ಟ್ರಾಫಿಕ್‌ಗೆ “ಜೀರೋ ಟಾಲರೆನ್ಸ್’ ಲಗಾಮು
Team Udayavani, Mar 28, 2017, 12:41 PM IST
ಬೆಂಗಳೂರು: ನಗರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ, ಅಪಘಾತಗಳನ್ನು ತಡೆಗಟ್ಟಲು ಸಂಚಾರ ಪೊಲೀಸರು ನಗರದ ಪ್ರಮುಖ ವೃತ್ತಗಳನ್ನು “ಜೀರೋ ಟಾಲರೆನ್ಸ್’ ಜಂಕ್ಷನ್‌ಗಳನ್ನಾಗಿ ಪರಿವರ್ತಿಸುತ್ತಿದ್ದಾರೆ.
ಈಗಾಗಲೇ ಪೂರ್ವ ಸಂಚಾರ ವಿಭಾಗದಲ್ಲಿ 11 ಕಡೆಗಳಲ್ಲಿ ಜೀರೋ ಟಾಲೆರೆನ್ಸ್ ಜಂಕ್ಷನ್‌ಗಳನ್ನು ರೂಪಿಸಲಾಗಿದ್ದು, ನಿತ್ಯ ಒಂದೂವರೆ ಸಾವಿರದಂತೆ ಇದುವರೆಗೂ (ಜನವರಿಯಿಂದ) ಸಂಚಾರ ನಿಯಮ ಉಲ್ಲಂ ಸಿದ 75 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಪಶ್ಚಿಮ ಸಂಚಾರ ವಿಭಾಗದಲ್ಲಿ 10 ಮತ್ತು ಮತ್ತು ಉತ್ತರ ಸಂಚಾರ ವಿಭಾಗದಲ್ಲಿ 5 ಜಂಕ್ಷನ್‌ಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ ಕಾಮಗಾರಿ ಕೂಡ ನಡೆಯುತ್ತಿದೆ.
ಈ ಎರಡು ವಿಭಾಗಗಳಲ್ಲಿ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ನಿತ್ಯ ಸಾವಿರಾರು ಸಂಚಾರ ನಿಯಮ ಉಲ್ಲಂಘಟನೆ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಈ ಮೂಲಕ ನಿಯಮ ಉಲ್ಲಂಘನೆ ಮಾಡುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಪೂರ್ವ ಮತ್ತು ಪಶ್ಚಿಮ ವಿಭಾಗಗದಲ್ಲಿ ಈಗಾಗಲೇ 75 ಲಕ್ಷ ಮೊತ್ತ ರೂಪಾಯಿ ದಂಡ ವಿಧಿಸಿದ್ದು, ಉತ್ತರ ವಿಭಾಗದ ಪೊಲೀಸರು ಕಳೆದೊಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಡಿಸಿಪಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಜೀರೋ ಟಾಲರೆನ್ಸ್ ಅಂದ್ರೆ ಏನು?: ನಗರದಲ್ಲಿ ಅತಿ ಹೆಚ್ಚು ದಟ್ಟಣೆ ಇರುವ ಜಂಕ್ಷನ್‌ಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ವೃತ್ತಗಳಲ್ಲಿ ಜೀಬ್ರಾ ಕ್ರಾಸಿಂಗ್ ಮಾದರಿಯಲ್ಲೇ ಅರಶಿನ ಬಣ್ಣದ ಚೌಕಾಕೃತಿಗಳನ್ನು ಚಿತ್ರಿಸಲಾಗುತ್ತದೆ. ಈ ಚೌಕಗಳ ಮೇಲೆ ಯಾವುದೇ ವಾಹನಗಳೂ ನಿಲ್ಲುವಂತಿಲ್ಲ. ನಿಂತರೆ ದಂಡ ವಿಧಿಸಲಾಗುತ್ತದೆ.
ಉದಾಹರಣೆಗೆ ನಾವು ಒಂದು ಮಾರ್ಗದಲ್ಲಿ ವಾಹನದಲ್ಲಿ ಚಲಿಸುತ್ತಿರುತ್ತೇವೆ. ರೆಡ್ ಸಿಗ್ನಲ್ ಬಂದ ಕೂಡಲೇ ವಾಹನ ನಿಲ್ಲಿಸುತ್ತೇವೆ. ನಂಬರ್ ಕೌಂಟಿಂಗ್ ಪೂರ್ಣಗೊಂಡು ಇನ್ನೇನು ಗ್ರೀನ್ ಸಿಗ್ನಲ್ ಬೀಳುತ್ತದೆ. ಆದರೆ, ಮುಂದೆ ಸಾಗಬೇಕಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುತ್ತದೆ. ಈ ಸಂದರ್ಭದಲ್ಲಿ ಗ್ರೀನ್ ಸಿಗ್ನಲ್ ಬಂದರೂ ನಾವು ಮುಂದೆ ಹೋಗುವಂತಿಲ್ಲ. ಒಂದು ವೇಳೆ ಮುಂದೆ ಹೋಗಿ, ಅಲ್ಲಿರುವ ಅರಿಶಿಣದ ಪಟ್ಟಿ ಮೇಲೆ ವಾಹನ ನಿಂತರೆ ದಂಡ ಖಚಿತ.
