ಯುವತಿಗಾಗಿ ಮೂವರ ಜಗಳ: ಒಬ್ಬ ಸಾವು
Team Udayavani, Aug 10, 2018, 12:13 PM IST
ಬೆಂಗಳೂರು: ಹುಡುಗಿಯನ್ನು ಪ್ರೀತಿಸುವ ವಿಚಾರದಲ್ಲಿ ಮೂವರು ವಿದ್ಯಾರ್ಥಿಗಳ ನಡುವೆ ನಡೆದ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ವಿ.ವಿ.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುಜರಾತ್‌ನ ರೋಣಕ್ ಚೌಧರಿ (23) ಮೃತ ವಿದ್ಯಾರ್ಥಿ.
ಗುಜರಾತ್‌ನ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದ ರೋಣಕ್ ಚೌಧರಿ, ನಗರದ ಸಿಎನ್‌ಕೆ ಸ್ಕೂಲ್ ಆಫ್ ನರ್ಸಿಂಗ್ ಪರೀಕ್ಷೆಗಳನ್ನು ಬರೆಯಲು ಅ.2ರಂದು ಸಹಪಾಠಿಗಳೊಂದಿಗೆ ನಗರಕ್ಕೆ ಬಂದಿದ್ದು, ವಿವಿಪುರದ ತ್ರಿಶೂಲ್ ಲಾಡ್ಜ್ನಲ್ಲಿ ತಂಗಿದ್ದ.
ಬುಧವಾರ ರಾತ್ರಿ 11.30ರ ಸುಮಾರಿಗೆ ಯುವತಿಯೊಬ್ಬಳ ಪ್ರೀತಿಸುವ ವಿಚಾರಕ್ಕೆ ರಾಯಲ್ ಚೌಧರಿ ಹಾಗೂ ಮತ್ತೂಬ್ಬನ ಜತೆ ರೋಣಕ್ ಜಗಳವಾಡಿದ್ದಾನೆ. ಈ ವೇಳೆ ಕೊಠಡಿಯಿಂದ ಹೊರಹೋಗುತ್ತಿದ್ದ ರೋಣಕ್‌ನನ್ನು ರಾಯಲ್ ತಳ್ಳಿದ್ದು, ನಾಲ್ಕನೇ ಮಹಡಿಯಿಂದ ಆಯತಪ್ಪಿ ಕೆಳಕ್ಕೆ ಬಿದ್ದ ರೋಣಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ರಾಯಲ್ ಚೌಧರಿಯನ್ನು ಬಂಧಿಸಲಾಗಿದೆ. ರೋಣಕ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ವಿ.ವಿ ಪುರ ಠಾಣೆ ಪೊಲೀಸರು ತಿಳಿಸಿದರು. ರೋಣಕ್‌ನ ಇತರೆ ಸಹಪಾಠಿಗಳಿಂದ ಮಾಹಿತಿ ಪಡೆಯುತ್ತಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.