ಯುವಕನ ಕೊಂದ ಮೂವರ ಬಂಧನ
Team Udayavani, Feb 7, 2018, 12:12 PM IST
ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಯವಕನಿಗೆ ಚಾಕುವಿನಿಂದ ಇರಿದು ಕೊಂದಿದ್ದ ಮೂವರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಸ್ವಾಮಿ ಲೇಔಟ್ನ ಪ್ರದೀಪ್ (25), ಯಲಚೇನಹಳ್ಳಿ ನಿವಾಸಿ ಶಿವರಾಜು (24) ಮತ್ತು ಮಲ್ಲತಹಳ್ಳಿ ನಿವಾಸಿ ಸತೀಶ್(29) ಬಂಧನ.
ಶುಕ್ರವಾರ ರಾತ್ರಿ ಜ್ಞಾನಭಾರತೀ ನಿವಾಸಿ ಅರುಣ್ನನ್ನು ಕೊಂದು, ಈತನ ಸ್ನೇಹಿತ ಸೋಮಯ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಮಾರುತಿ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಹೋಗುವ ಮೊದಲೇ ಬೇರೆಡೆಯೇ ಸೋಮಯ್ಯ ಮತ್ತು ಅರುಣ್ ಕಂಠಪೂರ್ತಿ ಮದ್ಯ ಸೇವಿಸಿದ್ದರು. ಬಳಿಕ ಸೋಮಯ್ಯ ಮಾರುತಿ ಬಾರ್ ಬಳಿ ಬಂದು ಬಿಯರ್ ತರಲು ಒಳ ಹೋಗಿದ್ದಾನೆ.
ಈ ವೇಳೆ ಮದ್ಯ ಸೇವಿಸುತ್ತಿದ್ದ ಆರೋಪಿಗಳು ಸೋಮಯ್ಯನ ಕಡೆ ನೋಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಸೋಮಯ್ಯ ನಮ್ಮ ಏರಿಯಾಗೆ ಬಂದು ನನಗೆ ದುರುಗುಟ್ಟಿ ನೋಡುತ್ತಿರಾ ಎಂದು ಆರೋಪಿಗಳ ಜತೆ ಜಗಳ ತೆಗೆದಿದ್ದಾನೆ. ಆಗ ಆರೋಪಿಗಳ ಪೈಕಿಯೊಬ್ಬ ಸೋಮಯ್ಯನಿಗೆ ಜಗಳ ಮಾಡದಂತೆ ಮನವಿ ಮಾಡಿದ್ದಾನೆ. ಆದರೂ ಸುಮ್ಮನಾಗದ ಸೋಮಯ್ಯ ಏರುಧ್ವನಿಯಲ್ಲಿ ಜಗಳ ತೆಗೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಶಿವರಾಜ್ ಮತ್ತು ಪ್ರದೀಪ್ ಸೋಮಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ.
ಇದೇ ವೇಳೆ ಹೊರಗಡೆ ನಿಂತಿದ್ದ ಅರುಣ್ ಕೂಡಲೇ ಒಳಬಂದು ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಶಿವರಾಜ್ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಅರುಣ್ಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಕೆ.ಎಸ್.ಲೇಔಟ್,ಸುಬ್ರಹ್ಮಣ್ಯಪುರ ಠಾಣೆಗಳಲ್ಲಿ ಕೊಲೆ ಯತ್ನ, ಡಕಾಯಿತಿ, ದರೋಡೆಗೆ ಸಿದ್ಧತೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.