ಜೈವಿಕ ಉದ್ಯಾನವನದಲ್ಲಿ ಹಾರುವ ಹೂಗಳ ಲೋಕ
Team Udayavani, Oct 11, 2017, 11:21 AM IST
ಬೆಂಗಳೂರು: ಮೈ ತುಂಬ ಬಣ್ಣಬಣ್ಣ ದ ಆಕರ್ಷಕ ಚಿತ್ತಾರ ಹೊದ್ದಿರುವ ಚಿಟ್ಟೆಗಳು ಎಲ್ಲರನ್ನು ಆಕರ್ಷಿಸುತ್ತವೆ. ನಾಲ್ಕು ರೀತಿಯ ಜೀವನ ಕ್ರಮ ಹೊಂದಿರುವ ಚಿಟ್ಟೆಗಳ ಚಲನವಲನವೇ ನೋಡಲು ಅತ್ಯಂತ ಮನಮೋಹಕವಾಗಿರುತ್ತವೆ.
ರಾಜ್ಯ ಅರಣ್ಯ ಇಲಾಖೆ ಮತ್ತು ಬೆಂಗಳೂರು ಚಿಟ್ಟೆ ಕ್ಲಬ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿಟ್ಟೆಗಳ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಮೂಲಕ ಚಿಟ್ಟೆಗಳ ಜೀವನ, ವಾಸಿಸುವ ವಿಧಾನ ಇತ್ಯಾದಿ ಸೇರಿದಂತೆ ಅವುಗಳಿಗೆ ಸಂಬಂಧಿಸಿದ ಹತ್ತಾರು ಕುತೂಹಲಕಾರಿ ಅಂಶಗಳನ್ನು ತೆರೆದಿಡಲಾಗಿದೆ.
ಚಿಟ್ಟೆಯ ಜಾಡು ಹಿಡಿಯಲು ಉದ್ಯಾನವನದ ಸುತ್ತಲೂ ಒಂದು ದಿನದಲ್ಲೇ ಚಿಟ್ಟೆ ತಜ್ಞರು ಹಾಗೂ ಪರಿಸರ ಪ್ರೇಮಿಗಳನ್ನು ಒಳಗೊಂಡಿರುವ 10 ತಂಡಗಳು ಈ ಸರ್ವೇ ನಡೆಸಿವೆ. 97 ಪ್ರಭೇದದ ಚಿಟ್ಟೆಗಳ ಜತೆಗೆ ಒಂಟಿಯಾಗಿ ಹಾರಾಡುವ ಸುಮಾರು 5200 ಚಿಟ್ಟೆಗಳನ್ನು ಗುರುತಿಸಲಾಗಿದೆ.
ಚಿಟ್ಟೆಗಳ ಸಂತತಿ: ಯಾವ ಪ್ರಭೇದಕ್ಕೆ ಸೇರಿದ ಚಿಟ್ಟೆ ಅತಿ ಹೆಚ್ಚು ಪ್ರಮಾಣದಲ್ಲಿದೆ ಎಂಬುದನ್ನು ಸಮೀಕ್ಷೆ ವೇಳೆ ಕಲೆಹಾಕಲಾಗಿದೆ. ಒರಿಯೆಂಟಲ್ ಲೆಮನ್ ಎಮಿಗ್ರೆಂಟ್ ಹೆಸರಿನ 639 ಚಿಟ್ಟೆಗಳು, ಒರಿಯಂಟಲ್ ಕಾಮನ್ ಗ್ರಾಸ್ ಯೆಲ್ಲೋ 438, ರೆಡ್ ಲೈನ್ ಸ್ಮಾಲ್ ಗ್ರಾಸ್ ಯೆಲ್ಲೋ 377, ಇಂಡಿಯನ್ ಪಿಯೋನಿಯರ್ 332, ಒರಿಯಂಟಲ್ ಕಾಮನ್ ಲಿಯೋಪಡ್ ಹೆಸರಿನ 261 ಚಿಟ್ಟೆ ಪತ್ತೆಯಾಗಿದೆ.
ಹಾಗೆಯೇ ವಿವಿಧ ಪ್ರಭೇದಕ್ಕೆ ಸೇರಿದ ಚಿಟ್ಟೆಗಳು ಕುಟುಂಬವಾರು ಪತ್ತೆಯಾಗಿದೆ. ಹೆಸ್ಪರೈಡೀ ಪ್ರಭೇದದ 195, ಲೈಸಿನಿಡೀ ಪ್ರಭೇದದ 709, ನಿಂಪ್ಯಾಲಿಡೀ ಪ್ರಭೇದದ 1209, ಪ್ಯಾಪಿಲಿಯೋನಿಡೀ ಪ್ರಭೇದದ 366 ಹಾಗೂ ಪಯೇರಿಡೀ ಪ್ರಭೇದಕ್ಕೆ ಸೇರಿದ 2715 ಚಿಟ್ಟಿಗಳನ್ನು ಒಳಗೊಂಡಂತೆ 5194 ಚಿಟ್ಟೆಗಳು ಒಂಟಿಯಾಗಿ ಹಾರಾಡುತ್ತಿರುವುದು ಕಂಡುಬಂದಿದೆ. ರಿಯಾಡಿನಿಡೀ ಪ್ರಭೇದಕ್ಕೆ ಸೇರಿದ ಒಂದೇ ಒಂದು ಚಿಟ್ಟೆ ಸಿಕ್ಕಿಲ್ಲ.
