ಪ್ರವಾಸಿ ತಾಣಗಳ ಅಭಿವೃದ್ಧಿಗೆ ಥೀಮ್‌ ಬೇಸ್ಡ್ ಯೋಜನೆ


Team Udayavani, May 14, 2017, 11:33 AM IST

Priya.jpg

“ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾದ ಪ್ರಿಯಾಂಕ್‌ ಖರ್ಗೆ ಸಿದ್ದರಾಮಯ್ಯ ಸಂಪುಟದ “ಯಂಗ್‌ ಬ್ಲಿಡ್‌’. ಸಂಪುಟ ಪುನಾರಚಣೆ ಸಂದರ್ಭದಲ್ಲಿ ಮಂತ್ರಿಮಂಡಲಕ್ಕೆ ಪ್ರವೇಶಗೊಂಡವರು’

ಮೊದಲ ಬಾರಿ ಸಚಿವರಾಗಿ ಎರಡು ಮಹತ್ತರ ಖಾತೆ ನಿರ್ವಹಿಸಿದ್ದೀರಿ? ನಿಮ್ಮ ಪ್ರಕಾರ ಸರ್ಕಾರದ ಸಾಧನೆ ಹೇಗಿದೆ?
      ಮಂತ್ರಿಮಂಡಲಕ್ಕೆ ನಾನು ಹೊಸಬ. ಸಚಿವನಾಗಿ ವಹಿಸಿರುವ ಖಾತೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿದ್ದೇನೆ.  ಕ್ರಾಂತಿಕಾರಕ ಬದಲಾವಣೆ ಮಾಡುತ್ತೇನೆ ಎನ್ನುವ ¸‌ಭ್ರಮೆ ಇಲ್ಲ. ಇರುವ ಅವಕಾಶ ಬಳಸಿಕೊಂಡು ಇಲಾಖೆಗೆ ಶಕ್ತಿ ನೀಡುವ ಕೆಲಸ ಮಾಡುತ್ತಿದ್ದೆನೆ. ನಾಲ್ಕು ವರ್ಷಗಳ ನಮ್ಮ ಸರ್ಕಾರದ ಸಾಧನೆ ಉತ್ತಮವಾಗಿದೆ. ಜನಪರ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. ಎಲ್ಲ ವರ್ಗದ ಬಡವರ ಕೇಂದ್ರೀಕೃತ ಯೋಜನೆಗಳು ಅನುಷ್ಟಾನಗೊಂಡಿವೆ.

ನೀವು ಹೊಣೆಗಾರಿಕೆ ವಹಿಸಿಕೊಂಡಿರುವ ಪ್ರವಾಸೋದ್ಯಮ ಹಾಗೂ ಐಟಿ-ಬಿಟಿ ಇಲಾಖೆ ಸಾಧನೆ ಹೇಗಿದೆ?
      ರಾಜ್ಯದ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ, ದೇಶೀಯ ಹಾಗೂ ವಿದೇಶಿ ಪ್ರವಾಸಿಗರನ್ನುಆಕರ್ಷಿಸುವ ಯೋಜನೆ ರೂಪಿಸಲಾಗಿದೆ. ಸಾಮಾಜಿಕ ಜಾಲತಾಣ ಮೂಲಕ ನಮ್ಮ ರಾಜ್ಯದ ಪ್ರವಾಸ ಸ್ಥಳಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಕೆಲಸ ಸಹ ಮಾಡಲಾಗುತ್ತಿದೆ. ಐಟಿ-ಬಿಟಿ ಇಲಾಖೆಯು ಉತ್ತಮ ಸಾಧನೆ ಮಾಡಿದೆ.

ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ ಎಂಬ ಆರೋಪ ಇದೆಯಲ್ಲಾ?
      ಎಲ್ಲ ಪ್ರವಾಸಿ ತಾಣಗಳನ್ನು ಒಮ್ಮೆಲೆ ಅಭಿವೃದ್ಧಿ ಮಾಡಲು ಹೊರಟೆ ಕಷ್ಟ ಆಗುತ್ತದೆ. ನಾನು ಥೀಮ್‌  ಬೇಸ್ಡ್ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಈ ವರ್ಷ 20 ಪ್ರಸಿದ್ದ ಪ್ರವಾಸಿ ತಾಣಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಗುರಿ ಇಟ್ಟುಕೊಂಡಿದ್ದೇವೆ. 20 ಪ್ರವಾಸಿ ತಾಣಗಳಲ್ಲಿಯೂ ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು. ನಮ್ಮ ಇಲಾಖೆ ಜತೆಗೆ ಪ್ರಾಚ್ಯವಸ್ತು ಇಲಾಖೆ ಹಾಗೂ ಮೂಲಸೌಕರ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಹಕಾರದೊಂದಿಗೆ ಯೋಜನೆ ಅನುಷ್ಟಾನಗೊಳಿಸುತ್ತಿದ್ದೇವೆ.

ಪ್ರವಾಸೋದ್ಯಮ ಇಲಾಖೆ ಹೊಣೆಗಾರಿಕೆ ನಿಮಗೆ  ವಹಿಸಿದಾಗ ನಿಮ್ಮ ಗುರಿ ಏನಿತ್ತು?
      ಈ ಇಲಾಖೆಯಲ್ಲಿ ನಿರಂತರ ಅಭಿವೃದ್ಧಿಗೆ ಅವಕಾಶ ಇದೆ. ನಾವು ಈ ವರ್ಷ ವನ್ಯಜೀವಿ ವರ್ಷ ಅಂತ ಘೋಷಣೆ ಮಾಡಿದ್ದೇವೆ. ವನ್ಯಪ್ರಾಣಿಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಅರಣ್ಯ ರಕ್ಷಣೆಯ ಬಗ್ಗೆಯೂ ಇಲಾಖೆಯಲ್ಲಿ ಯೋಜನೆ ರೂಪಿಸಿದ್ದೇವೆ. 21 ಜಂಗಲ್‌ ಲಾಡ್ಜಸ್‌ಗಳನ್ನು ನಡೆಸುತ್ತಿದ್ದೇವೆ. ಬಹುತೇಕ ಲಾ¸‌ದಲ್ಲಿ ನಡೆಯುತ್ತಿವೆ. ದಾಂಡೇಲಿ, ಹುಮನಾಬಾದ್‌, ಬಳ್ಳಾರಿ, ದೇವಬಾಗ್‌ ಜಂಗಲ್‌ ಲಾಡ್ಜ್ಸ್‌ ಗಳನ್ನು ಇನ್ನೂ ಪ್ರಚುರ ಪಡಿಸುವ ಅಗತ್ಯವಿದೆ. ಅಲ್ಲಿಯೂ ಪ್ರವಾಸೋದ್ಯಮಕ್ಕೆ ಇನ್ನೂ ಅವಕಾಶಳಿವೆ. ಅಲ್ಲದೇ ಸಾಹಸ ಕ್ರೀಡೆಗಳ ಪ್ರಚಾರಕ್ಕೂ ಹೆಚ್ಚಿನ ಗಮನ ಹರಿಸಿದ್ದೇವೆ.

ರಾಜ್ಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆಯಾ ?
       ಒಂದು ವರ್ಷಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇಕಡಾ 26 ರಷ್ಟು ಹೆಚ್ಚಳವಾಗಿದೆ. ಮೈಸೂರು ದಸರಾ, ಹಂಪಿ ಉತ್ಸವ ಸೇರಿದಂತೆ ವಿಶ್ವ ಪ್ರಸಿದ್ದ ತಾಣಗಳಿಗೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ.

ಹೈದರಾಬಾದ್‌ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಏನಾದರೂ ಯೋಜನೆ ರೂಪಿಸಿದ್ದೀರಾ?
       ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ತಲಾ 50 ಕೋಟಿ ರೂಪಾಯಿ ನೀಡಲಾಗುತ್ತಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಪಡಿಸುವ ಕುರಿತು ಒಂದು ಸಮಿತಿ ರಚಿಸಲಾಗಿದೆ. ಬಾಲ್ಕಿ, ಬೀದರ್‌, ಕಲಬುರ್ಗಿ ಕೋಟೆ, ಮಳಖೇಡ, ಹಂಪಿ, ಆನೆಗುಂದಿ ಸೇರಿದಂತೆ ಆ ಬಾಗದ ಪ್ರವಾಸಿ ತಾಣಗಳ ಸಂಪೂರ್ಣ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸುತ್ತಿದ್ದೇವೆ.

