ರಕ್ತನಾಳ ಹೆಪ್ಪುಗಟ್ಟುವಿಕೆ ತಡೆಗೆ ಉಪಕರಣ
Team Udayavani, Nov 30, 2018, 11:43 AM IST
ಬೆಂಗಳೂರು: ಕೋಮಾ ಸ್ಥಿತಿ ತಲುಪಿರುವ ರೋಗಿಗಳು ರಕ್ತನಾಳ ಹೆಪ್ಪುಗಟ್ಟುವಿಕೆ (ಡೀಪ್ ವೇಯ್ನ ಥ್ಯಾಂಬೋಸಿಸ್) ಸಮಸ್ಯೆಗೆ ಎದುರಾಗದಂತೆ ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ ಹಾಗೂ ನಿಮ್ಹಾನ್ಸ್ ಸಂಸ್ಥೆಗಳು ರೋಬೋಟಿಕ್ ಉಪಕರಣಗಳನ್ನು ಅಭಿವೃದ್ಧಿಪಡಿಸಿವೆ.
ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ವಿಜ್ಞಾನ ಇಲಾಖೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ “ಇನ್ನೋವೇಷನ್ ಅಂಡ್ ಇಂಪ್ಯಾಕ್ಟ್’ ಘೋಷವಾಕ್ಯದಡಿ ಗುರುವಾರ ಆರಂಭವಾದ ಮೂರು ದಿನಗಳ “ಬೆಂಗಳೂರು ಟೆಕ್ ಸಮಿಟ್’ ಕಾರ್ಯಕ್ರಮದಲ್ಲಿ ರೋಬೋಟಿಕ್ ಯಂತ್ರೋಪಕರಣಗಳು ಅನಾವರಣಗೊಂಡಿದ್ದು, ರಕ್ತನಾಳ ಹೆಪ್ಪುಗಟ್ಟುವಿಕೆ ತಡೆಯುವ ಉಪಕರಣಗಳು ಗಮನ ಸೆಳೆದವು.
ಅಪಘಾತ, ಪಾರ್ಶ್ವವಾಯು, ಮೆದುಳು ಜ್ವರ ಕಾಣಿಸಿಕೊಂಡ ಸಂದರ್ಭಗಳಲ್ಲಿ ರೋಗಿಗಳು ಕೋಮಾ ಸ್ಥಿತಿ ತಲುಪುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ಅರವಳಿಕೆ (ಅನಸ್ತೀಶಿಯಾ) ನೀಡುವ ವೇಳೆ ಯಡವಟ್ಟಾದರೂ ರೋಗಿಗಳು ಕೋಮಾ ಸ್ಥಿತಿ ತಲುಪುವ ಅಪಾಯವಿರುತ್ತದೆ. ರೋಗಿಗಳು ಕೋಮಾ ಸ್ಥಿತಿ ತಲುಪಿದಾಗ ಅವರ ಕೈ-ಕಾಲುಗಳಲ್ಲಿ ಚಲನೆ ಸ್ಥಗಿತಗೊಳ್ಳುತ್ತದೆ.
ಫಿಸಿಯೋ ಥೆರಪಿಸ್ಟ್‌ಗಳು ಚಿಕಿತ್ಸೆ ನೀಡಿದರೂ ಹೆಚ್ಚು ಸಮಯ ಕೈ-ಕಾಲುಗಳು ಒಂದೇ ಕಡೆ ಚಲನೆಯಿಲ್ಲದೆ ಇರುವುದರಿಂದ ರಕ್ತನಾಳ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಒಂದೊಮ್ಮೆ ರೋಗಿಯು ಕೋಮಾ ಸ್ಥಿತಿಯಿಂದ ಚೇತರಿಸಿಕೊಂಡರೂ, ಕೈ-ಕಾಲುಗಳ ಚಲನೆಯಿಲ್ಲದೆ ಕಾಣಿಸಿಕೊಳ್ಳುವ ರಕ್ತನಾಳ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಮತ್ತೆ ಆಸ್ಪತ್ರೆ ಸೇರಬೇಕಾಗುತ್ತದೆ.
