ಇಂದು ಮತ್ತು ನಾಳೆ ನೀರಿನ ಅದಾಲತ್
Team Udayavani, Oct 11, 2017, 11:21 AM IST
ಬೆಂಗಳೂರು: ಬೆಂಗಳೂರು ಜಲಮಂಡಳಿ ವತಿಯಿಂದ ಬುಧವಾರ (ಅ.11) ಹಾಗೂ ಗುರುವಾರ (ಅ.12) ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಆಯೋಜಿಸಿದ್ದು, ಸಾರ್ವಜನಿಕರು ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕದಲ್ಲಿ ವಿಳಮಭ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಸೇರಿ ಇನ್ನಿತರ ಕುಂದುಕೊರತೆಗಳಿಗೆ ಹಿರಿಯ ಅಧಿಕಾರಿಗಳಿಂದ ಪರಿಹಾರ ಪಡೆಯಬಹುದಾಗಿದೆ.
ಬುಧವಾರ (ಅ.11) ರಂದು ಬೆಳಗ್ಗೆ 9.30 ರಿಂದ 11 ಗಂಟೆಯವರೆಗೆ ಕೇಂದ್ರ -2 ಉಪ ವಿಭಾಗದ ವ್ಯಾಪ್ತಿಯ ಹೈಗ್ರೌಂಡ್ಸ್ (ಎಚ್‌ಜಿಆರ್), ಕೋಲ್ಸ್‌ಪಾರ್ಕ್ ಸೇವಾ ಠಾಣೆಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ನೀರಿನ ಅದಾಲತ್ ನಡೆಸಲಾಗುತ್ತಿದೆ. ಸಾರ್ವಜನಿಕರು ಮಿಲ್ಲರ್ ರಸ್ತೆಯಲ್ಲಿರುವ ಹೈಗ್ರೌಂಡ್ಸ್ ಕೇಂದ್ರ -2 ಕಚೇರಿಯಲ್ಲಿ ನಡೆಯಲಿರುವ ಅದಾಲತ್‌ನಲ್ಲಿ ಭಾಗವಹಿಸಿ ನೀರಿನ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ಎಂಜಿನಿಯರ್ (ಕೇಂದ್ರ) 22945187 ಅಥವಾ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ (ಕೇಂದ್ರ-2 ಉಪವಿಭಾಗ) 22945191 ಇವರನ್ನು ಸಂಪರ್ಕಿಸಬಹುದಾಗಿದೆ.
ಗುರುವಾರ (ಅ.12) ಉತ್ತರ-2 ಹಾಗೂ ಈಶಾನ್ಯ -1 ಉಪವಿಭಾಗಗಳಿಗೆ ಸಂಬಂಧಿಸಿದಂತೆ ಅದಾಲತ್ ನಡೆಯಲಿದೆ. ಉತ್ತರ-2 ಉಪವಿಭಾಗ ವ್ಯಾಪ್ತಿಯ ಯಲಹಂಕ ಓಲ್ಡ್ ಟೌನ್, ಯಲಹಂಕ ನ್ಯೂಟೌನ್ ಸೇವಾ ಠಾಣೆ ವ್ಯಾಪ್ತಿಯ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ದೊಡ್ಡಬಳ್ಳಾರಪು ಮುಖ್ಯರಸ್ತೆ ಸಂಬಂಧಿಸಿದ ಕುಂಡುಕೊರತೆಗಳನ್ನು ಯಲಹಂಕ ನ್ಯೂಟೌನ್‌ನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಉತ್ತರ-2 ಕಚೇರಿಯಲ್ಲಿ ತಿಳಿಸಹುದಾಗಿದ್ದು, ಮಾಹಿತಿಗಾಗಿ ಕಾರ್ಯ ನಿರ್ವಾಹಕ ಎಂಜಿನಿಯರ್ (ಉತ್ತರ) 22945130 ಅಥವಾ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ (ಉತ್ತರ-2) ಉಪವಿಭಾಗ 28562829 ಸಂಪರ್ಕಿಸಬಹುದು.
ಈಶಾನ್ಯ-1 ಉಪವಿಭಾಗ ವ್ಯಾಪ್ತಿಯ ಶ್ರೀರಾಮಪುರ, ಯಶವಂತಪುರ-1 ಮತ್ತು 2, ಭಾಷ್ಯಂ ಪಾರ್ಕ್ ಸೇವಾ ಠಾಣೆ ವ್ಯಾಪ್ತಿಗೆ ಸಂಬಂಧಿಸಿದ ಕುಂದಕೊರತೆಗಳನ್ನು ಮಲ್ಲೇಶ್ವರದ 18ನೇ ಮುಖ್ಯರಸ್ತೆಯಲ್ಲಿರುವ ಸಿಜೆಎಸ್ ಕಾಂಪೌಂಡ್‌ನಲ್ಲಿರುವ ಈಶಾನ್ಯ-1 ಕಚೇರಿಯಲ್ಲಿ ಪರಿಹರಿಸಲಾಗುತ್ತದೆ. ಮಾಹಿತಿಗಾಗಿ ಸಾರ್ವಜನಿಕರು ಕಾರ್ಯನಿರ್ವಾಹಕ ಎಂಜಿನಿಯರ್ (ಈಶಾನ್ಯ) 22945124 ಅಥವಾ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ (ಈಶಾನ್ಯ-1 ಉಪವಿಭಾಗ) 22945131 ಇವರನ್ನು ಸಂಪರ್ಕಿಸಬಹುದಾಗಿದೆ.
ಇದರೊಂದಿಗೆ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಜಲಮಂಡಳಿಯ ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ -22238888, ಸಹಾಯವಾಣಿ 1916 ಹಾಗೂ ವಾಟ್ಸ್‌ಆಪ್ ಸಂಖ್ಯೆ 8762228888 ನ್ನು ಸಂಪರ್ಕಿಸಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.