ಬ್ರಾಂಡ್‌ ಬೆಂಗಳೂರು ಯೋಜನೆ ಎಲ್ಲಿಗೆ ಬಂತು ?
       ಬೆಂಗಳೂರು ಕೇವಲ ಐಟಿ ಬಿಟಿಗಷ್ಟೆ ಅಲ್ಲ. ಇಲ್ಲಿನ ಪ್ರವಾಸಿ ತಾಣಗಳಿಗೂ ಬ್ರಾಂಡ್‌ ಆಗಬೇಕು ಎಂದು ಬ್ರಾಂಡ್‌ ಬೆಂಗಳೂರು ಯೋಜನೆ ರೂಪಿಸಿದ್ದೇವೆ. ಈಗಾಗಲೇ ತಜ್ಞರ ಸಮಿತಿ ರಚಿಸಿದ್ದೇವೆ. ಬೆಂಗಳೂರಿನ ಸುತ್ತಮುತ್ತ ಐತಿಹಾಸಿಕ, ಪಾರಂಪರಿಕ ತಾಣಗಳು, ಕೆಂಪೇಗೌಡ, ಟಿಪ್ಪು$ ಸುಲ್ತಾನ್‌, ಮೈಸೂರು ಒಡೆಯರ್‌ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಲು ಯೋಜನೆ ರೂಪಿಸುತ್ತಿದ್ದೇವೆ. ಕ್ರೀಡೆಯ ಜೊತೆಗೆ ಪ್ರವಾಸೋದ್ಯಮವೂ ಬೆಳೆಯಬೇಕೆಂಬ ದೃಷ್ಠಿಯಿಂದ ಡೆವಿಸ್‌ ಕಪ್‌, ಪುಟ್‌ಬಾಲ್‌ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ.

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇದ್ದರೂ ಇಲಾಖೆ  ಮುಂದಾಗಿಲ್ಲ ಎಂಬ ಆರೋಪ ಇದೆಯಲ್ಲಾ?
       ಕ‌ರಾವಳಿ ಬಾಗದಲ್ಲಿ ಬೀಚ್‌ ಟೂರಿಸಂ ಅಭಿವೃದ್ಧಿ ಪಡಿಸಲು 100 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಸಮುದ್ರದ ದಂಡೆಯಲ್ಲಿ ಸ್ವಚ್ಚತೆ, ವಾಕ್‌ ಟ್ರ್ಯಾಕ್‌ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿ$ಸಲಾಗುತ್ತಿದೆ. ಇದರ ಜೊತೆಗೆ ಫಿಲ್ಮ್ ಟೂರಿಸಂ ಹಾಗೂ ವೆಲ್‌ನೆಸ್‌ ಟೂರಿಸಂ ಪಾಲಿಸಿ ಜಾರಿಗೆ ತರುತ್ತಿದ್ದೇವೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಕನ್ನಡ ಚಿತ್ರಗಳ ಚಿತ್ರೀಕರಣ ಮಾಡಿದರೆ, ಆ ಮೂಲಕವೂ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಅಲ್ಲದೇ ಯೋಗ ಮತ್ತು ಆಯುರ್ವೇದದ ಬಗ್ಗೆ ಜನರಿಗೆ ಸಾಕಷ್ಟು ಆಸಕ್ತಿ ಬೆಳೆದಿದ್ದು, ಆ ಮೂಲಕ ಪ್ರವಾಸೋದ್ಯಮ ಮಾಡಲು ಇಲಾಖೆ ಯೋಜನೆ ರೂಪಿಸಿದೆ.

