ಬೆಡ್ ಇಲ್ಲ: ಸಾಧ್ಯವಾದ್ರೆ ಮನೆಲ್ಲೇ… ಇರಿ.!
Team Udayavani, Apr 19, 2021, 1:41 PM IST
ಬೆಂಗಳೂರು: ನಗರದಲ್ಲಿ ಸೋಂಕು ಪ್ರಕರಣಗಳುಮಿತಿ ಮೀರಿದ್ದು, ಸೋಂಕಿತರಿಗೆ ಹಾಸಿಗೆಗಳ(ಬೆಡ್)ವ್ಯವಸ್ಥೆ ಹೇಗಿದೆ? ಪಾಸಿಟಿವ್ ಬಂದವರು ಬೆಡ್ ವ್ಯವಸ್ಥೆಬೇಕು ಎಂದು ಸಹಾಯವಾಣಿಗೆ ಕರೆ ಮಾಡಿ ದಾಗಸಹಾಯವಾಣಿ ಸಿಬ್ಬಂದಿ ಕರೆ ಸ್ವೀಕರಿಸುತ್ತಾ ರೆಯೇ?ಅಥವಾ ಇಲ್ಲವೇ? ಸಿಬ್ಬಂದಿ ಹೇಗೆ ಸ್ಪಂದಿಸು ತ್ತಾರೆ?
ಯಾವ ಯಾವ ದಾಖಲೆಗಳನ್ನು ಕೇಳುತ್ತಾರೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿಯಲು “ಉದಯವಾಣಿ’ಯಿಂದ ವಾಸ್ತವ ಸ್ಥಿತಿ ಬಗ್ಗೆ ತಿಳಿ ಯಲು ಭಾನುವಾರಸೋಂಕಿತರ ಹೆಸರಿನಲ್ಲಿ 1912ಕ್ಕೆ ಕರೆ ಮಾಡಿ ರಿಯಾಲಿಟಿಚೆಕ್ ಮಾಡಲಾಯಿತು. ಅದರ ಫಲಿತಾಂಶ ಹೀಗಿದೆ.
ಮಾಧ್ಯಮಗಳಲ್ಲಿ ಗಮನಿಸಿಲ್ವಾ? ಬೆಡ್ ಸಮಸ್ಯೆಇದೆ : “ಕೊರೊನಾ ಸೋಂಕಿತರಿಗೆ ಬೆಡ್ ಸಮಸ್ಯೆ ಇದೆಎಂದು ನಿತ್ಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ.ಇದನ್ನೂ ನೀವು ಗಮನಿಸಿರಬೇಕು. ರೋಗ ಲಕ್ಷಣಗಳತೀವ್ರತೆ ಹೆಚ್ಚಿರುವ ರೋಗಿಗಳಿಗೇ ಬೆಡ್ ಸಮಸ್ಯೆ ಎದುರಾಗುತ್ತಿದೆ. ನಿಮ್ಮ ಸಂಬಂಧಿಕ(ರೋಗಿ)ರಿಗೆ ರೋಗದಲಕ್ಷಣ ಕಡಿಮೆ ಇದ್ದರೆ ಮನೆಯಲ್ಲಿ ಐಸೋಲೇಟ್‌ನಲ್ಲಿಯೇ ಉಳಿಯುವುದು ಒಳ್ಳೆಯದು ಸರ್..’ -ಹೀಗೆ ಹೇಳಿದ್ದು ಕೊರೊನಾ ಸಹಾಯವಾಣಿ 1912ಸಿಬ್ಬಂದಿ.ಸೋಂಕಿತರು ಎಂದು ಹೇಳಿಕೊಂಡುಸಹಾಯವಾಣಿ ಕರೆಮಾಡಲಾಗಿತ್ತು.
ಸ್ವೀಕರಿಸಿದ ಸಹಾಯವಾಣಿ ಸಿಬ್ಬಂದಿಯೊಬ್ಬರು ಸೋಂಕಿತರ ಸ್ಥಿತಿ ತಿಳಿದುಕೊಂಡರು. ಬಳಿಕ ಬೆಡ್‌ಗಳ ವ್ಯವಸ್ಥೆ ಇಲ್ಲ ಎಂದು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟರು.ಮುಂದುವರಿದು, ರೋಗ ಲಕ್ಷಣಗಳ ತೀವ್ರತೆ ಕಡಿಮೆ ಇದ್ದರೆ ಮನೆಯಲ್ಲೇ ಉಳಿಯಿರಿ ಎಂದರು. ಹೋಂ ಐಸೋಲೇಷನ್ ಇದ್ದರೆಸರ್ಕಾರಿ ಆಸ್ಪತ್ರೆಯಿಂದ ಔಷಧಿ(ಮೆಡಿಸಿನ್) ಸಿಗುತ್ತದೆ. ಎಷ್ಟು ದಿನಕ್ಕೆಆಗ ಬೇಕೋ ಅಷ್ಟು ಔಷಧಿ ಕೊಡುತ್ತಾರೆ.ತೆಗೆದುಕೊಂಡು ಮನೆಯಲ್ಲೇ ಇರೋಕೆ ಹೇಳಿ. ರೋಗಲಕ್ಷಣಗಳ ತೀವ್ರತೆ ಹೆಚ್ಚಾದರೆ ಮತ್ತೆ ಸಹಾಯವಾಣಿಗೆಕರೆ ಮಾಡಲು ತಿಳಿಸಿದರು.
