ದೇಶ, ವಿದೇಶಿ ಪ್ರವಾಸಿಗರನ್ನು ಸೆಳೆಯಲು ವಿದೇಶಿ ಪ್ರಾಣಿಗಳ ವೀಕ್ಷಣೆಗೆ ಅನುವು ಮಾಡಿಕೊಡುವುದರ ಜೊತೆಗೆ ಮತ್ತಷ್ಟು ಆಕರ್ಷಣೆಯಾಗಲಿದೆ. ದಕ್ಷಿಣ ಆಫ್ರಿಕಾದ ಒಂದು ಜೋಡಿ ಬಿಳಿ ಸಿಂಹ, ಐದು ಈಲಂಡ್ಸ್‌ ಎಂಬ ಸಸ್ಯಹಾರಿ ಪ್ರಾಣಿಗಳನ್ನು ಸದ್ಯದಲ್ಲೇ ತರಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ ಪ್ರಾಣಿ ಪ್ರಿಯರ ಕಾತುರ ಹೆಚ್ಚಾಗಿದೆ.

ಸದ್ಯ ಉದ್ಯಾನವನದಲ್ಲಿ 95 ಪ್ರಭೇದದ ಸುಮಾರು 2000 ಸಾವಿರ ಪ್ರಾಣಿ, ಪಕ್ಷಿ, ಸರಿಸೃಪಗಳಿವೆ. ಇದರಲ್ಲಿ ವಿದೇಶದಿಂದ ತರಿಸಿಕೊಂಡಿರುವ ಜಿಬ್ರಾ ಕೂಡ ಸೇರಿದೆ. ಇತ್ತೀಚೆಗೆ ಮೈಸೂರು ಮೃಗಾಲಯದಲ್ಲಿ ಒಂದು ಜಿರಾಫೆ ತಂದು ಪ್ರವಾಸಿಗರನ್ನು ಸೆಳೆದಿದ್ದ ಉದ್ಯಾನವನದ ಅಧಿಕಾರಿಗಳು, ದಕ್ಷಿಣ ಆಫ್ರಿಕಾದಿಂದ ಒಂದು ಗಂಡು, ಒಂದು ಹೆಣ್ಣು ಬಿಳಿ ಸಿಂಹಗಳನ್ನು ಇದರ ಜೊತೆಗೆ ಭಾರತದ ಕಾಡಹಸುವನ್ನು ಹೋಲುವ (ನಿಲ್‌ಗಾಯ್‌) ಐದು ಈಲಂಡ್ಸ್‌ ಪ್ರಾಣಿಗಳನ್ನು ವಿಮಾನದ ಮೂಲಕ ತರಿಸಿಕೊಳ್ಳುವ ಸಿದ್ಧªತೆಗಳು ಭರದಿಂದ ಸಾಗಿವೆ.

ಬಿಳಿ ಸಿಂಹಗಳು ಮತ್ತು ಈಲಂಡ್ಸ್‌  ವಿದೇಶಿ ಪ್ರಾಣಿಗಳು ಒಟ್ಟಿಗೆ ತರಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕೊಂಚ ಕಾನೂನು ಮತ್ತು ಅನುಮತಿಗಳ ತೊಡಕಾದರೆ ಮೊದಲ ಹಂತದಲ್ಲಿ ಈಲಂಡ್ಸ್‌ ಪ್ರಾಣಿಗಳನ್ನು ಬರಮಾಡಿಕೊಳ್ಳಬಹುದು ನಂತರ ಎರಡನೇ ಹಂತವಾಗಿ ಒಂದು ಜೋಡಿ ಬಿಳಿ ಸಿಂಹಗಳನ್ನು ತರಸಿಕೊಳ್ಳುವ ಸಿದ್ಧತೆ ನಡೆದಿದೆ.