ಪ್ರವಾಸಿ ತಾಣಗಳಲ್ಲಿ ಹೋಂ ಸ್ಟೇ ಸೇರಿ ನೋಂದಣಿ  ಮಾಡುವ ಪ್ರಯತ್ನ ಎಲ್ಲಿಯವರೆಗೆ ಬಂದಿದೆ ?
       ರಾಜ್ಯದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಹೋಂ ಸ್ಟೇಗಳಿವೆ. ಇದುವರೆಗೂ ಸುಮಾರು 700 ಹೋಂ ಸ್ಟೇಗಳು ನೋಂದಣಿಯಾಗಿವೆ. ಕೆಲವು ತಾಂತ್ರಿಕ ತೊಂದರೆಯಿಂದ ನೊಂದಣಿ ಕಾರ್ಯ ಪೂರ್ಣಗೊಂಡಿಲ್ಲ. ಪಾರದರ್ಶಕವಾರಿ ಕೆಲಸ ಮಾಡಬೇಕಾದಾಗ ವಿಳಂಬವಾಗುವುದು ಸಹಜ. ಹೋಂಸ್ಟೇಗಳು ನೊಂದಣಿ ಮಾಡಿಕೊಂಡು ಇಲಾಖೆಯ ಸಹಬಾಗಿತ್ವ ಪಡೆದರೆ, ಅವರಿಗೆ ಹೆಚ್ಚಿನ ಪ್ರಚಾರವನ್ನೂ ನೀಡುತ್ತೇವೆ.

ಪ್ರವಾಸಿ ಬಾರತೀಯ ದಿವಸ ಮಾಡಿದ್ರಿ, ಅದರಿಂದ ಪ್ರವಾಸೋದ್ಯಮಕ್ಕೆ ಏನ್‌ ಅನುಕೂಲ ಆಯ್ತಾ?
      ಪ್ರವಾಸಿ ಬಾರತೀಯ ದಿವಸ್‌ ಕಾರ್ಯಕ್ರಮ ಮಾಡುವುದರಿಂದ ನೇರವಾಗಿ ಪ್ರವಾಸೋದ್ಯಮಕ್ಕೆ ತಕ್ಷಣಕ್ಕೆ ಅನುಕೂಲ ಆಗುವುದಿಲ್ಲ. ಅದು ಲಾಂಗ್‌ ಟರ್ಮ್ ಪೊ›ಸೆಸ್‌. ಇಲ್ಲಿನ ಅವಕಾಶಗಳಿಗೆ ಅನೇಕರು ಮುಂದಿನ ದಿನಗಳಲ್ಲಿ ಬಂಡವಾಳ ಹೂಡಲು ಮುಂದಾಗುತ್ತಾರೆ. ನಾವೀಗ ಗಾಲ್ಫ್ ಟೂರಿಸಂ ಅಂತ ಹೊಸ ಯೋಜನೆ ಹಾಕಿಕೊಂಡಿದ್ದೇವೆ. ಚಿಕ್ಕಮಗಳೂರು, ಮೈಸೂರು ಹಾಗೂ ಕೂರ್ಗ್‌ಗಳಲ್ಲಿ ಹವ್ಯಾಸಿ ಗಾಲ್ಫ್ ಕ್ಲಬ್‌ಗಳಿವೆ ಅವುಗಳ ಸಹಬಾಗಿತ್ವದಲ್ಲಿ ಗಾಲ್ಪ್$ ಕ್ರೀಡೆ ಏರ್ಪಡಿಸಿದರೆ, ಅಲ್ಲಿಗೆ ಬರುವ ಪ್ರವಾಸಿಗರಿಂದ ಆ ಭಾಗ‌ದ ಪ್ರವಾಸೋದ್ಯಮಕ್ಕೆ ಅನುಕೂಲ ಆಗುತ್ತದೆ.

ನಿಮ್ಮ ಇಲಾಖೆಯಲ್ಲಿ ಯೋಜನೆ ರೂಪಿಸುವುದರಲ್ಲಿಯೇ ಸಮಯ ವ್ಯರ್ಥವಾಗುತ್ತಿದೆಯಲ್ಲಾ?
      ಇಲಾಖೆಯಲ್ಲಿ ಹೊಸ ಆಲೋಚನೆಗಳನ್ನು ಜಾರಿಗೆ ತರುವಾಗ ಸ್ವಲ್ಪ ಸಮಯ ಹಿಡಿಯುತ್ತದೆ. ಹಾಗಂತ ನಾವೇನು ಬರಿ ಯೋಜನೆ ಮಾಡುತ್ತ ಕುಳಿತಿಲ್ಲ. ನಿರಂತರವಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಈಗಾಗಲೇ ಹಿರಿಯ ನಾಗರಿಕರಿಗಾಗಿ ಪುನೀತ ಯೋಜನೆ ಜಾರಿಗೆ ಬರುತ್ತಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಸ್ಟಾರ್ಟ್‌ಅಪ್‌ ಕಂಪನಿಗಳನ್ನೂ ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಜಿಐಎಸ್‌, ಆಡಿಯೋ ಗೈಡ್‌, ರೊಬೊಡ್‌ ಗೈಡ್‌ಗಳ ಅಭಿವೃದ್ಧಿ ನವೋದ್ಯಮಗಳಿಗೆ ಅವಕಾಶಗಳನ್ನು ನೀಡಲಾಗಿದೆ. ನಮ್ಮ ಯೋಜನೆಗಳನ್ನು ಗುರುತಿಸಿ ಕೇಂದ್ರ ಸರ್ಕಾರವೇ ನಂಬರ್‌ 2 ಸ್ಥಾನ ನೀಡಿದೆ. ಅಲ್ಲದೇ ಎರಡು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡಿವೆ.

