ಅವಶೇಷಗಳಡಿ ಸಿಲುಕಿದವರ ಲೆಕ್ಕವೇ ಇಲ್ಲ!
Team Udayavani, Feb 17, 2018, 12:35 PM IST
ಬೆಂಗಳೂರು: ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‌ನಲ್ಲಿ ಗುರುವಾರ ಸಂಜೆ ಕುಸಿದ ಕಟ್ಟಡದ ಅವಶೇಷಗಳಡಿ ಎಷ್ಟು ಮಂದಿ ಸಿಲುಕಿದ್ದಾರೆ ಎಂಬ ಅಂದಾಜೇ ಸಿಗುತ್ತಿಲ್ಲ. ಆದರೂ 160 ರಕ್ಷಣಾ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ನಾಲ್ಕೈದು ಗಂಟೆ ಅವಿರತ ಶ್ರಮದಿಂದ ರಕ್ಷಿಸಲ್ಪಟ್ಟ ಕಾರ್ಮಿಕನೊಬ್ಬ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಈ ಮೂಲಕ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಹಜರತ್ (25) ಮೃತ ಕಾರ್ಮಿಕ. ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಅವಶೇಷಗಳಡಿ ಸಿಲುಕಿದ್ದ ಹಜರತ್‌ನನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹಜರತ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಹಜರತ್ ಕುಟುಂಬಸ್ಥರು ವೇಗವಾಗಿ ರಕ್ಷಣಾ ಕಾರ್ಯ ನಡೆಸುತ್ತಿಲ್ಲ. ಅಲ್ಲದೇ ಖಾಸಗಿ ವೈದ್ಯರು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಗ್ಲೂಕೋಸ್, ನೀರು ಕುಡಿದಿದ್ದ ಹಜರತ್: ಸತತ 30 ಗಂಟೆಗಳ ಕಾರ್ಯಾಚರಣೆ ಮಧ್ಯೆ ಶುಕ್ರವಾರ ನಸುಕಿನ 3.30ರ ಸುಮಾರಿಗೆ ಅವಶೇಷಗಳಡಿ ದೀರೇಶ್ ಕುಮಾರ್ ಎಂಬಾತ ಸಿಲುಕಿರುವುದು ಗೊತ್ತಾಯಿತು. ಆದರೆ, ಈತ ಹೆಚ್ಚು ಗಾಯಗೊಂಡಿರಲಿಲ್ಲ. ಸೌರಭ್ ರಕ್ಷಣೆಗಾಗಿ ಕ್ಷೀಪ್ರವಾಗಿ ಅವಶೇಷಗಳನ್ನು ತೆರವುಗೊಳಿಸಿದಾಗ ಯಾವುದೇ ಅಪಾಯವಿ ಲ್ಲದೇ ಆತನೇ ಹೊರಬಂದಿದ್ದಾನೆ.
ಈತನ ಮಾಹಿತಿ ಮೇರೆಗೆ ಪಕ್ಕದಲ್ಲೇ ಬಿದ್ದಿದ್ದ ಹಜರತ್‌ಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಅಲ್ಲದೇ ಆತನ ಸ್ಥಿತಿ ಬಗ್ಗೆ ದೀರೇಶ್ ಕುಮಾರ್ ವಿವರಿಸಿದ್ದ. ಹೀಗಾಗಿ ಹಜರತ್ ಸಿಲುಕಿರುವ ಜಾಗವನ್ನು ಕೊರೆದು ಸಿಬ್ಬಂದಿ ಕುಡಿಯಲು ನೀರು, ಗ್ಲೂಕೋಸ್ ಕೊಟ್ಟು ನಾವಿದ್ದೇವೆ ಎಂದು ಧೈರ್ಯ ತುಂಬಿದ್ದೇವು.
