657 ಅಸಹಾಯಕರಿಗೆ ಪರೀಕ್ಷಾ ಪ್ರಿಯಾ ದೇವತೆ
Team Udayavani, Mar 1, 2018, 6:00 AM IST
ಬೆಂಗಳೂರು: ಬಿಎ ಪರೀಕ್ಷೆ ಬರೆಯಲು ಬಂದಿದ್ದ ಆತನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. “ಗಾರ್ಮೆಂಟ್ಸ್‌ನಲ್ಲಿ ಕಷ್ಟಪಟ್ಟು ಕೂಲಿ ಮಾಡಿ, ಪರೀಕ್ಷೆ ಶುಲ್ಕ ಕಟ್ಟಿದೆ’ ಎನ್ನುತ್ತಿದ್ದ. ಅವನ ಬಟ್ಟೆ ಚಿಂದಿಯಾಗಿತ್ತು. ಗಬ್ಬು ನಾರುತ್ತಾನೆ, ಕೆದರಿದ ಕೂದಲಿನಲ್ಲಿ ಭಿಕ್ಷುಕನಂತೆ ಕಾಣಿಸುತ್ತಾನೆಂಬ ಕಾರಣವೊಡ್ಡಿ, ಮೇಲ್ವಿಚಾರಕರು ಆತನನ್ನು ಕೊಠಡಿಯ ಹೊರಗೆ ಕೂರಿಸಿ, ಪರೀಕ್ಷೆ ಬರೆಯಲು ಸೂಚಿಸಿದ್ದರು. ಆತನಿಗೆ ಲಿಪಿಕಾರಿಣಿ ಆಗಿ ನಾನು ಹೋಗಿದ್ದೆ. ಪ್ರಶ್ನೆಗಳನ್ನು ಓದಿ ಹೇಳುತ್ತಿದ್ದೆ, ಆತ ಉತ್ತರ ಹೇಳುತ್ತಿದ್ದ. ಪಕ್ಕದಲ್ಲಿಯೇ ಕುಳಿತು ಪರೀಕ್ಷೆ ಬರೆದು ಕೊಟ್ಟೆ. ಅದೊಂದು ದಿನ “ನಾನು ಪಾಸ್ ಆದೆ ಮೇಡಂ’ ಎಂದಾಗ, ದೇವರಿಗೆ ಧನ್ಯವಾದ ಹೇಳಿದ್ದೆ.
ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ದುಡಿಯುವ ಪುಷ್ಪಪ್ರಿಯಾ, ಕಳೆದ 2 ದಶಕಗಳಿಂದ ಬಿಡುವಿನ ವೇಳೆಯಲ್ಲಿ ಅಂಧರಿಗೆ, ಅಂಗಾಂಗ ವೈಕಲ್ಯ ಇದ್ದವರಿಗೆ ಪರೀಕ್ಷೆ ಬರೆದುಕೊಡುತ್ತಿದ್ದಾರೆ. ಇದುವರೆಗೆ 657 ವಿಕಲಾಂಗಚೇತನರಿಗೆ ಪರೀಕ್ಷೆ
ಬರೆದುಕೊಟ್ಟಿದ್ದಾರೆ. ಈಗ 658ನೇ ವ್ಯಕ್ತಿ, ಸಂಜಯ್ ಎಂಬಾತ, ಯಲಹಂಕದ ಸರ್ಕಾರಿ ಕಾಲೇಜಿನಲ್ಲಿ ಮಾ.1 ರಂದು ಪಿಯುಸಿಯ ಅರ್ಥಶಾಸ್ತ್ರ ಪತ್ರಿಕೆಗೆ ಉತ್ತರಿಸಲು ಪುಷ್ಪಾ ಅವರ ನೆರವಿಗಾಗಿ ಕಾದು ಕುಳಿತಿದ್ದಾನೆ.
ಸ್ಫೂರ್ತಿ ಏನು?: “ನಾನು ಬಡ ಕುಟುಂಬದಿಂದ ಬಂದವಳು. ದುಡ್ಡಿಲ್ಲ ಎಂದು ಅನೇಕ ಸಲ ಓದನ್ನೇ ಕೈಬಿಟ್ಟಿದ್ದೆ. ಒಮ್ಮೆ ಪೊಲಿಯೋ ಪೀಡಿತರೊಬ್ಬರು ನನ್ನ ಪರೀಕ್ಷೆಯ ಶುಲ್ಕ ಭರಿಸಿದ್ದರು. ಹೊರಗೆ ಬಂದು ಹುಡುಕಿದೆ, ಆ ಪುಣ್ಯಾತ್ಮ ಅಲ್ಲಿರಲಿಲ್ಲ. ಇವತ್ತು ಅವರೆಲ್ಲಿದ್ದಾರೆ, ಹೇಗಿದ್ದಾರೆಂದು ನನಗೆ ಗೊತ್ತಿಲ್ಲ. ಅವರ ಮುಖವನ್ನು ಜೀವನಪೂರ್ತಿ ನೆನೆಸಿಕೊಳ್ಳ ಲೆಂದೇ, ಇಂಥ ವಿಕಲಾಂಗ ಚೇತನರಿಗೆ ನೆರವಾಗು ತ್ತಿದ್ದೇನೆ’ ಎನ್ನುತ್ತಾರೆ ಪ್ರಿಯಾ.
