ಇವರು ಉದ್ಯಾನನಗರಿಯ ನಿಜವಾದ ಜೋಡೆತ್ತುಗಳು…

ಕಾವೇರಿಯ ಪರಿಕಲ್ಪನೆ ಕೊಟ್ಟ ಟಿ.ಆರ್‌.ಶಾಮಣ್ಣ, ವಿ.ಎಸ್‌. ಕೃಷ್ಣ ಅಯ್ಯರ್‌

Team Udayavani, Apr 14, 2019, 3:00 AM IST

ivaru-nija

ಬೆಂಗಳೂರು: ಇವರು ನಗರದ ನಿಜವಾದ ಜೋಡಿ ಎತ್ತುಗಳು. ಬೆಂಗಳೂರಿಗೆ ಕಾವೇರಿಯ ಪರಿಕಲ್ಪನೆ ಕೊಟ್ಟವರು. ಅಭಿವೃದ್ಧಿಗಾಗಿ ಹೆಗಲು ಕೊಟ್ಟವರು. ಒಂದೇ ಸಮುದಾಯಕ್ಕೆ ಸೇರಿದ್ದರೂ ಒಬ್ಬರ ಗೆಲುವಿಗಾಗಿ ಮತ್ತೂಬ್ಬರು ಸ್ಥಾನ ಬಿಟ್ಟುಕೊಟ್ಟವರು. ಹಾಗಾಗಿ, ಚುನಾವಣೆಯಲ್ಲಿ ಇವರು ಮತದಾರರಿಗೆ ಹಣ ಹಂಚುತ್ತಿರಲಿಲ್ಲ; ಬದಲಿಗೆ ಮತದಾರರೇ ಇವರಿಗೆ ಖರ್ಚಿಗೆ ಹಣ ಕೊಟ್ಟು ಗೆಲ್ಲಿಸುತ್ತಿದ್ದರು!

ಆ ಜೋಡೆತ್ತುಗಳು ಟಿ.ಆರ್‌. ಶಾಮಣ್ಣ ಮತ್ತು ವಿ.ಎಸ್‌. ಕೃಷ್ಣ ಅಯ್ಯರ್‌. ಬೆಂಗಳೂರಿನಲ್ಲಿ ಅಂದಿನ ಜನತಾ ಪಕ್ಷದ “ಚಕ್ರ’ವನ್ನು ಎಳೆಯುವ ಜೋಡೆತ್ತುಗಳಾಗಿದ್ದರು. ಬದುಕು ಕೊನೆ ಗಳಿಗೆವರೆಗೂ ಸೇವೆಗೆ ಮುಡಿಪಾಗಿತ್ತು. ಆ ಸೇವೆಯೇ ಗೆಲುವಿಗೆ ಮಾನದಂಡವಾಗಿತ್ತು.

ಚುನಾವಣೆಯಲ್ಲಿ ಗೆಲುವಿಗಾಗಿ ಖರ್ಚು ಮಾಡಿದ್ದು ಅಬ್ಬಬ್ಬಾ ಎಂದರೆ ಮೂರರಿಂದ ನಾಲ್ಕು ಲಕ್ಷ ರೂ. ಅದು ಕೂಡ ಮತದಾರರಿಂದಲೇ ಬಂದ ದೇಣಿಗೆ ಆಗಿತ್ತು. ರಾಜಕೀಯ ಮೇಲಾಟಗಳ ಪ್ರಸ್ತುತ ಸಂದರ್ಭದಲ್ಲಿ ಅದೇ ಜನತಾ ಪರಿವಾರದಿಂದ ಬಂದ ಹಿರಿಯ ರಾಜಕಾರಣಿ ಪಿ.ಜಿ.ಆರ್‌. ಸಿಂಧ್ಯಾ “ಉದಯವಾಣಿ’ಯೊಂದಿಗೆ ಈ ಇಬ್ಬರು ಅಪರೂಪದ ನಾಯಕರ ಮೆಲುಕು ಹಾಕಿದರು.

ಟಿ.ಆರ್‌. ಶಾಮಣ್ಣ ಸೈಕಲ್‌ ಶಾಮಣ್ಣ ಎಂದೇ ಪ್ರಸಿದ್ಧಿ ಪಡೆದವರು. ಸಾರ್ವಜನಿಕ ಅಥವಾ ಖಾಸಗಿ ಕೆಲಸಗಳಿಗೆ ಅದೇ ಸೈಕಲ್‌ನಲ್ಲಿ ತೆರಳುತ್ತಿದ್ದರು. ಈಗ ವಾಹನಗಳಿಗೆ ರಸ್ತೆ ತೆರಿಗೆ ಇರುವಂತೆಯೇ ಆಗಿನ ಕಾಲದಲ್ಲಿ ಸೈಕಲ್‌ಗ‌ೂ ಒಂದೆರಡು ಆಣೆ ತೆರಿಗೆ ವಿಧಿಸಲಾಗಿತ್ತು. ಆಗ ಅದನ್ನು ರದ್ದುಪಡಿಸಬೇಕು ಎಂದು ಅಂದು ಹೋರಾಟ ಮಾಡಿ, ಯಶಸ್ವಿಯಾದವರು ಶಾಮಣ್ಣ.

