ಹೊಸ ಕಟ್ಟಡವಿದ್ರೂ ಸ್ಥಳಾಂತರವಿಲ್ಲ
Team Udayavani, Jan 30, 2018, 12:13 PM IST
ಬೆಂಗಳೂರು: ಮಳೆಗೆ ಸೋರುವ ಚಾವಣಿ, ಆರು ತಿಂಗಳಿಂದ ದುರಸ್ತಿಯಾಗದ ಜನರೇಟರ್, ಬಳಕೆಯಾಗದೆ ಧೂಳು ಹಿಡಿದಿರುವ ಅತ್ಯಾಧುನಿಕ ಯಂತ್ರೋಪಕರಣಗಳು… ಇದು ಶ್ರೀರಾಮಪುರ ಬಿಬಿಎಂಪಿ ಹೆರಿಗೆ ಆಸ್ಪತ್ರೆಯ ಸ್ಥಿತಿ.
ಶ್ರೀರಾಮಪುರ ಭಾಗದಲ್ಲಿ ಹೆಚ್ಚು ವಾಸವಿರುವ ಬಡವರು, ಮಧ್ಯಮ ವರ್ಗದವರ ಅನುಕೂಲಕ್ಕಾಗಿ 1963ರಲ್ಲಿ ಕೆ.ರಾಧಾಬಾಯಿ ಅವರ ಹೆಸರಿನಲ್ಲಿ ನಿರ್ಮಿಸಿರುವ ಹೆರಿಗೆ ಆಸ್ಪತ್ರೆಗೆ ನಿತ್ಯ ನೂರಾರು ಮಂದಿ ಬರುತ್ತಾರೆ. ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಆಸ್ಪತ್ರೆ ಅಭಿವೃದ್ಧಿಗೆ ಮುಂದಾಗಿಲ್ಲ. ಮಾತ್ರವಲ್ಲ ಆಸ್ಪತ್ರೆಗೆಂದೇ ನಿರ್ಮಿಸಿರುವ ಸುಸಜ್ಜಿತ ಕಟ್ಟಡವನ್ನು ಖಾಸಗಿಯವರಿಗೆ ಬಾಡಿಗೆ ನೀಡಿದ್ದಾರೆ!
ಶ್ರೀರಾಮಪುರ ಆಸ್ಪತ್ರೆಯು 20 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಪ್ರತಿ ತಿಂಗಳು ಕನಿಷ್ಠ 100 ಹೆರಿಗೆಗಳಾಗುತ್ತವೆ. ಆಸ್ಪತ್ರೆಯು ಸಿಸೆರಿಯನ್ ವಿಭಾಗವನ್ನೂ ಹೊಂದಿದ್ದು, ಅತ್ಯಾಧುನಿಕ ಸ್ಕ್ಯಾನಿಂಗ್ ಯಂತ್ರಗಳಿವೆ. ಆದರೆ, ಅವುಗಳನ್ನು ನಿರ್ವಹಿಸುವ ಸಿಬ್ಬಂದಿಯಿಲ್ಲದ ಕಾರಣ ಬಡವರು ಹೆಚ್ಚು ಹಣ ತೆತ್ತು ಖಾಸಗಿ ಕೇಂದ್ರಗಳಲ್ಲಿ ಸ್ಕ್ಯಾನಿಂಗ್ ಮಾಡಿಸುವಂತಾಗಿದೆ.
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಆಸ್ಪತ್ರೆ ಮುಂಭಾಗವನ್ನು ನವೀಕರಿಸಿದ್ದರೂ, ಆಸ್ಪತ್ರೆಯ ಸಮಗ್ರ ಅಭಿವೃದ್ಧಿಯತ್ತ ಪಾಲಿಕೆ ಅಧಿಕಾರಿಗಳು ಗಮನಹರಿಸಿಲ್ಲ. ಮಳೆಗಾಲದಲ್ಲಿ ಚಾವಣಿ ಸೋರುವುದರಿಂದ ಬಾಣಂತಿಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಹಾಳಾದ ಜನರೇಟರ್: ಆಸ್ಪತ್ರೆಯಲ್ಲಿರುವ ಜನರೇಟರ್ ಹಾಳಾಗಿ ಆರು ತಿಂಗಳು ಕಳೆದಿದೆ. ಅದನ್ನು ದುರಸ್ತಿಪಡಿಸುವಂತೆ ಆಸ್ಪತ್ರೆಯ ವೈದ್ಯರು ಹಲವಾರು ಪತ್ರ ಬರೆದರೂ, ಹಿರಿಯ ಅಧಿಕಾರಿಗಳು ಗಮನಹರಿಸಿಲ್ಲ. ಅಪರೇಷನ್ ಥಿಯೇಟರ್‌ನಲ್ಲಿ ಮಾತ್ರ ಯುಪಿಎಸ್ ವ್ಯವಸ್ಥೆಯಿದ್ದು, ಉಳಿದ ಕೊಠಡಿ ಹಾಗೂ ಯಂತ್ರಗಳು ವಿದ್ಯುತ್ ಹಾಗೂ ಜನರೇಟರನ್ನೇ ಆಧರಿಸಿವೆ. ಆದರೂ, ಶೀಘ್ರ ದುರಸ್ತಿ ಮಾಡದ ಪಾಲಿಕೆ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ವ್ಯತ್ಯಯ ಸ್ಥಗಿತಗೊಂಡ ಫೋಟೋ ಥೆರಪಿ: ಇತ್ತೀಚೆಗೆ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಜಾಂಡೀಸ್ ಇದ್ದ ಹಿನ್ನೆಲೆಯಲ್ಲಿ ವೈದ್ಯರು “ಬ್ಲೂಲೈಟ್ ಫೋಟೋ ಥೆರಪಿ’ ನಡೆಸಲು ಸೂಚಿಸಿದ್ದರು. ಸಾಮಾನ್ಯವಾಗಿ ಜಾಂಡೀಸ್ ಕಾಣಿಸಿಕೊಂಡ ಮಕ್ಕಳಿಗೆ ನಿರಂತರವಾಗಿ 48 ಗಂಟೆಗಳು ಈ ಥೆರಪಿ ನೀಡಿದರೆ ಮಗು ಚೇತರಿಸಿಕೊಳ್ಳುತ್ತದೆ. ಆದರೆ, ಜ.26ರಂದು ಮಗುವಿಗೆ ಥೆರಪಿ ನಡೆಸುವ ವೇಳೆ 4ಗಂಟೆ ವಿದ್ಯುತ್ ವ್ಯತ್ಯಯವಾಗಿತ್ತು. ಜತೆಗೆ ಜನರೇಟರ್ ಕೆಟ್ಟಿದ್ದ ಹಿನ್ನೆಲೆಯಲ್ಲಿ ಮಗುವಿಗೆ ನಿರಂತರವಾಗಿ ಥೆರಪಿ ನೀಡಲು ಸಾಧ್ಯವಾಗದೆ ಮಗು ಮೃತಪಟ್ಟಿತ್ತು.
