ಕೃಷಿಗಾಗಿ ವಿಶ್ವದ ಅತಿ ಚಿಕ್ಕ ಕಿಸಾನ್ ಡ್ರೋನ್
Team Udayavani, Nov 21, 2021, 11:57 AM IST
ಬೆಂಗಳೂರು: ಇದು ವಿಶ್ವದ ಅತಿ ಚಿಕ್ಕ ಕೃಷಿ ಉದ್ದೇಶಿತ ಡ್ರೋನ್! ನಿಖರ ಬೇಸಾಯದ ಮುಂದುವರಿದ ಭಾಗದಂತೆ ರೋಗಬಾಧಿತ ಬೆಳೆಗಳಿಗೆ ನಿಖರವಾಗಿ ಇದು ರಾಸಾ ಯನಿಕ ಸಿಂಪಡಣೆ ಮಾಡಿ ಬರುತ್ತದೆ. ಈ ವ್ಯವಸ್ಥೆ ಮೂಲಕ ಅನಗತ್ಯ ಸಿಂಪಡಣೆಯನ್ನು ತಪ್ಪಿಸಲು ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಇದರ ಹೆಸರು “ಕಿಸಾನ್ ಡ್ರೋನ್’. ಸಾಮಾನ್ಯವಾಗಿ 10ರಿಂದ 15 ಲೀ. ರಾಸಾಯನಿಕ ವನ್ನು ಹೊತ್ತೂಯ್ಯುವ ದೈತ್ಯ ಡ್ರೋನ್‌ಗಳ ಬಳಕೆ ಜಮೀನುಗಳಲ್ಲಿ ಕಂಡುಬರುತ್ತವೆ. ಗಾತ್ರಕ್ಕೆ ತಕ್ಕಂತೆ ಕೆಲವೇ ಗಂಟೆಗಳಲ್ಲಿ ಹತ್ತಾರು ಎಕರೆ ಪ್ರದೇಶಗಳಲ್ಲಿ ಆ ಯಂತ್ರಗಳು ಸಿಂಪಡಣೆಯನ್ನೂ ಮಾಡಿಬರುತ್ತವೆ. ಆದರೆ, ಚಿಕ್ಕಹಿಡುವಳಿದಾರರಿಗೆ ಆ ಯಂತ್ರ ಕೈಗೆಟ ಕುವು ದಿಲ್ಲ. ಆ ಕೊರತೆಯನ್ನು ಈ ಅತಿಚಿಕ್ಕ ಡ್ರೋನ್ ನೀಗಿಸಲಿದೆ.
ಇದನ್ನೂ ಓದಿ:- ವಾಡಿ-ಸೊಲ್ಲಾಪುರ ಪ್ಯಾಸೆಂಜರ್ ರೈಲು ಆರಂಭ
ಸಮುದಾಯ ಅಥವಾ ಸಹಕಾರ ಕೃಷಿ ಮಾಡುವ ರೈತರಿಗೆ ಇದು ಸಾಕಷ್ಟು ಅನುಕೂಲ ಆಗಲಿದೆ. ಎಲ್ಲ ರೀತಿಯ ಬೆಳೆಗಳಿಗೆ ಈ ಡ್ರೋನ್ ಅನ್ನು ರಾಸಾಯನಿಕ ಸಂಪಡಣೆ ಮತ್ತು ಬೆಳೆಗಳ ಆರೋಗ್ಯ ನಿಗಾಕ್ಕೆ ಇದನ್ನು ಬಳಸಬಹುದಾಗಿದ್ದು, ಕೇವಲ ಅರ್ಧ ಲೀಟರ್ ರಾಸಾಯನಿಕವನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ ಒಂದು ಎಕರೆಗೆ ಸಿಂಪಡಣೆ ಮಾಡಲಿದೆ. ಬೆಳೆಗಳ ಹತ್ತಿರದಿಂದ ಅಂದರೆ 1 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿ ಇದು ಸಿಂಪಡಣೆ ಮಾಡಬಲ್ಲದು. ಈಗಿರುವ ಡ್ರೋನ್‌ಗಳು ಬೆಳೆಗಳಿಂದ 2 ಮೀಟರ್ ಎತ್ತರದಿಂದ ರಾಸಾಯನಿಕ ಸಿಂಪಡಣೆ ಮಾಡುತ್ತವೆ.
500 ಮಿ.ಲೀ. ದ್ರಾವಣ ಸೇರಿದಂತೆ ಒಟ್ಟಾರೆ ಇದರ ತೂಕ ಎರಡು ಕೆ.ಜಿ. ಇದ್ದು, ಇದರ ಮೊತ್ತ ಎರಡು ಲಕ್ಷ ರೂ. ಆಗಿದೆ. ನಾಲ್ಕು ನಳಿಕೆಗಳನ್ನು ಹೊಂದಿದ್ದು, ಅವು ಗಳ ಮೂಲಕ ರಾಸಾಯನಿಕ ಸಿಂಪಡಣೆ ಮಾಡುತ್ತದೆ. ಅಂದಹಾಗೆ, ಹುಬ್ಬಳ್ಳಿ ಮೂಲದ ಸ್ಕೈಕ್ರಾಫ್ಟ್$Õ ಎಂಬ ಸ್ಟಾರ್ಟ್‌ಅಪ್ ಸರ್ಕಾರದ ಎಲಿವೇಟ್ ಕರ್ನಾ ಟಕ ಯೋಜನೆ ಅಡಿ ವಿಶ್ವದ ಈ ಅತಿ ಚಿಕ್ಕ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ. ಮೂರು ದಿನಗಳ ಟೆಕ್ ಸಮಿಟ್ ನಲ್ಲಿ ಇದು ಆಕರ್ಷಣೆಯ ಕೇಂದ್ರಬಿಂದು ಕೂಡ ಆಗಿತ್ತು.
