ಹೊಟ್ಟೆಕಿಚ್ಚಿಗೆ ಔಷಧ ಇಲ್ಲ
Team Udayavani, Jun 15, 2018, 11:48 AM IST
ಬೆಂಗಳೂರು: ಜಗತ್ತಿನಲ್ಲಿ ಎಲ್ಲದಕ್ಕೂ ಔಷಧಿ ಇದೆ. ಆದರೆ, ಕೊಟ್ಟೆಕಿಚ್ಚಿಗೆ ಔಷಧಿ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.
ತಮಗೆ ಸಚಿವ ಸ್ಥಾನ ದೊರೆತ ನಂತರ, ಕಾಂಗ್ರೆಸ್‌ನ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಅವರು ನೀಡಿರುವ, “ಜಯಮಾಲಾ ಅವರ ಸೇವೆ ಪಕ್ಷದ ನಾಯಕರಿಗೆ ಇಷ್ಟ ಆಗಿದೆ’ ಎಂಬ ಮಾರ್ಮಿಕ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವೆ, “ಲಕ್ಷ್ಮೀ ಹೆಬ್ಟಾಳ್ಕರ್ ಅವರು ಆ ರೀತಿಯ ಪದ ಪ್ರಯೋಗ ಮಾಡಿರುವುದು ಸರಿಯಲ್ಲ. ನನ್ನ ಆಯ್ಕೆಯನ್ನು ಪ್ರಶ್ನಿಸಿರುವ ಅವರು, ರಾಹುಲ್‌ಗಾಂಧಿ ಅವರ ನಿರ್ಧಾರವನ್ನೇ ಪ್ರಶ್ನಿಸಿದಂತಿದೆ,’ ಎಂದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರಿಗೂ ತಿರುಗೇಟು ನೀಡಿದ ಸಚಿವ ಜಯಮಾಲಾ, “ನಾನು ಏನೂ ಗೊತ್ತಿಲ್ಲದೆ ರಾಜಕೀಯಕ್ಕೆ ಬಂದಿಲ್ಲ. ಪರಿಷತ್ ಸಭಾ ನಾಯಕಿಯಾಗಿ ಕೆಲಸ ಮಾಡುವ ಶಕ್ತಿ ನನಗಿದೆ,’ ಎಂದರು.
“ಸಂವಿಧಾನ ಇಲ್ಲದೇ ಹೋಗಿದ್ದರೆ, ಮಹಿಳೆಯರನ್ನು ನಾಲ್ಕು ಗೋಡೆ ಮಧ್ಯೆ ಕೂಡಿ ಹಾಕಿ ಪುರುಷರೇ ಸಮಾಜ ಆಳುತ್ತಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಮರು ಚೈತನ್ಯ ನೀಡಿದರು,’ ಎಂದು ಹೇಳಿದರು.