
ಮಾಲಿನ್ಯ ತಡೆಯುವ ಮಾತೇ ಇಲ್ಲ!
Team Udayavani, Mar 1, 2018, 10:38 AM IST

ಬೆಂಗಳೂರು: ಬಜೆಟ್‌ನಲ್ಲಿ ಉದ್ಯಾನ ಮತ್ತು ಕೆರೆಗಳ ಬದಿಗಳಲ್ಲಿಔಷಧ ಗಿಡಗಳನ್ನು ನೆಡುವುದು, ಉದ್ಯಾನಗಳಲ್ಲಿ ಕನ್ನಡ ಸಾಹಿತಿಗಳ ಪರಿಚಯ, ಇಂಗು ಗುಂಡಿಗಳ ನಿರ್ಮಾಣ, ಅಸ್ತಿತ್ವದಲ್ಲಿರುವ ಕೆರೆಗಳ ಪುನರುಜ್ಜೀವನ, ನಿರ್ವಹಣೆಗೆ 10 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಪರಿಸರ ಮಾಲಿನ್ಯ ತಡೆಗೆ ಬಜೆಟ್‌ನಲ್ಲಿ ಯಾವುದೇ ಕ್ರಮಗಳಿಲ್ಲ.
ಧನ್ವಂತರಿ ಮರಗಳ ಉದ್ಯಾನ ಅಭಿವೃದ್ಧಿಗಾಗಿ ಮತ್ತು ಕೆರೆಗಳ ಬದಿಗಳಲ್ಲಿ ಔಷಧ ಗಿಡಗಳನ್ನು ನೆಡಲು 50 ಲಕ್ಷ ರೂ.
ಮೀಸಲಿಡಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ 200 ಸಸಿಗಳನ್ನು ನೆಟ್ಟು, ಟ್ರೀ ಗಾರ್ಡ್ ನಿರ್ಮಿಸಲು 1 ಕೋಟಿ ರೂ. ನೀಡಲಾಗಿದೆ. ಹಸಿರೀಕರಣ ಹೆಚ್ಚಳಕ್ಕೆ ಸಸ್ಯ ಕ್ಷೇತ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಕೆರೆಗಳ ನಿರ್ವಹಣೆಗಾಗಿಯೇ 10 ಕೋಟಿ ರೂ. ಕೊಡಲಾಗಿದೆ. ಸರ್ಕಾರವು 40 ಕೆರೆಗಳ ಅಭಿವೃದ್ಧಿಗಾಗಿ 20 ಕೋಟಿ ಅನುದಾನ ನೀಡಿದ್ದು, ಈ ಸಂಬಂಧದ ಕ್ರಿಯಾಯೋಜನೆ ಅನ್ವಯ ಕೆರೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
ಇಂಗು ಗುಂಡಿ ಕಡ್ಡಾಯ: ಪಾಲಿಕೆಯಿಂದ ಕೈಗೊಳ್ಳುವ ಎಲ್ಲ ರೀತಿಯ ಚರಂಡಿ ಕಾಮಗಾರಿಗಳಲ್ಲಿ ಇಂಗು ಗುಂಡಿ ಕಡ್ಡಾಯವಾಗಿ ನಿರ್ಮಿಸುವುದು ಹಾಗೂ ಕಾಮಗಾರಿ ವೆಚ್ಚದ ಶೇ.10ರಷ್ಟು ಹಣವನ್ನು ಇಂಗು ಗುಂಡಿಗೆ ಮೀಸಲಿಟ್ಟು, ಕಾಮಗಾರಿ ಅಂದಾಜು ಪಟ್ಟಿಯಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಅಭಾವ ತಪ್ಪಿಸಲು ಇದು ಪೂರಕ ಹೆಜ್ಜೆ ಆಗಲಿದೆ.
5 ಕಡೆ ಕಲಾಭವನ: ನಾಟಕ, ಸಂಗೀತ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲು ಪಾಲಿಕೆಯ ಐದು ವಲಯಗಳಲ್ಲಿ ಕಲಾಭವನ ನಿರ್ಮಿಸುವುದಾಗಿ ಘೋಷಿಸಲಾಗಿದೆ. ಇದಕ್ಕಾಗಿ 5 ಕೋಟಿ ರೂ. ಮೀಸಲಿರಿಸಲಾಗಿದೆ. ಅಲ್ಲದೆ, ಗ್ರಾಮೀಣ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ “ಆಡೋಣ ಬಾ ಅಂಗಳದಲ್ಲಿ’ ಕಾರ್ಯಕ್ರಮಕ್ಕೆ ಪ್ರತಿ ವಾರ್ಡ್‌ಗೆ 1 ಲಕ್ಷ ರೂ. ತೆಗೆದಿಡಲಾಗಿದೆ.
ರಾಜ್ಯ ಹಾಕಿ ಅಸೋಸಿಯೇಷನ್ ಆವರಣದಲ್ಲಿ ಹಾಕಿ ದಂತಕತೆ ಧ್ಯಾನ್‌ಚಂದ್ ಪುತ್ಥಳಿ, ಮೇಕ್ರಿ ವೃತ್ತದಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮತ್ತು ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಪ್ರತಿಮೆ ಸ್ಥಾಪಿಸಲು ತಲಾ 1 ಕೋಟಿ ಮೀಸಲಿಡಲಾಗಿ¨
ಶೌಚಾಲಯಕ್ಕೆ ಕೋಟಿ ರೂ.
ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಮುಖ 50 ಉದ್ಯಾನಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 1 ಕೋಟಿ ರೂ.,
ಉದ್ಯಾನಗಳಿಗೆ ನಿರಂತರ ನೀರು ಪೂರೈಕೆಗೆ ಅಗತ್ಯ ಬೋರ್ ವೆಲ್ ನಿರ್ವಹಣೆಗೆ 2 ಕೋಟಿ ರೂ., ಪ್ರಾಣಿ-ಪಕ್ಷಿಗಳ ಹಸಿವು ನೀಗಿಸಲು ಲ್ಯಾಂಡ್‌ಲ್ ಸ್ಥಳ, ಉದ್ಯಾನ, ಕೆರೆಗಳ ಬದಿಯಲ್ಲಿ ಹಣ್ಣಿನ ಗಿಡ ಬೆಳೆಸಲು, ಗೂಡು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 50 ಲಕ್ಷ ರೂ. ಮೀಸಲಿಡಲಾಗಿದೆ.
ಕೆರೆಗಳ ಸುತ್ತ ಗಿಡ ನೆಡುವುದಾಗಿ ತಿಳಿಸಲಾಗಿದೆ. ಆದರೆ, ಕೆರೆಗಳೇ ಮಾಯವಾಗಿವೆ. ಕರ್ನಾಟಕ ಸರೋವರ ಸಂರಕ್ಷಣಾ ಪ್ರಾಧಿಕಾರಕ್ಕೆ ಅಸಿತ್ವ ಇಲ್ಲದಂತೆ ಮಾಡಲಾಗಿದೆ.
ಲಿಯೊ ಸಾಲ್ಡಾನ, ಪರಿಸರವಾದಿ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.