“ನಮ್ಮ ಸುತ್ತಲೂ ಕತ್ತಲಿಲ್ಲ, ಬೆಳಕಿನರೂಪದಲ್ಲಿ ಯಾರಾದರೂ ಬರುತ್ತಾರೆ’ ಎಂದಿದ್ದ ಅಂಧ ಲೇಖಕಿ ಹೆಲೆನ್ ಕೆಲ್ಲರ್
ನ ಮಾತಿನಂತೆ ಅಂಧರಿಗೆ, ಅಸಹಾಯಕರಿಗೆ ಪುಷ್ಪಪ್ರಿಯಾ ಬೆಳಕು.
ಖುಷಿಯ ಸಂಗತಿಯೆಂದರೆ, ಇವರು ಪರೀಕ್ಷೆ ಬರೆದುಕೊಟ್ಟ ವಿಕಲಾಂಗ ವಿದ್ಯಾರ್ಥಿಗಳಾರೂ ಇಲ್ಲಿಯ ತನಕ ಫೇಲ್ ಆಗಿಲ್ಲ. ಉತ್ತಮ ಅಂಕದಿಂದ ಪಾಸ್ ಆಗಿದ್ದಾರೆ. ಎಂಜಿನಿಯರಿಂಗ್‌ನಿಂದ ಹಿಡಿದು ಎಸ್ಸೆಸ್ಸೆಲ್ಸಿ ವರೆಗೆ, ಬ್ಯಾಂಕ್ ಪರೀಕ್ಷೆಯಿಂದ- ಇತರೆ ಸರ್ಕಾರಿ ನೌಕರಿಯ ಎಕ್ಸಾಮ್‌ಗಳನ್ನೂ ಬರೆದುಕೊಟ್ಟು, ಅವರೆಲ್ಲ ಉನ್ನತ ಹುದ್ದೆಗೆ ಸೇರಿದ್ದಾರೆ. “ಮೊನ್ನೆ ಒಬ್ಬ ಹುಡುಗನಿಗೆ ಪರೀಕ್ಷೆ ಹತ್ತಿರವಿದ್ದಂತೆ, ಅಪಘಾತವಾಯಿತು. ಅವನಿಗೆ ಲಿಪಿಕಾರಿಣಿಯಾಗಿ, ಸೆಮಿಸ್ಟರ್‌ನ ಅಷ್ಟೂ ಪರೀಕ್ಷೆಗಳನ್ನು ಬರೆದೆ. ನಾನು ಯಾರಿಂದಲೂ ಹಣ ಪಡೆಯುವುದಿಲ್ಲ. ಮನುಷ್ಯಳಾಗಿ ಈ ಉಪಕಾರ ಮಾಡಿದ್ದರೆ ಹೇಗೆ?’ ಎನ್ನುವ ಪ್ರಿಯಾ ಅವರ ಪ್ರಶ್ನೆ, ಮನುಕುಲದ ಹೃದಯವನ್ನೊಮ್ಮೆ ತಟ್ಟುತ್ತದೆ.
ತಿಮಪ್ಪನ ದರ್ಶನ: ದೃಷ್ಟಿ ಇಲ್ಲದಿದ್ದ ವೆಂಕಟೇಶ ಎಂಬ ಹುಡುಗ ಸಂಗೀತ ಪರೀಕ್ಷೆಯಲ್ಲಿ ಬಂಗಾರದ ಪದಕ ಪಡೆದ. ಹರ್ಷಿತಾ ಎಂಬ ಅಂಧ ಹುಡುಗಿ, ಬಿ.ಕಾಂ.ನಲ್ಲಿ ಡಿಸ್ಟಿಂಕ್ಷನ್ ಪಡೆದು, ರಾಹುಲ್ ಗಾಂಧಿ ಅವರಿಂದ ಪ್ರಶಂಸಾ ಪತ್ರ ಗಿಟ್ಟಿಸಿಕೊಂಡಳು.
ಒಮ್ಮೆ 35 ಮಂದಿ ಅಂಧ ವಿದ್ಯಾರ್ಥಿಗಳು ತಿರುಪತಿ ತಿಮ್ಮಪ್ಪನನ್ನು ನೋಡಬಯಸಿದ್ದರು. ನಮ್ಮ ತಂಡ ಅವರ ಕೈಹಿಡಿದು, ತಿರುಪತಿಯ ಬೆಟ್ಟ ಹತ್ತಿಸಿ, ವೆಂಕಟೇಶನ ಸಾನ್ನಿಧ್ಯದಲ್ಲಿ ನಿಲ್ಲಿಸಿತ್ತು. ರಾಮನಗರದ ಶೋಲೆ ಬೆಟ್ಟವನ್ನು ಹತ್ತಿಸಿ, ಕೆಲವು ಅಂಧ ವಿದ್ಯಾರ್ಥಿಗಳ ಆಸೆ ಈಡೇರಿಸಿದ್ದೇವೆ ಎಂದು ತಮ್ಮ ಸೇವೆಯ ಮೈಲುಗಲ್ಲು ಗಳನ್ನು ಸ್ಮರಿಸುತ್ತಾರೆ ಪ್ರಿಯಾ.
