ಕೆಲಸಕ್ಕಿದ್ದ ಚಿನ್ನದಂಗಡಿಯಲ್ಲಿ ಚಿನ್ನ ಕದ್ದು ಮೋಜು: ಇಬ್ಬರ ಬಂಧನ
Team Udayavani, Jul 19, 2022, 1:06 PM IST
ಬೆಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಮಾರಾಟ ಪ್ರತಿನಿಧಿ ಸೇರಿ ಇಬ್ಬರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರದ ಚೇತನ್ ನಾಯ್ಡು (22) ಮತ್ತು ಆತನ ಸ್ನೇಹಿತ ವಿಜಯ್(29) ಬಂಧಿತರು. ಆರೋಪಿಗಳಿಂದ 26.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ಚಿನ್ನ ಮಾರಿದ ಹಣದಲ್ಲಿ ಖರೀದಿಸಿದ್ದ ಒಂದು ಕಾರು, 1 ದ್ವಿಚಕ್ರ ವಾಹನ ವಶಕ್ಕೆಪಡೆಯಲಾಗಿದೆ.ಯಶವಂತಪುರದಒಂದನೇ ಮುಖ್ಯರಸ್ತೆಯ “ದಿ ಬೆಸ್ಟ್ ಜ್ಯುವೆಲ್ಲರಿ’ ಅಂಗಡಿಯಲ್ಲಿ ಆರೋಪಿ ಚಿನ್ನಾಭರಣ ಕಳವು ಮಾಡಿದ್ದರು.
ಆರೋಪಿಗಳ ಪೈಕಿ ಚೇತನ್ ನಾಯ್ಡು ಕಳೆದ 4 ವರ್ಷಗಳಿಂದ ಜ್ಯುವೆಲ್ಲರಿ ಶಾಪ್‌ನಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ. ಇತ್ತೀಚೆಗೆ ಗ್ರಾಹಕರೊಬ್ಬರು ಚಿನ್ನದ ಸರಕ್ಕೆ ಆರ್ಡರ್ ಕೊಟ್ಟಿದ್ದರು. ಚಿನ್ನದ ಸರ ಸಿದ್ಧಪಡಿಸಿ ಅಂಗಡಿಯ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಹಾಕಲಾಗಿತ್ತು. ಗ್ರಾಹಕರು ಅಂಗಡಿಗೆ ಬಂದಾಗ ಸರ ನೀಡಲು ಡಿಸ್‌ಪ್ಲೇ ಬೋರ್ಡ್ ನೋಡಿದಾಗ ಸರ ಇರಲಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಕಾಣಿಸಿಲ್ಲ. ಈ ವೇಳೆ ಅಂಗಡಿ ಮಾಲೀಕರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚೇತನ್ ನಾಯ್ಡು ಸರವನ್ನು ಎತ್ತಿಕೊಂಡು ಜೇಬಿಗೆ ಹಾಕಿಕೊಳ್ಳುವುದು ಸೆರೆಯಾಗಿತ್ತು. ಬಳಿಕ ಅಂಗಡಿ ಪರಿಶೀಲಿಸಿದಾಗ ಕೆಲ ಚಿನ್ನಾಭರಣಗಳು ಇಲ್ಲದಿರುವುದು ಕಂಡು ಬಂದಿದೆ.
ಈ ವೇಳೆ ಅಂಗಡಿ ಮಾಲೀಕರು ಯಶವಂತಪುರ ಠಾಣೆಗೆ ಚೇತನ್ ನಾಯ್ಡು ವಿರುದ್ಧ ದೂರುನೀಡಿದ್ದರು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದು, ಈತನ ಮಾಹಿತಿ ಮೇರೆಗೆ ಆತನ ಸ್ನೇಹಿತ ವಿಜಯ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಒಂದು ವರ್ಷದಿಂದ ಒಂದೊಂದೇ ಅಭರಣ ಕಳವು! :
ಕಳೆದ ಒಂದು ವರ್ಷದಿಂದ ಆರೋಪಿ ಜ್ಯುವೆಲ್ಲರಿ ಶಾಪ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಒಂದೊಂದೆ ಚಿನ್ನಾಭರಣ ಕಳವು ಮಾಡುತ್ತಿದ್ದು, ಬಳಿಕ ಈ ಆಭರಣವನ್ನು ಬೇರೆಡೆ ಮಾರಲಾಗಿದೆ ಎಂದು ಪುಸ್ತಕದಲ್ಲಿ ನೋಂದಾಯಿಸುತ್ತಿದ್ದ. ಆದರೆ, ಆಭರಣವನ್ನು ಸ್ನೇಹಿತ ವಿಜಯ್‌ಗೆ ಕೊಟ್ಟು ಬೇರೆಡೆ ಗಿರವಿ ಅಥವಾ ಮಾರಾಟ ಮಾಡಿ ಬಂದ ಹಣವನ್ನು ಇಬ್ಬರು ಹಂಚಿಕೊಳ್ಳುತ್ತಿದ್ದರು. ಈ ರೀತಿಯ ಕಳ್ಳತನ ಕೃತ್ಯದಿಂದ ಚೇತನ್ ನಾಯ್ಡು ಮೋಜು-ಮಸ್ತಿ ಮಾಡುತ್ತಿದ್ದು, 6 ಲಕ್ಷ ರೂ. ಮೌಲ್ಯದ ಸೆಕೆಂಡ್ ಹ್ಯಾಂಡ್ ಕಾರು, ಒಂದು ಬೈಕ್ ಖರೀದಿಸಿದಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.