ಐಟಿ ಕ್ಷೇತ್ರದಲ್ಲಿ ಬೆಂಗಳೂರಿನ ಬ್ರಾಂಡ್‌ ಈಗಲೂ ಇದೆಯಾ ?
       ಬೆಂಗಳೂರು ಈಗಲೂ ಐಟಿ ರಪು¤ ಮಾಡುವಲ್ಲಿ ನಂಬರ್‌ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಆರ್‌ ಆಂಡ್‌ ಡಿ ಗೆ ಹೆಚ್ಚಿನ ಅವಕಾಶ ಇರುವುದರಿಂದ ಒರಾಕಲ್‌ನಂತ ಸಂಸ್ಥೆ ಬೆಂಗಳೂರಿನಲ್ಲಿ ಕಂಪನಿ ಸ್ಥಾಪಿಸಲು ಮುಂದಾಗಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 2500 ಸ್ಟಾರ್ಟ್‌ ಅಪ್‌ ಕಂಪನಿಗಳು ಆರಂ¸‌ವಾಗಿವೆ. ಹೊಸ ಐಟಿ ಉದ್ಯಮಿಗಳಿಗೆ ಪೋ›ತ್ಸಾಹ ನೀಡಲು ಸರ್ಕಾರವೇ ಸ್ಥಳಾವಕಾಶ ಕಲ್ಪಿ$ಸುತ್ತಿದ್ದು, ಆರಂ¸‌ದಲ್ಲಿ ಕಂಪನಿ ನಡೆಸಲು ಅನುಕೂಲ ಮಾಡಿಕೊಡಲಾಗುತ್ತಿದೆ.

ಎರಡನೇ ದರ್ಜೆಯ ನಗರಗಳಿಗೆ ಐಟಿ ಉದ್ಯಮ ಬೆಳೆಸುತ್ತಿಲ್ಲ ಎಂಬ ಆರೋಪವಿದೆಯಲ್ಲಾ  ?
      ಬೆಂಗಳೂರು ಹೊರತುಪಡಿಸಿ ಈ ವರ್ಷ ಮಂಗಳೂರು, ಮೈಸೂರು, ಹುಬ್ಬಳ್ಳಿಯಿಂದ 4 ಸಾವಿರ ಕೋಟಿ ಐಟಿ ರಪು¤ ಮಾಡಲಾಗಿದ್ದು, ಎರಡನೇ ದರ್ಜೆಯ ನಗರಗಳಲ್ಲಿ ಐಟಿ ಬಿಟಿ ಉದ್ಯಮ ವಿಸ್ತರಣೆಗೆ ಹೆಚ್ಚಿನ ಪೋ›ತ್ಸಾಹ ನೀಡುತ್ತಿದ್ದೇವೆ. ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಹಾರ್ಡ್‌ವೇರ್‌ ಪಾರ್ಕ್‌ ಸ್ಥಾಪನೆ ಮಾಡಲಾಗುತ್ತಿದೆ. ನವೋದ್ಯಮಕ್ಕೆ 200 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಐಟಿ ಕಂಪನಿಗಳು ಸರ್ಕಾರವನ್ನು ಬ್ಲಾಕ್‌ ಮೇಲ್‌ ಮಾಡ್ತಿವೆ ಅಂತ ಆರೋಪ ಕೇಳಿ ಬರುತ್ತಿದೆ ? ಅದು ನಿಜಾನಾ ?
      ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮ ಬೆಳೆಯಬೇಕಾದರೆ, ಅವರ ಅಗತ್ಯಗಳಿಗೆ ಅವರು ಬೇಡಿಕೆ ಇಡುತ್ತಾರೆ. ಹಾಗಂತ ರಾಜ್ಯ ಸರ್ಕಾರ ಅವರಿಗೆ ಎಲ್ಲವನ್ನು ನೀಡಿ ಕೈ ಕಟ್ಟಿ ಕುಳಿತುಕೊಂಡಿಲ್ಲ. ಬೇರೆ ರಾಜ್ಯಗಳು ನಮ್ಮ ರಾಜ್ಯಗಳ ಐಟಿ ಕಂಪನಿಗಳನ್ನು ಸೆಳೆಯಲು ಸಾಕಷ್ಟು ಆಪರ್‌ಗಳನ್ನು ನೀಡುತ್ತಿವೆ. ನಾವು ಈಗಾಗಲೇ ಆ ಹಂತ ದಾಟಿದ್ದೇವೆ. ಐಟಿ ಕಂಪನಿಗಳು ಕರ್ನಾಟಕ ಬಿಟ್ಟು ಹೋಗುತ್ತವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು.

ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ಗಟ್ಟಿತನ ಪ್ರದರ್ಶಿಸುತ್ತಿಲ್ಲ ಎಂಬ ದೂರಿದೆ ?
       ಹಾಗೇನಿಲ್ಲ., ಸರೋಜಿನಿ ಮಹಿಷಿ ವರದಿ ಪ್ರಕಾರ ನಾವು ಕೆಳ ಹಂತದ ಹುದ್ದೆಗಳನ್ನು ಸಂಪೂರ್ಣವಾಗಿ ಕನ್ನಡಿಗರಿಗೆ ನೀಡಬೇಕೆಂದು ಮಾಹಿತಿ ತಂತ್ರಜಾnನ ಸಂಸ್ಥೆಗಳಿಗೆ ಸೂಚನೆಗಳನ್ನು ಕೊಟ್ಟಿದ್ದೇವೆ. ಅಲ್ಲದೇ, ಮಹಿಳೆಯರಿಗೆ ರಕ್ಷಣೆ ನೀಡುವ ವಿಷಯದಲ್ಲಿಯೂ ಐಟಿ ಕಂಪನಿಗಳ ಮೇಲೆ ಇಲಾಖೆ ನಿಗಾ ಇಟ್ಟಿದೆ.

ಎರಡು ಇಲಾಖೆ ನಿರ್ವಹಿಸಲು ನಿಮಗೆ ಹೊರೆ ಆಗುತ್ತಿದೆಯಾ ?
       ಜವಾಬ್ದಾರಿ ಕೊಟ್ಟಾಗ ಅದನ್ನು ನಿಬಾಯಿಸದೇ ಕಾರಣ ಹೇಳಿಕೊಂಡು ಹೋದರೆ ಏನೂ ಮಾಡಲು ಆಗುವುದಿಲ್ಲ. ಎಲ್ಲರಿಗೂ ಈ ಅವಕಾಶ ದೊರೆಯುವುದಿಲ್ಲ. ನನಗೆ ಮಂತ್ರಿಯಾಗುವ ಅವಕಾಶ ದೊರೆತಿದೆ. ನನ್ನ ಇತಿಮಿತಿಯಲ್ಲಿ ಸಾಧ್ಯವಾದಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದ್ದೇನೆ. ಇಲಾಖೆಯಲ್ಲಿ ಸಾಕಷ್ಟು ಕೆಲಸ ಮಾಡುವುದಿದೆ. ಇದು ಯಾವುದೂ ಶಾಶ್ವತ ಅಲ್ಲ. ಅಧಿಕಾರದಲ್ಲಿದ್ದಾಗ ನಾವು ಜನರಿಗೆ ಏನು ಮಾಡಿದ್ದೇವೆ ಅನ್ನುವುದಷ್ಟೆ ಮುಖ್ಯವಾಗುತ್ತದೆ.