ಹೆಣ್ಣು, ಗಂಡು ಸೇರಿದಂತೆ ಐದು ಈಲಂಡ್ಸ್‌ ಪ್ರಾಣಿಗಳನ್ನು ವಿಮಾನಯಾನದ ಮೂಲಕ ತರಿಸಿಕೊಳ್ಳಬೇಕಿದೆ. ಇದಕ್ಕೆ ಸುಮಾರು 25 ಲಕ್ಷರೂ., ಹಾಗೂ ಎರಡು ಬಿಳಿ ಸಿಂಹಗಳನ್ನು ತರಿಸಿಕೊಳ್ಳಲು ಸುಮಾರು 35 ಲಕ್ಷ ರೂ., ವಿಮಾನಯಾನದ ವೆಚ್ಚವಾಗಬಹುದು ಎಂದು ಅಂದಾಜು ಮಾಡಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಲವು ವರ್ಷಗಳ ಹಿಂದೆ ವಿಮಾನಯಾನದಲ್ಲಿ ಲಂಡನ್‌ ಟೈಗರ್‌ಗಳನ್ನು ತರಿಸಿಕೊಳ್ಳಲಾಗಿತ್ತು. ಅದಾದ ಬಳಿಕ ಕಳೆದ ಒಂದು ವರ್ಷದ ಹಿಂದೆ 4 ಜಿಬ್ರಾಗಳನ್ನು ವಿಮಾನ ಯಾನದ ಮೂಲಕ ತರಿಸಿಕೊಳ್ಳಲಾಗಿತ್ತು. ಸದ್ಯ ಬಿಳಿ ಸಿಂಹ ಮತ್ತು ಈಲಂಡ್ಸ್‌ ಪ್ರಾಣಿಗಳನ್ನು ಬರಮಾಡಿಕೊಳ್ಳಲಾಗುತ್ತಿದೆ.

ದಕ್ಷಿಣ ಆಫ್ರಿಕಾದಿಂದ ಬಿಳಿ ಸಿಂಹಗಳನ್ನು ತರುವ ಪ್ರಯತ್ನ ಕಳೆದ ವರ್ಷವೇ ಮಾಡಲಾಗಿತ್ತು. ಆ ಸಮಯದಲ್ಲಿ ಬನ್ನೇರುಘಟ್ಟಕ್ಕೆ ಕಳುಹಿಸಬೇಕಿದ್ದ ಸಿಂಹ ಮೃತ ಪಟ್ಟಿದ್ದರಿಂದ ಅಂದಿನ ಪ್ರಯತ್ನ ವಿಫ‌ಲವಾಗಿತ್ತು. ಅದಾದ ಬಳಿಕ ಮತ್ತೆ ಅಧಿಕಾರಿಗಳು ದಕ್ಷಿಣ ಆಫ್ರಿಕಾದ ಇನ್‌xವಾನ ಮೃಗಾಲಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಳಿ ಸಿಂಹ, ಈಲಂಡ್ಸ್‌ ಪ್ರಾಣಿಗಳನ್ನು ಕಳುಹಿಸಲು ಒಪ್ಪಿಗೆ ನೀಡಲಾಗಿದೆ. ಇತ್ತ ಕೇಂದ್ರಮೃಗಾಲಯ ಪ್ರಾಧಿಕಾರ, ಹಾಗೂ ಅರಣ್ಯ, ಪರಿಸರ ಸಚಿವಾಲಯವೂ ಆಫ್ರಿಕಾದಿಂದ ಪ್ರಾಣಿಗಳನ್ನು ತರಿಸಿಕೊಳ್ಳಲು ಅನುಮತಿ ನೀಡಲಾಗಿದೆ. 

