ವ್ಯಾಪಾರಿಗೆ ಖಾಸಗಿ ವಿಡಿಯೋ ತೋರಿಸೋ ಬೆದರಿಕೆ: 4 ಲಕ್ಷ ಸುಲಿಗೆ
Team Udayavani, Oct 27, 2018, 11:15 AM IST
ಬೆಂಗಳೂರು: “ಖಾಸಗಿ ವಿಡಿಯೋ’ ಕುಟುಂಬದವರಿಗೆ ತೋರಿಸುವುದಾಗಿ ವ್ಯಾಪಾರಿಯೊಬ್ಬರಿಗೆ ಬ್ಲಾಕ್‌ವೆುàಲ್ ಮಾಡಿ ಇಬ್ಬರು ಮಹಿಳೆಯರು ನಾಲ್ಕು ಲಕ್ಷ ರೂ. ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಖಾಸಗಿ ವಿಡಿಯೋ ಇಟ್ಟುಕೊಂಡು 4 ಲಕ್ಷ ರೂ. ಹಣ ಪಡೆದ ಬಳಿಕ ಪುನ: ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟ ಮಹಿಳೆಯರ ವಿರುದ್ಧ ವ್ಯಾಪಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವ್ಯಾಪಾರಿ ನೀಡಿರುವ ದೂರಿನ ಅನ್ವಯರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ಸಂಘಟನೆಯ ರಾಜ್ಯ ಮಹಿಳಾ ಅಧ್ಯಕ್ಷೆ ಎನ್ನಲಾದ ಭಾರತಿ ನಾಯಕ್, ನದಿಯಾ , ಸಾಗರ್ ಎಂಬುವರ ವಿರುದ್ಧ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ದೂರು ನೀಡಿದ ವಿಷಯ ಗೊತ್ತಾದ ಕೂಡಲೇ ಆರೋಪಿಗಳು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರ ಬಂಧನಕ್ಕೆ ಕ್ರಮ ವಹಿಸಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ದೂರುದಾರ ವ್ಯಾಪಾರಿ ಆರ್‌ಎಂಸಿ ಯಾರ್ಡ್‌ನಲ್ಲಿ ಹೋಲ್‌ಸೇಲ್ ತರಕಾರಿ ಅಂಗಡಿ ನಡೆಸುತ್ತಿದ್ದು, ಪ್ರಿಯದರ್ಶಿನಿ ಎಂಬಾಕೆ ಕೆಲಸ ಮಾಡುತ್ತಿದ್ದರು. ಈ ವೇಳೆ ಆಕೆಯ ತಂಗಿ ನದಿಯಾ ಕೂಡ ಆಗಾಗ್ಗೆ ಅಂಗಡಿ ಬಳಿ ಬಂದು ಹೋಗುತ್ತಿದ್ದಳು. ಈ ಮಧ್ಯೆ ವ್ಯಾಪಾರಿಯನ್ನು ಪರಿಚಯಿಸಿಕೊಂಡ ನದಿಯಾ, ಕಷ್ಟ ಎಂದು ಹೇಳಿಕೊಂಡು ಸಾಲ ಪಡೆದಿದ್ದಳು. ಇದಾದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ವ್ಯಾಪಾರಿ ಜತೆಗಿದ್ದ ಖಾಸಗಿ ಬೆತ್ತಲೆ ವಿಡಿಯೋವನ್ನು ನದಿಯಾ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿದ್ದಳು.
ವ್ಯಾಪಾರಿ ಜತೆಗಿನ ಖಾಸಗಿ ವಿಡಿಯೋ ಇಟ್ಟುಕೊಂಡು ಬೇರೊಂದು ನಂಬರ್‌ನಿಂದ ಕರೆ ಮಾಡಿದ್ದ ನದಿಯಾ, ನಿನ್ನ ಬೆತ್ತಲೆ ವಿಡಿಯೋ ಇದೆ. ಇದನ್ನು ನಿಮ್ಮ ಕುಟುಂಬಸ್ಥರಿಗೆ ಕಳುಹಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ. ಹಾಗೆ ಮಾಡಬಾರದು ಎಂದಾದರೆ ವಾಸಕ್ಕೆ ಒಂದು ಮನೆ ಹಾಗೂ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ.
