ತಿವಾರಿ ಸಾವಿನ ಹಿಂದೆ ಐಎಎಸ್ ಮಾಫಿಯಾ ಕೈವಾಡ
Team Udayavani, May 24, 2017, 12:24 PM IST
ಬೆಂಗಳೂರು: ಆಹಾರ ಇಲಾಖೆ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ನಿಗೂಢ ಸಾವಿನ ಹಿಂದೆ “ಐಎಎಸ್ ಮಾಫಿಯಾ’ದ ಕೈವಾಡವಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್. ವಿಜಯಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಹಾರ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ನನ್ನನ್ನು ಅಪಹರಿಸುವ ಸಂಚೂ ನಡೆದಿತ್ತು. ಇದೆಲ್ಲದರ ಹಿಂದೆ ಕೆಲವು ಭ್ರಷ್ಟ ಐಎಎಸ್ ಅಧಿಕಾರಿಗಳ ಕೈವಾಡವಿತ್ತು. ಈಗ ಅದೇ ಆಹಾರ ಇಲಾಖೆಯಲ್ಲಿ ಆಯುಕ್ತರಾಗಿದ್ದ ಅನುರಾಗ್ ತಿವಾರಿ ನಿಗೂಢ ಸಾವಿನ ಹಿಂದೆಯೂ ಐಎಎಸ್ ಮಾಫಿಯಾ ಇದೆ ಎಂದು ಶಂಕೆ ವ್ಯಕ್ತಪಡಿಸಿದರು.
ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿಗಳ ಹತ್ಯೆ, ನಿಗೂಢ ಸಾವು ಪ್ರಕರಣಗಳು ಹೆಚ್ಚಾಗುತ್ತಿವೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಪ್ರಾಮಾಣಿಕ ಅಧಿಕಾರಿಗಳನ್ನು ಹತ್ಯೆಗೈಯುವ “ಐಎಎಸ್ ಮಾಫಿಯಾ’ವೊಂದು ಈ ದೇಶ ಹಾಗೂ ರಾಜ್ಯದಲ್ಲಿ ಹುಟ್ಟಿಕೊಂಡಿದೆ. ಈ ಐಎಎಸ್ ಮಾಫಿಯಾ ಸಿಬಿಐ ಅಥವಾ ಯಾವುದೇ ರೀತಿಯ ತನಿಖೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವಂತಹ ಶಕ್ತಿ ಹೊಂದಿದೆ.
ಕರ್ನಾಟದಲ್ಲಿ ಭ್ರಷ್ಟ ಅಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅಂತಹವರಿಗೆ ರಕ್ಷಣೆ ನೀಡುವುದೇ ಈ ಐಎಎಸ್ ಮಾಫಿಯಾದ ಕೆಲಸ ಎಂದು ವಿಜಯಕುಮಾರ್ ಆಪಾದಿಸಿದರು. ಆಹಾರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಭ್ರಷ್ಟ ಹಿರಿಯ ಅಧಿಕಾರಿಗಳ ಹಗರಣದ ಬಗ್ಗೆ ತನಿಖೆ ನಡೆಸಿದ್ದರಿಂದ ನನ್ನ ಮೇಲೆ 3 ಬಾರಿ ಮಾರಣಾಂತಿಕ ಹಲ್ಲೆ ನಡೆಯಿತು. 2002ರಲ್ಲಿ ನಡೆದ ಹಲ್ಲೆಯಿಂದ ನಾನು ಬದುಕುಳಿದಿದ್ದೇ ಅದೃಷ್ಟ.
ಪೊಲೀಸ್ ಅಧಿಕಾರಿಗಳ ರೀತಿಯಲ್ಲಿ ಮಾರುವೇಷದಲ್ಲಿ ಬಂದು ನನ್ನನ್ನು ಅಪಹರಿಸುವ ಸಂಚು ನಡೆದಿತ್ತು. ರಾಜ್ಯದ ಎಷ್ಟೋ ಮಂದಿ ನಿಷ್ಠಾವಂತ ಅಧಿಕಾರಿಗಳು ಭ್ರಷ್ಟ ಹಿರಿಯ ಐಎಎಸ್ ಅಧಿಕಾರಿಗಳ ಕಪಿ ಮುಷ್ಠಿಯಲ್ಲಿ ಪ್ರಾಣ ಭಯದಿಂದ ಕೆಲಸ ಮಾಡುತ್ತಿದ್ದಾರೆ. ಸತ್ಯ ಗೊತ್ತಿದ್ದರೂ, ಅದನ್ನು ಬಹಿರಂಗಪಡಿಸಲು ಸಾಧ್ಯವಾಗದೇ ಅನೇಕ ದಕ್ಷ ಅಧಿಕಾರಿಗಳು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದು ವಿಜಯಕುಮಾರ್ ಹೇಳಿದರು.