ನಗರಸಭೆ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಅವರು, ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ಹಾಗೂ ಸಂಸದರಾಗಿ ಸೇವೆ ಸಲ್ಲಿಸಿದ್ದರು. ಆದರೆ, ತಮ್ಮ ಇಡೀ ಜೀವಮಾನದಲ್ಲಿ ಒಂದೇ ಒಂದು ದಿನ ಅವರು ಕಾರು ಏರಿದ್ದನ್ನು ನಾನು ನೋಡಲಿಲ್ಲ. ಕೊನೆಗೆ ಅವರ ಪಾರ್ಥಿವ ಶರೀರವನ್ನು ಏನಾದರೂ ಕಾರಿನಲ್ಲಿ ತೆಗೆದುಕೊಂಡು ಹೋದರೋ ಎಂಬುದು ಗೊತ್ತಿಲ್ಲ. ಇದು ಅವರ ಸರಳ ಮತ್ತು ಸಜ್ಜನಿಕೆಗೆ ಸಾಕ್ಷಿ ಎಂದರು.

80ರ ದಶಕದಲ್ಲಿ ಇಡೀ ದೇಶದಲ್ಲಿ ಜನತಾ ಪರಿವಾರದ ಎಲ್ಲ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸೋತು ಮನೆ ಸೇರಿದ್ದರು. ಅಂತಹ ಸಂದರ್ಭದಲ್ಲೂ ಆ ಪಕ್ಷದಿಂದ ಆಯ್ಕೆಯಾದ ಏಕೈಕ ಸಂಸದ ಶಾಮಣ್ಣ. ಕರ್ನಾಟಕದ ಗಾಂಧಿ ಎಂದೂ ಅವರನ್ನು ಕರೆಯುತ್ತಿದ್ದರು ಎಂದು ನೆನಪಿಸಿಕೊಂಡರು.

ಶಾಮಣ್ಣ ಅವರ ಬೆನ್ನಲ್ಲೇ ಪೋಣಿಸಿಕೊಂಡು ಬರುವ ಮತ್ತೂಂದು ಹೆಸರು ಅದೇ ಬಸವನಗುಡಿ ಕ್ಷೇತ್ರದ ಒಂದೇ ಪಕ್ಷದ ವಿ.ಎಸ್‌. ಕೃಷ್ಣ ಅಯ್ಯರ್‌. ಇವರೂ ಶಾಮಣ್ಣರಷ್ಟೇ ಸರಳ ವ್ಯಕ್ತಿತ್ವದವರು. 1980ರಲ್ಲಿ ಜನತಾ ಪಕ್ಷದಿಂದ ಶಾಮಣ್ಣ ಗೆದ್ದರೂ, 1984ರಲ್ಲಿ ಕೃಷ್ಣ ಅಯ್ಯರ್‌ ಅವರಿಗೆ ಕ್ಷೇತ್ರ ಬಿಟ್ಟುಕೊಡುತ್ತಾರೆ. ಅಷ್ಟೇ ಅಲ್ಲ, ಅವರ ಗೆಲುವಿಗೆ ಶ್ರಮಿಸುತ್ತಾರೆ. ಮುಂದೆ ಅವರ ಸ್ನೇಹಿತ ಗೆಲ್ಲುತ್ತಾರೆ ಕೂಡ.

ಕೃಷ್ಣ ಅಯ್ಯರ್‌ ಮೇಯರ್‌, ಸಂಸದರಾಗಿದ್ದರು. ಆದರೆ, ಅವರಿದ್ದದ್ದು ಬಸವನಗುಡಿಯಲ್ಲಿ ಬರುವ ಶಂಕರಮಠದ ಒಂದು ಪುಟ್ಟ ಮನೆಯಲ್ಲಿ. ಈಗಲೂ ಅವರ ಪತ್ನಿ ಅದೇ ಮನೆಯಲ್ಲಿ ವಾಸವಿದ್ದಾರೆ. ಕೃಷ್ಣ ಅಯ್ಯರ್‌ ಜನತಾ ಪಕ್ಷದ ಖಜಾಂಚಿ ಅಥವಾ ಕೋಶಾಧ್ಯಕ್ಷರೇನೂ ಆಗಿರಲಿಲ್ಲ.

