ಸಂಖ್ಯೆ ಹೆಚ್ಚಿದರೆ ಆಸನಗಳಿಲ್ಲ
ವಾರ್ಡ್ ಹೆಚ್ಚಿದಂತೆ ಸದಸ್ಯರ ಸಂಖ್ಯೆ ಅಧಿಕ | ಸಭಾಂಗಣದಲ್ಲಿ ಕೂರಲು ತೊಂದರೆ
Team Udayavani, Sep 20, 2020, 1:02 PM IST
ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 225ಕ್ಕೆ ಹಾಗೂ ಹಾಲಿ ನಾಮನಿರ್ದೇಶಿತರ ಸಂಖ್ಯೆಯನ್ನು ಶೇ. 15 ಪ್ರತಿಶತ ಹೆಚ್ಚಳ ಮಾಡಲು ಬಿಬಿಎಂಪಿ ಕಾಯ್ದೆಯಲ್ಲಿ ಉದ್ದೇಶಿಸಲಾಗಿದೆ. ಆದರೆ, ಅಷ್ಟು ಸದಸ್ಯರು ಕುಳಿತುಕೊಳ್ಳಲು ಈಗಿನ ಕೌನ್ಸಿಲ್ ಸಭಾಂಗಣದಲ್ಲಿ ಜಾಗ ಇಲ್ಲ.
ಪಾಲಿಕೆಯ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣ (ಕೌನ್ಸಿಲ್ ಕಟ್ಟಡ)ದಲ್ಲಿ ಇರುವ ಆಸನಗಳ ಸಂಖ್ಯೆ 270 ಮಾತ್ರ. ವಾರ್ಡ್ ಗಳಸಂಖ್ಯೆ 225ಕ್ಕೆಹೆಚ್ಚಿಸಿನಾಮನಿರ್ದೇಶಿತರ ಸಂಖ್ಯೆ ಶೇ.15 ರಷ್ಟು ಮಾಡಿದರೆ 34 ಸದಸ್ಯರು ಸೇರ್ಪಡೆಯಾಗಿ ಸಂಖ್ಯೆ 259ಕ್ಕೆ ಏರುತ್ತದೆ. ಜತೆಗೆ 28 ಶಾಸಕರು, ವಿಧಾನಪರಿಷತ್, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಸೇರಿ ಸುಮಾರು 70 ಮಂದಿಗೂ ಆಸನ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.
ಹೀಗಾದರೆ, 329 ಮಂದಿಗೆ ಆಸನ ವ್ಯವಸ್ಥೆಯಾಗಬೇಕು. ಈಗಿರುವ ಕೌನ್ಸಿಲ್ ಸಭಾಂಗಣದಲ್ಲಿ ಇಷ್ಟು ಜನ ಕುಳಿತುಕೊಳ್ಳಲು ಸಾಧ್ಯವಿಲ್ಲ. ಬಿಬಿಎಂಪಿ ಕಾಯ್ದೆ ಜಾರಿಯಾದರೆ ಹೊಸದಾಗಿ ಕೌನ್ಸಿಲ್ ಸಭಾಂಗಣ ಸಹ ನಿರ್ಮಾಣ ಮಾಡಬೇಕುತ್ತದೆ. ಪ್ರಸ್ತುತ ಕೌನ್ಸಿಲ್ ಸಭಾಂಗಣದಲ್ಲಿ 198 ಸದಸ್ಯರು, 20 ನಾಮನಿರ್ದೇಶಿತ ಸದಸ್ಯರು ಹಾಗೂ 70 ಶಾಸಕರು-ಸಂಸದರು ಸೇರಿದಂತೆ 270 ಸದಸ್ಯರಿಗೆ ಕೂರಲು ಅವಕಾಶವಿದೆ. ಇದೀಗ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿ ಸದಸ್ಯರ ಸಂಖ್ಯೆಯೂ ಜಾಸ್ತಿಯಾದರೆ ಪ್ರತ್ಯೇಕ ಸಭಾಂಗಣವೇ ಬೇಕಾಗಲಿದೆ.