ಉ.ಪ್ರ ಸರ್ಕಾರಕ್ಕೆ ಪತ್ರ: ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣದಲ್ಲಿ “ಐಎಎಸ್ ಮಾಫಿಯಾ’ದ ಕೈವಾಡವಿದೆ ಎಂದು ಉಲ್ಲೇಖೀಸಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ 8 ಪುಟಗಳ ಸುದೀರ್ಘ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ವಿಜಯಕುಮಾರ್ ಬಹಿರಂಗಪಡಿಸಿದರು. ನಿಷ್ಟಾವಂತ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣದಲ್ಲಿ ಕೂಡ ಐಎಎಸ್ ಮಾಫಿಯಾ ಕೈವಾಡವಿದೆ.
ಸ್ಥಳೀಯ ಮಟ್ಟದಲ್ಲಿ ಪ್ರಕರಣವನ್ನು ತನಿಖೆಗೊಳಪಡಿಸಿದರೇ ನ್ಯಾಯ ಸಿಗುವುದಿಲ್ಲ ಹಾಗೂ ಲಭ್ಯವಿರುವ ಸಾಕ್ಷಿಗಳು ಕೂಡ ನಾಶವಾಗುತ್ತವೆ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಅನುರಾಗ್ ತಿವಾರಿಯವರ ಇಂಜಿನಿಯರಿಂಗ್ ಸಹಪಾಠಿ ರಶ್ಮಿ ಮಿಶ್ರಾ ಮತ್ತಿತರರು ಇದ್ದರು.
ಆಹಾರ ಸಚಿವರಿಗೆ ತಿವಾರಿ ಸೋದರನ ದೂರು
ಬೆಂಗಳೂರು: ಕರ್ನಾಟಕದ ಆಹಾರ ಇಲಾಖೆಯಲ್ಲಿ ನಡೆದಿದ್ದ ಹಗರಣವನ್ನು ಬಯಲು ಮಾಡಲು ಮುಂದಾಗಿದ್ದೇ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಅನುಮಾನಾಸ್ಪದ ಸಾವಿಗೆ ಕಾರಣ ಎಂದು ಅವರ ಸಹೋದರ ಮಾಯಾಂಕ್ ತಿವಾರಿ ಇದೀಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರಿಗೆ ನೇರವಾಗಿ ದೂರು ನೀಡಿದ್ದಾರೆ.
ಆಂಗ್ಲ ಭಾಷೆಯ ಖಾಸಗಿ ಚಾನಲ್ ಒಂದರ ಮೂಲಕ ಸಚಿವ ಯು.ಟಿ.ಖಾದರ್ ಅವರೊಂದಿಗೆ ಮಾತನಾಡಿದ್ದ ಮಾಯಾಂಕ್ ತಿವಾರಿ, ತನ್ನ ಸಹೋದರ ಅನುರಾಗ್ ತಿವಾರಿ ಆಹಾರ ಇಲಾಖೆ ಆಯುಕ್ತರಾಗಿ ಬಹುದೊಡ್ಡ ಹಗರಣ ಬಯಲು ಮಾಡಲು ಮುಂದಾಗಿದ್ದರು. ಈ ಕುರಿತು ನನ್ನಲ್ಲಿ ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಪ್ರಕರಣದ ತನಿಖೆಗೆ ತಮ್ಮ ಸಹಕಾರ ಬೇಕು ಎಂದು ಕೋರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಮಾಯಾಂಕ್‌ಗೆ ಸಾಂತ್ವನ ಹೇಳಿದರಲ್ಲದೆ, ಅನುರಾಗ್ ತಿವಾರಿ ಒಬ್ಬ ಪ್ರಾಮಾಣಿಕ ಅಧಿಕಾರಿ ಆಗಿದ್ದರು. ಅವರ ಸಾವಿನಿಂದ ದೊಡ್ಡ ನಷ್ಟವಾಗಿದೆ. ಅವರು ಸಾವನ್ನಪ್ಪಿರುವುದು ಉತ್ತರ ಪ್ರದೇಶದಲ್ಲಿ. ಹೀಗಾಗಿ ಅಲ್ಲಿನ ಸರ್ಕಾರ ಇದಕ್ಕೆ ಸೂಕ್ತ ಉತ್ತರ ನೀಡಬೇಕಾಗಿದ್ದು, ಈಗಾಗಲೇ ತನಿಖೆಯನ್ನು ಸಿಬಿಐಗೆ ವಹಿಸಿದೆ. ತನಿಖೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದ್ದು, ನಮಗೂ ತಿವಾರಿ ಸಾವಿನ ನಿಜವಾದ ಕಾರಣ ತಿಳಿದುಕೊಳ್ಳುವ ಬಯಕೆ ಇದೆ ಎಂದು ಹೇಳಿದ್ದಾರೆ.
