ಇಡೀ ದಿನ ಜಡಿ ಮಳೆ… ಮಸುಕಾದ ಇಳೆ…
ರಾಜಧಾನಿಯಾದ್ಯಂತ ನಿರಂತರವಾಗಿ ಸುರಿದ ಸೋನೆ ಮಳೆ ಮೈಕೊರೆಯುವ ಚಳಿ ಇದರೂ ಮಳೆಯಲ್ಲಿ ಮಿಂದೆದ್ದ ಜನತೆ
Team Udayavani, Nov 12, 2021, 10:10 AM IST
Representative Image used
ಬೆಂಗಳೂರು: ಒಂದೆಡೆ ನಿರಂತರವಾಗಿ ಸುರಿಯುವ ಸೋನೆ ಮಳೆ, ಮತ್ತೂಂದೆಡೆ ಮೈಗೆ ಆಗಾಗ್ಗೆ ಬಂದು ತಾಗುವ ತಂಪುಗಾಳಿ. ಪರಿಣಾಮ ಷೇರು ಮಾರುಕಟ್ಟೆಯಂತೆ ಸರ್ರನೇ ಕುಸಿದ ತಾಪಮಾನ. ಇದೆಲ್ಲದರಿಂದ ಸಾಮಾನ್ಯ ಜನ ಒತ್ತಟ್ಟಿಗಿರಲಿ, ಸೂರ್ಯನೇ ಇಡೀ ದಿನ ಬೆಚ್ಚಗೆ ಹೊದ್ದು ಮಲಗಿಬಿಟ್ಟ! ಇಡೀ ನಗರ ಗುರುವಾರ ಮುಸುಕು ಹೊದ್ದು ಮಲಗಿತ್ತು.
ಬುಧವಾರ ಮಧ್ಯರಾತ್ರಿಯಿಂದಲೇ ಶುರುವಾದ ಜಡಿಮಳೆ ಬೆಳಗಾದರೂ ವಿರಾಮ ನೀಡಿರಲಿಲ್ಲ. ಆಗಾಗ್ಗೆ ಬಿಡುವು ನೀಡಿದಂತೆ ಕಂಡುಬರುತ್ತಿತ್ತು. ಹಾಗಂತ, ಹೊರಗೆ ಕಾಲಿಟ್ಟವರಿಗೆ ವರುಣನ ಅಭಿಷೇಕ ಆಗುತ್ತಿತ್ತು. ಹಾಗಾಗಿ, ಬೆಳಗ್ಗೆ ಹಾಲು-ಪತ್ರಿಕೆ ಹಾಕು ವವರು, ವಾಯು ವಿಹಾರಕ್ಕೆ ತೆರಳುವವರು, ಕೆಲಸಕ್ಕೆ ಧಾವಿಸುವ ಕಾರ್ಮಿ ಕರು, ಉದ್ಯೋಗಿಗಳಿಂದ ಹಿಡಿದು ಎಲ್ಲರೂ ಮೈಕೊರೆ ಯುವ ಚಳಿ ಇದ್ದರೂ ಮಳೆಯಲ್ಲಿ ಮಿಂದೆದ್ದರು.
ಇದನ್ನೂ ಓದಿ:- ಕುಶಾಲನಗರ ಕಳ್ಳತನ ಪ್ರಕರಣ : ಚಿನ್ನಾಭರಣ, ದ್ವಿಚಕ್ರ ವಾಹನ ವಶ
ಮುಗಿಲ ತುಂಬಾ ರಂಧ್ರಗಳನ್ನು ಕೊರೆದಂತಿತ್ತು ವರುಣನ ಆಟಾಟೋಪ. ಮಳೆ ಮತ್ತು ಚಳಿ ಎರಡೂ ಒಟ್ಟೊಟ್ಟಿಗೆ ದಾಳಿ ಇಟ್ಟಿದ್ದರಿಂದ ಹಿಮಾಲಯದ ತಪ್ಪಲಿನಲ್ಲಿ ಕಂಡುಬರುವಂತೆ ಚಳಿ ಆಗುತ್ತಿತ್ತು. ಇದರಿಂದ ಕೆಲ ದಿನಗಳ ಮಟ್ಟಿಗೆ ಮೂಲೆ ಸೇರಿದ್ದ ಕೊಡೆ, ಜಾಕೆಟ್‌ಗಳು ಕಾಣಸಿಕೊಂಡವು. ಒಲ್ಲದ ಮನಸ್ಸಿನಿಂದಲೇ ಜನ ಹೊರಗೆ ಕಾಲಿಟ್ಟರು.
