ಸದಭಿರುಚಿ ಚಿತ್ರಗಳು ಇಂದಿನ ಅಗತ್ಯ


Team Udayavani, Feb 3, 2017, 12:04 PM IST

cimothsava.jpg

ಬೆಂಗಳೂರು: ಮನರಂಜನೆ ಜತೆಗೆ ಉತ್ತಮ ಕಥಾವಸ್ತು ಹಾಗೂ ಸದಭಿರುಚಿಯ ಚಿತ್ರಗಳು ಹೆಚ್ಚಾಗಿ ನಿರ್ಮಾಣವಾಗಬೇಕು. ಕನ್ನಡ ಚಿತ್ರರಂಗ ಗಟ್ಟಿಯಾಗಿ ನೆಲೆಯೂರಲು ಅಗತ್ಯ ನೆರವು ನೀಡಲು ಸರ್ಕಾರ ಸದಾ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ ಚಾಲನೆ ನೀಡಿದ ಅವರು, “ಕನ್ನಡದಲ್ಲಿ ಉತ್ತಮ ಸಿನಿಮಾಗಳು ಬರುತ್ತಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಕೆಟ್ಟ ಸಿನಿಮಾಗಳೂ ಬರುತ್ತಿವೆ. ವರ್ಷಕ್ಕೆ ಸುಮಾರು 150ರಿಂದ 180 ಚಿತ್ರಗಳು ನಿರ್ಮಾಣವಾಗುತ್ತಿದೆ. ಇದರಲ್ಲಿ ಗುಣಮಟ್ಟದ ಚಿತ್ರಗಳು ಎಷ್ಟು ಎಂಬುದನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಬೇಕು. ಹಿಂದೆಲ್ಲಾ ಒಳ್ಳೆಯ ಕಥಾವಸ್ತು ಚಿತ್ರಗಳು ನಿರ್ಮಾಣವಾಗುತ್ತಿದ್ದವು.

ಅಂತಹ ಚಿತ್ರಗಳು ಹೆಚ್ಚಾಗಬೇಕು. ಇಂದು ದ್ವಂದ್ವಾರ್ಥವೇ ಹಾಸ್ಯ ಎಂಬಂತಾಗಿದೆ. ಉತ್ತಮ ಕಥೆ, ಸಂದೇಶವಿರುವ ಚಿತ್ರಗಳಿಂದ ಸಮಾಜದಲ್ಲಿ ಬದಲಾವಣೆ ತರಬಲ್ಲವು. ಡಾ.ರಾಜ್‌ಕುಮಾರ್‌ ಅವರ “ಬಂಗಾರದ ಮನುಷ್ಯ’ ಚಿತ್ರ ನೋಡಿ ಸಾಕಷ್ಟು ವಿದ್ಯಾವಂತರೂ ಕೃಷಿ ಆರಂಭಿಸಿದರು. ಅಷ್ಟರ ಮಟ್ಟಿಗೆ ಚಿತ್ರ ಪ್ರಭಾವ ಬೀರಿತ್ತು. ನಾನು ಕೂಡ ಐದು ಬಾರಿ ನೋಡಿದ್ದೇನೆ,” ಎಂದರು. 

ಕನ್ನಡ ಸಿನಿಮಾ ಕಡ್ಡಾಯವಾಗಿ ನೋಡಿ: ಚಲನಚಿತ್ರ ಪ್ರಭಾವಿ ಮಾಧ್ಯಮ, ಅದರ ಮೂಲಕ ಒಳ್ಳೆಯ ಸಂದೇಶ, ನೀತಿ ಸಾರಿದರೆ ಸಮಾಜಕ್ಕೂ ಒಳಿತು. ಚಿತ್ರರಸಿಕರು ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಬೇಕಿದ್ದು, ಕನ್ನಡ ಚಿತ್ರರಸಿಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಎಲ್ಲ ಭಾಷೆಯ ಚಿತ್ರಗಳನ್ನು ನೋಡಿ. ಆದರೆ ಕನ್ನಡವನ್ನು ಕಡ್ಡಾಯವಾಗಿ ನೋಡಿ. ಆಗ ಮಾತ್ರ ಚಿತ್ರರಂಗದ ಅಭಿವೃದ್ಧಿ ಸಾಧ್ಯ.