ಯಾವುದೇ ಸರ್ಕಾರ ಕೂಡ ಐಎಎಸ್ ಅಧಿಕಾರಿಗಳನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಯಾವುದೇ ಹಗರಣ ಗೊತ್ತಾಗಿದ್ದರೂ ಅದನ್ನು ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿ ಇಲ್ಲವೇ ಗೃಹ ಸಚಿವರ ಗಮನಕ್ಕೆ ತರಬೇಕಿತ್ತು. ಆದರೆ, ಅಂತಹ ಯಾವುದೇ ವಿವರವನ್ನು ಅನುರಾಗ್ ತಿವಾರಿ ಸರ್ಕಾರದ ಗಮನಕ್ಕೆ ತಂದಿಲ್ಲ. ಆದರೂ ಅವರ ಸಾವಿನ ತನಿಖೆ ವಿಚಾರದಲ್ಲಿ ನಮ್ಮ ಕಡೆಯಿಂದ ಎÇÉಾ ವಿಧದ ಸಹಕಾರ ಸಿಗಲಿದೆ. ಈಗಾಗಲೇ ಸಾಕಷ್ಟು ವಿವರ ನೀಡಿದ್ದು, ನಮ್ಮ ಅಧಿಕಾರಿಗಳನ್ನೂ ಉತ್ತರ ಪ್ರದೇಶಕ್ಕೆ ಕಳುಹಿಸಿಕೊಟ್ಟಿದ್ದೆವು. ನಮ್ಮ ಕಡೆಯಿಂದ ಸಹಕಾರ ಸಿಗುವುದರಲ್ಲಿ ತಮಗೆ ಯಾವುದೇ ಅನುಮಾನ ಬೇಡ ಎಂಬುದಾಗಿ ಭರವಸೆ ನೀಡಿದ್ದಾರೆ.
ಅಧಿಕಾರಿ ಹೇಳಿದ್ದೇನು?
ಪ್ರಾಣ ಭಯದಿಂದ ಕೆಲಸ ಮಾಡುತ್ತಿರುವ ರಾಜ್ಯದ ನಿಷ್ಠಾವಂತ ಅಧಿಕಾರಿಗಳು ಭ್ರಷ್ಟ ಹಿರಿಯ ಎಎಸ್ ಅಧಿಕಾರಿಗಳಿಂದಲೇ ಪ್ರಾಮಾಣಿಕರಿಗೆ ಪ್ರಾಣ ಭಯ ಸತ್ಯ ಗೊತ್ತಿದ್ದರೂ, ಬಹಿರಂಗಪಡಿಸಲಾಗದ ಅಸಹಾಯಕ ಸ್ಥಿತಿ ಆಹಾರ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ನನ್ನ ಮೇಲೆ 3 ಬಾರಿ ಮಾರಣಾಂತಿಕ ಹಲ್ಲೆ ಪೊಲೀಸ್ ಅಧಿಕಾರಿಗಳ ಮಾರುವೇಷದಲ್ಲಿ ಬಂದಿದ್ದಹಂತಕರು 2002ರಲ್ಲಿ ನನ್ನನ್ನು ಅಪಹರಿಸುವ ಸಂಚೂ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.