ಎಲ್ಲ ಹಾಲಿಗಳಿಗೂ ಟಿಕೆಟ್: ಹ್ಯಾರಿಸ್ ವೇಯ್ಟಿಂಗ್ ಲಿಸ್ಟ್
Team Udayavani, Apr 16, 2018, 12:35 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಸಿಕ್ಕಿದೆ. ಆದರೆ ಶಾಂತಿನಗರ ಕ್ಷೇತ್ರಕ್ಕೆ ಪಕ್ಷ ಅಭ್ಯರ್ಥಿ ಘೋಷಿಸದಿರುವುದು ಕುತೂಹಲ ಮೂಡಿಸಿದೆ. ಈ ನಡುವೆ ಕ್ಷೇತ್ರದ ಹಾಲಿ ಶಾಸಕ ಎನ್.ಎ.ಹ್ಯಾರಿಸ್ ಟಿಕೆಟ್ ಪಡೆಯಲು ತೀವ್ರ ಲಾಬಿ ನಡೆಸಿದ್ದಾರೆ.
ಎಸ್.ಸಿ.ಮಹದೇವಪ್ಪ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿದ್ದ ಸರ್ ಸಿ.ವಿ.ರಾಮನ್‌ನಗರಕ್ಕೆ ಮೇಯರ್ ಸಂಪತ್‌ರಾಜ್‌ಗೆ ಟಿಕೆಟ್ ದೊರೆತಿದೆ. ಸಿಎಂ ಆಪ್ತ ಪಿ.ರಮೇಶ್‌ಗೆ ಟಿಕೆಟ್ ತಪ್ಪಿದೆ. ಮಲ್ಲೇಶ್ವರ ಕ್ಷೇತ್ರದಿಂದ ಅಚ್ಚರಿ ಎಂಬಂತೆ ಸಚಿವ ಎಂ.ಆರ್.ಸೀತಾರಾಂ ಅವರನ್ನು ಕಣಕ್ಕಿಳಿಸಲಾಗಿದೆ. ಜಯನಗರ ಕ್ಷೇತ್ರದಿಂದ ತಮ್ಮ ಪುತ್ರಿಗೆ ಟಿಕೆಟ್ ಪಡೆಯುವಲ್ಲಿ ಸಚಿವ ರಾಮಲಿಂಗಾರೆಡ್ಡಿ ಯಶಸ್ವಿಯಾಗಿದ್ದು, ಅಲ್ಲಿ ಆಕಾಂಕ್ಷಿ ಎಂ.ಸಿ.ವೇಣುಗೋಪಾಲ್‌ಗೆ ಟಿಕೆಟ್ ತಪ್ಪಿದೆ.
ಇನ್ನು ರಾಜಾಜಿನಗರಕ್ಕೆ ಮಾಜಿ ಮೇಯರ್ ಪದ್ಮಾವತಿ ಆವರಿಗೆ ಟಿಕೆಟ್ ನೀಡಲಾಗಿದ್ದು, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ್‌ಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಶಾಸಕರು ಇಲ್ಲದ ಯಲಹಂಕ- ಎಂ.ಎನ್.ಗೋಪಾಲಕೃಷ್ಣ, ದಾಸರಹಳ್ಳಿ- ಪಿ.ಎನ್‌ಕೃಷ್ಣಮೂರ್ತಿ, ಹೆಬ್ಟಾಳ- ಬೈರತಿ ಸುರೇಶ, ಬಸವನಗುಡಿಗೆ ಯುವ ಕಾಂಗ್ರೆಸ್‌ನ ಬೋರೇಗೌಡ, ಪದ್ಮನಾಭನಗರದಲ್ಲಿ ಗುರಪ್ಪ ನಾಯ್ಡು, ಮಹದೇವಪುರದಿಂದ ಎ.ಸಿ.ಶ್ರೀನಿವಾಸ್ , ಬೆಂಗಳೂರು ದಕ್ಷಿಣದಿಂದ ಆರ್.ಕೆ.ರಮೇಶ್, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸುಷ್ಮಾ ರಾಜಗೋಪಾಲ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸುಷ್ಮಾ ರಾಜ್‌ಗೊàಪಾಲ್ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಬಯಸಿದ್ದರು.