ಚಲನಚಿತ್ರ ವಾಣಿಜ್ಯ ಮಂಡಳಿಗೆ 82 ವರ್ಷಗಳಾಗಿದ್ದು, ಶತಮಾನೋತ್ಸವ ಆಚರಿಸುವ ವೇಳೆಗೆ ಕರ್ನಾಟಕದೆಲ್ಲೆಡೆ ಕನ್ನಡದ ವಾತಾವರಣ ನಿರ್ಮಿಸಲು ಪ್ರಯತ್ನಿಸೋಣ ಎಂದರು.ರಾಜ್ಯದಲ್ಲಿ ಮಲ್ಪಿಫ್ಲೆಕ್ಸ್‌ಗಳಿಂದಾಗುತ್ತಿರುವ ತೊಂದರೆ ನಿವಾರಣೆ ಕುರಿತು ಚರ್ಚಿಸಲು ಸದ್ಯದಲ್ಲೇ ಸಭೆ ನಡೆಸಲಾಗುವುದು. ಕನ್ನಡ ಚಿತ್ರರಂಗದ ಬೆಳವಣಿಗೆ ಅಗತ್ಯವಿರುವ ಎಲ್ಲ ನೆರವು, ಸಹಕಾರ ನೀಡಲಾಗುವುದು ಎಂದು ಪುನರುಚ್ಚರಿಸಿದರು. 

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು ಮಾತನಾಡಿ, “ದೇಶದಲ್ಲಿ ಚಿತ್ರಮಂದಿರಗಳ ಕೊರತೆಯಿದೆ. ಅಳಿದುಳಿದ ಚಿತ್ರಮಂದಿರಗಳು ನಿರ್ನಾಮದ ಹಂತದಲ್ಲಿವೆ. ಚಿತ್ರರಂಗ ಗಟ್ಟಿಯಾಗಿ ನೆಲೆಯೂರಲು ಸಿಎಂ ಸಿದ್ದರಾಮಯ್ಯ ಅವರು 300 ಜನತಾ ಚಿತ್ರ ಮಂದಿರಗಳ ನಿರ್ಮಾಣಕ್ಕೆ ಪ್ರೋತ್ಸಾಹಧನ ನೀಡಲು ಮುಂದಾಗಿದ್ದು ಸ್ವಾಗತಾರ್ಹ,” ಎಂದರು.

ಮಲ್ಪಿಫ್ಲೆಕ್ಸ್‌ಗಳು ಕನ್ನಡ ಚಿತ್ರಗಳ ವಿಲನ್‌: ಚಿತ್ರಮಂದಿರ ನಿರ್ಮಾಣ  ಪರವಾನಗಿ ಪಡೆಯುವುದೇ ಕಷ್ಟವಾಗಿದೆ. 1954ರ ಕಾಯ್ದೆಯೇ ಇಂದಿಗೂ ಜಾರಿಯಲ್ಲಿದ್ದು, ಐದು ವರ್ಷವಾದರೂ ಅನುಮತಿ ನೀಡುವುದಿಲ್ಲ. ಅನ್ಯ ರಾಜ್ಯಗಳಲ್ಲಿ ಅರ್ಜಿ ಸಲ್ಲಿಸಿದ 21ದಿನದಲ್ಲಿ ಅನುಮತಿ ಸಿಗುತ್ತದೆ. ಈ ಬಗ್ಗೆ ಗಮನ ಹರಿಸಬೇಕು. ಮಲ್ಪಿಫ್ಲೆಕ್ಸ್‌ಗಳು ಕನ್ನಡ ಚಿತ್ರಗಳ ಪಾಲಿಗೆ ವಿಲನ್‌ಗಳಂತಾಗಿವೆ. ಕನ್ನಡ ಚಿತ್ರಗಳನ್ನು ಮನಬಂದಂತೆ ಬದಲಾಯಿಸಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು.

