ಚರ್ಚ್‌ಸ್ಟ್ರೀಟ್ ಬಾಂಬ್ ಸ್ಫೋಟ ದುರಂತಕ್ಕೆ ಮೂರು ವರ್ಷ
Team Udayavani, Dec 28, 2017, 12:22 PM IST
ಬೆಂಗಳೂರು: ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗುತ್ತಿದ್ದ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದ್ದ ಕರಾಳ ದಿನಕ್ಕೆ ಮೂರು ವರ್ಷ ತುಂಬಿದೆ. ಕ್ರಿಸ್‌ಮಸ್ ರಜೆ ಕಳೆಯಲು ಕುಟುಂಬ ಸಮೇತ ನಗರಕ್ಕೆ ಬಂದಿದ್ದ ತಮಿಳುನಾಡು ಮೂಲದ ಭವಾನಿ ಅವರನ್ನು ಬಲಿಪಡೆದ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಇಂದಿಗೂ ಕರಾಳ ನೆನಪಾಗಿಯೇ ಉಳಿದುಕೊಂಡಿದೆ.
ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತ ರಾಷ್ಟ್ರೀಯ ತನಿಖಾ ದಳ ( ಎನ್‌ಐಎ) ಪ್ರಮುಖ ಆರೋಪಿ ಆಲಂ ಜೆಬ್ ಅಫ್ರೀದಿಯನ್ನು ಬಂಧಿಸಿ ಆತನ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಮಧ್ಯೆಯೇ ಸ್ಫೋಟದ ಸಂಚಿಗೆ ಫೇಸ್‌ಬುಕ್ ಅನ್ ಲೈನ್ ಮೂಲಕವೇ ಸೂತ್ರ ಹೆಣೆದಿದ್ದ ಇಬ್ಬರು ಆರೋಪಿಗಳ ಬಂಧನಕ್ಕೂ ಎನ್‌ಐಎ ಕಾರ್ಯಾಚರಣೆ ಚುರುಕುಗೊಂಡಿದ್ದರೂ “ಫೇಸ್ ಬುಕ್ ‘ನಿಂದ ಉತ್ತರ ಬರದ ಕಾರಣ ಆರೋಪಿಗಳ ಬಂಧನ ವಿಳಂಬವಾಗಿದೆ.
ಉತ್ತರವಿಲ್ಲ: ಪ್ರಕರಣದ ಎರಡನೇ ಆರೋಪಿ ಅಬ್ದುಲ್ ಖಾನ್ ಹಾಗೂ ಮೂರನೇ ಆರೋಪಿ ಆಯಾನ್ ಖಾನ್ ಅಜ್ಞಾತ ಸ್ಥಳದಲ್ಲಿ ಕುಳಿತ ಕೊಂಡೇ ನಿರಂತರವಾಗಿ ಆರೋಪಿ ಆಫ್ರೀದಿ ಜೊತೆ ಆನ್‌ಲೈನ್ ಚಾಟಿಂಗ್ ಮಾಡಿದ್ದು, ಘಟನೆಗೆ
ಸಂಚು ಹೆಣೆದಿದ್ದಾರೆ ಎಂಬ ಸಂಗತಿ ತನಿಖೆ ವೇಳೆ ಬಯಲಾಗಿತ್ತು. ಈ ನಿಟ್ಟಿನಲ್ಲಿ ಆರೋಪಿಗಳು ಬಳಸುತ್ತಿದ್ದ ಫೇಸ್‌ಬುಕ್ ಐಪಿ ಅಡ್ರೆಸ್ ಕಳುಹಿಸಿಕೊಡುವಂತೆ ಅಮೆರಿಕಾದ ಫೇಸ್‌ಬುಕ್ ಕಚೇರಿಗೆ ಕೇಂದ್ರ ಗೃಹ ಇಲಾಖೆಯಿಂದ ಪತ್ರ ಕಳುಹಿಸಲಾಗಿದೆ. ಇದುವರೆಗೂ ಫೇಸ್‌ಬುಕ್ ಕಂಪೆನಿಯಿಂದ ಉತ್ತರ ಬಂದಿಲ್ಲ.
ಈ ಪ್ರಕರಣ ಉಗ್ರ ಚಟುವಟಿಕೆ ಹಾಗೂ ಅತ್ಯಂತ ಸೂಕ್ಷ್ಮ ವಿಚಾರ ಇದಾಗಿರುವುದ ರಿಂದ ಎರಡೂ ರಾಷ್ಟ್ರಗಳ ವಿದೇಶಾಂಗ ನೀತಿಗಳ ನಿಯಮಗಳ ಪಾಲನೆಯೂ ಅಗತ್ಯ. ಹೀಗಾಗಿ ನಿರೀಕ್ಷಿಸಿದ ಮಾಹಿತಿ ತಡವಾಗಬಹುದು.
