ನಗರದಲ್ಲಿ ನಾಳೆ ಅಪರಂಜಿ ಹಬ್ಬ
Team Udayavani, Mar 31, 2018, 12:01 PM IST
ಬೆಂಗಳೂರು: ಅಪರಂಜಿ ಮಾಸಪತ್ರಿಕೆ ಏಪ್ರಿಲ್1 ರಂದು ನಗರದಲ್ಲಿ “ಅಪರಂಜಿ ಹಬ್ಬ 2018’ಅನ್ನು ಹಮ್ಮಿಕೊಂಡಿದೆ. ಬೆಳಗ್ಗೆ 10 ಗಂಟೆಗೆ ಭಾರತೀಯ ವಿದ್ಯಾಭವನದ ಖೀಂಚಾ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ ಉದ್ಘಾಟಿಸಲಿದ್ದಾರೆ.
ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು,ನಿವೃತ್ತ ಪೊಲೀಸ್ ಅಧಿಕಾರಿ ಡಿ.ವಿ.ಗುರು ಪ್ರಸಾದ್ ಅವರು ಅರಪಂಜಿ ವಿಶೇಷಾಂಕವನ್ನು ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಪರಂಜಿ ಪತ್ರಿಕೆಯ ಸಂಪಾದಕ ಎಂ. ಶಿವಕುಮಾರ್, ಅಪರಂಜಿ ಪತ್ರಿಕೆ ನಡೆದು ಬಂದದಾರಿ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.
ಅಪರಂಜಿ ಲೇಖಕಿಯರ ಬದುಕು ಬರಹ ಕುರಿತ ಕಾರ್ಯಕ್ರಮದಲ್ಲಿ ವಾಣಿ ಸುರೇಶ್, ಕುಮುದ ಪುರುಷೋತ್ತಮ್, ಶ್ಯಾಮಲ ರವಿಶಂಕರ್, ಸಹನಾ ಪ್ರಸಾದ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಹಾಸ್ಯ ಭಾಷಣಕಾರ ವೈ.ವಿ.ಗುಂಡೂರಾವ್ ಅವರು ಹಾಸ್ಯ ಮಧುರ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.