Threat: ನಿನ್ನ ಪತ್ನಿ ಸರಿಯಾಗಿ ಬಟ್ಟೆ ಹಾಕದಿದ್ದರೆ ಆ್ಯಸಿಡ್ ಎರಚುವೆ: ಕಿಡಿಗೇಡಿ ಬೆದರಿಕೆ
Team Udayavani, Oct 13, 2024, 12:46 PM IST
ಬೆಂಗಳೂರು: “ನಿನ್ನ ಪತ್ನಿಗೆ ಕರ್ನಾಟಕದಲ್ಲಿ ಸರಿಯಾಗಿ ಬಟ್ಟೆ ಧರಿಸುವಂತೆ ಹೇಳು. ಇಲ್ಲದಿದ್ದರೆ ಆಕೆಯ ಮುಖಕ್ಕೆ ಆ್ಯಸಿಡ್ ಎರಚುತ್ತೇನೆ’ ಎಂದು ಮಹಿಳೆ ಯೊಬ್ಬರ ಪತಿಗೆ ಬೆದರಿಸಿ ಸಂದೇಶ ಕಳಿಸಿದ್ದ ವ್ಯಕ್ತಿಯೊಬ್ಬ ಕೆಲಸ ಕಳೆದುಕೊಂಡಿದ್ದಾನೆ.
ಖಾಸಗಿ ಸಂಸ್ಥೆಯ ನೌಕರ ನಿಖಿತ್ ಶೆಟ್ಟಿ ಕೆಲಸ ಕಳೆದುಕೊಂಡ ಯುವಕ.
ಇಟಿಯೋಸ್ ಡಿಜಿಟಲ್ ಸರ್ವಿಸ್ ಎಂಬ ಸಂಸ್ಥೆಯ ನೌಕರನಾಗಿದ್ದ ನಿಖೀತ್ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಮಹಿಳೆಯೊಬ್ಬರ ಪತಿ ಶಹಬಾಜ್ ಅನ್ಸರ್‌ಗೆ “ಕರ್ನಾಟಕದಲ್ಲಿ ನಿನ್ನ ಪತ್ನಿಗೆ ಸರಿಯಾಗಿ ಬಟ್ಟೆ ಹಾಕುವುದಕ್ಕೆ ಹೇಳು. ಇಲ್ಲದಿದ್ದರೆ ಆ್ಯಸಿಡ್ ಹಾಕುವುದಾಗಿ’ ಬೆದರಿಸಿ ಸಂದೇಶದಲ್ಲಿ ಉಲ್ಲೇಖೀಸಿದ್ದ. ಇದರಿಂದ ಕೆರಳಿದ ಮಹಿಳೆಯ ಪತಿ ಶಹಬಾಜ್ ಅನ್ಸರ್ ತನ್ನ ಪತ್ನಿಯ ಕುರಿತು ಮೆಸೇಜ್ ಕಳುಹಿಸಿದ ಸ್ಕ್ರೀನ್‌ಶಾಟ್ ಅನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಪತ್ನಿ ಬಟ್ಟೆ ಧರಿಸುವ ಬಗ್ಗೆ ನಿರ್ಧರಿಸುವ ಈ ವ್ಯಕ್ತಿ ಯಾರು, ಬೆದರಿಕೆ ಸಂದೇಶ ಕಳುಹಿಸಿದವನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿಜಿಪಿ ಅಲೋಕ್ ಮೋಹನ್ ಅವರಿಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದರು.
ಭಯಹುಟ್ಟಿಸುವಂತಿದೆ ಸಂದೇಶ ಎಂದ ಪತಿ: ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ನಿಂದನೆ ಸಂದೇಶಗಳು ಬರುತ್ತಿರುತ್ತವೆ. ಈ ಬಗ್ಗೆ ಹೆಚ್ಚು ಚಿಂತಿ ಸಿರಲಿಲ್ಲ. ಆದರೆ, ಲಿಖೀತ್ ಶೆಟ್ಟಿ ಎಂಬಾತ ಕಳುಹಿಸಿ ಸಂದೇಶ ಭಯಹುಟ್ಟಿಸುವಂತಿದೆ ಎಂದು ಪತ್ರಕರ್ತ ರಾಗಿರುವ ಶಹಬಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಪತಿಯ ಟ್ವೀಟ್‌ನಿಂದ ಘಟನೆ ಬೆಳಕಿಗೆ:
ಪ್ರಕರಣದಲ್ಲಿ ಆರೋಪಿ ನಿಕಿತ್ ಶೆಟ್ಟಿ ಹಿನ್ನೆಲೆ ತಿಳಿದು ಬಂದಿಲ್ಲ. ಶಹಬಾಸ್ ಅನ್ಸರ್‌ಗೂ ನಿಕಿತ್ ಶೆಟ್ಟಿಗೂ ಹಿಂದೆ ಪರಿಚಯವಿರಲಿಲ್ಲ. ಆದರೆ, ಶಹಬಾಸ್ ಪತ್ನಿಯನ್ನು ಉದ್ದೇಶಿಸಿ ನಿಕಿತ್ ಶೆಟ್ಟಿಯು ಏಕೆ ಈ ರೀತಿಯಾಗಿ ಕಮೆಂಟ್ ಮಾಡಿದ್ದಾನೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ. ನಿಖಿತ್ ಶೆಟ್ಟಿ ಸಂದೇಶದ ಕುರಿತು ಶಹಬಾಸ್ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನು ನನ್ನ ಪತ್ನಿಗೆ ಆ್ಯಸಿಡ್ ದಾಳಿಯ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ಎಟಿಯೋಸ್ ಡಿಜಿಟಲ್ ಸೇವೆಯಲ್ಲಿ ಕೆಲಸ ಮಾಡುತ್ತಾನೆ. ಈ ಸಂಸ್ಥೆಯಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಶಹಬಾಸ್ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ನಿಖಿತ್ ಶೆಟ್ಟಿ ಕೆಲಸ ಮಾಡುತ್ತಿದ್ದ ಕಂಪನಿಗೂ ಈ ಸಂಗತಿ ಗೊತ್ತಾಗಿತ್ತು ಎನ್ನಲಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಕಂಪನಿಯು ನಿಖಿತ್ ಶೆಟ್ಟಿಯನ್ನು ಕೆಲಸದಿಂದ ವಜಾಗೊಳಿಸಿ, ಈ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.