ಪೊಲೀಸ್ ಪಾತ್ರ ಮಾಡುವ ಆಸೆ ಈಡೇರಲೇ ಇಲ್ಲ
Team Udayavani, Aug 28, 2017, 11:44 AM IST
ಬೆಂಗಳೂರು: ಬೆಳ್ಳಿತೆರೆಯ ಮೇಲೆ ಎಲ್ಲ ರೀತಿಯ ಪಾತ್ರಗಳಲ್ಲೂ ನಟಿಸಿದೆ. ಆದರೆ, ಪೊಲೀಸ್ ಪಾತ್ರ ಮಾಡಲು ಸಾಧ್ಯವಾಗಲೇ ಇಲ್ಲ ಎಂದು ಹಿರಿಯ ನಟಿ ಡಾ.ಜಯಂತಿ ಬೇಸರ ವ್ಯಕ್ತಪಡಿಸಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಸಾಧಕರೊಡನೆ ಸಂವಾದ’ದಲ್ಲಿ ಡಾ.ಜಯಂತಿ ಈ ಕೊರಗು ಹೊರಹಾಕಿದರು.
ಸಿನಿಮಾ ರಂಗದಲ್ಲಿ ನಾನು ಭಿಕ್ಷಕಿಯಿಂದ ಮಹಾರಾಣಿಯವರೆಗಿನ ಎಲ್ಲಾ ಪಾತ್ರಗಳಲ್ಲಿಯೂ ನಟನೆ ಮಾಡಿದೆ. ಆದರೆ, ಕನಿಷ್ಠ ಒಂದು ಸಿನಿಮಾದಲ್ಲಿಯಾದರೂ ಪೊಲೀಸ್ ಪಾತ್ರ ಮಾಡಲಿಲ್ಲವಲ್ಲ ಎಂಬ ಕೊರಗು ಹಾಗೇ ಉಳಿಯಿತು. ಪೊಲೀಸ್ ಪಾತ್ರ ನಟಿಸುವಂತೆ ಯಾವುದೇ ನಿರ್ದೇಶಕರು ಕೂಡ ಸೂಚಿಸಿಲ್ಲ. ಬಹುಶಃ ನನ್ನ ದೇಹ ರಚನೆ ನೋಡಿಯೇ ನನಗೆ ಈ ಪಾತ್ರ ನೀಡಿಲ್ಲವೆಂಬ ಅಭಿಪ್ರಾಯವೂ ಇದೆ ಎಂದು ಅವರು ತಿಳಿಸಿದರು.
ಗಂಡು ಮಗುವಿಗೆ ವ್ರತ: ನನ್ನ ತಾಯಿ ಗಂಡು ಮಗುವಿಗಾಗಿ ಹೋಮ, ಹವನ ಸೇರಿದಂತೆ ಹಲವು ರೀತಿಯ ವ್ರತಗಳನ್ನು ಮಾಡಿದ್ದರು. ಅಷ್ಟಾದರೂ ನಾನು ಹುಟ್ಟಿದೆ. ಆದರೆ, ಇದರಿಂದ ಬೇಸರಗೊಳ್ಳದ ನನ್ನ ತಾಯಿ ನನ್ನನ್ನು ಗಂಡು ಮಗುವಿನಂತೆ ಬೆಳೆಸಿದರು. ಶಾಲೆಯಲ್ಲಿ ಶಿಕ್ಷಕಿಯರು ಬಾಸುಂಡೆ ಬರುವಂತೆ ಹೊಡೆದಿದ್ದ ಸಂದರ್ಭದಲ್ಲಿ ಶಾಲೆಗೆ ಬಂದು ದೊಡ್ಡ ಜಗಳನ್ನೇ ಮಾಡಿದ್ದರು ಎಂದು ಮೆಲುಕು ಹಾಕಿದರು.
ಶಾಲಾ ದಿನಗಳಲ್ಲಿ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದೆ. ಅದನ್ನು ನೋಡಿದ್ದ ಶಿಕ್ಷಕರು ಹಾಗೂ ಸಂಬಂಧಿಕರು ನೃತ್ಯಕ್ಕೆ ಸೇರಿಸಿ ಎಂದು ನಮ್ಮ ಪೋಷಕರಲ್ಲಿ ಒತ್ತಾಯಿಸಿದ್ದರು. ಎಲ್ಲರ ಒತ್ತಾಯದ ಮೇರೆಗೆ ನನಗೆ ನೃತ್ಯ ಕಲಿಸಲು ಚೆನೈಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಚಿತ್ರ ರಂಗದ ಪ್ರವೇಶ ಪ್ರಾರಂಭವಾಯಿತು. ಚೆನೈನಲ್ಲಿ ನೃತ್ಯ ಕಲಿಯುತ್ತಿದ್ದಾಗ ವೈ.ಆರ್. ಸ್ವಾಮಿ ನಿರ್ದೇಶನದ ಜೇನುಗೂಡು ಚಿತ್ರದ ಮೂರನೇ ನಾಯಕಿಯಾಗಿ ಅವಕಾಶ ಬಂತು.
ಸಿನಿಮಾ ನಟನೆ ಎಂದರೆ ನಮ್ಮ ಕಾಲದಲ್ಲಿ ತಾತ್ಸಾರ ಭಾವನೆಯಿತ್ತು. ಆದ್ದರಿಂದ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಸ್ವಾಮಿಯವರು ನನ್ನ ಮಗಳ ರೀತಿಯಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ನನಗೆ ಚಲನಚಿತ್ರದಲ್ಲಿ ನಟಿಸಲು ಅವಕಾಶ ಕಲ್ಪಿಸಿದರು ಎಂದು ತಮ್ಮ ಚಿತ್ರರಂಗ ಪ್ರವೇಶವನ್ನು ನೆನಪು ಮಾಡಿಕೊಂಡರು. ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.