ಜೆಡಿಎಸ್‌ನಿಂದ ಹೊರಬಂದ ಜಮೀರ್ ಅಹಮದ್ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಟಿಕೆಟ್ ಪಡೆದಿದ್ದು, ಪುಲಕೇಶಿನಗರದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಪ್ರಸನ್ನಕುಮಾರ್ ಅವರಿಗೆ ಟಿಕೆಟ್ ತಪ್ಪಿದೆ. ಹಾಲಿ ಶಾಸಕರಲ್ಲಿ ಬ್ಯಾಟರಾಯನಪುರದಿಂದ ಕೃಷ್ಣ ಬೈರೇಗೌಡ, ಯಶವಂತಪುರದಿಂದ ಸ್.ಟಿ.ಸೋಮಶೇಖರ್, ರಾಜರಾಜೇಶ್ವರಿ ನಗರದಿಂದ ಮುನಿರತ್ನ, ಶಿವಾಜಿನಗರದಿಂದ ರೋಷನ್‌ಬೇಗ್, ಸರ್ವಜ್ಞನಗರ ಕ್ಷೇತ್ರದಿಂದ ಕೆ.ಜೆ.ಜಾರ್ಜ್, ಬಿಟಿಎಂ ಲೇ ಔಟ್‌ನಿಂದ ರಾಮಲಿಂಗಾ ರೆಡ್ಡಿ, ಗಾಂಧಿನಗರದಿಂದ ದಿನೇಶ್‌ಗುಂಡೂರಾವ್, ಚಿಕ್ಕಪೇಟೆಯಿಂದ ಆರ್.ವಿ.ದೇವರಾಜ್, ಕೃಷ್ಣರಾಜಪುರದಿಂದ ಬೈರತಿ ಬಸವರಾಜ್, ವಿಜಯನಗರದಿಂದ ಎಂ.ಕೃಷ್ಣಪ್ಪ, ಗೋವಿಂದರಾಜನಗರ ಕ್ಷೇತ್ರದಿಂದ ಪ್ರಿಯಕೃಷ್ಣಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಶಿಷ್ಯ ಚಲವಾದಿ ನಾರಾಯಣಸ್ವಾಮಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ವೀರಪ್ಪಮೊಯಿಲಿ ಶಿಷ್ಯ ವೆಂಕಟಸ್ವಾಮಿ ದೇವನಹಳ್ಳಿ ಟಿಕೆಟ್ ಪಡೆದಿದ್ದಾರೆ. ಹೊಸಕೋಟೆಯಲ್ಲಿ ನಿರೀಕ್ಷೆಯಂತೆ ಹಾಲಿ ಶಾಸಕ ಎಂ.ಟಿ.ಬಿ.ನಾಗರಾಜ್, ದೊಡ್ಡಬಳ್ಳಾಪುರದಲ್ಲಿ ಹಾಲಿ ಶಾಸಕ ವೆಂಕಟರಮಣಯ್ಯ ಅವರಿಗೆ ಟಿಕೆಟ್ ದೊರೆತಿದೆ.
