ಬೆಂಗಳೂರು: ಕುಸಿದುಬಿತ್ತು ಮೂರಂತಸ್ತಿನ ಮನೆ, ತಪ್ಪಿದ ಭಾರೀ ಅನಾಹುತ
Team Udayavani, Sep 27, 2021, 2:39 PM IST
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಮೂರು ಅಂತಸ್ತಿನ ಮನೆಯೊಂದು ಕುಸಿದು ಬಿದ್ದ ಘಟನೆ ನಡೆದಿದೆ. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡ ಕಾರಣದಿಂದ ಭಾರೀ ಅನಾಹುತವೊಂದು ತಪ್ಪಿದೆ.
ನಗರದ ಲಕ್ಕಸಂದ್ರ ಬಳಿ ಈ ಘಟನೆ ನಡೆದಿದೆ. ಹಳೇಯ ಕಟ್ಟಡ ಇದಾಗಿದ್ದು, ಎರಡು ವರ್ಷದ ಹಿಂದೆ ಸ್ವಲ್ಪ ವಾಲಿತ್ತು. ಸೋಮವಾರ ಬೆಳಗ್ಗೆ ಈ ಹಿಂದಿಗಿಂತಲೂ ಕಟ್ಟಡ ಹೆಚ್ಚು ವಾಲಿದ್ದು, ಅವಘಡದ ಮುನ್ಸೂಚನೆ ಅರಿತು ಮನೆಯಲ್ಲಿ ಇದ್ದವರೆಲ್ಲಾ ಹೊರಗೆ ಬಂದಿದ್ದರು.
ಮೆಟ್ರೋ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರು ಈ ಕಟ್ಟಡದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಕಟ್ಟಡ ಕುಸಿಯುವುದಕ್ಕಿಂತ ಕೆಲ ಸಮಯ ಮೊದಲು ಅಗ್ನಿಶಾಮಕ ಸಿಬ್ಬಂದಿ ಜನರನ್ನು ತೆರವುಗೊಳಿಸಿದ್ದರು. ಹಳೇ ಕಟ್ಟಡ ಕುಸಿತದಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ.
ಇದನ್ನೂ ಓದಿ:ಭಾರತ್ ಬಂದ್; ರಾಜ್ಯದ ವಿವಿಧೆಡೆ ನೀರಸ ಪ್ರತಿಕ್ರಿಯೆ, ದೆಹಲಿಯಲ್ಲಿ ಟ್ರಾಫಿಕ್ ಜಾಮ್
ಕಟ್ಟಡ ಧರಾಶಾಯಿಯಾಗುವ ದೃಶ್ಯ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವೈರಲ್ ಆಗಿದೆ.
#WATCH | Karnataka: A building collapsed in Bengaluru today, no casualties or injuries reported so far. Fire Department had evacuated the building before it collapsed. Officials rushed to the spot. Details awaited. pic.twitter.com/oWmUBsFm6E
— ANI (@ANI) September 27, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.