ಹೀಗೆ ಐದು ಗಂಟೆಗಳ ಅವಿರತ ಶ್ರಮದಿಂದ 8.30ರ ಸುಮಾರಿಗೆ ಹಜರತ್‌ನನ್ನು ಹೊರತರಲಾಯಿತು. ಅಷ್ಟರಲ್ಲಿ ಈತನ ಸೊಂಟ, ಕಾಲು ಮತ್ತು ಬೆನ್ನಿನ ಮೇಲೆ ಕಲ್ಲು ಬಿದ್ದಿದ್ದರಿಂದ ಗಂಭೀರವಾಗಿ ಗಾಯ ಗೊಂಡಿದ್ದ. ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ರಕ್ಷಣಾ ಪಡೆಯ ಮುಂದಾಳತ್ವ ವಹಿಸಿದ್ದ ಅಧಿಕಾರಿ ಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಎಷ್ಟು ಮಂದಿ ಎಂಬ ಅಂದಾಜಿಲ್ಲ!: ಗುರು ವಾರ ಸಂಜೆ 4.30ರ ಸುಮಾರಿಗೆ ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸಿವಿಲ್ ಡೆಫೆನ್ಸ್ ಸೇರಿ 160 ಮಂದಿ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಇದುವರೆಗೂ ಕಟ್ಟಡದ ಅವಶೇಷಗಳಡಿ ಎಷ್ಟು ಮಂದಿ ಸಿಲುಕ್ಕಿದ್ದಾರೆ ಎಂಬ ಮಾಹಿತಿಯಿಲ್ಲ. ಗಾಯಗೊಂಡು ಚೇತರಿಸಿಕೊಂಡಿರುವ ಕಾರ್ಮಿಕರಿಗೂ ತಿಳಿದಿಲ್ಲ.
ಮಾಲೀಕ ತಲೆಮರೆಸಿಕೊಂಡಿ ರುವುದರಿಂದ ಸರಿಯಾದ ಲೆಕ್ಕ ಸಿಗುತ್ತಿಲ್ಲ. ಹೀಗಾಗಿ ಕಟ್ಟಡವನ್ನು ಸಂಪೂರ್ಣವಾಗಿ ನೆಲ ಸಮ ಮಾಡುವವರಿಗೆ ರಕ್ಷಣಾ ಸಿಬ್ಬಂದಿ ಪಾಳಿ ಲೆಕ್ಕದಲ್ಲಿ ರಕ್ಷಣಾ ಕಾರ್ಯ ಮುಂದುವರಿ ಸುತ್ತಾರೆ. ಅವಶೇಷಗಳಡಿ ಇತರೆ ಕಾರ್ಮಿಕರು ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ವೇಗದ ಜತೆಗೆ ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಕಾರ್ಯಾಚರಣೆ ಸಂದರ್ಭದಲ್ಲಿ ವಿಕ್ಟಿಮ್ ಲೋಕೇಷನ್ ಕ್ಯಾಮೆರಾ, ಐರನ್ ಕಟರ್, ಗುಂಡಿ ಕೊರೆಯುವ ಯಂತ್ರ ಹಾಗೂ ಇತರೆ ತಂತ್ರಜ್ಞಾನ ಬಳಸಲಾಗಿದೆ. ಕೆಲವೊಮ್ಮೆ ಸುತ್ತ- ಮುತ್ತಲ ಪ್ರದೇಶವನ್ನು ನಿಶಬ್ಧದ ಮಾಡಿ, ಕಟ್ಟಡಗಳಡಿ ಯಾರಿದ್ದಿರಾ, ಯಾವ ಕಡೆಯಿದ್ದಿರಾ ಎಂದು ಕೂಗಿದಾಗ, ಅವರಿಂದ ಪ್ರತಿಕ್ರಿಯೆ ಬಂದಾಗ ಆ ಭಾಗದಲ್ಲಿ ಕಾರ್ಯಾಚರಣೆ ಮಾಡುತ್ತಿ ದ್ದೇವೆ. ಎಂದು ಅಧಿಕಾರಿ ವಿವರಿಸಿದರು.
ಖಾಸಗಿ ಆಸ್ಪತ್ರೆ ವಿರುದ್ಧ ಆರೋಪ: ರಕ್ಷಣೆಗೊಳಗಾದ 15 ಮಂದಿ ಕಾರ್ಮಿಕರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾ ಗಿದೆ. ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಆದರೂ ಕೆಲ ಆಸ್ಪತ್ರೆಗಳು ಪ್ರಾಥಮಿಕ ಚಿಕಿತ್ಸೆ ನೀಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಗಾಯಾ ಳುಗಳ ಪೋಷಕರಿಗೆ ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವೆಡೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ.
“ಒಂದು ವೇಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಟ್ಟಿದ್ದರೆ ನಮ್ಮ ಮಗ ಹಜರತ್ ಬದುಕುತ್ತಿದ್ದ. ವೈದ್ಯರ ನಿರ್ಲಕ್ಷ್ಯ ಹಾಗೂ ಮಂದಗತಿಯಲ್ಲಿ ರಕ್ಷಣಾ ಕಾರ್ಯ ಮಾಡಿದರಿಂದಲೇ ಮಗ ಸತ್ತಿದ್ದಾನೆ ಎಂದು ಹಜರತ್ ಪೋಷಕರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.