ಸಂಚಾರಕ್ಕೆ ಸಂಚಕಾರ ಬ್ಲಾಕ್‌ಸ್ಪಾಟ್‌ಗಳು!

ದಾರಿ ಯಾವುದಯ್ಯಾ ಸಂಚಾರಕೆ

Team Udayavani, Sep 21, 2019, 3:09 AM IST

sancharakke

ಬೆಂಗಳೂರು: ರಸ್ತೆ ಬದಿಯಲ್ಲಿ ಕಂಡುಬರುವ ಬ್ಲಾಕ್‌ ಸ್ಪಾಟ್‌ಗಳು ನಗರದ ಅಂದಗೆಡಿಸುತ್ತಿವೆ ಎಂದು ರಾಷ್ಟ್ರಮಟ್ಟದಲ್ಲಿ ಆಗಾಗ್ಗೆ ಸುದ್ದಿಯಾಗುವುದು ಮಾಮೂಲು. ಆದರೆ, ನಗರದ ಕೆಲವು ರಸ್ತೆಗಳೇ ಬ್ಲಾಕ್‌ಸ್ಪಾಟ್‌ಗಳಾಗಿವೆ. ಇವು ವಾಹನ ಸವಾರರ ಜೀವಕ್ಕೇ ಎರವಾಗಿವೆ!

ನಗರದಾದ್ಯಂತ ಇಂತಹ 54 ಬ್ಲಾಕ್‌ಸ್ಪಾಟ್‌ಗಳನ್ನು ಸಂಚಾರ ಪೊಲೀಸರು ಗುರುತಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆನ್ನಲ್ಲೇ ಬಲಿಯಾಗುವವರ ಸಂಖ್ಯೆಯೂ ಏರಿಕೆ ಕ್ರಮದಲ್ಲಿ ಸಾಗಿದೆ. ಸಂಚಾರದಟ್ಟಣೆ ನಿರ್ವಹಣೆ ಜತೆಗೆ ಈ ಸಾವು-ನೋವಿಗೆ ಕಡಿವಾಣ ಹಾಕುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

ಮೂರು ವರ್ಷಗಳಲ್ಲಿ 170ಕ್ಕೂ ಅಧಿಕ ಮಂದಿ ಈ ಬ್ಲಾಕ್‌ ಸ್ಪಾಟ್‌ಗಳಲ್ಲಿ ಬಲಿಯಾಗಿದ್ದಾರೆ. ಇವು ವಾಹನ ಸವಾರರ ಪಾಲಿಗೆ ಅಕ್ಷರಶಃ ಮೃತ್ಯುಕೂಪಗಳಾಗಿವೆ. ಸ್ವತಃ ಸಂಚಾರ ಪೊಲೀಸರು ಈ ಮಾಹಿತಿ ನೀಡಿದರು. ಸತತ ಮೂರು ವರ್ಷಗಳಲ್ಲಿ 500 ಮೀಟರ್‌ ರಸ್ತೆಯಲ್ಲಿ ಮೂರು ಸಾವು ಅಥವಾ ಹತ್ತಕ್ಕೂ ಹೆಚ್ಚು ಸಾಮಾನ್ಯ ರಸ್ತೆ ಅಪಘಾತಗಳು ಸಂಭವಿಸಿದರೆ, ಅಂತಹ ರಸ್ತೆ ಅಥವಾ ಜಂಕ್ಷನ್‌ ಅನ್ನು ಬ್ಲಾಕ್‌ ಸ್ಪಾಟ್‌ ಎಂದು ಗುರುತಿಸಲಾಗುತ್ತದೆ.

ನಗರದ 44 ಸಂಚಾರ ಠಾಣೆಗಳ ಪೈಕಿ 21 ಸಂಚಾರ ಪೊಲೀಸ್‌ ಠಾಣೆಗಳಲ್ಲಿ 2019ರಲ್ಲಿ 54 ಸ್ಪಾಟ್‌ಗಳಿವೆ ಎಂದು ಸರ್ವೆಯಿಂದ ತಿಳಿದುಬಂದಿದೆ. ಈ ಸ್ಥಳಗಳಲ್ಲಿ ಸಾವು-ನೋವು ಉಂಟಾಗಲು ಹಾಳಾದ ರಸ್ತೆ, ಗುಂಡಿಗಳು ಬಿದ್ದಿರುವುದು, ವಿದ್ಯುತ್‌ ದೀಪ ಇಲ್ಲದಿರುವುದು, ಫ‌ಲಕಗಳು ಇಲ್ಲದಿರುವುದು, ಅವೈಜ್ಞಾನಿಕ ತಿರುವು, ರಸ್ತೆ ಹಂಪ್‌ ಮತ್ತು ಪಾದಚಾರಿಗಳ ಅಧಿಕ ಓಡಾಟ ಸೇರಿದಂತೆ ಹಲವು ಕಾರಣಗಳಿಗಾಗಿ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎನ್ನಲಾಗಿದೆ.