ಡಿಸ್ಚಾರ್ಜ್ ಆದರೆ ಸಿಗುತ್ತೆ ವೆಂಟಿಲೇಟರ್ ಹಾಸಿಗೆ:”ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಹಾಸಿಗೆಖಾಲಿಯಾಗಿದೆ. ಖಾಸಗಿಯಲ್ಲಿಯೂ ಇಲ್ಲ. ಯಾವುದಾದರೂ ಖಾಲಿಯಾದರೆ ನಿಮಗೆ ಕರೆ ಮಾಡಿ ಮಾಹಿತಿನೀಡುತ್ತೇವೆ. ನಿಮಗೆ ಪರಿಚಯ ಇದ್ದ ಕಡೆ ವಿಚಾರಿಸಿ,ಪ್ರಯತ್ನಿಸಿ’… – ಇದು ಸಹಾಯವಾಣಿಯ ಉತ್ತರ.ಸೋಂಕಿತರೊಬ್ಬರ ಸಂಬಂಧಿ ಎಂದು ಸೋಂಕಿತರಎಲ್ಲಾ ಮಾಹಿತಿ ನೀಡಲಾಯಿತು. ಸ್ಯಾಚುರೇಷನ್(ರಕ್ತದಲ್ಲಿನ ಆಮ್ಲಜನಕ ಪ್ರಮಾಣ) ಕೇಳಿದ ಸಿಬ್ಬಂದಿಗೆ82 ಎಂದು ಹೇಳಿ ಐಸಿಯು ಹಾಸಿಗೆ ಬೇಕಿದೆ ಎಂದುಕೇಳಲಾಯಿತು. 15 ನಿಮಿಷ ವಿವಿಧ ಆಸ್ಪತ್ರೆ ಮಾಹಿತಿಜಾಲಾಡಿದ ಸಿಬ್ಬಂದಿಗೆ ಕೊನೆಗೆ ಉತ್ತರಿಸಿದ್ದು ಈಮೇಲಿನಂತೆ. ಬಳಿಕ ಅರ್ಧ ದಿನ ಕಳೆದರೂ ಸಹಾಯವಾಣಿಯಿಂದ ಹಿಂದಿರುಗಿ ಕರೆ ಬರಲೇ ಇಲ್ಲ.
ತಡವಾಗಿ ಕರೆ ಸ್ವೀಕರಿಸಿ ಪೂರ್ಣ ಮಾಹಿತಿ ನೀಡಿದ ಆಪ್ತಮಿತ್ರ: ಆಪ್ತಮಿತ್ರ ಸಹಾಯವಾಣಿ 14410ಸಂಖ್ಯೆಗೆ ಕರೆ ಮಾಡಿದಾಗ 10 ನಿಮಿಷ ತಡವಾಗಿ ಕರೆಸ್ವೀಕರಿಸಿದರು. ತಡವಾದ ಕುರಿತು ಕೇಳಿದಾದ ಹೆಚ್ಚುಕರೆಗಳು, ಕಡಿಮೆ ಸಿಬ್ಬಂದಿ ಎಂಬ ಉತ್ತರ ಬಂದಿತು.ಆನಂತರ ಕೇಳಿದ ಮಾಹಿತಿಗೆ ಉತ್ತಮ ರೀತಿಯಲ್ಲಿಸ್ಪಂದಿಸಿ ಪ್ರತಿಕ್ರಿಯಿಸಿದರು. ಆ್ಯಂಬುಲೆನ್ಸ್ ಸೇವೆ,ಆಸ್ಪತ್ರೆಗಳನ್ನು ಸಂಪರ್ಕಿಸಬೇಕಾದ ಸಹಾಯವಾಣಿಸಂಖ್ಯೆ ಸೇರಿದಂತೆ ಇತರೆ ಮಾಹಿತಿ ನೀಡಿದರು.ಕೊರೊನಾ ಭಯವಿದ್ದರೆ ಆಪ್ತಸಮಾಲೋಚಕರನ್ನುಮಾತನಾಡಿಸಿ ಎಂದರು. ಬೇಡ ಮಾಹಿತಿ ನೀಡಿ ಎಂದಿದ್ದಕ್ಕೆ ರೋಗ ಲಕ್ಷಣ, ಪರೀಕ್ಷಾ ವಿಧಾನ ವಿವರಿಸಿದರು.ಲಕ್ಷಣ ಇದ್ದರೆ ಹೆದರಿಕೊಳ್ಳುವ ಅಗತ್ಯವಿಲ್ಲ. ತಪ್ಪದೆಪರೀಕ್ಷೆಗೊಳಗಾಗಿ ಖಚಿತಪಡಿಸಿಕೊಳ್ಳಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮವಾದ ಆಹಾರ ಸೇವಿಸಿಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.