ಕ್ರಿಕೆಟ್‌ ಕನಸು ಕಂಡವರು ಕಂಬಿ ಹಿಂದೆ!


Team Udayavani, Jul 10, 2018, 11:40 AM IST

cricket.jpg

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಆಟಗಾರರಾಗಬೇಕು ಎಂಬ ಕನಸು ಹೊತ್ತಿದ್ದ ಇಬ್ಬರು ಯುವಕರು ಕೊನೆಗೆ ಆಗಿದ್ದು ಮಾತ್ರ ಸರಗಳ್ಳರು! ಕ್ರಿಕೆಟ್‌ ಕಿಟ್‌ ಖರೀದಿಗೆ ಹಣ ಹೊಂದಿಸಲು ಸ್ನೇಹಿತನ ಸಲಹೆ ಮೇರೆಗೆ 8 ತಿಂಗಳಿಂದ ಸರಗಳ್ಳತನ ಮಾಡುತ್ತಿದ್ದ ಯುವಕರು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ.

ನವೀನ್‌ ಶೆಟ್ಟಿ (19) ಮತ್ತು ಬಾಲಕುಮಾರ್‌ (19) ಬಂಧಿತರು. ಆರೋಪಿಗಳ ಬಂಧನದಿಂದ ನಗರದ 22 ಕಡೆ ನಡೆದಿದ್ದ ಸರಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, 27 ಲಕ್ಷ ರೂ. ಮೌಲ್ಯದ 900 ಗ್ರಾಂ. ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಬೆಂಗಳೂರಿನ ಲಿಂಗರಾಜಪುರ ನಿವಾಸಿಗಳಾಗಿದ್ದು, ಬಾಲಕುಮಾರ್‌ ಎಸ್‌ಎಸ್‌ಎಲ್‌ಸಿ ಓದಿದ್ದು, ನವೀನ್‌ ಶೆಟ್ಟಿ ದ್ವಿತೀಯ ಪಿಯುಸಿ ಫೇಲ್‌ ಆಗಿದ್ದಾನೆ. ಈ ಮಧ್ಯೆ ಕ್ರಿಕೆಟ್‌ ಆಟಗಾರರಾಗುವ ಕನಸು ಕಂಡಿದ್ದ ಇವರು ಸ್ನೇಹಿತ ಸಗಾಯ್‌ ಂಬಾತನ ಸಲಹೆಯಂತೆ ಸರಗಳ್ಳತನಕ್ಕೆ ಇಳಿದಿದ್ದರು.

ತುಮಕೂರಿನ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕುಮಾರ್‌ಗೆ ಅದೇ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ನವೀನ್‌ ಶೆಟ್ಟಿ ಪರಿಚಯವಾಗಿದೆ. ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದಾರೆ. ಬಳಿಕ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಬಾಲಕುಮಾರ್‌,

ನಗರದ ಕಲ್ಯಾಣ ಮಂಟಪಗಳಲ್ಲಿ ಅಡುಗೆ ಕೆಲಸಕ್ಕೆ ಹೋಗ ಜತೆಗೆ, ರಿಚ್‌ಮಂಡ್‌ ವೃತ್ತದಲ್ಲಿನ ಟಿವಿ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್‌ ಕೆಲಸ ಕೂಡ ಮಾಡುತ್ತಿದ್ದ. ಪಿಯುಸಿಯಲ್ಲಿ ಫೇಲಾಗಿದ್ದ ನವೀನ್‌, ಆಟೋ ಚಾಲಕನಾಗಿದ್ದ. ಈ ಮಧ್ಯೆ ಆರೋಪಿಗಳು ಕರಿಯಣ್ಣಪಾಳ್ಯದ ಮೈದಾನದಲ್ಲಿ ಕ್ರಿಕೆಟ್‌ ಆಟವಾಡುತ್ತಿದ್ದರು. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಆಟಗಾರರಾಬೇಕೆಂಬ ಕನಸು ಚಿಗುರಿದ್ದು ಇಲ್ಲೇ.

ಕ್ರಿಕೆಟ್‌ ಟು ಸರಗಳವು: ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರಾಗಬೇಕೆಂಬ ಆಸೆ ಹೊಂದಿದ್ದ ಯುವಕರು, ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿರುವ ಕ್ರಿಕೆಟ್‌ ತರಬೇತಿ ಕೇಂದ್ರ ಕೆಐಓಸಿಗೆ ಹೋಗಿ ವಿಚಾರಿಸಿದ್ದರು. ವರ್ಷಕ್ಕೆ 30 ಸಾವಿರ ರೂ. ಹಾಗೂ ಕ್ರಿಕೆಟ್‌ ಕಿಟ್‌ ಖರೀದಿಗೆ ಕೇಂದ್ರದ ಅಧಿಕಾರಿಗಳು ಸೂಚಿಸಿದ್ದಾರೆ.