ಚಿಟ್ಟೆಗಳ ವಲಸೆ: ಹವಾಮಾನದ ವೈಪರಿತ್ಯ ಹಾಗೂ ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಚಿಟ್ಟೆಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ಹಾಗೆಯೇ ಬೇರೆ ಬೇರೆ ಪ್ರದೇಶದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೂ ಚಿಟ್ಟೆಗಳು ಬರುತ್ತಿರುತ್ತವೆ. ಭಾರತೀಯ ಚಿಟ್ಟೆಗಳಾದ ಕಾಮನ್ ಕ್ರೌವ್, ಬಡಲ್ ಬ್ರಾಂಡೆಡ್ ಕ್ರೌವ್, ಬ್ಲೂ ಟೈಗರ್ ಮತ್ತು ಡಾರ್ಕ್ ಟೈಗರ್ ಚಿಟ್ಟೆಗಳು ಮಾನ್ಸೂನ್ ಮೊದಲು ಪಶ್ಚಿಮ ಘಟ್ಟದಿಂದ ವಲಸೆ ಬರುತ್ತವೆ. ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ವಾಪಾಸ್ ಅಲ್ಲಿಗೆ ಹೋಗುತ್ತವೆ. ಅಲ್ಬೋಟ್ರೋಸ್ ಚಿಟ್ಟೆಗಳು ಪ್ರತಿವರ್ಷ ಜನವರಿಯಲ್ಲಿ ಪಶ್ಚಿಮ ಘಟ್ಟದಿಂದ ವಲಸೆ ಬರುತ್ತದೆ.
ಚಿಟ್ಟೆಯ ಜೀವನಚಕ್ರ: ಚಿಟ್ಟೆಗಳು ಲೆಪಿಡೊಪ್ಟೆರಾ ಆರ್ಡರ್ಗೆ ಕೀಟ ಪ್ರಭೇದಕ್ಕೆ ಸೇರಿದವು. ಇವುಗಳಿಗೆ ಹುಟ್ಟುವಾಗ ರೆಕ್ಕೆಗಳು ಇರುವುದಿಲ್ಲ. ಮೊಟ್ಟೆಯೊಳಗಿನ ಗರ್ಭಾವಸ್ಥೆಯಿಂದ ಗೂಡುಕಟ್ಟುವವರೆಗೂ ಕೀಟದ ರೂಪದಲ್ಲಿ ಇರುತ್ತದೆ. ನಾಲ್ಕೈದು ವಾರದ ನಂತರ ಚಿಟ್ಟೆಯಾಗಿ ಮಾರ್ಪಾಟಾಗುತ್ತದೆ. ಬಹುತೇಕ ಚಿಟ್ಟೆಗಳು ಹಗಲಿನಲ್ಲಿ ಮಾತ್ರ ಕ್ರಿಯಾಶೀಲವಾಗಿರುತ್ತದೆ. ಚಿಟ್ಟೆಗಳು ಒಂದು ವಾರದಿಂದ ಒಂದು ವರ್ಷದ ಆಯಸ್ಸು ಹೊಂದಿರುತ್ತದೆ ಎಂಬುದು ಚಿಟ್ಟೆ ತಜ್ಞರ ಅಭಿಪ್ರಾಯ.
ರೆಕ್ಕೆ ರಚನೆಯಲ್ಲೂ ವ್ಯತ್ಯಾಸ: ಚಿಟ್ಟೆಗಳು ತಮ್ಮ ಬಣ್ಣಬಣ್ಣದ ರೆಕ್ಕೆಗಳಿಂದಲೇ ಪ್ರಸಿದ್ಧತೆ ಪಡೆದಿದೆ. ಚಿಟ್ಟೆಗಳ ರೆಕ್ಕೆಗಳು ಅವುಗಳ ಪ್ರಭೇದಕ್ಕೆ ಹೊಂದಿಕೊಂಡಂತೆ ಗಾತ್ರ, ಬಣ್ಣದ ವ್ಯತ್ಯಾಸ ಇರುತ್ತದೆ. ಚಿಟ್ಟೆಗಳು ಹಾರುವಾಗ ರೆಕ್ಕೆಯನ್ನು ಅರಳಿಸುತ್ತದೆ ಹಾಗೂ ಆಯಾಸವಾಗಿ ಕುಳಿತುಕೊಂಡಾಗ ರೆಕ್ಕೆಯನ್ನು ಸೇರಿಕೊಂಡು ಸಣ್ಣಕ್ಕೆ ಪಟಪಟನೆ ಹೊಡೆದುಕೊಳ್ಳುತ್ತಿರುತ್ತವೆ.
* ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.