ಕ್ಷೇತ್ರ ಅಭ್ಯರ್ಥಿ
ಯಲಹಂಕ ಎಂ.ಎನ್.ಗೋಪಾಲಕೃಷ್ಣ
ಕೆ.ಆರ್.ಪುರ ಬಿ.ಎ.ಬಸವರಾಜ್
ಬ್ಯಾಟರಾಯನಪುರ ಕೃಷ್ಣ ಭೈರೇಗೌಡ
ಯಶವಂಪುರ ಎಸ್.ಟಿ.ಸೋಮಶೇಖರ
ರಾಜಾಜಿನಗರ ಮುನಿರತ್ನ
ದಾಸರಹಳ್ಳಿ ಪಿ.ಎನ್.ಕೃಷ್ಣಮೂರ್ತಿ
ಮಹಾಲಕ್ಷ್ಮಿ ಲೇ ಔಟ್ ಎಚ್.ಎಸ್.ಮಂಜುನಾಥ್
ಮಲ್ಲೇಶ್ವರ ಎಂ.ಆರ್.ಸೀತಾರಾಂ
ಹೆಬ್ಟಾಳ ಬಿ.ಎಸ್.ಸುರೇಶ್
ಪುಲಕೇಶಿನಗರ ಅಖಂಡ ಶ್ರೀನಿವಾಸಮೂರ್ತಿ
ಸರ್ವಜ್ಞನಗರ ಕೆ.ಜೆ.ಜಾರ್ಜ್
ಸಿ.ವಿ.ರಾಮನ್‌ನಗರ ಸಂಪತ್‌ರಾಜ್
ಶಿವಾಜಿನಗರ ರೋಷನ್‌ಬೇಗ್
ಗಾಂಧಿನಗರ ದಿನೇಶ್‌ಗುಂಡೂರಾವ್
ರಾಜಾಜಿನಗರ ಜಿ.ಪದ್ಮಾವತಿ
ಗೋವಿಂದರಾಜನಗರ ಪ್ರಿಯಕೃಷ್ಣ
ವಿಜಯನಗರ ಎಂ.ಕೃಷ್ಣಪ್ಪ
ಚಾಮರಾಜಪೇಟೆ ಜಮೀರ್ ಅಹಮದ್
ಚಿಕ್ಕಪೇಟೆ-ಆರ್.ವಿ.ದೇವರಾಜ್
ಬಸವನಗುಡಿ ಎಂ.ಬೋರೇಗೌಡ
ಪದ್ಮನಾಭನಗರ ಗುರಪ್ಪನಾಯ್ಡು
ಬಿ.ಟಿ.ಎಂ.ಲೇ ಔಟ್ ರಾಮಲಿಂಗಾರೆಡ್ಡಿ
ಜಯನಗರ ಸೌಮ್ಯ ರೆಡ್ಡಿ
ಮಹದೇವಪುರ ಎ.ಸಿ.ಶ್ರೀನಿವಾಸ್
ಬೊಮ್ಮನಹಳ್ಳಿ ಸುಷ್ಮಾ ರಾಜಗೋಪಾಲರೆಡ್ಡಿ
ಬೆಂಗಳೂರು ದಕ್ಷಿಣ ಆರ್.ಕೆ.ರಮೇಶ್
ಆನೇಕಲ್ ಬಿ.ಶಿವಣ್ಣ
ಬೆಂ.ಗ್ರಾಮಾಂತರ ಜಿಲ್ಲೆ
ಕ್ಷೇತ್ರ ಅಭ್ಯರ್ಥಿ
ಹೊಸಕೋಟೆ ಎನ್.ನಾಗರಾಜ್
ದೇವನಹಳ್ಳಿ ವೆಂಕಟಸ್ವಾಮಿ
ದೊಡ್ಡಬಳ್ಳಾಪುರ ವೆಂಕಟರಮಣಯ್ಯ
ನೆಲಮಂಗಲ ಆರ್.ನಾರಾಯಣಸ್ವಾಮಿ
ರಾಮನಗರ ಜಿಲ್ಲೆ
ಕ್ಷೇತ್ರ ಅಭ್ಯರ್ಥಿ
ಮಾಗಡಿ ಎಚ್.ಸಿ.ಬಾಲಕೃಷ್ಣ
ಕನಕಪುರ ಡಿ.ಕೆ.ಶಿವಕುಮಾರ್
ಚನ್ನಪಟ್ಟಣ ಎಚ್.ಎಂ.ರೇವಣ್ಣ
ರಾಮನಗರ ಇಕ್ಬಾಲ್ ಹುಸೇನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.