ಮಾಲೀಕರಿಗೆ ವಂಚಿಸಿ ಕಾರುಗಳ ಕಳ್ಳತನ
Team Udayavani, Dec 27, 2022, 10:05 AM IST
ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐಷಾರಾಮಿ ಕಾರುಗಳ ಕಳವು ಮತ್ತು ಮಾರಾಟ ಮಾಡಿಸುವುದಾಗಿ ನಂಬಿಸಿ ಕಾರು ಕೊಂಡೊಯ್ದು ಹಣ ನೀಡದೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳು ಕಬ್ಬನ್ ಪಾರ್ಕ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ಸೈಯದ್ ಜಿಬ್ರಾನ್ (28) ಮತ್ತು ತೆಲಂಗಾಣದ ಹೈದರಾಬಾದ್‌ನ ಪರ್ವತಮ್ ಹೇಮ್‌ಚಂದ್ರ (42) ಬಂಧಿತರು. ಇಬ್ಬರು ಆರೋಪಿಗಳಿಂದ 8.92 ಕೋಟಿ ರೂ. ಮೌಲ್ಯದ ಮರ್ಸಿ ಡಿಸ್ ಬೆಂಜ್, ರೇಂಜ್ ರೋವರ್, ಮಹೀಂದ್ರ ತಾರ್, ಆಡಿ ಕ್ಯೂ ಸೇರಿ ವಿವಿಧ ಕಂಪನಿಯ 12 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ಸೈಯದ್ ಜಿಬ್ರಾನ್, ಕಳೆದ ಐದಾರು ವರ್ಷಗಳಿಂದ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟಗಾರನಾಗಿದ್ದು, ನೆರೆ ರಾಜ್ಯಗಳಲ್ಲಿಯೂ ಸಂಪರ್ಕ ಹೊಂದಿದ್ದಾನೆ. ಇತ್ತೀಚೆಗೆ ತಮಿಳುನಾಡಿನ ಚೆನ್ನೈ ಮೂಲದ ರಾಜು ಎಂಬುವರಿಗೆ ಪ್ರವೀಣ್ ಎಂಬಾತನಿಂದ ಪರಿಚಯವಾಗಿದ್ದ ಆರೋಪಿ, ನಿಮ್ಮ ಬಳಿಯ ರೇಂಜ್ ರೋವರ್ ಕಾರು ಅನ್ನು ಉತ್ತಮ ಬೆಲೆಗೆ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿದ್ದಾನೆ. ಅಲ್ಲದೆ, ಒಂದು ತಿಂಗಳ ಒಳಗೆ ಮಾರುವುದಾಗಿ ನಂಬಿಸಿ ಮುಂಗಡ 18 ಲಕ್ಷ ರೂ. ವರ್ಗಾವಣೆ ಮಾಡಿದ್ದ. ಹೀಗಾಗಿ ರಾಜು ಕಾರಿನ ಅಸಲಿ ದಾಖಲೆಗಳನ್ನು ನೀಡಿದ್ದರು. ಆದರೆ, ಆರೋಪಿ ಒಂದೂವರೆ ತಿಂಗಳಾದರೂ ಬಾಕಿ ಹಣ ನೀಡಿಲ್ಲ. ಜತೆಗೆ ಕಾರನ್ನು ಹಿಂದಿರಿಗಿಸಿಲ್ಲ. ಕರೆ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ. ಈ ಮಧ್ಯೆ ಬೆಂಗಳೂರಿಗೆ ಬಂದು ಆರೋಪಿ ಯನ್ನು ಸಂಪರ್ಕಿಸಿ ಪ್ರಶ್ನಿಸಿದಾಗ ಕಾರಿನ ಬಗ್ಗೆ ಪ್ರಶ್ನಿಸಿದರೆ ಒಂದು ಗತಿ ಕಾಣಿಸುತ್ತೇನೆ ಎಂದು ಬೆದರಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕಳವು ಕಾರು ಖರೀದಿ ಆರೋಪಿ ಬಂಧನ: ಮತ್ತೂಂದು ಪ್ರಕರಣದಲ್ಲಿ ಕಳವು ಬೆಂಜ್ ಕಾರನ್ನು ಖರೀದಿಸಿದ ಪರ್ವತಮ್ ಹೇಮ ಚಂದ್ರ ಎಂಬಾತನನ್ನು ಬಂಧಿಸಲಾಗಿದೆ. ಸೈಯದ್ ಜಿಬ್ರಾನ್ ಸೂಚನೆ ಮೇರೆಗೆ ಕಿರಣ್ ಮತ್ತು ಮೊನಿಷ್ ಗಜೇಂದ್ರ ಎಂಬುವರು ಠಾಣೆ ವ್ಯಾಪ್ತಿಯ ಹೋಟೆಲ್‌ವೊಂದರ ಮುಂಭಾಗ ಬೆಂಜ್ ಕಾರನ್ನು ಕಳವು ಮಾಡಿದ್ದರು. ಈ ಕಾರನ್ನು ಆರೋಪಿಗಳು ಕಳವು ಮಾಲು ಎಂದೂ ಸೂಚಿಸಿದರೂ ಕಡಿಮೆ ಮೊತ್ತಕ್ಕೆ ಸಿಗುತ್ತದೆ ಎಂದು ಹೇಮ ಚಂದ್ರ ಕಾರು ಖರೀದಿಸಿದ್ದ. ಹೀಗಾಗಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಐಷಾರಾಮಿ ಕಾರುಗಳೇ ಟಾರ್ಗೆಟ್ : ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಆರೋಪಿಗೆ ನೆರೆ ರಾಜ್ಯದ ಆರೋಪಿಗಳ ಜತೆ ಸಂಪರ್ಕ ಇರುವ ಸಾಧ್ಯತೆ ಯಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆಗೆ ಸೂಚಿಸಲಾಗಿದೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದರು.