ಬ್ಲಾಕ್‌ ಸ್ಪಾಟ್‌ಗಳೊಂದಿಗೆ ಅದಕ್ಕೆ ಸ್ಪಷ್ಟ ಕಾರಣಗಳನ್ನು ಉಲ್ಲೇಖೀಸಿ ಬಿಬಿಎಂಪಿಗೆ ನೀಡಲಾಗುತ್ತದೆ. ನಂತರ ಬಿಬಿಎಂಪಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿ ವರ್ಷ ಬ್ಲಾಕ್‌ ಸ್ಪಾಟ್‌ಗಳ ಬಗ್ಗೆ ಸಮೀಕ್ಷೆ ನಡೆಸಿ ಬಿಬಿಎಂಪಿ ಸಂಚಾರ ವಿಭಾಗಕ್ಕೆ ನೀಡಲಾಗುತ್ತದೆ. ಬಳಿಕ ಸಂಬಂಧಿಸಿದ ಅಧಿಕಾರಿಗಳು ವಿದ್ಯುತ್‌ ದೀಪ ಅಥವಾ ಅಪಘಾತ ವಲಯ, ನಿಧಾನವಾಗಿ ಚಲಿಸಿ ಎಂಬ ಸೂಚನಾ ಫ‌ಲಕಗಳನ್ನು ಹಾಕಿ ಅಗತ್ಯ ಕ್ರಮಕೈಗೊಳ್ಳುತ್ತಾರೆ. ಆದರೂ ಪಟ್ಟಿಯಲ್ಲಿ ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಅದಕ್ಕೆ ಕಾರಣ ಕಳಪೆ ರಸ್ತೆ ಕಾಮಗಾರಿ ಕೂಡ ಇರಬಹುದು.

ಇಂತಹ ರಸ್ತೆಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ವಾಹನ ಸವಾರರು ಎಚ್ಚೆತ್ತುಕೊಳ್ಳುತ್ತಿಲ್ಲ. 2019ರ ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಶೇ. 70ರಷ್ಟು ಜಾಗಗಳು ಪುನರಾವರ್ತಿತ ಅಂದರೆ ಪ್ರತಿ ವರ್ಷ ಸೇರ್ಪಡೆ ಆಗುವಂತಹವು ಎಂದು ಸಂಚಾರ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಬ್ಲಾಕ್‌ಸ್ಪಾಟ್‌ಗಳು ಯಾವುವು?: ಮಡಿವಾಳದ ಹೊಸೂರು ಮುಖ್ಯರಸ್ತೆ, ರೂಪೇನ ಅಗ್ರಹಾರ ಜಂಕ್ಷನ್‌, ಹುಳಿಮಾವು ಸಿಂಗಸಂದ್ರ ಬಸ್‌ ನಿಲ್ದಾಣ, ನಾಗನಾಥಪುರ ಜಂಕ್ಷನ್‌, ಹೊಸೂರು ಮುಖ್ಯರಸ್ತೆ, ಕೋನಪ್ಪನ ಅಗ್ರಹಾರ, ವೀರಸಂದ್ರ ಜಂಕ್ಷನ್‌, ನೈಸ್‌ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ಟೋಲ್‌, ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌, ಐಟಿಪಿಎಲ್‌ ಮುಖ್ಯರಸ್ತೆ, ಕಾಟೈನಡ್‌ ಯಾರ್ಡ್‌ ಎಂಟ್ರಿ,

ವರ್ತೂರು ಕೆರೆ ರಸ್ತೆ, ಏರ್‌ಪೋರ್ಟ್‌ ಸಮೀಪದ ಹೊರವರ್ತುಲ ರಸ್ತೆ ಬಳಿಯ ಕಲಾಮಂದಿರ, ಜೆ.ಪಿ. ಮಾರ್ಗನ್‌, ಇಬ್ಬಲೂರು ಜಂಕ್ಷನ್‌, ಭೀಮಾ ಜ್ಯುವೆಲ್ಲರ್, ಅರಣ್ಯ ಕಚೇರಿ ಸಮೀಪ, ಕ್ರೋಮ ಶೋರೂಂ, ಕೋರಮಂಗಲ ಒಳವರ್ತುಲ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ, ಹಳೇ ಮದ್ರಾಸ್‌ ರಸ್ತೆ, ಭಟ್ಟರಹಳ್ಳಿ, ಎಂ.ಡಿ. ಪುರ ವರ್ತುಲ ರಸ್ತೆ, ಬಿ. ನಾರಾಯಣಪುರ, ರಾಮಮೂರ್ತಿನಗರ ವರ್ತುಲ ರಸ್ತೆ,