ಆದಾಗ್ಯೂ ಚುನಾವಣೆ ಸಂದರ್ಭದಲ್ಲಿ ಸಂಗ್ರಹವಾಗು ಕೋಟಿಗಟ್ಟಲೆ ಹಣ ಅವರ ಮನೆಯಲ್ಲೇ ಇಡಲಾಗುತ್ತಿತ್ತು. ಯಾಕೆಂದರೆ ಅವರೆಂದೂ ಬೇರೆಯವರ ದುಡ್ಡನ್ನು ಸ್ವಂತಕ್ಕೆ ಬಳಸುತ್ತಿರಲಿಲ್ಲ. ಹಾಗೂ ಪಕ್ಷವು ಅವರ ಮೇಲಿಟ್ಟಿದ್ದ ನಂಬಿಕೆಗೆ ಅದು ಸಾಕ್ಷಿ ಕೂಡ ಆಗಿತ್ತು.

ಸಂಸದರಾದ ಮೇಲೆ ಬ್ಯಾಂಕ್‌ವೊಂದರಲ್ಲಿ ಸಾಲ ಮಾಡಿ ಫ್ಯಾಟ್‌ ಕಾರು ಖರೀದಿಸಿದ್ದರು. ಅದರಲ್ಲೇ ಓಡಾಡುತ್ತಿದ್ದರು. ಜೀವನದ ಕೊನೆಯ ಗಳಿಗೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸಾ ವೆಚ್ಚ 17 ಲಕ್ಷ ರೂ. ಆಗಿತ್ತು. ಪಾವತಿಗೆ ಅವರ ಬಳಿ ದುಡ್ಡು ಇರಲಿಲ್ಲ. ಆಗ ಮುಖ್ಯಮಂತ್ರಿ ಆಗಿದ್ದ ಬಿ.ಎಸ್‌. ಯಡಿಯೂರಪ್ಪ ಆ ಹಣ ಪಾವತಿಸಿದ್ದರು ಎಂದು ಸ್ಮರಿಸಿದರು.

ಅಂದಿನ ಮತ್ತು ಈಗಿನ ರಾಜಕಾರಣಕ್ಕೆ ಆಕಾಶ ಮತ್ತು ಭೂಮಿಯಷ್ಟು ಅಂತರ ಇದೆ. ಒಂದೇ ಸಮುದಾಯದವರಾಗಿದ್ದರೂ ಒಂದೇ ಕ್ಷೇತ್ರದಲ್ಲಿ ಇಬ್ಬರೂ ಒಟ್ಟಾಗಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಕಾವೇರಿ ಮೊದಲ ಹಂತ ಬೆಂಗಳೂರಿಗೆ ಬರಲು ಇವರಿಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು.

“ಇನ್ನೊಂದು ವಿಶೇಷವೆಂದರೆ ನನಗೆ ರಾಜಕೀಯ ಅಕ್ಷರ ಕಲಿಸಿದವರು ಕೃಷ್ಣ ಅಯ್ಯರ್‌. 1967-72ರಲ್ಲಿ ನಾನು ಎಂಜಿನಿಯರಿಂಗ್‌ ಓದುತ್ತಿದ್ದೆ. ಗಾಂಧಿಬಜಾರ್‌ನಲ್ಲಿ ನನ್ನ ಜತೆ ಚಿಕ್ಕಣ್ಣ ಎಂಬುವವನು ಓದುತ್ತಿದ್ದ. ಅವನು ವಿ. ಅಣ್ಣಯ್ಯ ಎಂಬುವರನ್ನು ಪರಿಚಯಿಸಿದ.

ಅವನು ಒಬ್ಬ ಸಮಾಜ ಸೇವಕನಾಗಿದ್ದ. ಯುವಕ ಸಂಘದಲ್ಲೂ ಇದ್ದ. ಕೃಷ್ಣ ಅಯ್ಯರ್‌ ಅದಕ್ಕೆ ಅಧ್ಯಕ್ಷರಾಗಿದ್ದರು. ಆಗ ಅವರ ಪರಿಚಯ ಆಯ್ತು. ಆಗ ಕೃಷ ಅಯ್ಯರ್‌ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದರು. ಸರ್ವೋದಯ, ಯುವಕ ನಾಯಕತ್ವ ಅದು-ಇದು ಎಂದು ರಾಜಕೀಯ ಅಕ್ಷರ ಕಲಿಸಿದರು. ನಂತರ ಎಬಿವಿಪಿ ಸೇರಿದೆ. ಆದರೂ ನನ್ನನ್ನು ದೂರ ಇಟ್ಟಿರಲಿಲ್ಲ’ ಎಂದರು.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Bengaluru: ಸೆಂಟ್ರಿಂಗ್‌ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್‌ ವಶಕ್ಕೆ

Bengaluru: ಸೆಂಟ್ರಿಂಗ್‌ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್‌ ವಶಕ್ಕೆ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.