ಆಸ್ತಿ ತೆರಿಗೆ ಪದ್ಧತಿ ಬದಲಾವಣೆಗೆ ಚಿಂತನೆ

ಪೂರಕ ಪ್ರಸ್ತಾವನೆಗೆ ಬಿಬಿಎಂಪಿಗೆ ಸರ್ಕಾರ ಪತ್ರ

Team Udayavani, Jul 18, 2020, 8:21 AM IST

ಆಸ್ತಿ ತೆರಿಗೆ ಪದ್ಧತಿ ಬದಲಾವಣೆಗೆ ಚಿಂತನೆ

ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಆಸ್ತಿ ತೆರಿಗೆ ಸಂಗ್ರಹ ವಿಧಾನದಲ್ಲಿ ಪ್ರಮುಖ ಬದಲಾವಣೆ ತರಲು ಮುಂದಾಗಿರುವ ಸರ್ಕಾರ, ಈ ಸಂಬಂಧ ಅಭಿಪ್ರಾಯ ಕ್ರೋಢೀಕರಿಸಿ ಪೂರಕ ಪ್ರಸ್ತಾವನೆ ಸಲ್ಲಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಪತ್ರ ಬರೆದಿದೆ. ಈ ಕ್ರಮ ಸಂಕಷ್ಟದಲ್ಲಿರುವ ಪಾಲಿಕೆಗೆ ಆರ್ಥಿಕ ಚೇತರಿಕೆ ನೀಡುವ ಸಾಧ್ಯತೆ ಇದೆ.

ಕೇಂದ್ರದ ಜಿಎಸ್‌ಡಿಪಿ (ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನ)ಯಿಂದ ಹೆಚ್ಚುವರಿಯಾಗಿ ಸಾಲ ಪಡೆದುಕೊಳ್ಳುವ ಉದ್ದೇಶದಿಂದ ಕೆಲವು ಆಡಳಿತ ಸುಧಾರಣೆಗೆ ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಕೆಲವು ಆಡಳಿತ ಸುಧಾರಣೆಗೆ ಮುಂದಾಗಿದೆ. ಅದರಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಕೂಡ ಒಂದಾಗಿದೆ. ಅದರಂತೆ ಪ್ರಸ್ತುತ “ಆಸ್ತಿಯ ನಿರೀಕ್ಷಿತ ವರಮಾನ’ (ಯೂನಿಟ್‌ ಏರಿಯಾ ವ್ಯಾಲ್ಯು) ಆಧರಿಸಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದರ ಬದಲಿಗೆ “ಆಸ್ತಿಯ ಮೌಲ್ಯ’ (ಕ್ಯಾಪಿಟಲ್‌ ವ್ಯಾಲ್ಯು) ಆಧರಿಸಿ ತೆರಿಗೆ ಸಂಗ್ರಹ ಮಾಡಲು ತೀರ್ಮಾನಿಸಿದೆ.

ಇದರ ಅನುಷ್ಠಾನಕ್ಕೆ ನಿಗದಿತ ಕಾಲಾವಧಿಯಲ್ಲಿ ಪೂರಕ ಕ್ರಮ ಕೈಗೊಳ್ಳಬೇಕಿದ್ದು, ಈ ಹಿನ್ನೆಲೆಯಲ್ಲಿ ಶಾಸನಾತ್ಮಕ ತಿದ್ದುಪಡಿಗಳಿಗೆ ಪೂರಕ ಪ್ರಸ್ತಾವನೆಯನ್ನು ತಮ್ಮ (ಬಿಬಿಎಂಪಿ) ಹಂತದಲ್ಲಿ ರೂಪಿಸಿ ಅಂತಿಮಗೊಳಿಸಿ, ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಪಾಲಿಕೆಗೆ ನಿರ್ದೇಶನ ನೀಡಿದೆ. ಒಂದು ವೇಳೆ ಈ ಮಾರ್ಪಾಡು ಅಂತಿಮಗೊಂಡರೆ, ಪಾಲಿಕೆಗೆ ಬರುವ ತೆರಿಗೆ ಆದಾಯದಲ್ಲಿ ತುಸು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಪ್ರಸ್ತುತ ಇರುವ ಪದ್ಧತಿ: ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ ಸೆಕ್ಷನ್‌ 108ಎ ಮತ್ತು 109ರ ವಿಧಾನವನ್ನು ತೆರಿಗೆ ಸಂಗ್ರಹದಲ್ಲಿ ಅನುಸರಿಸಲಾಗುತ್ತಿದೆ. ಅಂದರೆ ಒಂದು ವರ್ಷದಲ್ಲಿ ನಿಮ್ಮ ಆಸ್ತಿಯಿಂದ ಎಷ್ಟು ಆದಾಯ ಬರುತ್ತದೆಯೋ, ಅದರ ಶೇ. 1ತೆರಿಗೆ ವಿಧಿಸಲಾಗುತ್ತಿದೆ. ಇದು “ಆಸ್ತಿಯ ನಿರೀಕ್ಷಿತ ವರಮಾನ’ ಆಧಾರಿತ ತೆರಿಗೆಯಾಗಿದೆ. 2004 ರಲ್ಲಿ ಇದನ್ನು ನಿಗದಿಪಡಿಸಲಾಗಿತ್ತು. ಇಲ್ಲಿ ಪದ್ಧತಿಯಲ್ಲಿ ಖಾಲಿ ನಿವೇಶನಕ್ಕೆ ರಿಯಾಯ್ತಿ ಕೂಡ ಸಿಗುತ್ತಿತ್ತು. ಈಗ ಇದಕ್ಕೆ ತಿದ್ದುಪಡಿ ತಂದು, ಆಸ್ತಿಯನ್ನು ಮಾರ್ಗ ಸೂಚಿ ದರಕ್ಕೆ ಅನುಗುಣವಾಗಿ ಲೆಕ್ಕಾಚಾರ ಹಾಕಿ ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ. ಉದಾಹರಣೆಗೆ ಯಾವೊಂದು 30/40 ಚದರಡಿಯಲ್ಲಿ ಒಂದು ಕಟ್ಟಡ ಇದೆ ಎಂದುಕೊಳ್ಳೋಣ. ಅದರ ಮಾರ್ಗಸೂಚಿ ದರ ಚದರಡಿಗೆ ಸಾವಿರ ರೂ. ಎಂದಾದರೆ, 12 ಸಾವಿರ ಚದರಡಿಗೆ ಒಟ್ಟಾರೆ 12 ಲಕ್ಷ ರೂ.