ಆದರೆ, ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗದ ಯುವಕರು, ಕ್ರಿಕೆಟ್‌ ಮೈದಾನದಲ್ಲಿ ಪರಿಚಯವಾದ ಸಗಾಯ್‌ ಎಂಬಾತನ ಸಲಹೆ ಕೇಳಿದ್ದರು. ಆತ ಸುಲಭವಾಗಿ ಹಣ ಸಂಪಾದಿಸಲು ಸರಗಳ್ಳತನ ಮಾಡುವಂತೆ ಪ್ರೇರೇಪಿಸಿದ್ದ. ಅದರಂತೆ ದ್ವಿಚಕ್ರವಾಹನದಲ್ಲಿ ಹೋಗಿ ಸರ ಕಸಿಯುವುದನ್ನು ಕರಗತ ಮಾಡಿಕೊಂಡಿದ್ದರು.

ಸರಗಳ್ಳತನ ಹೇಗೆ?: ಜಯನಗರದ ಮೀನಾಕ್ಷಿ ಬಾರ್‌ ಮುಂಭಾಗ ನಿಲ್ಲಿಸಿದ್ದ ವಿನಯ್‌ ಎಂಬುವರ ಬಿಳಿ ಬಣ್ಣದ ಹೋಂಡಾ ಏವಿಯೇಟರ್‌ ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿಗಳು, ಇದೇ ವಾಹನ ಬಳಸಿ ಕಳೆದ 8 ತಿಂಗಳಿಂದ ಸರಗಳವು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಶನಿವಾರ, ಭಾನುವಾರ, ತಪ್ಪಿದಲ್ಲಿ ಮಂಗಳವಾರ, ಬುಧವಾರಗಳಂದು ಕಪ್ಪು ಹಾಗೂ ಕೆಂಪು ಬಣ್ಣದ ಹೆಲ್ಮೆಟ್‌ ಹಾಗೂ ಫ‌ುಲ್‌ ಜಾಕೆಟ್‌ಗಳನ್ನು ಧರಿಸಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು.

ವಿಶಾಲವಾದ ರಸ್ತೆಗಳು, ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರು, ಮನೆ ಮುಂದೆ ರಂಗೋಲಿ ಹಾಕುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು. ಇವರ ಬಂಧನದಿಂದ ಜಯನಗರ, ಜೆ.ಪಿ.ನಗರ, ಬನಶಂಕರಿ, ಸಿದ್ದಾಪುರ, ಬಸವನಗುಡಿ, ಕೋಣನಕುಂಟೆ, ಸಿ.ಕೆ.ಅಚ್ಚುಕಟ್ಟು, ಗಿರಿನಗರ, ಹನುಮಂತನಗರ, ತಿಲಕನಗರ, ಮಲ್ಲೇಶ್ವರ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ 22 ಪ್ರಕರಣಗಳು ಪತ್ತೆಯಾಗಿವೆ.

ಅಕ್ಕನ ಮದುವೆಯೂ ಇಲ್ಲ ಕ್ರಿಕೆಟ್‌ ಇಲ್ಲ: ಬಾಲಕುಮಾರ್‌ ಹಾಗೂ ನವೀನ್‌ ಶೆಟ್ಟಿ ಸರಗಳ್ಳತನಕ್ಕೆ ಇಳಿದಿದ್ದರ ಹಿಂದೆ ಹಲವು ಸ್ವಾರಸ್ಯಕರ ಕಾರಣಗಳಿವೆ. ಇಬ್ಬರೂ ದೊಡ್ಡ ಕ್ರಿಕೆಟಿಗರಾಗಬೇಕು ಎಂಬ ಕನಸು ಒಂದೆಡೆಯಾದರೆ, ಮನೆಯ ಅರ್ಥಿಕ  ಪರಿಸ್ಥಿತಿ ಅರಿತಿದ್ದ ಬಾಲಕುಮಾರ್‌, ತನ್ನ ಸಹೋದರಿಗೆ ಒಳ್ಳೆ ಕಡೆ ಮದುವೆ ಮಾಡಬೇಕು. ಅದಕ್ಕಾಗಿ ಹಣ ಕೂಡಿಡಬೇಕು ಅಂದುಕೊಂಡಿದ್ದ.