ಅಂತಹ ರೋಗಿಗಳ ಅನುಕೂಲಕ್ಕಾಗಿ ಐಐಐಟಿ ಬೆಂಗಳೂರು ಹಾಗೂ ನಿಮ್ಹಾನ್ಸ್ ಸಂಸ್ಥೆಗಳ ಸರ್ಜಿಕಲ್ ಆಂಡ್ ಅಸಿಸ್ಟೀವ್ ರೋಬೋಟಿಕ್ಸ್ ಲ್ಯಾಬ್‌ನಲ್ಲಿ ರಕ್ತನಾಳ ಹೆಪ್ಪುಗಟ್ಟುವಿಕೆ ತಡೆಯುವ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೈಗಳಿಗೆ ಅಂತ್ರೋಮೆಟ್ರಿಕ್ ಅಸೆಸ್ಟೀವ್ ಎಲೆಕ್ಟ್ರೋಮೆಕಾನಿಕಲ್ ಡಿವೈಸ್ ಹಾಗೂ ಕಾಲುಗಳಿಗೆ ಡಿವಿಟಿ ಪ್ರೋಫಿಲ್ಯಾಕ್ಸಿಸ್ ಡಿವೈಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಮೆದುಳಿನ ಸಮಸ್ಯೆ ತಿಳಿಸುತ್ತೆ ಹೆಲ್ಮೆಟ್: ಸರ್ಕಾರದ ಸಹಯೋಗದಲ್ಲಿ ಮಷೀನ್ ಇಂಟಿಲಿಜೆನ್ಸ್ ಆಂಡ್ ರೋಬೋಟಿಕ್ಸ್ ಸೆಂಟರ್ ಸಂಸ್ಥೆ ಮೆದುಳಿನ ಸಮಸ್ಯೆಗಳನ್ನು ತಿಳಿಯುವ ಹೆಲ್ಮೆಟ್ ತಯಾರಿಸಿದ್ದು, ಈ ಹೆಲ್ಮೆಟ್ ಮೆದುಳಿನಲ್ಲಿರುವ ಎಲೆಕ್ಟ್ರಾನಿಕ್ ತರಂಗಗಳ ಆಧಾರದ ಮೇಲೆ ಮೆದುಳಿನ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಈ ಚಿತ್ರಗಳನ್ನು ಕಂಪ್ಯೂಟರ್‌ನಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಮೆದುಳಿನ ಯಾವ ಭಾಗದಲ್ಲಿ ತೊಂದರೆಯಾಗಿದೆ ಎಂಬುದು ಸುಲಭವಾಗಿ ತಿಳಿಯಲಿದ್ದು, ಇದರಿಂದಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.
ಉಪಕರಣಗಳು ಕಾರ್ಯನಿರ್ವಹಣೆ ಹೇಗೆ?: ಎರಡು ರೀತಿಯ ಉಪಕರಣಗಳನ್ನು ರೋಗಿಯ ಕೈ-ಕಾಲುಗಳಿಗೆ ಅವಳವಡಿಸಲಾಗುತ್ತದೆ. ಈ ರೋಬೋಟಿಕ್ ಉಪಕರಣಗಳು ವ್ಯಕ್ತಿಯ ಹೃದಯ ಬಡಿತಕ್ಕೆ ಅನುಗುಣವಾಗಿ ಕೈ-ಕಾಲುಗಳಿಗೆ ಚಲನೆ ನೀಡುತ್ತವೆ. ಜತೆಗೆ ರಕ್ತನಾಳ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುತ್ತವೆ. ಈ ಉಪಕರಣಗಳನ್ನು ಬಳಸಿದ ರೋಗಿಯು ಕೋಮಾದಿಂದ ಚೇತರಿಸಿಕೊಂಡ ನಂತರವೂ ಆರೋಗ್ಯವಾಗಿಬಹುದು ಎನ್ನುತ್ತಾರೆ ಐಐಐಟಿ ಬೆಂಗಳೂರು ಸಂಸ್ಥೆಯ ವ್ಯವಸ್ಥಾಪಕಿ ಕಲ್ಪನಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ
Indira canteen: ನಗರದಲ್ಲಿ ಶೀಘ್ರ ಹೊಸದಾಗಿ 50 ಇಂದಿರಾ ಕ್ಯಾಂಟೀನ್
ಸಿನಿಮೀಯವಾಗಿ ಮೊಬೈಲ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಬಿಬಿಎಂಪಿ ಮಾಜಿ ಕಾರ್ಪೋರೇಟರ್!
Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ
Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
ಸ್ಪೀಕರ್, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ
ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ
Rain: 5 ವಿದ್ಯುತ್ ನಿಗಮ ವ್ಯಾಪ್ತಿಯಲ್ಲಿ 156 ಕೋಟಿರೂ. ಸೌಕರ್ಯ ಹಾನಿ: ಕೆ.ಜೆ. ಜಾರ್ಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.