ಬಿಜೆಪಿ ಪಾದಯಾತ್ರೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಕಿತ್ತಾಟ
Team Udayavani, Mar 19, 2018, 11:42 AM IST
ಬೆಂಗಳೂರು: ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಬಿಜೆಪಿ ನಡೆಸಿದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಸಮ್ಮುಖದಲ್ಲೇ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಜಟಾಪಟಿಗೆ ಇಳಿದ ಘಟನೆ ನಡೆಯಿತು.
ಕೋರಮಂಗಲ ಐದನೇ ಬ್ಲಾಕ್‌ನಿಂದ ಆರಂಭವಾದ ಪಾದಯಾತ್ರೆ ಬಿಟಿಎಂ ಲೇಔಟ್‌ನಲ್ಲಿ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಡುವೆ ನೂಕಾಟ, ತಳ್ಳಾಟ ನಡೆಯಿತು. ಬಿಜೆಪಿ ರಾಜ್ಯ ಕಾರ್ಯದರ್ಶಿ ಜಯದೇವ ಮತ್ತು ಸಹ ವಕ್ತಾರ ವಿವೇಕ ಸುಬ್ಟಾರೆಡ್ಡಿ ಬೆಂಬಲಿಗರ ನಡುವೆ ನಡೆದ ಕಿತ್ತಾಟ ಕೇಂದ್ರ ಸಚಿವರನ್ನೇ ಇಕ್ಕಟ್ಟಿಗೆ ಸಿಲುಕಿಸಿತ್ತು.
ಕಾಂಗ್ರೆಸ್ ವಿರುದ್ಧ ವಾಗ್ಧಾಳಿ: ನಂತರ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್, ಸಿದ್ದರಾಮಯ್ಯ ಕೌರವರ ವಂಶದವರು ಅಂತ ನನಗೆ ಯಾರೋ ಹೇಳಿದರು. ತಕ್ಷಣ ನನಗೆ ಶ್ರೀಲಂಕಾದಿಂದ ಎಸ್‌ಎಂಎಸ್ ಬಂತು, ಬಿಜೆಪಿಯವರು ತಪ್ಪಾಗಿ ತಿಳಿದುಕೊಂಡಿ¨ªಾರೆ. ಸಿದ್ದರಾಮಯ್ಯ ಕೌರವ ವಂಶದವರಲ್ಲ, ಕುಂಭಕರ್ಣನ ವಂಶದವರು ಅಂತ ಎಸ್‌ಎಂಎಸ್‌ನಲ್ಲಿತ್ತು ಎಂದು ವ್ಯಂಗ್ಯವಾಡಿದರು.
ಬಿಟಿಎಂ ಲೇಔಟ್‌ನಲ್ಲಿ ಹಲವರು ನಿ¨ªೆ ಮಾಡಲ್ಲ ಕಾರಣ, ವೀರಪ್ಪಮೊಯ್ಲಿಯವರು ಟ್ವೀಟ್ ಮಾಡಿ ಸತ್ಯ ಹೇಳಿ¨ªಾರೆ, ಮಾರ್ಗರೇಟ್ ಆಳ್ವ ಕಾಂಗ್ರೆಸ್ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖೇಣಿಯನ್ನು ಸೇರಿಸಿಕೊಂಡಿದ್ದಕ್ಕೆ ಹಿರಿಯ ನಾಯಕ ಖರ್ಗೆ ಕೂಡ ಬೇಸರ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ನಲ್ಲಿ ಲೀಡರ್ಸ್ ಇಲ್ಲ. ಕೇವಲ ಕಾಂಟ್ರಾಕ್ಟರ್, ಡೆವಲ್ಪರ್ ಇದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್‌ನಲ್ಲಿ ಬಿಟ್ಟಕ್ಕು, ಜೆಡಿಎಸ್‌ನಲ್ಲಿ ಇಕ್ಕಟ್ಟು. ಅಪ್ಪ ಒಂದು ಕಡೆ, ಹಿರಿಯ ಮಗ ಇನ್ನೊಂದು ಕಡೆ, ಕಿರಿಯ ಮಗ ಒಂದು ಕಡೆ, ಸೊಸೆ ಒಂದು ಕಡೆ ಎಂದು ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ಬಗ್ಗೆ ಟೀಕಿಸಿದರು. ಉತ್ತಮ ಸ್ಪಂದನೆ:ಗೃಹ ಸಚಿವ ರಾಮಲಿಂಗಾರೆಡ್ಡಿಯವರ ಕ್ಷೇತ್ರವೂ ಆಗಿರುವ ಬಿಟಿಎಂ ಲೇಔಟ್‌ನಲ್ಲಿ ಬಿಜೆಪಿ ಪಾದಯಾತ್ರೆಗೆ ಉತ್ತಮ ಸ್ಪಂದನೆ ದೊರೆಯಿತು .
