ಬಾರ್ ಸಿಬ್ಬಂದಿಗೆ ಇರಿದ ಮೂವರ ಸೆರೆ
Team Udayavani, Aug 14, 2018, 3:53 PM IST
ಬೆಂಗಳೂರು: ಟೇಬಲ್ ಮೇಲೆ ಕಾಲು ಇಟ್ಟಿದ್ದನ್ನು ಪ್ರಶ್ನಿಸಿದ ಬಾರ್ ಸಿಬ್ಬಂದಿ ಮೇಲೆ ಐವರು ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಮೆಜೆಸ್ಟಿಕ್ ಬಳಿಯ ಬ್ಲೂಹೆವೆನ್ ಹೋಟೆಲ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಶಂಶುದ್ದೀನ್(28), ಚಿಕ್ಕಮಗಳೂರಿನ ಸಲ್ಮಾನ್ (28) ಮತ್ತು ಇರ್ಷಾದ್(23) ಎಂಬುವವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ರಿಯಾಜ್ ಮತ್ತು ಮೊಹಮ್ಮದ್ ಎಂಬುವವರಿಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ಕೃತ್ಯದಿಂದ ಹೋಟೆಲ್ ಮಾಲೀಕ ಮೋಹನ್ ಶೆಟ್ಟಿ, ಸಿಬ್ಬಂದಿ ವಿಜಯ್ ಕುಮಾರ್, ಮಹೇಶ್, ಪ್ರೇಮೇಶ್, ದೀಲೀಪ್ ಮತ್ತು ಉಮೇಶ್ ಹಾಗೂ ಇತರರು ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಇರ್ಷಾದ್ ಬಿಎಂಟಿಸಿ ಬಸ್ ನಿಲ್ದಾಣದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮುಂಬೈನ ಹೋಟೆಲ್
ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸಲ್ಮಾನ್, ಕೆಲ ದಿನಗಳ ಹಿಂದಷ್ಟೇ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಶಂಶುದ್ದೀನ್ ಕೋರಮಂಗಲದ ಹೋಟೆಲ್ ಉದ್ಯೋಗಿ.
ಕಾರ್ಯಕ್ರಮವೊಂದರಲ್ಲಿ ಐವರು ಆರೋಪಿಗಳು ಪರಸ್ಪರ ಪರಿಚಯವಾಗಿದ್ದು, ಭಾನುವಾರ ರಜೆಯಿದ್ದ ಕಾರಣ ಎಲ್ಲರೂ
ಒಟ್ಟಿಗೆ ಸೇರಿದ್ದರು. ಹೀಗಾಗಿ ಆರೋಪಿ ಸಲ್ಮಾನ್ ನಾಲ್ಕು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದ ಬ್ಲೂಹೆವೆನ್ ಹೋಟೆಲ್‌ಗೆ ತನ್ನ ನಾಲ್ವರು ಸ್ನೇಹಿತರನ್ನು ಮದ್ಯ ಸೇವಿಸಲು ಕರೆದೊಯ್ದಿದ್ದ.
ತಡರಾತ್ರಿ 11.30ರ ವರೆಗೆ ಮದ್ಯ ಸೇವಿಸಿದ ಆರೋಪಿಗಳು ಟೇಬಲ್ ಮೇಲೆ ಕಾಲು ಇಟ್ಟು ಏರುಧ್ವನಿಯಲ್ಲಿ ಮಾತನಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಸಿಬ್ಬಂದಿಯೊಬ್ಬರು ಟೇಬಲ್ ಮೇಲಿಂದ ಕಾಲು ತೆಗೆಯುವಂತೆ ಕೇಳಿಕೊಂಡಿದ್ದಾರೆ. ಆಗ ಆರೋಪಿಗಳು ಹಾಗೂ ಹೋಟೆಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಎಲ್ಲರನ್ನೂ ಸಮಾಧಾನ ಪಡಿಸಿ ಐವರನ್ನು ಹೊರಗೆ ಕಳುಹಿಸಲಾಗಿತ್ತು.
ಇದರಿಂದ ಆಕ್ರೋಶಗೊಂಡ ಆರೋಪಿಗಳು ತಮ್ಮ ಬಳಿಯಿದ್ದ ಅಡುಗೆ ಕೆಲಸಕ್ಕೆ ಬಳಸುವ ಚಾಕುವಿನಿಂದ ಹೋಟೆಲ್ ಒಳಗೆ ನುಗ್ಗಿ ಮಾಲೀಕ ಮೋಹನ್ ಶೆಟ್ಟಿ ಸೇರಿ 6 ಮಂದಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಉಪ್ಪಾರಪೇಟೆ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೈಫ್ ಅಲಿಖಾನ್ ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನಿಗೆ 1 ಲಕ್ಷ ರೂ. ಘೋಷಿಸಿದ ಗಾಯಕ ಮಿಕಾ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?