ಜನರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲ

Team Udayavani, Feb 27, 2017, 12:13 PM IST

santhiosh-hegde.jpg

ಬೆಂಗಳೂರು: ರಾಜಕಾರಣಿಗಳು ಹಾಗೂ ಸರ್ಕಾರಿ ನೌಕರರು ಸಾರ್ವಜನಿಕರ ಹಣದಲ್ಲಿ ಐಷರಾಮಿ ಜೀವನ ನಡೆಸುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ವಿಷಾದಿಸಿದರು. ನಗರದ ಎನ್‌ಎಂಕೆಆರ್‌ವಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಂಧ್ಯಾದೀಪ ಟ್ರಸ್ಟ್‌ನ ಬೆಳ್ಳಿಹಬ್ಬ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನ ಸೇವಕರಾದ ರಾಜಕಾರಣಿಗಳು ಹಾಗೂ ಸಮಾಜ ಸೇವಕರಾದ ಸರ್ಕಾರಿ ನೌಕರರ ಬೇಜವಾಬ್ದಾರಿತನ ಹಾಗೂ ಅಸಭ್ಯ ನಡವಳಿಕೆಯಿಂದ ಸಮಾಜದ ಸ್ವಾಸ್ಥ್ಯ ಮತ್ತು ಬಡ ಕುಟುಂಬಗಳ ನೆಮ್ಮದಿ ಹಾಳಾಗಿದೆ. ಇಂತಹ ಸ್ಥಿತಿಯಲ್ಲಿ ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ವಯೋವೃದ್ಧರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಧ್ಯಾದೀಪ ಟ್ರಸ್ಟ್‌ನ ಕಾರ್ಯ ಇಡೀ ಸಮಾಜಕ್ಕೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮನುಷ್ಯನ ಸ್ವಾರ್ಥ ಹಾಗೂ ದುರಾಸೆ ಇಂದು ಸಮಾಜದಲ್ಲಿ ಮಾನವೀಯ ಮೌಲ್ಯಗಳು ನೆಲಕಚ್ಚಲು ಕಾರಣವಾಗಿದೆ. ಲೌಕಿಕ ಲೋಭಗಳ ಮೋಹಕ್ಕೆ ಬಿದ್ದಿರುವ ಮನುಷ್ಯನಲ್ಲಿ ಸ್ವಾರ್ಥ ಮತ್ತು ದುರಾಸೆ ಮಿತಿಮೀರಿ ಬೆಳೆಯುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಗೌಣವಾಗುತ್ತಿವೆ ಎಂದರು.  ಸ್ವಾರ್ಥ ಮತ್ತು ದುರಾಸೆಗೆ ಇಂದು ಅತಿಹೆಚ್ಚು ಬಲಿಯಾಗಿರುವುದು ರಾಜಕೀಯ ಕ್ಷೇತ್ರ.

ಒಂದು ಕಾಲದಲ್ಲಿ ಕೋಟಿ ರೂ.ಗಳಿಗಷ್ಟೇ ಸಿಮೀತವಾಗಿದ್ದ ರಾಜಕಾರಣಿಗಳ ಭ್ರಷ್ಟಾಚಾರ ಹಾಗೂ ಹಗರಣಗಳು ಇಂದು ಲಕ್ಷ ಕೋಟಿ ರೂ.ಗಳ ಮಟ್ಟಕ್ಕೆ ಬಂದು ನಿಂತಿವೆ. ಬೊಫೋರ್ಸ್‌ ಹಗರಣ 64 ಕೋಟಿ ರೂ., ಕಾಮೆನ್‌ವೆಲ್ತ್‌ ಹಗರಣ 70 ಸಾವಿರ ಕೋಟಿ, 2ಜಿ ಹಗರಣ 1.70 ಲಕ್ಷ ಕೋಟಿ, ಕೋಲ್ಗೇಟ್‌ ಹಗರಣ 1.86 ಲಕ್ಷ ಕೋಟಿ ರೂ…. ಈ ರೀತಿ ರಾಜಕೀಯ ಹಗರಣಗಳ ಮೊತ್ತದ ಪ್ರಮಾಣ ಏರುತ್ತಲೇ ಇದೇ ಎಂದು ಆತಂಕ ವ್ಯಕ್ತಪಡಿಸಿದರು. 