ಮೈಸೂರಿನಲ್ಲಿ ಫಿಲ್ಮ್ಸಿಟಿ ನಿರ್ಮಾಣವಾಗುತ್ತಿದ್ದು, ಸಮೀಪದಲ್ಲೇ ಸಿನಿಮಾ ಕಾಲೋನಿ ನಿರ್ಮಿಸಿ ಚಿತ್ರರಂಗದವರಿಗೆ ರಿಯಾಯ್ತಿ ದರದಲ್ಲಿ ನಿವೇಶನ ನೀಡಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, “”ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 15 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಚಿತ್ರರಂಗದ ಅಭಿವೃದ್ದಿಗೆ ನೆರವು, ಸಹಕಾರ ನೀಡುತ್ತಾ ಬಂದಿದ್ದಾರೆ. “ಟರ್ನ್ ಓವರ್‌ ಟ್ಯಾಕ್ಸ್‌’ ರದ್ದುಪಡಿಸಿ ಹಿಂದೊಮ್ಮೆ ನೆರವಾಗಿದ್ದರು,” ಎಂದು ಸ್ಮರಿಸಿದರು. 

ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಸ್ಮರಣಿಕೆ ಬಿಡುಗಡೆಗೊಳಿಸಿದರು. ಸಚಿವರಾದ ಕೆ.ಜೆ.ಜಾರ್ಜ್‌, ಉಮಾಶ್ರೀ, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಶಾಸಕ ಮುನಿರತ್ನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್‌, ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌, ಕಲಾತ್ಮಕ ನಿರ್ದೇಶಕ ಎಂ. ವಿದ್ಯಾಶಂಕರ್‌ ಉಪಸ್ಥಿತರಿದ್ದರು. ನಟಿ ಸುಹಾಸಿನಿ ಮಣಿರತ್ನ ಹಾಗೂ ನಟ ರಮೇಶ್‌ ಅರವಿಂದ ಕಾರ್ಯಕ್ರಮ ನಿರ್ವಹಣೆ ಮಾಡಿದರು. 

ವಿಶೇಷ ಆಹ್ವಾನಿತರ ನುಡಿ
ಇದು ಭಾರತಕ್ಕೆ ನನ್ನ ಮೂರನೇ ಭೇಟಿ. ನಾನು ಭಾರತಕ್ಕೆ 
ಭೇಟಿ ನೀಡಿದಾಗಲೆಲ್ಲಾ ಈಜಿಫ್ಟ್ನಲ್ಲೇ ಇದ್ದ ಅನುಭವವಾಗುತ್ತದೆ. ಎರಡೂ ರಾಷ್ಟ್ರಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಇದೆಲ್ಲಾ ಹೇಗೆ ಎಂಬ ವಿಸ್ಮಯ ಕೂಡ ಕಾಡುತ್ತದೆ. 
-ಹಲಾ ಕಲೀಲ್‌, ಈಜಿಪ್ಟ್ನ ಚಿತ್ರ ನಿರ್ದೇಶಕಿ

ನಾನು 1984ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ತೆರಳಿದ್ದೆ. ಈವರೆಗೆ ಏಳು ಚಿತ್ರೋತ್ಸವ ನೋಡಿದ್ದೇನೆ. ಇದೀಗ ನಮ್ಮೂರಿನಲ್ಲೇ ಸಿನಿಮೋತ್ಸವ ನಡೆಯುತ್ತಿರುವುದು ಸಂತಸ ತಂದಿದೆ. ನಮ್ಮ ಕಲಾವಿದರು, ತಂತ್ರಜ್ಞರು, ನಿರ್ಮಾಣಕಾರರಿಗೆ  ಚಿತ್ರೋತ್ಸವ ಸಾಕಷ್ಟು ಉಪಯುಕ್ತವಾಗಿದೆ. ಹಾಗಾಗಿ ಅವಕಾಶ ಕಳೆದುಕೊಳ್ಳದೆ ಸದುಪಯೋಗ ಪಡೆದುಕೊಳ್ಳಬೇಕು. ಗೋಧಿಬಣ್ಣ ಸಾಧಾರಣ ಮೈಕಟ್ಟು, ತಿಥಿ, ಯು ಟರ್ನ್, ರಾಮ ರಾಮಾರೇ ಸೇರಿದಂತೆ 8-9 ಅದ್ಭುತ ಸಿನಿಮಾಗಳು ಬಂದಿವೆ.
-ಪುನೀತ್‌ ರಾಜ್‌ಕುಮಾರ್‌, ನಟ

ಟಾಪ್ ನ್ಯೂಸ್

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.