ಆದರೆ, ಒಂದು ದೇಶದಿಂದ ಮತ್ತೂಂದು ದೇಶಕ್ಕೆ ವನ್ಯಜೀವಿಗಳನ್ನು ಸಾಗಿಸಬೇಕಾದರೆ ಮುಖ್ಯವಾಗಿ ಡಿಜಿಎಫ್ಟಿ ( ಡೈರೆಕ್ಟರ್‌ ಜನರಲ್‌ ಆಫ್ ಫಾರಿನ್‌ ಟ್ರೇಡ್‌) ಅನುಮತಿ ಅವಶ್ಯ. ಇದಕ್ಕಾಗಿ ಕಳೆದ 4 ತಿಂಗಳ ಹಿಂದೆಯೇ ಮನವಿ ಮಾಡಲಾಗಿದೆ. ಸದ್ಯದಲ್ಲೇ ಅನುಮತಿ ಸಿಗುವ ಸಾಧ್ಯತೆ ಇದೆ. 
ಡಿಜಿಎಫ್ಟಿ ಅನುಮತಿ ಸಿಕ್ಕ ಬಳಿಕ ಪ್ರಾಣಿಗಳನ್ನು ಸಾಗಿಸುವ ಸಿದ್ಧತೆ ಹವಾಮಾನ ಎಲ್ಲವನ್ನು ಗಮನಿಸಿ ನಂತರ ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಳ್ಳಬೇಕು ಇದೆಲ್ಲದಕ್ಕೂ ಎರಡು ತಿಂಗಳು ಹಿಡಿಯಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ. 

ಮೃಗಾಲಯಕ್ಕೆ ಬರುವ ಪ್ರವಾಸಿಗರ ದೃಷ್ಟಿಯಿಂದ ಹಾಗು ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ದೇಶಿ ಪ್ರಾಣಿಗಳನ್ನು ತರಿಸಿಕೊಳ್ಳುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಗೋಕುಲ್‌ ತಿಳಿಸಿದರು.
ಮೊದಲ ಹಂತವಾಗಿ ಈಲಂಡ್ಸ್‌ ಎಂಬ ನಿಲ್‌ಗಾಯ್‌ ಹೊಲುವ ದಕ್ಷಿಣ ಆಫ್ರಿಕಾದ ಪ್ರಾಣಿಗಳನ್ನು ವಿಮಾನದ ಮೂಲಕ ತರಿಸಿಕೊಳ್ಳಲಾಗುತ್ತಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಸಿಕ್ಕಿದ್ದು ಇನ್ನೊಂದೆರಡು ಅನುಮತಿಗಾಗಿ ಕಾಯುತ್ತಿದ್ದೇವೆ. ಅದೂ ಸಿಕ್ಕ ಕೂಡಲೆ ಪ್ರಾಣಿಗಳನ್ನು ತರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಬಿಳಿ ಸಿಂಹಗಳನ್ನು ತರಿಸಿಕೊಳ್ಳುವ ಪ್ರಸ್ತಾಪ ಕೂಡ ಇದೆ. ಸದ್ಯ ಮೊದಲ ಹಂತವಾಗಿ ಈಲಂಡ್ಸ್‌ ತರಿಸಿಕೊಂಡು ನಂತರ ಬಿಳಿ ಸಿಂಹಗಳ ಪ್ರಯತ್ನ ಮಾಡಲಾಗುವುದು. ಸದ್ಯ ಮೃಗಾಲಯದ ಆವರಣದೊಳಗಿನ ಜಿರಾಫೆ, ಜಿಬ್ರಾ ಇರುವ ಭಾಗದಲ್ಲೇ ಬಯಲು ಆಲಯ ನಿರ್ಮಾಣವಾಗಿದ್ದು ಇಲ್ಲೇ ಈಲಂಡ್ಸ್‌ ಪ್ರಾಣಿಗಳಿಗೆ ಆಶ್ರಯ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿರಾಫೆ, ಜಿಬ್ರಾ, ಸಹ ದಕ್ಷಿಣ ಆಫ್ರಿಕಾದ ಪ್ರಾಣಿಗಳು. ಹೀಗಾಗಿ ಎಲ್ಲವನ್ನೂಒಟ್ಟಿಗೆ ನೋಡುವ ಅವಕಾಶವನ್ನು ಪ್ರವಾಸಿಗರಿಗೆ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

* ಮಂಜುನಾಥ್‌ ಬನ್ನೇರುಘಟ್ಟ

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.