ನಿವೃತ್ತ ಐಎಎಸ್‌ ಅಧಿಕಾರಿ ಡಾ.ಸಿ.ಸೋಮಶೇಖರ್‌ ಅವರು “ಸಮರ್ಪಣ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಇದೇ ವೇಳೆ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹಾಗೂ ಸಂಧ್ಯಾದೀಪ ಟ್ರಸ್ಟ್‌ನ ಹಿರಿಯ ಸದಸ್ಯರಾದ ರುದ್ರಾಣಿ ಜಿ.ಎಸ್‌.ಶಿವರುದ್ರಪ್ಪ, ಸರೋಜ ಕೆ.ಎಂ.ನಂಜಪ್ಪ, ಶಾರದಾ ಭಾರತಿ, ಪ್ರಮೀಳಾ ಶಂಕರ್‌ ಅವರನ್ನು ಸನ್ಮಾನಿಸಲಾಯಿತು. ಬೇಲಿಮಠದ ಶಿವರುದ್ರ ಮಹಾಸ್ವಾಮಿ, ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌, ಸಾಹಿತಿ ಮಾಲತಿ ಪಟ್ಟಣಶೆಟಿಇದ್ದರು. 

ಟಾಪ್ ನ್ಯೂಸ್

Supreme Court: ಆರೋಪಿ, ಅಪರಾಧಿ ಮನೆಯನ್ನು ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು

Supreme Court: ಆರೋಪಿ, ಅಪರಾಧಿ ಮನೆಯನ್ನು ಏಕಾಏಕಿ ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು

3-belagavi

Belagavi: ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸ್ಥಾನಕ್ಕೆ ಢವಳೇಶ್ವರ ದಿಢೀರ್ ರಾಜೀನಾಮೆ

1-eqwqwewe

Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ

arrested

Salman Khan; ಬಾಲಿವುಡ್ ನಟನಿಗೆ ಬೆದರಿಕೆ ಹಾಕಿದ್ದ ಗೀತ ರಚನೆಕಾರ ರಾಯಚೂರಿನಲ್ಲಿ ಬಂಧನ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

1-aaa-gggg–rp

Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Theft Case: ಕದ್ದ ಚಿನ್ನ ಜ್ಯುವೆಲ್ಲರಿಗೆ ಮಾರುವಾಗ ಸಿಕ್ಕಿಬಿದ್ದ!

Theft Case: ಕದ್ದ ಚಿನ್ನ ಜ್ಯುವೆಲ್ಲರಿಗೆ ಮಾರುವಾಗ ಸಿಕ್ಕಿಬಿದ್ದ!

5

Arrested: ಫಾರೆಸ್ಟ್‌ ಗಾರ್ಡ್‌ ಹುದ್ದೆ ತೊರೆದು ಕಳ್ಳತನಕ್ಕಿಳಿದವ ಸೆರೆ

Thefte Case: ಕೆಲಸಕ್ಕಿದ್ದ ಮನೆಯಲ್ಲೇ ರೂ. 12 ಲಕ್ಷ. ಚಿನ್ನ ಕದ್ದಳು

Thefte Case: ಕೆಲಸಕ್ಕಿದ್ದ ಮನೆಯಲ್ಲೇ ರೂ. 12 ಲಕ್ಷ. ಚಿನ್ನ ಕದ್ದಳು

Crime: ಹೆತ್ತ ತಾಯಿಯನ್ನೇ ಕೊಂದ ಮಗ!

Crime: ಹೆತ್ತ ತಾಯಿಯನ್ನೇ ಕೊಂದ ಮಗ!

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್‌ ಆರತಿ

Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್‌ ಆರತಿ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Theft Case: ಕದ್ದ ಚಿನ್ನ ಜ್ಯುವೆಲ್ಲರಿಗೆ ಮಾರುವಾಗ ಸಿಕ್ಕಿಬಿದ್ದ!

Theft Case: ಕದ್ದ ಚಿನ್ನ ಜ್ಯುವೆಲ್ಲರಿಗೆ ಮಾರುವಾಗ ಸಿಕ್ಕಿಬಿದ್ದ!

5

Arrested: ಫಾರೆಸ್ಟ್‌ ಗಾರ್ಡ್‌ ಹುದ್ದೆ ತೊರೆದು ಕಳ್ಳತನಕ್ಕಿಳಿದವ ಸೆರೆ

Supreme Court: ಆರೋಪಿ, ಅಪರಾಧಿ ಮನೆಯನ್ನು ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು

Supreme Court: ಆರೋಪಿ, ಅಪರಾಧಿ ಮನೆಯನ್ನು ಏಕಾಏಕಿ ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.