ಧೂಳು ಹಿಡಿಯುತ್ತಿದೆ ಎಕ್ಸ್‌ರೆ ಸಾಧನ: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಆಸ್ಪತ್ರೆಗೆ ಎಕ್ಸ್‌ರೆ ಸಾಧನಗಳನ್ನು ಪೂರೈಸಲಾಗಿದೆ. ಆದರೆ, ಸ್ಥಳದ ಅಭಾವದಿಂದ ಯಂತ್ರಗಳು ಧೂಳು ಹಿಡಿಯುತ್ತಿವೆ. ಯಂತ್ರೋಪಕರಣಗಳು ಬಂದು ಎರಡು ತಿಂಗಳು ಕಳೆದರೂ ಬಳಕೆಯಾಗಿಲ್ಲ. ಜತೆಗೆ ಯಂತ್ರ ಕಾರ್ಯನಿರ್ವಹಿಸಲು ಅಗತ್ಯವಿರುವ 40ಕೆವಿ ವಿದ್ಯುತ್ ಕೇಂದ್ರ ಅಳವಡಿಸಲು ಬೆಸ್ಕಾಂಗೆ ಮನವಿ ಮಾಡಿದರೂ ಕ್ರಮಕ್ಕೆ ಮುಂದಾಗಿಲ್ಲ.
ಎರಡು ಲಕ್ಷದ ಬದಲು 7 ಸಾವಿರ ಬಾಡಿಗೆ: ಬಿಬಿಎಂಪಿ ವತಿಯಿಂದ ಶ್ರೀರಾಮಪುರ ಹೆರಿಗೆ ಆಸ್ಪತ್ರೆಗೆ ಕೂಗಳತೆ ದೂರದಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಡೇ ಕೇರ್ ಸೆಂಟರ್ ಕಟ್ಟಡ ನಿರ್ಮಿಸಲಾಗಿದೆ. ಹೆರಿಗೆ ಆಸ್ಪತ್ರೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯ ಪಾಲಿಕೆ ಸದಸ್ಯರು ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದಾರೆ.
ಆದರೆ, ಅಧಿಕಾರಿಗಳು ಮಾತ್ರ ಕಟ್ಟಡವನ್ನು ಕೇವಲ 7 ಸಾವಿರ ರೂ.ಗೆ ಬಾಡಿಗೆಗೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಟ್ಟಡವನ್ನು ಎರಡು ಸಂಸ್ಥೆಗಳಿಗೆ ಜಂಟಿಯಾಗಿ ನೀಡಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್‌ನಲ್ಲಿ ಒಪ್ಪಿಗೆ ನೀಡಲಾಗಿದೆ. ಆದರೆ, ಒಂದು ಸಂಸ್ಥೆ ತನಗೆ ಸೌಲಭ್ಯ ಬೇಡವೆಂದು ಪತ್ರ ನೀಡಿ ಒಪ್ಪಂದದಿಂದ ದೂರ ಸರಿದಿದೆ.
ಅದರಂತೆ ಒಪ್ಪಂದವನ್ನು ರದ್ದುಗೊಳಿಸಿ ಮತ್ತೆ ಕೌನ್ಸಿಲ್ ಮುಂದೆ ಮಂಡಿಸಿ ಒಪ್ಪಿಗೆ ಪಡೆಯಬೇಕಿತ್ತು. ಜತೆಗೆ ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆ 1,84,595 ರೂ. ಬಾಡಿಗೆ ನಿಗದಿಪಡಿಸಿದ್ದರೂ, ದ್ವಿತೀಯ ದರ್ಜೆ ಸಹಾಯಕರೊಂದಿಗೆ ಖಾಸಗಿಯವರು ಒಪ್ಪಂದ ಮಾಡಿಕೊಂಡು ಕೇವಲ 7 ಸಾವಿರ ರೂ.ಗೆ ಬಾಡಿಗೆ ಪಾವತಿಸುತ್ತಿದ್ದಾರೆ.
* ವೆಂ. ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.