ಇದಾದ ಕೆಲವೇ ದಿನಗಳಲ್ಲಿ ಸಂಘಟನೆಯ ನಾಯಕಿ ಭಾರತಿ ನಾಯಕ್, ವ್ಯಾಪರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ನದಿಯಾಗೆ 5 ಲಕ್ಷ ರೂ. ನನಗೆ 2ಲಕ್ಷ ರೂ, ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಮರ್ಯಾದೆ ಹೋಗುತ್ತದೆ ಎಂದು ಹೆದರಿಕೊಂಡು ಏಪ್ರಿಲ್‌ನಿಂದ ಜೂನ್ ತಿಂಗಳವರೆಗೆ ಹಂತ ಹಂತವಾಗಿ 4 ಲಕ್ಷ ರೂ. ನೀಡಿದ್ದಾರೆ.
ಸ್ಟಿಂಗ್ ಆಪರೇಶನ್ ಮಾಡಲು ಹೋದಾಗ ಹಲ್ಲೆ: ನಾಲ್ಕು ಲಕ್ಷ ರೂ. ಪಡೆದ ಬಳಿಕ ಸುಮ್ಮನಾಗದ ಭಾರತಿ, ಪುನಃ ಕರೆ ಮಾಡಿ 5 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಇದಕ್ಕೂ ಒಪ್ಪಿದ ವ್ಯಾಪಾರಿ, 3.50 ಲಕ್ಷ ರೂ. ನೀಡಲು ಒಪ್ಪಿಕೊಂಡಿದ್ದು, ಹಣ ತಲುಪಿಸಲು ಅ.25ರಂದು ಓರಾಯನ್ ಮಾಲ್‌ಗೆ ಬರಲು ಹೇಳಿದ್ದಳು. ಭಾರತಿ ಕಾಟದಿಂದ ಬೇಸತ್ತು ಹೋಗಿದ್ದ ವ್ಯಾಪಾರಿ,
ಆಕೆ ಹಣ ಸುಲಿಗೆ ಮಾಡುವುದನ್ನು ಆಕೆಗೆ ಗೊತ್ತಾಗದಂತೆ ರೆಕಾರ್ಡ್ ಮಾಡಲು ಮಧ್ಯಾಹ್ನ 3.30ರ ಸುಮಾರಿಗೆ ಮಾಲ್‌ನ ಫುಡ್‌ಕೋರ್ಟ್‌ಗೆ ಹೋಗಿದ್ದಾರೆ. ಈ ವೇಳೆ ಮಾತುಕತೆ ನಡೆಯುತ್ತಿರುವಾಗಲೇ ವ್ಯಾಪಾರಿ ಬಳಿ ಹಿಡನ್ ಕ್ಯಾಮೆರಾ ಇರುವುದನ್ನು ಪತ್ತೆಹಚ್ಚಿದ ಭಾರತಿ ಹಾಗೂ ಆಕೆಯ ಮಗ ಸಾಗರ್, ಆತನ ಬಳಿ ಇದ್ದ ಕ್ಯಾಮೆರಾ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪರಿಚಯವಿದೆ ಎಂದು ಧಮ್ಕಿ ಹಾಕಿದ ಭಾರತಿ: ಅಪರಿಚಿತ ನಂಬರ್‌ನಿಂದ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಸಂಬಂಧ ಮಧ್ಯಸ್ಥಿಕೆ ನಡೆಸಲು ಬಂದ ಭಾರತಿನಾಯಕ್, ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಪೊಲೀಸರಿಂದ ನಿನ್ನನ್ನು ರಕ್ಷಿಸಿದ್ದೇನೆ. ನೀನು ನನಗೆ ದೇವರಂತೆ ನೋಡಬೇಕು.ನನಗೆ ಪೊಲೀಸರು ಎಲ್ಲರೂ ಗೊತ್ತು. ಸುಮ್ಮನೆ ಆಟ ಆಡಬೇಡ ಕೊಟ್ಟ ಮಾತಿಗೆ ತಪ್ಪದೆ ನಡೆದುಕೋ ಎಂದು ಭಾರತಿನಾಯಕ್ ಬೆದರಿಕೆ ಹಾಕುತ್ತಿದ್ದರು ಎಂದು ದೂರುದಾರ ವ್ಯಾಪಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.