ಆದರೆ, ಸರಗಳ್ಳತನ ರೂಢಿಯಾಗುತ್ತಿದ್ದಂತೆ ತಮ್ಮ ಉದ್ದೇಶಗಳನ್ನೆ ಮರೆತ ಯುವಕರು, ಕ್ರಿಕೆಟ್‌ ಕಿಟ್‌, ತರಬೇತಿ ಗೋಜಿಗೂ ಹೋಗಿರಲಿಲ್ಲ. ಇತ್ತ ಸಹೋದರಿಯ ಮದುವೆಗೆ ಹಣವನ್ನೂ ಕೂಡಿಡದೆ ಕದ್ದ ಸರಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಜೀವನ ನಿರ್ವಹಣೆಗಾಗಿ ತಂದೆಗೆ ಹೊಸ ಆಟೋ, ಮನೆಗಳಿಗೆ ವಾಷಿಂಗ್‌ ಮೆಷಿನ್‌, ಫ್ರೀಜ್‌ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಕಾಬಂದಿ ಹಾಕಿ ಬಂಧನ: ಆರೋಪಿಗಳ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಎಲ್ಲ ಠಾಣೆಗಳ ಸಿಬ್ಬಂದಿಗೆ ರವಾನಿಸಲಾಗಿತ್ತು. ಈ ಮಧ್ಯೆ ಕೆಲ ದಿನಗಳ ಹಿಂದೆ ಆರೋಪಿಗಳು ಜಯನಗರ ಬೃಂದಾವನ ಪಾರ್ಕ್‌ ಬಳಿ ಸರ ಕದ್ದು ಓಡುತ್ತಿದ್ದರು. ಇದೇ ವೇಳೆ ಪೇದೆ ಶ್ರೀನಿವಾಸ್‌ ಗಸ್ತಿನಲ್ಲಿದ್ದರು.

ಪೊಲೀಸರನ್ನು ಕಂಡ ಇಬ್ಬರು ಯುಟರ್ನ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳ ವರ್ತನೆಯಿಂದ ಅನುಮಾನಗೊಂಡ ಪೇದೆ ಶ್ರೀನಿವಾಸ್‌ ಕೂಡಲೇ ಸಿಬ್ಬಂದಿಗಳಾದ ಕೆಂಪರಾಜ್‌, ಚಂದ್ರಶೇಖರ್‌, ಪ್ರವೀಣ್‌, ಸೈಯದ್‌ಗೆ ಮಾಹಿತಿ ನೀಡಿದ್ದಾರೆ.

ಎಲ್ಲ ಸಿಬ್ಬಂದಿ ಆರೋಪಿಗಳನ್ನು ಬೆನ್ನತ್ತಿ ಎನ್‌ಎಂಕೆಆರ್‌ವಿ ಕಾಲೇಜು ಬಳಿ ನಾಕಾಬಂದಿ ಹಾಕಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ತವ್ಯಪ್ರಜ್ಞೆ ಮೆರೆದ ಪೇದೆಗಳಿಗೆ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ.ಸಿಂಗ್‌ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಸಲಹೆ ನೀಡಿದ ಸಗಾಯ್‌ ಸೆರೆ: ಆರೋಪಿಗಳಿಗೆ ತರಬೇತಿ ನೀಡುತ್ತಿದ್ದ ಸಗಾಯ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸರಗಳವು ಮಾತ್ರವಲ್ಲದೆ, ದರೋಡೆ, ಗಲಾಟೆಗಳಂತಹ ಕೃತ್ಯಗಳಲ್ಲಿ ತೊಡಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಸರ ಕಳವಿಗೂ ತರಬೇತಿ: ಕೊಲೆಗಳಂತಹ ದೊಡ್ಡ ಕೃತ್ಯಗಳಿಗೆ ತರಬೇತಿ ಪಡೆಯುವುದು ಸಾಮಾನ್ಯ. ಆದರೆ, ನವೀನ್‌ ಮತ್ತು ಬಾಲಕುಮಾರ್‌ ಸರಗಳವು ಮಾಡಲು ತರಬೇತಿ ಪಡೆದಿದ್ದರು ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ.

ಸ್ನೇಹಿತ ಸಗಾಯ್‌ ಇಬ್ಬರಿಗೂ ಲಿಂಗರಾಜಪುರಂ ಚಾರ್ಲ್ಸ್‌ ಮೈದಾನದಲ್ಲಿ ವಾಹನ ಓಡಿಸುತ್ತಾ ಸರ ಕಸಿಯುವುದು ಹೇಗೆ ಎಂದು ತರಬೇತಿ ನೀಡುತ್ತಿದ್ದ. ಹಾಗೇ ಮಾತನಾಡುತ್ತಾ ಹೋಗುವವರ ಮೊಬೈಲ್‌ ಹಾಗೂ ಪರ್ಸ್‌ ಕಳವು ಮಾಡುವ ಬಗ್ಗೆಯೂ ತರಬೇತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.