ರಾಜ್ಯ ಬಿಜೆಪಿ ಕಾರ್ಯದರ್ಶಿ ಜಯದೇವ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುದರ್ಶನ್, ವಿಧಾನ ಪರಿಷತ್ ಸದಸ್ಯೆ ತಾರಾ ಅನೂರಾಧ ಮತ್ತಿತರರಿದ್ದರು. ಜಯನಗರ ಹಾಗೂ ಗೋವಿಂದರಾಜು ನಗರ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಯಿಂದ ಪಾದಯಾತ್ರೆ ನಡೆಸಿದರು. ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ವಿ.ಸೋಮಣ್ಣ ಮೊದಲಾದವರು ಭಾಗವಹಿಸಿದ್ದರಯ.
ಕಾಂಗ್ರೆಸ್ ಪ್ರಜಾತಂತ್ರಕ್ಕೆ ವಿರುದ್ಧವಾಗಿದೆ: ಕಾಂಗ್ರೆಸ್ ಪ್ರಜಾತಂತ್ರಕ್ಕೆ ವಿರುದ್ಧವಾದ ಸಂಸ್ಕೃತಿ ಅನುಸರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಎನ್‌ಡಿಎಗೆ ಸದನದ ಒಳಗೆ ಮತ್ತು ಹೊರಗೆ ಎಲ್ಲರ ಬೆಂಬಲ ಇದೆ. ಕಾಂಗ್ರೆಸ್ ಮತ್ತು ವಿರೋಧಪಕ್ಷದವರು ಮಂಡಿಸಲಿರುವ ಅವಿಶ್ವಾಸ ಗೊತ್ತುವಳಿ ಎದುರಿಸಲು ಸಿದ್ಧರಿದ್ದೇವೆ.
ಬಿಜೆಪಿ ಪೂರ್ಣ ಬಹುಮತ ಪಡೆದು ಆಡಳಿತಕ್ಕೆ ಬಂದಿದೆ. ದೇಶದ ಜನರ ಆಶೀರ್ವಾದ ಹಾಗೂ ಪಾರ್ಲಿಮೆಂಟ್ ಬೆಂಬಲ ಇದೆ ಎಂದು ಸಚಿವ ಅನಂತ್ ಕುಮಾರ್ ಹೇಳಿದರು. ಮಿತ್ರಪಕ್ಷ ತೆಲಗು ದೇಶಂ ಪಾರ್ಟಿ ಆಂಧ್ರಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕೆಂಬ ವಿಷಯದಲ್ಲಿ ತನ್ನ ನಿರ್ಧಾರ ತೆಗೆದುಕೊಂಡಿದೆ. ಮೋದಿ ಸರ್ಕಾರ ಆಂಧ್ರದ ಸಮಗ್ರ ಅಭಿವೃದ್ಧಿಗೆ 24 ಸಾವಿರ ಕೋಟಿ ರೂ. ನೀಡಿದೆ.
ಅಮರಾತಿಯ ಪುನರ್ ನಿರ್ಮಾಣ, ಆಂಧ್ರದ ಅಣೆಕಟ್ಟು ಹಾಗೂ ರಸ್ತೆಗಳ ನಿರ್ಮಾಣಕ್ಕೂ ಅನುದಾನ ನೀಡಿದೆ. ಆಂಧ್ರದಲ್ಲಿ ವೈಎಸ್‌ಆರ್ ಕಾಂಗ್ರಸ್ ಹಾಗೂ ಬೇರೆ ಪಕ್ಷಗಳ ಆಂದೋಲನದಿಂದ ಧೃತಿಗೆಟ್ಟು ಈ ನಿರ್ಧಾರ ತೆಗೆದುಕೊಂಡಿದೆ. ತೆಲಗು ದೇಶಂ ಪಾರ್ಟಿ ಎನ್‌ಡಿಎಯಿಂದ ಬೇರಾದರೂ ಆಂಧ್ರದ ಅಭಿವೃದ್ಧಿಯಲ್ಲಿ ಮೋದಿ ಸರ್ಕಾರ ಇದ್ದೇ ಇರುತ್ತದೆ ಎಂದರು.
ಮನೆಮನೆಗೆ ಕಾಂಗ್ರೆಸ್ ಎಂಬ ಅಭಿಯಾನವನ್ನು ಕಾಂಗ್ರೆಸ್ ಪಕ್ಷ ನಡೆಸುತ್ತಿದೆಯಾದರೂ ಅಲ್ಲಿ ನಾಯಕರ ಮಕ್ಕಳಿಗಷ್ಟೇ ಟಿಕೆಟ್ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಟಿಕೆಟ್ ಹಂಚಲು ಲಾಬಿ ಗುಂಪುಗಳನ್ನು ಸಿಎಂ ಸಿದ್ದರಾಮಯ್ಯ ರೂಪಿಸಿದ್ದಾರೆ.
-ಅನಂತ್‌ಕುಮಾರ್, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.