ವಾರ್ಷಿಕ ಒಂದು ಲಕ್ಷ ಡ್ರೋನ್ ತಯಾರಿಕೆ ಗುರಿ: ಈ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ ಸ್ಕೈಕ್ರಾಫ್ಟ್$Õ ಸಂಸ್ಥಾಪಕ ಶ್ರೀನಿವಾಸುಲು ರೆಡ್ಡಿ, “ಈಗಾ ಗಲೇ ಮಾರುಕಟ್ಟೆಯಲ್ಲಿ ನಾನಾ ಪ್ರಕಾರದ ಡ್ರೋನ್ ಗಳಿವೆ. ಆದರೆ, ಅತಿ ಚಿಕ್ಕ ಡ್ರೋನ್ ನಿಖರ ಬೇಸಾಯ ಪದ್ಧತಿಗೆ ಪೂರಕವಾಗಿದೆ. ರೋಗ ಬಾಧಿತ ಬೆಳೆಗೇ ನಿಖರವಾಗಿ ಇದು ಸಿಂಪಡಣೆ ಮಾಡುತ್ತದೆ. ಅದಕ್ಕೆ ಪೂರಕವಾದ ಸಾಫ್ಟ್ವೇರ್‌ಗಳನ್ನು ಅಳವಡಿಸಲಾಗಿರು ತ್ತದೆ. ಈ ವ್ಯವಸ್ಥೆಯಿಂದ ಗರಿಷ್ಠ ಶೇ. 20-30ರಷ್ಟು ರಾಸಾಯನಿಕ ಸಿಂಪಡಣೆ ಬಳಕೆ ಕಡಿಮೆ ಆಗಲಿದೆ’ ಎಂದರು.
“2018-19ರಲ್ಲಿ ಇದನ್ನು ಅಭಿವೃದ್ಧಿಪಡಿಸ ಲಾಯಿತು. 2019ರ ಭಾರತೀಯ ವೈಮಾನಿಕ ಪ್ರದ ರ್ಶನ ದಲ್ಲಿ ಪ್ರದರ್ಶನಕ್ಕೆ ಅವಕಾಶವೂ ದೊರೆಯಿತು’ ಎಂದ ಅವರು, ದೇಶದಲ್ಲಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರಿಗೆ ಈ ಅತ್ಯಾಧುನಿಕ ತಂತ್ರ ಜ್ಞಾನಗಳು ಈಗಲೂ ಮರೀಚಿಕೆ ಆಗಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ವಾರ್ಷಿಕ ಒಂದು ಲಕ್ಷ ಈ ಮಾದರಿಯ ಡ್ರೋನ್‌ಗಳನ್ನು ತಯಾರಿಸುವ ಗುರಿ ಹೊಂದಿದ್ದೇವೆ.
ಇದರ ಮುಖ್ಯ ಉದ್ದೇಶ ಮೊಬೈಲ್‌ಗಳಂತೆ ಎಲ್ಲ ರೈತರಿಗೂ ಈ ತಂತ್ರಜ್ಞಾನದ ಪ್ರಯೋಜನ ಸಿಗಬೇಕು. ಇದಕ್ಕಾಗಿ ಸರ್ವಿಸ್ ಪ್ರೊ ವೈಡರ್‌ಗಳನ್ನು ಹುಡುಕುತ್ತಿ ದ್ದೇವೆ. ಉದಾಹರಣೆಗೆ ಸಮುದಾಯ ಕೃಷಿ ಮಾಡು ವವರಿದ್ದರೆ, ಅವರನ್ನು ಸಂಪರ್ಕಿಸಿ ಅಲ್ಲಿ ಇದರ ಬಳಕೆ ಮಾಡಬಹುದು. ಆದರೆ, ಇದಕ್ಕೆ ಸರ್ಕಾರದ ನೆರವು ನಿರೀಕ್ಷಿಸುತ್ತಿದ್ದೇವೆ’ ಎಂದು ಅವರು ಹೇಳಿದರು.
ಆಹಾಡ್ರೋನ್
ರಟ್ಟಿನಿಂದ ಡ್ರೋನ್ ಮತ್ತು ಫೇಸ್ ಶೀಲ್ಡ್ ಕೂಡ ಸ್ಕೈಕ್ರಾಫ್ಟ್$Õ ತಯಾರಿಸಿದೆ. ಡ್ರೋನ್ ತಯಾರಿಕೆ ಕಲಿಕಾ ಹಂತದಲ್ಲಿರುವವರಿಗೆ ಇದು ಅನುಕೂಲ ಆಗಲಿದೆ. ಪ್ರಯೋಗದ ಹಂತದಲ್ಲಿ ಡ್ರೋನ್ ಆಕಸ್ಮಿಕವಾಗಿ ಕೆಳಗೆಬಿದ್ದರೆ, ಅದರಿಂದ ಸಾಕಷ್ಟು ವ್ಯಯ ಆಗುತ್ತದೆ. ಆದ್ದರಿಂದ ಡಬ್ಬಿಯ ಕಾಗದ ಅಥವಾ ರಟ್ಟಿನಿಂದ ಹೇಗೆ ತಯಾರಿಸಬಹುದು ಎಂಬುದನ್ನು ಈ ಸಂಸ್ಥೆ ತೋರಿಸಿಕೊಟ್ಟಿದೆ. ಇದಕ್ಕೆ “ಆಹಾಡ್ರೋನ್’ ಎಂದು ಹೆಸರಿಟ್ಟಿದೆ.
- – ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.