ಎಎಸ್‌ಆರ್‌ ಕಲ್ಯಾಣಮಂಟಪ, ಹಳೇ ಮದ್ರಾಸ್‌ ರಸ್ತೆ, ಕೆ.ಆರ್‌. ಪುರ, ಟ್ಯಾಂಕ್‌ಬಂಡ್‌ ರಸ್ತೆ, ಜಿ.ಟಿ. ರಸ್ತೆ (ಶಾಂತಲಾ ಜಂಕ್ಷನ್‌ನಿಂದ ಸಂಗೊಳ್ಳಿ ರಾಯಣ್ಣ ವೃತ್ತ), ಚಾಮರಾಜಪೇಟೆ ಮುಖ್ಯರಸ್ತೆ, ಮೈಸೂರು ರಸ್ತೆ ಬಿಜಿಎಸ್‌ ಮೇಲ್ಸೇತುವೆ, ಮಾಗಡಿ ರಸ್ತೆ ಜಂಕ್ಷನ್‌ (ಪ್ರಸನ್ನ ಜಂಕ್ಷನ್‌ನಿಂದ ಟೋಲ್‌ಗೇಟ್‌ ಜಂಕ್ಷನ್‌), ಮೈಸೂರು ರಸ್ತೆ ವರ್ತುಲ ರಸ್ತೆ ಜಂಕ್ಷನ್‌, ಸುವರ್ಣ ಲೇಔಟ್‌ ಜಂಕ್ಷನ್‌,

ಮಾಗಡಿ ಮುಖ್ಯರಸ್ತೆ, ಆರ್‌.ವಿ. ಕಾಲೇಜು (ಮೈಸೂರು ರಸ್ತೆ), ಮೈಲಸಂದ್ರ ಜಂಕ್ಷನ್‌, ಮಧು ಪೆಟ್ರೋಲ್‌ ಬಂಕ್‌ ಜಂಕ್ಷನ್‌, ದೊಡ್ಡಬೆಲೆ ಜಂಕ್ಷನ್‌, ರಾಷ್ಟ್ರೀಯ ಹೆದ್ದಾರಿ-4 ಆರ್‌ಎಂಸಿ ಯಾರ್ಡ್‌, ನವಯುಗ ಟೋಲ್‌, ಚೊಕ್ಕಸಂದ್ರ ಜಂಕ್ಷನ್‌, ಅಣ್ಣಪ್ಪ ಜಂಕ್ಷನ್‌, ಮಿನರ್ವ ವೃತ್ತ, ಜೆ.ಪಿ. ನಗರ 6ನೇ ಹಂತ, 15ನೇ ಕ್ರಾಸ್‌ ಮುಖ್ಯರಸ್ತೆ, ಪುರುವಂಕರ ಅಪಾರ್ಟ್‌ಮೆಂಟ್‌ ಬಳಿಯ ನೈಸ್‌ ರಸ್ತೆ,

ನಾಗೇಗೌಡನ ಪಾಳ್ಯ ನೈಸ್‌ ರಸ್ತೆ, ಪೆಸಿಟ್‌ ಕಾಲೇಜು, ಭದ್ರಪ್ಪ ಲೇಔಟ್‌, ಯೋಗೇಶ್ವರನಗರ ಕ್ರಾಸ್‌, ಎಂವಿಐಟಿ ಜಂಕ್ಷನ್‌, ಬೆಟ್ಟಹಲಸೂರು ಜಂಕ್ಷನ್‌, ಮೀನುಕುಂಟೆ ಕ್ರಾಸ್‌, ಕಾಡಿಗನಹಳ್ಳಿ, ಸಾದರಹಳ್ಳಿ ಜಂಕ್ಷನ್‌, ಕನ್ನಮಂಗಲಪಾಳ್ಯ ಜಂಕ್ಷನ್‌, ಜಕ್ಕೂರು ಏರೋಡ್ರಮ್‌ ಮೇಲ್ಸೇತುವೆ, ಯಲಹಂಕ ಬೈಪಾಸ್‌ (ಕಾಫಿ ಡೇ ಬಳಿ), ಪಾಲನಹಳ್ಳಿ ಗೇಟ್‌, ಐಎಜಿ ಈ ಸ್ಥಳಗಳನ್ನು ಬ್ಲಾಕ್‌ ಸ್ಪಾಟ್‌ಗಳೆಂದು ಗುರುತಿಸಲಾಗಿದೆ.

* ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Exam

VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ

highcourt

ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್‌ ಸೂಚನೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.