ಯುವಕನ ಹೃದಯ ಸಾಗಣೆ
Team Udayavani, Jan 21, 2017, 11:41 AM IST
ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡ ಯುವಕನೊಬ್ಬನ ಹೃದಯವನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಿಂದ ನಾರಾಯಣ ಹೆಲ್ತ್ ಸಿಟಿಗೆ ರವಾನೆಯಾಗಿದ್ದು, 56 ವರ್ಷದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪಿಯು ವಿದ್ಯಾರ್ಥಿಯಾಗಿದ್ದ 17 ವರ್ಷದ ಯುವಕ ಜ.12ರಂದು ಜೆ.ಪಿ.ನಗರ ಬಳಿ ರಸ್ತೆ ಅಪಘಾತಕ್ಕೀಡಾಗಿದ್ದ.
ತಕ್ಷಣ ಆತನನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜ.19ರಂದು ಮೆದುಳು ನಿಷ್ಕಿೃಯಗೊಂಡಿತು. ಈ ಬಗ್ಗೆ ಮಾಹಿತಿ ಪಡೆದ ಝೆಡ್‌ಸಿಸಿಕೆ ಸದಸ್ಯರು ಅಂಗಾಂಗ ದಾನಕ್ಕೆ ಮೃತ ಯುವಕನ ಪೋಷಕರ ಮನವೊಲಿಸಿದರು. ಯುವಕನ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ದೊಮ್ಮಲೂರಿನ ನಿವಾಸಿ 56 ವರ್ಷದ ವ್ಯಕ್ತಿಗೆ ಹೃದಯ ಅಳವಡಿಸಲು ಸಿದ್ಧತಾ ಕಾರ್ಯಗಳನ್ನು ನಡೆಸಲಾಯಿತು.
ಸಂಚಾರ ಪೊಲೀಸರ ನೆರವಿನೊಂದಿಗೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, 25 ಕಿ.ಮೀ. ದೂರ ಕೇವಲ 19 ನಿಮಿಷದಲ್ಲಿ ಹೃದಯವನ್ನು ತಲುಪಿಸಲಾಯಿತು. ಕಿಡ್ನಿ, ಕಾರ್ನಿಯಾ, ಯಕೃತ್ ಅನ್ನು ದಾನ ಮಾಡಲಾಗಿದ್ದು, ಇನ್ನು ಯಾರಿಗೆ ನೀಡಬೇಕು ಎಂಬುದು ನಿರ್ಧರಿಸಿಲ್ಲ. ಒಂದು ಕಿಡ್ನಿ ಮಾತ್ರ ಫೋರ್ಟಿಸ್ ಆಸ್ಪತ್ರೆಯಲ್ಲಿನ 44 ವರ್ಷದ ವ್ಯಕ್ತಿಗೆ ಬಳಕೆ ಮಾಡಲಾಗಿದೆ. ತಜ್ಞ ವೈದ್ಯ ಡಾ.ಮೋಹನ್ ಕೇಶವಮೂರ್ತಿ ನೇತೃತ್ವದ ವೈದ್ಯಕೀಯ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.