ಮಡಿವಾಳ ಸಮುದಾಯ ಎಸ್ಸಿಗೆ ಸೇರಿಸಲು ಚಿಂತನೆ
Team Udayavani, Feb 2, 2018, 6:05 AM IST
ಬೆಂಗಳೂರು: ಮಡಿವಾಳ ಸಮುದಾಯವನ್ನು ಪರಿಶಿಷ್ಠ ಜಾತಿಗೆ ಸೇರಿಸುವ ಕುರಿತು ಗಂಭೀರ ಚಿಂತನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿವಾಳ ಮಾಚಿದೇವ ಜಯಂತಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಡಿವಾಳ ಜಾತಿಗೆ ಪ್ರಾತಿನಿಧ್ಯ ನೀಡಲು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ಮಡಿವಾಳ ನಿಗಮ ಮಂಡಳಿ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದು ಹೇಳಿದರು.
ಮಡಿವಾಳ ಸಮುದಾಯಕ್ಕೆ ವಿಧಾನಸಭೆ ಟಿಕೆಟ್ ನೀಡಿ ಎಂದು ಸಭಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ,ಮಡಿವಾಳರಿಗೆ ಟಿಕೆಟ್ ಕೊಟ್ಟರೆ ಯಾರು ಗೆಲ್ಲುತ್ತಾರೆ ಎಂದು ಪ್ರಶ್ನಿಸಿದರು. ಸೊರಬ ಕ್ಷೇತ್ರದಲ್ಲಿ ರಾಜು ತಲ್ಲೂರ್‌ಗೆ ಟಿಕೆಟ್ ನೀಡಿ ಎಂದು ಕೇಳಿದರು. ಸಮೀಕ್ಷೆ ನಡೆಸಿ ಗೆಲ್ಲುವ ಸಾಧ್ಯತೆ ನೋಡಿ ಟಿಕೆಟ್ ನೀಡಲಾಗುವುದು ಎಂದರು.
ಚುನಾವಣೆ ಹತ್ತಿರ ಬರುತ್ತಿರುವಂತೆ ಕುರುಬರು, ಉಪ್ಪಾರ, ಅಂಬಿಗರು, ವೀರಶೈವರೂ ಸೇರಿ ಹಲವು ಜಾತಿಗಳನ್ನು ಪರಿಶಿಷ್ಠ ಜಾತಿಗೆ ಸೇರಿಸುವಂತೆ ಒತ್ತಡ ಹೆಚ್ಚುತ್ತಿದೆ. ಸರ್ಕಾರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು. ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವ ಪುಸ್ತಕ ಬಿಡುಗಡೆ ಮಾಡಲಾಯಿತು. ಸಚಿವೆ ಉಮಾಶ್ರೀ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ ಹಾಗೂ ಮಡಿವಾಳ ಜನಾಂಗದ ಅಧ್ಯಕ್ಷ ಸಿ. ನಂಜಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
Chikkamagaluru: ಎರಡು ದಿನದ ಮಗುವನ್ನು ಕಾಫಿ ತೋಟದಲ್ಲಿ ಬಿಟ್ಟುಹೋದ ತಾಯಿ
Bidar: ಎಟಿಎಂಗೆ ಹಣ ಜಮೆ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ ನಡಿಸಿ 93 ಲಕ್ಷ ರೂ ದರೋಡೆ
Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
Udupi: ಎರಡೇ ದಿನದಲ್ಲಿ ಬರಲಿದೆ, ವಾರಾಹಿ ನೀರು!
Udupi: ಫೆ.7ರಿಂದ 9ರವರೆಗೆ ಮಹಿಳಾ ಉದ್ಯಮಿಗಳ ಆರ್ಥಿಕ ಬಲವರ್ಧನೆಗಾಗಿ “ಪವರ್ ಪರ್ಬ 25′
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
Meera Movie: ತೆರೆಗೆ ಬರಲು ಸಜ್ಜಾದ ಮಹಿಳಾ ಪ್ರಧಾನ ತುಳು ಚಿತ್ರ ʼಮೀರಾʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.