ಅದೇ ರೀತಿ, ಸಂಜೆ ಕೆಲಸದಿಂದ ವಾಪಸ್ಸಾಗುವಾಗಲೂ ಇದು ಪುನರಾವರ್ತನೆ ಆಯಿತು. ಬಸ್‌ಗಳಿಗಾಗಿ ಕಾಯದೆ, ಜನ ಆಟೋ, ಟ್ಯಾಕ್ಸಿಗಳ ಮೊರೆಹೋದರು. ಇನ್ನು ಕೆಲವರು ದ್ವಿಚಕ್ರ ವಾಹನಗಳನ್ನು ಬದಿಗೊತ್ತಿ, ಆಟೋ ಏರಿದ್ದು ಕಂಡುಬಂತು. ಈ ಮಧ್ಯೆ ಸೂರ್ಯ ರಜೆ ಹಾಕಿದ ಬೆನ್ನಲ್ಲೇ ಚಂದ್ರನು ಕೂಡ ನಾಪತ್ತೆಯಾಗಿಬಿಟ್ಟಿದ್ದ. ಇನ್ನು ಕೆಲವೆಡೆ ಮಳೆ ಮತ್ತು ಚಳಿಯು ಶಾಲಾ-ಕಾಲೇಜು, ಕಚೇರಿಗೆ ತೆರಳುವ ಉತ್ಸಾಹಕ್ಕೆ ತಣ್ಣೀರೆರಚಿತು. ರಜೆ ಹಾಕಿ ಮನೆಯಲ್ಲಿ ಬೆಚ್ಚಗೆ ಕುಳಿತುಬಿಟ್ಟರು. ಚಳಿಯಿಂದ ಪಾರಾಗಲು ಜನರು ಸ್ವೇಟರ್, ದಪ್ಪನೆಯ ಬಟ್ಟೆ ಧರಿಸುವುದರ ಜತೆಗೆ ಕಾಫಿ, ಚಹಾ ಮತ್ತು ಕುರುಕಲು ತಿಂಡಿಯ ಮೊರೆಹೋದರು. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ “ಪೀಕ್ ಅವರ್’ನಲ್ಲಿ ಕೂಡ ವಾಹನದಟ್ಟಣೆ ಕಡಿಮೆ ಇತ್ತು.
ಮೂರೂ ಹೊತ್ತು ಒಂದೇ ತಾಪಮಾನ!
ಈ ಎಲ್ಲ ಬೆಳವಣಿಗೆಗಳಿಂದಾಗಿ ನಗರದ ತಾಪಮಾನ ಮೂರೂ ಹೊತ್ತು ಒಂದೇ ರೀತಿ ಇತ್ತು! ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿಯ ಅಂಕಿ-ಅಂಶಗಳ ಪ್ರಕಾರ ನಗರದ ಗರಿಷ್ಠ ಉಷ್ಣಾಂಶ 19.8 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 20 ಡಿಗ್ರಿ ಮತ್ತು 17.8 ಡಿಗ್ರಿ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 19.9 ಡಿಗ್ರಿ ಮತ್ತು 16.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸಾಮಾನ್ಯವಾಗಿ ನಗರದಲ್ಲಿ ನವೆಂಬರ್‌ನಲ್ಲಿ ಗರಿಷ್ಠ ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆ ದಾಖಲಾಗುವುದು ತುಂಬಾ ವಿರಳ. ಹಾಗಂತ, ಗುರುವಾರ ನಗರದ ಅತ್ಯಂತ ತಣ್ಣನೆಯ ದಿನ ಎಂದು ಹೇಳುವಂತಿಲ್ಲ. ಯಾಕೆಂದರೆ, ಈ ಬಗ್ಗೆ ನಿಖರ ದಾಖಲೆಗಳಿಲ್ಲ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.
ಇನ್ನೂ ಎರಡು ದಿನ ಮಳೆ?
ನಗರದಲ್ಲಿ ಇನ್ನೂ ಎರಡು ದಿನ ಮೋಡಕವಿದ ವಾತಾವರಣ ಹಾಗೂ ಆಗಾಗ್ಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ನ. 15ರವರೆಗೆ ಮಳೆ ಮತ್ತು ಮೋಡಕವಿದ ವಾತಾವರಣ ಇರಲಿದೆ. ಬೆಂಗಳೂರು ನಗರದಲ್ಲಿ ಕೂಡ ಇದು ಮುಂದುವರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.