ಪ್ರಿಯಾ ಕೇವಲ ಪರೀಕ್ಷೆ ಬರೆದುಕೊಡುವುದಿಲ್ಲ, ಸ್ವಂತ ಹಣದಿಂದಲೇ ನೂರಾರು ಅಸಹಾಯಕರಿಗೆ ಪರೀಕ್ಷಾ ಶುಲ್ಕ
ಕಟ್ಟಿದ್ದಾರೆ. ರೈಲಿನಲ್ಲಿ ಚಿಕ್ಕಿ ಮಾರುತ್ತಿದ್ದ ಅಂಧ ಅಪ್ಪ- ಮಗನಿಗೆ ನಾರಾಯ ನೇತ್ರಾಲಯದಲ್ಲಿ ಅಮೃತಬಿಂದು
ಎಂಬ ಸಂಸ್ಥೆ ನೆರವಿನ ಮೂಲಕ ಚಿಕಿತ್ಸೆ ಕೊಡಿಸಿ, ಕಣ್ಣು ಕಾಣುವಂತೆ ಮಾಡಿಸಿದ್ದಾರೆ. ಅಂದಹಾಗೆ, ಪುಷ್ಪಾ
ಈ ಮಾರ್ಚ್ ತಿಂಗಳಿನಲ್ಲಿ 7 ವಿಕಲಾಂಕಚೇತನರಿಗೆ ಪರೀಕ್ಷೆ ಬರೆಯಲಿದ್ದಾರೆ!
ಪುಷ್ಪಪ್ರಿಯಾ ಇಮೇಲ್ ಸಂಪರ್ಕ: [email protected]
ಅಂಧರು ನಮಗಿಂತ ಚುರುಕು ಅಂಧ ವಿದ್ಯಾರ್ಥಿಗಳು ನಮಗಿಂತಲೂ ಸಾಕಷ್ಟು ಬುದಿಟಛಿವಂತರಾಗಿರುತ್ತಾರೆ ಎಂಬುದಕ್ಕೆ ಹರ್ಷಿತಾ ಎಂಬಾಕೆಯನ್ನು ಉದಟಛಿರಿಸುತ್ತಾರೆ ಪ್ರಿಯಾ. ಹರ್ಷಿತಾ ಬಿ.ಕಾಂ.ನ ಪರೀಕ್ಷೆ ಬರೆಯುವಾಗ, ಪ್ರತೀ ಪೂರ್ಣವಿರಾಮ, ಅಲ್ಪವಿರಾಮ, ಇತರೆ ಸೂಚಕಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಳಂತೆ. “ಬರೆದ ಉತ್ತರವನ್ನು ಆಕೆಗೆ ಮತ್ತೆ ಓದಿ ಓದಿ ಹೇಳಬೇಕಿತ್ತು. 28 ಪುಟ ಬರೆದ ಮೇಲೂ 8 ಹೆಚ್ಚುವರಿ ಶೀಟ್‌ಗಳಲ್ಲಿ ಉತ್ತರ
ಬರೆದಳು’ ಎನ್ನುತ್ತಾರೆ ಪ್ರಿಯಾ.
ನನಗೆ ಪರೀಕ್ಷೆ ಬರೆಯುವ ಮುನ್ನ ಪುಷ್ಪಾ ಅವರು ಬೆಳಗ್ಗೆ ಇನ್ನೊಬ್ಬರಿಗೆ ಪರೀಕ್ಷೆ ಬರೆದಿದ್ದರು. ಅನೇಕ ಸೆð„ಬ್‌ಗಳಿಗೆ ನಮ್ಮಂಥ ಅಂಧ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗೆ ಉತ್ತರಿಸಲು ತಾಳ್ಮೆಯೇ ಇರುವುದಿಲ್ಲ. ಪುಷ್ಪಾ ಕೊನೆಯ ತನಕ ನನಗೆ ಸ್ಪಂದಿಸಿದರು.
– ಗಣಪತಿ ಸಿ.ಎ., ಎಂ.ಎನ್.ಸಿ. ಉದ್ಯೋಗಿ
ಲಿಪಕಾರಿಣಿ ಆಗುವುದಕ್ಕೆ ತಾಳ್ಮೆ ಮುಖ್ಯ ಸತತ 2 ತಾಸು ಅವರೇ ನಾವಾಗಬೇಕು. ಅನೇಕ ಸಲ ನನಗೆ ಉತ್ತರ ಗೊತ್ತಿದ್ದರೂ, ಅದನ್ನು ನಾನು ಹೇಳುವುದಿಲ್ಲ. ಏಕೆಂದರೆ, ಅದು ಅವರ ಬದುಕಿನ ಪರೀಕ್ಷೆ.
– ಪುಷ್ಪ ಪ್ರಿಯಾ, ಲಿಪಿಕಾರಿಣಿ
– ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.