ಲೋಪ: ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿಈಹಿಂದೆ ನೂರು ಆಸನಗಳ ವ್ಯವಸ್ಥೆ ಇತ್ತು. 2007ರಲ್ಲಿ 110 ಹಳ್ಳಿಗಳ ಸೇರ್ಪಡೆಯಾದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಬದಲಾಯಿಸಲಾಯಿತು.ಈವೇಳೆ ಪಾಲಿಕೆ ಸದಸ್ಯರ ಸಂಖ್ಯೆಯೂ ಹೆಚ್ಚಳವಾದ ಹಿನ್ನೆಲೆಯಲ್ಲಿ ಹಾಲಿ ಸಭೆಯ ಆಸನ ವ್ಯವಸ್ಥೆಯನ್ನೇ 198ಕ್ಕೆ ಹೆಚ್ಚಳ ಮಾಡಿ ಬದಲಾವಣೆ ಮಾಡಲಾಗಿತ್ತು. ಜಾಗದ ಸಮಸ್ಯೆ ಎದುರಾಗಿದ್ದರಿಂದ ಪ್ರತಿ ಸದಸ್ಯರಿಗೂ ಪ್ರತ್ಯೇಕ ಆಸನ ಬದಲು ಮೂರು ಸದಸ್ಯರು ಒಂದೇ ಆಸನದಲ್ಲಿ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ತುರ್ತಾಗಿ ಸಭಾಂಗಣದಿಂದ ಹೊರಕ್ಕೆ ಬರುವ ಮಾರ್ಗ ಗಳು ಇಲ್ಲ. ಇದೀಗ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿ ಮತ್ತಷ್ಟು ಸದಸ್ಯರು ಬಂದರೆ ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಪಾಲಿಕೆ ಸೌಧ: ಈ ಮಧ್ಯೆ, ಮಾಜಿ ಮೇಯರ್ ಜಿ. ಪದ್ಮಾವತಿ ಹಾಗೂ ಬಿ.ಎನ್ ಮಂಜುನಾಥ್ ರೆಡ್ಡಿಅವರುಮೇಯರ್‌ಆಗಿದ್ದಸಂದರ್ಭದಲ್ಲಿ ವಿಧಾನಸೌಧದ ಮಾದರಿಯಲ್ಲೇ ಪಾಲಿಕೆ ಸೌಧ ನಿರ್ಮಾಣ ಮಾಡಬೇಕು. ಇದರಲ್ಲಿ ಪ್ರಮುಖ ವಿಭಾಗಗಳುಇರಬೇಕು.ಯುಟಿಲಿಟಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಪ್ರಸ್ತಾವನೆ ಇತ್ತು. ಆದರೆ, ಆ ಬಗ್ಗೆ ಕ್ರಿಯಾ ಯೋಜನೆ ಸಹ ಸಿದ್ಧಗೊಂಡಿಲ್ಲ.
ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿರುವ ಕುರ್ಚಿಗಳು ಕಿರಿದಾಗಿವೆ. ಹೆಚ್ಚು ಜನ ಸೇರಿದರೆ ಸಮಸ್ಯೆ ಆಗಲಿದೆ. ಈ ಬಗ್ಗೆ ಸರ್ಕಾರ ಆಲೋಚನೆ ಮಾಡಿದಂತಿಲ್ಲ –ಜಿ. ಪದ್ಮಾವತಿ, ಮಾಜಿ ಮೇಯರ್
ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೆ 60 ಹಳ್ಳಿಗಳನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಈಗಾಗಲೇ ಸೇರ್ಪಡೆ ಆಗಿರುವ 110 ಹಳ್ಳಿಗಳ ಅಭಿವೃದ್ಧಿಯೇ ಆಗಿಲ್ಲ. ಇನ್ನು ಕೆಂಪೇಗೌಡ ಸಭಾಂಗಣದಲ್ಲಿ ಮೇಯರ್ ಚುನಾವಣೆ ನಡೆಯುವ ಸಂದರ್ಭದಲ್ಲಿ ಉಸಿರುಕಟ್ಟುವ ವಾತಾವರಣ ನಿರ್ಮಾಣ ಆಗುತ್ತದೆ. ಮತ್ತಷ್ಟು ಜನ ನೂತನ ಸದಸ್ಯರು ಬಂದರೆ ನೂತನ ಕಟ್ಟಡ ನಿರ್ಮಾಣ ಅನಿವಾರ್ಯವಾಗಲಿದೆ. –ಎಂ.ಶಿವರಾಜು, ಆಡಳಿತ ಪಕ್ಷದ ಮಾಜಿ ನಾಯಕ
–ಹಿತೇಶ್. ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.