ಆಗುತ್ತದೆ. ಅದಕ್ಕೆ ಇಂತಿಷ್ಟು ತೆರಿಗೆ ವಿಧಿಸಲಾ ಗು ತ್ತದೆ. ಆಗ, ಖಾಲಿ ನಿವೇಶನ ಹಾಗೂ ಕಟ್ಟಡಗಳಿಗೆ ಪ್ರತ್ಯೇಕವಾಗಿ ತೆರಿಗೆ ನಿಗದಿಯಾಗಲಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಆಸ್ತಿಯ ಮಾರ್ಗಸೂಚಿ ದರ ಹೆಚ್ಚಿರುವುದರಿಂದ ತೆರಿಗೆ ಸಂಗ್ರಹ ಪ್ರಮಾಣ ಅಧಿಕವಾಗುವ ಸಾಧ್ಯತೆಯಿದೆ. ಇನ್ನು ಕೆಲವೆಡೆ ಕಡಿಮೆಯೂ ಆಗಬಹುದು.

ಕೇಂದ್ರದ ಆಫ‌ರ್‌? :  ಅಂದಹಾಗೆ ಇದು ಏಕಾಏಕಿ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ಅಲ್ಲ. “ನೀವು ನಿಮ್ಮಲ್ಲಿರುವ ಆಸ್ತಿ ತೆರಿಗೆಯನ್ನು ಮಾರ್ಗಸೂಚಿ ಮೌಲ್ಯದೊಂದಿಗೆ ನೇರವಾಗಿ ಲೆಕ್ಕಹಾಕಿ ತೆರಿಗೆ ಸಂಗ್ರಹಿಸಿದರೆ, ಸಾಲದ ಮೊತ್ತವನ್ನು ಹೆಚ್ಚಿಸಲಾಗುವುದಾಗಿ’ ಕೇಂದ್ರವು 2019ರ ಕೊನೆಯಲ್ಲಿ “ಆಫ‌ರ್‌’ ನೀಡಿತ್ತು. ಈ ಸುಧಾರಣೆಯಿಂದ ಶೇ. 0.25 ಹೆಚ್ಚುವರಿಯಾಗಿ ಸಾಲ ಸಿಗಲಿದೆ ಎಂದೂ ನಗರಾಭಿವೃದ್ಧಿ ಇಲಾಖೆ ತಿಳಿಸಿದೆ. ಅಲ್ಲದೆ, ಬಳಕೆದಾರ ಶುಲ್ಕ ಕೂಡ ಪರಿಷ್ಕರಣೆಗೆ ಉದ್ದೇಶಿಸಲಾಗಿದೆ. ನೀರು, ಒಳಚರಂಡಿ ಮತ್ತು ನೈರ್ಮಲ್ಯ ಇತ್ಯಾದಿ ಬಳಕೆ ಮೇಲಿದ ಶುಲ್ಕ ಪರಿಷ್ಕರಣೆಗೂ ಪ್ರಸ್ತಾವನೆ ಸಲ್ಲಿಸಲು ಕೋರಲಾಗಿದೆ.

 

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

Dog Attack: 2 ವರ್ಷದ ಮಗುವಿನ ಮೇಲೆ ನಾಯಿ ದಾಳಿ

Dog Attack: 2 ವರ್ಷದ ಮಗುವಿನ ಮೇಲೆ ನಾಯಿ ದಾಳಿ

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ

Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.