ನಿಮಗೆ ಹಿರಿಯ ಸಚಿವರ ಸಹಕಾರ ಹೇಗಿದೆ ?
      ಖಂಡಿತವಾಗಲೂ ಇದೆ. ಸಂಪುಟದಲ್ಲಿ ನಾನೇ ಕಿರಿಯ ಸಚಿವನಾಗಿರುವುದರಿಂದ ಎಲ್ಲರೂ ನನಗೆ ಸಹಕಾರ ಅಷ್ಟೆ ಅಲ್ಲ. ಸಲಹೆಗಳನ್ನೂ ನೀಡುತ್ತಾರೆ. ಎಲ್ಲ ಹಿರಿಯ ಸಚಿವರೂ ಮುಕ್ತವಾಗಿ ನನಗೆ ಮಾರ್ಗದರ್ಶನ ಮಾಡುತ್ತಾರೆ. ಯಾರಿಂದಲೂ ನನ್ನ ಕೆಲಸಕ್ಕೆ ತೊಂದರೆಯಾಗಿಲ್ಲ.

ನಿಮ್ಮ ತಂದೆಯವರು ಹಾಗೂ ನೀವು ರಾಜಕೀಯದಲ್ಲಿದ್ದೀರಿ.  ನಿಮ್ಮ ಕುಟುಂಬದಲ್ಲಿ ಬೇರೆ ಯಾರಾದರೂ ರಾಜಕೀಯಕ್ಕೆ ಬರ್ತಾರಾ?
      ಆ ರೀತಿಯ ಯಾವುದೇ ಯೋಚನೆ ಇಲ್ಲ. ನನಗೆ ಇಬ್ಬರು ಗಂಡು ಮಕ್ಕಳು. ಒಬ್ಬ ತಂದೆಯಾಗಿ ಮಕ್ಕಳನ್ನು ಒಳ್ಳೆಯ ಪ್ರಜೆಯಾಗಿ ಬೆಳೆಸೋದು, ಉತ್ತಮ ಶಿಕ್ಷಣ ಕೊಡಿಸೋದು ನನ್ನ ಕರ್ತವ್ಯ. ಅವರು ದೊಡ್ಡವರಾದಮೇಲೆ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋದು ಅವರಿಗೆ ಬಿಟ್ಟಿದ್ದು, ರಾಜಕಾರಣಿಗಳ ಮಕ್ಕಳು ರಾಜಕಾರಣಿಯೇ ಆಗಬೇಕಂತಿಲ್ಲ. ಇದು ಸಾರ್ವಜನಿಕ ಕ್ಷೇತ್ರ ಇಲ್ಲಿ ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಎಷ್ಟೊಜನ ಮುಖ್ಯಮಂತ್ರಿಗಳ ಮಕ್ಕಳಿಗೆ ರಾಜಕೀಯದಲ್ಲಿ ಮೇಲೆ ಬರಲು ಸಾಧ್ಯವಾಗಿಲ್ಲ.

ನಿಮ್ಮ ಹವ್ಯಾಸ  ಏನು?
      ಪುಸ್ತಕ ಓದುವ ಹವ್ಯಾಸ ಇದೆ. ಪ್ರತಿನಿತ್ಯ ರಾತ್ರಿ ಮಲಗುವ ಮುಂಚೆ ಪುಸ್ತಕ ಓದುತ್ತೇನೆ. ಕಾಲೇಜು ದಿನಗಳಲ್ಲಿ ಸ್ಕ್ವಾಶ್‌ ಮತ್ತು ಕ್ರಿಕೆಟ್‌ ಆಡುತ್ತಿದ್ದೆ. ಎನ್‌ಸಿಸಿಯಲ್ಲಿದ್ದಾಗ ರಿಪಬ್ಲಿಕ್‌ ಡೆ ಕಾರ್ಯಕ್ರಮಕ್ಕೆ ದೆಹಲಿಗೆ ಹೋಗಿದ್ದೆ. ಈಗಲೂ ಕ್ರೀಡೆಯಲ್ಲಿ ಆಸಕ್ತಿಯಿದೆ.
      – ಪ್ರಿಯಾಂಕ್‌ ಖರ್ಗೆ, ಪ್ರವಾಸೋದ್ಯಮ ಹಾಗೂ ಐಟಿ-ಬಿಟಿ ಸಚಿವ

ಸಂದರ್ಶನ: ಶಂಕರ ಪಾಗೋಜಿ

ಟಾಪ್ ನ್ಯೂಸ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

6

Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.