ಐಷಾರಾಮಿ ಕಾರು ಮಾಲೀಕರಿಗೆ ಎಷ್ಟು ಹಣ ಕೊಟ್ಟು ಕಾರನ್ನು ಮಾರಾಟ ಮಾಡಿ ಕೊಡುವು ದಾಗಿ ಯಾಮಾರಿಸುತ್ತಿದ್ದರು. ಯಾವ ರೀತಿ ಮಾಲೀಕರಿಗೆ ಆಮಿಷವೊಡ್ಡಿ ಮೋಸ ಮಾಡುತ್ತಿದ್ದರು. ಮಾಲೀಕರು ಹೇಗೆ ಅವರ ಮಾತನ್ನು ನಂಬುತ್ತಿದ್ದರು ಎಂಬುದು ಆಶ್ಚರ್ಯವಾಗಿದೆ. ಇದೊಂದು ವ್ಯವಸ್ಥಿತ ಜಾಲ ಇದ್ದಂತಿದೆ. ಇಂತಹ ಐಷಾರಾಮಿ ಕಾರು ಮಾಲೀಕರನ್ನು ಮನವೊಲಿಸುವ ಶೈಲಿ ವಿಚಿತ್ರವಾಗಿದೆ. ಹೀಗಾಗಿ ಕಾರು ಮಾಲೀ ಕರನ್ನು ಕರೆದು ವಿಚಾರಣೆ ನಡೆಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಚಾಲನೆ : ನೆರೆ ರಾಜ್ಯಗಳಲ್ಲಿರುವ ಫೈನಾನ್ಸ್ ಕಂಪನಿಗಳು ಮತ್ತು ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ವ್ಯವಹಾರ ನಡೆಸುವ ವ್ಯಕ್ತಿಗಳ ಸಂಪರ್ಕ ಹೊಂದಿರುವ ಸೈಯದ್ ಜಿಬ್ರಾನ್, ಫೈನಾನ್ಸ್ ಕಂಪನಿ ಅಥವಾ ಫೈನಾನ್ಸಿಯರ್ ಗಳು ಅಡಮಾನ ಇಟ್ಟುಕೊಂಡಿರುವ ಐಷಾರಾಮಿ ವಾಹನಗಳನ್ನೇ ಆರೋಪಿ ಟಾರ್ಗೆಟ್ ಮಾಡುತ್ತಿದ್ದ. ಅವುಗಳನ್ನು ಉತ್ತಮ ಬೆಲೆಗೆ ನಗರದಲ್ಲಿ ಮಾರಾಟ/ಬಾಡಿಗೆ ನೆಪದಲ್ಲಿ ಅಸಲಿ ದಾಖಲೆಗಳ ಜತೆ ಕಾರುಗಳನ್ನು ನಗರಕ್ಕೆ ತರುತ್ತಿದ್ದ. ನಂತರ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ. ಖರೀದಿಸಿದ ವ್ಯಕ್ತಿಗೆ ಕೆಲ ದಿನಗಳ ಕಾಲ ಬಳಸಿ, ಕಾರು ಇಷ್ಟವಾಗದಿದ್ದಾಗ ಈತನೇ ಮಧ್ಯವರ್ತಿಯಾಗಿ ಬಂದು ಅದೇ ಕಾರನ್ನು ಮತ್ತೂಬ್ಬ ವ್ಯಕ್ತಿಗೆ ಮಾರಾಟ ಮಾಡುತ್ತಿದ್ದ. ಇನ್ನು ಕೆಲವರಿಗೆ ದಾಖಲೆಗಳನ್ನು ಕೊಡದೆ, ನಕಲಿ ನಂಬರ್ ಪ್ಲೇಟ್‌ಗಳನ್ನು ಹಾಕಿಕೊಂಡು ಕಾರು ಚಲಾಯಿಸುವಂತೆ ಸಲಹೆ ನೀಡುತ್ತಿದ್ದ. ಅಂತಹ ಪ್ರಕರಣಗಳು ಪತ್ತೆಯಾಗಿವೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಜಾರ್ಖಂಡ್, ಛತ್ತೀಸ್ ಗಢ ಸೇರಿ ವಿವಿಧ ರಾಜ್ಯಗಳ ಕಾರುಗಳ ಮಾಲೀಕರಿಗೆ ವಂಚಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.