ನಿಯಮ ಉಲ್ಲಂ ಸುವವರನ್ನು ಹಿಡಿಯಲೆಂದೇ ಪ್ರತಿ ಜೀರೋ ಟಾಲರೆನ್ಸ್ ಜಂಕ್ಷನ್‌ಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದು, ಸಂಚಾರ ನಿಯಮ ಉಲ್ಲಂ ಸಿದ ವಾಹನಗಳ ವಿರುದ್ಧ ದಂಡ ವಿಧಿಸಲಿದ್ದಾರೆ. ಅಷ್ಟೇ ಅಲ್ಲ ಈ ದೃಶ್ಯ ಅಲ್ಲಿನ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗುತ್ತದೆ.
ಎಲ್ಲೆಲ್ಲಿ ಜೀರೋ ಟಾಲರೆನ್ಸ್ ?
ಕೆ.ಆರ್.ರಸ್ತೆ, ಕಬ್ಬನ್ ರಸ್ತೆ, 110 ಅಡಿ ರಸ್ತೆ , ಹಳೇ ಮದ್ರಾಸ್ ರಸ್ತೆ, ಟ್ರಿನಿಟಿ ಜಂಕ್ಷನ್, ಬಸವೇಶ್ವರ ವೃತ್ತ, ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿ, ಶಿವಾನಂದ ವೃತ್ತ, ಎನ್.ಆರ್.ಜಂಕ್ಷನ್, ಕಾವೇರಿ ಆರ್ಟ್ಸ್ ಮತ್ತು ಕ್ರಾಫ್ಟ್ ಜಂಕ್ಷನ್, ಊರ್ವಶಿ ಜಂಕ್ಷನ್, ಸೋನಿ ವರ್ಲ, ಇಸ್ರೋ ಜಂಕ್ಷನ್. ಮೈಸೂರು ಬ್ಯಾಂಕ್ ವೃತ್ತ, ಸುಮ್ಮನಹಳ್ಳಿ, ಯಶವಂತಪುರ, ತುಮಕೂರು ರಸ್ತೆ,
ಆರ್.ಟಿ.ನಗರ ಠಾಣೆ, ಹೆಬ್ಟಾಳ ವೃತ್ತ, ಯಲಹಂಕ ಠಾಣೆ, ಚಿಕ್ಕಜಾಲ ನಾರಾಯಣಪುರ ವೃತ್ತ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ವಿಜಯಪುರ ಜಂಕ್ಷನ್. ಹೀಗೆ ಪ್ರತಿ ಜಂಕ್ಷನ್ ನಿರ್ಮಿಸಲು 1 ಲಕ್ಷಕ್ಕೂ ಅಧಿಕ ವೆಚ್ಚ ವ್ಯಯಿಸಲಾಗುತ್ತಿದೆ. ಪೂರ್ವ ವಲಯದ 11 ಜಂಕ್ಷನ್‌ಗಳಿಗೆ 18 ಲಕ್ಷ ವೆಚ್ಚವಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ವಿಶೇಷ ತಂಡ
ಸದ್ಯ ಪೂರ್ವ ವಲಯ ಸಂಚಾರ ವಿಭಾಗದ 11 ಜಂಕ್ಷನ್‌ಗಳಲ್ಲಿಯೂ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಈ ತಂಡವನ್ನು ಬೇರೆ ಯಾವುದೇ ಕೆಲಸಕ್ಕೆ ನಿಯೋಜಿಸುವುದಿಲ್ಲ. ಒಬ್ಬ ಎಎಸ್‌ಐ, ಪಿಎಸ್‌ಐ ಮತ್ತು ಕಾನ್‌ಸ್ಟೆàಬಲ್ ಸೇರಿ ಒಟ್ಟು ಮೂರು ಮಂದಿ ತಂಡದಲ್ಲಿದ್ದಾರೆ. ಈ ತಂಡ ಖಾಯಂ ಆಗಿ ನಿಗದಿತ ಜಂಕ್ಷನ್‌ಲ್ಲಿ ಕರ್ತವ್ಯ ನಿರ್ವಹಿಸಬೇಕು. ಸಂಚಾರ ನಿಯಮ ಉಲ್ಲಂ ಸಿದ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
ಜೀರೋ ಟಾಲರೆನ್ಸ್ ಜಂಕ್ಷನ್ ನಿರ್ಮಿಸುವುದರಿಂದ ವಾಹನ ಸವಾರರಲ್ಲಿ ಜಾಗೃತಿ ಮೂಡುತ್ತದೆ. ಜತೆಗೆ ನಗರದ ಸಂಚಾರ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸುವ ಉದ್ದೇಶ ಹೊಂದಿದ್ದೇವೆ. ಸದ್ಯ ಮೂರು ವಲಯಗಳ ಕೆಲವೆಡೆ ಮಾತ್ರ ಜಂಕ್ಷನ್ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಪ್ರಮುಖ ವೃತ್ತಗಳಲ್ಲೂ ಈ ವ್ಯವಸ್ಥೆ ಬರಲಿದೆ.
– ಹಿತೇಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ ವಿಭಾಗ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.