ಸದ್ಯದಲ್ಲಿಯೇ ಮಾಹಿತಿ ಸಿಗುವ ವಿಶ್ವಾಸವಿದೆ ಎಂದು ಮೂಲಗಳು ತಿಳಿಸಿವೆ.
ಮುಖಕ್ಕೆ ಕರ್ಚೀಪ್ ಕಟ್ಟಿಕೊಂಡು ಬಾಂಬ್ ಇಟ್ಟಿದ್ದ ಆರೋಪಿ!: ಪ್ರಮುಖ ಆರೋಪಿ ಆಲಂ ಜೆಬ್ ಅಪ್ರೀದಿಯನ್ನು ಜನವರಿ 29, 2016ರಂದು ಬಂಧಿಸಿದ ಎನ್‌ಐಎ ಅಧಿಕಾರಿಗಳಿಗೆ ಆರೋಪಿಯ ವಿಚಾರಣೆ ವೇಳೆ ಎನ್‌ಐಎ ಅಧಿಕಾರಿಗಳಿಗೆ ಹಲವು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿತ್ತು. ಇಸ್ರೇಲ್ ಪ್ರತಿನಿಧಿಗಳ ಹತ್ಯೆಗೆ ಸ್ಕೆಚ್ ಹಾಕಿದ್ದ ಆರೋಪಿ ಫೇಸ್‌ಬುಕ್ ಸಹಚರ ಅಬ್ದುಲ್ ಖಾನ್ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವೊಂದನ್ನು ತಯಾರಿಸುವ ಲಿಂಕ್‌ವೊಂದನ್ನು ಸಾಮಾಜಿಕ ಜಾಲತಾಣದ ಮೂಲಕ ಪಡೆದುಕೊಂಡು. ಚರ್ಚ್‌ಸ್ಟ್ರೀಟ್ ನಲ್ಲಿರುವ ಕೋಕೊನೆಟ್ ಗ್ರೋವರ್ ಹೋಟೆಲ್‌ನ ಮುಂದೆ ಬಾಂಬ್ ಇಟ್ಟಿದ್ದ ಇಂಚಿಂಚೂ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾ ರೋಪಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ.
ಉದ್ದೇಶಿತ ಕೃತ್ಯಕ್ಕೆ ಸತತ 12ದಿನಗಳ ಕಾಲ ಐಇಡಿ ಬಾಂಬ್ ತಯಾರಿಸಿಟ್ಟುಕೊಂಡಿದ್ದ ಅಪ್ರೀದಿ, ಡಿಸೆಂಬರ್ 23ರಂದು ತಲೆಗೆ ಟೋಪಿ ಧರಿಸಿ, ಮುಖ ಗುರುತು ಸಿಗದಂತೆ ಹ್ಯಾಂಡ್ ಕಚೀìಫ್ ನಿಂದ ಕಟ್ಟಿಕೊಂಡು ಇಡೀ ದಿನ ಚರ್ಚ್‌ಸ್ಟ್ರೀಟ್‌ನಲ್ಲಿ ಓಡಾಡಿಕೊಂಡು ಕೋಕನೇಟ್ ಗ್ರೋವರ್ ಹೋಟೆಲ್ ಮುಂಭಾಗ ಬಾಂಬ್ ಇಡಲು ಜಾಗ ಗುರ್ತಿಸಿ ಮರುದಿನ ನಿಗದಿತ ಸ್ಥಳದಲ್ಲಿ ರಾತ್ರಿ 7.45ರ ಸುಮಾರಿಗೆ ಹೂವಿನಕುಂಡಗಳ ಮಧ್ಯೆ ಬಾಂಬ್ ಇಟ್ಟು ಬಂದಿದ್ದ.
ಫೇಸ್‌ಬುಕ್‌ನಿಂದ ಉತ್ತರಬಾರದ ಹಿನ್ನೆಲೆಯಲ್ಲಿ ವಿಳಂಬ ಮುಖಕ್ಕೆ ಕರ್ಚೀಪ್ ಕಟ್ಟಿ ಬಾಂಬ್ ಇಟ್ಟಿದ್ದ ಆರೋಪಿ ಆಫ್ರೀಧಿ ಇಸ್ರೇಲ್‌ರನ್ನು ಟಾರ್ಗೆಟ್ ಮಾಡಿಕೊಂಡೇ ಬಾಂಬ್ ಇಟ್ಟಿದ್ದ ಆರೋಪಿ
●ಮಂಜುನಾಥ ಲಘುಮೇನಹಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.