ಪತ್ನಿ ಹತ್ಯೆಗೆ ಪತಿಯಿಂದಲೇ ಸುಪಾರಿ
Team Udayavani, Feb 4, 2018, 12:15 PM IST
ಬೆಂಗಳೂರು: ಎರಡನೇ ಪತ್ನಿಯ ಪುತ್ರಿ ಜತೆ ಅನುಚಿತ ವರ್ತನೆ ತೋರಿ ಜೈಲು ಸೇರಿದ್ದ ಮಲತಂದೆ, ಜೈಲಿನಿಂದ ಹೊರಬಂದ ಬಳಿಕ ಎರಡನೇ ಪತ್ನಿ ಮತ್ತು ಮಗಳ ಹತ್ಯೆಗೆ ಸುಪಾರಿ ಕೊಟ್ಟಿರುವ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಯ ಎರಡನೇ ಪತ್ನಿ ದೀಪಾ ಎಂಬಾಕೆ ಇದೀಗ ಪತಿ ತುಲೀಪ್ಸ್ ರೆಸಾರ್ಟ್ ಹಾಗೂ ಖಾಸಗಿ ಕಾಲೇಜೊಂದರ ಮಾಲೀಕ ಶ್ರೀಕುಮಾರ್, ಮೊದಲ ಪತ್ನಿಯ ಮಗಳ ಗಂಡ (ಅಳಿಯ) ನವೀನ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಮ್ಮ ಹಾಗೂ ಪುತ್ರಿಯ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. “ತಮ್ಮ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣ ವಾಪಸ್ ಪಡೆಯುವಂತೆ ಎರಡನೇ ಪತ್ನಿ ದೀಪಾಗೆ ಶ್ರೀಕುಮಾರ್ ಒತ್ತಾಯಿಸಿದ್ದ. ಇದಕ್ಕೆ ನಿರಾಕರಿಸಿದರಿಂದ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ ಏನು?: ಉದ್ಯಮಿ ಶ್ರೀಕುಮಾರ್, ಪತಿಯಿಂದ ವಿಚ್ಛೇದನ ಪಡೆದು, ಹೆಣ್ಣು ಮಗು ಹೊಂದಿದ್ದ ದೀಪಾರನ್ನು ಮದುವೆಯಾಗಿದ್ದ. ಈ ಮಧ್ಯೆ ದೀಪಾಳ ಅಪ್ರಾಪ್ತ ಮಗಳ ಜತೆ ಶ್ರೀಕುಮಾರ್ ಅನುಚಿತವಾಗಿ ವರ್ತಿಸಿದ್ದ. ಅಲ್ಲದೆ, ಆಕೆಯ ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಜತೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದೀಪಾ ಕೋಣನಕುಂಟೆ ಠಾಣೆಗೆ ದೂರು ನೀಡಿದ್ದರು. ಪೊಕೊÕà ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಶ್ರೀಕುಮಾರ್‌ನನ್ನು ಜೈಲಿಗೆ ಕಳುಹಿಸಿದ್ದರು. ಅಳಿಯ ನವೀನ್ ಕೆಲ ದಿನಗಳ ಹಿಂದಷ್ಟೇ ಮಾವ ಶ್ರೀಕುಮಾರ್‌ನನ್ನು ಬಿಡುಗಡೆ ಮಾಡಿಸಿದ್ದ.
ಹೊರ ಬಂದ ಆರೋಪಿ ಮತ್ತೆ ದೀಪಾರನ್ನು ಭೇಟಿಯಾಗಿ ಈ ಹಿಂದೆ ದಾಖಲಿಸಿದ್ದ ಪ್ರಕರಣ ವಾಪಸ್ ಪಡೆಯುವಂತೆ ಪೀಡಿಸಿದ್ದಾನೆ. ಇದಕ್ಕೆ ಒಪ್ಪದೇ ಇದ್ದಾಗ ದೀಪಾ ಮತ್ತು ಅಪ್ರಾಪೆ¤ ಪುತ್ರಿಯನ್ನು ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ದೀಪಾ ಮತ್ತೂಂದು ದೂರು ದಾಖಲಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. (ಬಾಕ್ಸ್) ಮಾರಕಾಸ್ತ್ರಗಳಿಂದ ಹಲ್ಲೆ ಜ.21ರಂದು ದೀಪಾ ಮತ್ತು ಪುತ್ರಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಜೆ.ಪಿ.ನಗರದಿಂದ ಕೋಣನಕುಂಟೆ ವರೆಗೆ ಹಿಂಬಾಲಿಸಿದ ಹಂತಕರು, ರಾತ್ರಿ 8 ಗಂಟೆ ಸುಮಾರಿಗೆ ಅಮೃತನಗರ ಬಳಿ ತಾಯಿ, ಮಗಳನ್ನು ಅಡ್ಡಗಟ್ಟಿದ್ದಾರೆ.
ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ರಕ್ಷಣೆಗಾಗಿ ಕೂಗಿಕೊಂಡಾಗ ಸ್ಥಳದಿಂದ ಹಂತಕರು ಪರಾರಿಯಾಗಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ದೀಪಾ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನವೀನ್ ಕೈವಾಡ: ಆರೋಪ ಜೈಲಿನಿಂದ ಬಿಡುಗಡೆಯಾದ ಶ್ರೀಕುಮಾರ್, “ಸಮಾಜದಲ್ಲಿ ನನ್ನ ಮರ್ಯಾದೆ ಹಾಳಾಗುತ್ತಿದೆ. ಕೂಡಲೇ ಲೈಂಗಿಕ ಕಿರುಕುಳದ ದೂರು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಹತ್ಯೆ ಗೈಯುವುದಾಗಿ ಬೆದರಿಕೆ ಹಾಕಿದ್ದರು. ಸುಪಾರಿ ಹಿಂದೆ ಶ್ರೀಕುಮಾರ್ ಹಾಗೂ ಈತನ ಕಾಲೇಜು ದಿನಗಳ ಪ್ರೇಯಸಿ ಉಷಾ ರೆಡ್ಡಿ, ಆರೋಪಿಯ ಅಳಿಯ ನವೀನ್ ಕೈವಾಡವಿದೆ ಎಂದು ದೀಪಾ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.