ಸಂಚಾರ ಪೊಲೀಸರ ಸ್ವಚ್ಛತಾ ಕಾರ್ಯ
Team Udayavani, Jan 7, 2019, 6:56 AM IST
ಬೆಂಗಳೂರು: ಇಷ್ಟು ದಿನ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದ ನಗರದ ಸಂಚಾರ ಪೊಲೀಸರು ಭಾನುವಾರ ಪೊರಕೆ, ಗುದ್ದಲಿ, ಹಳೇ ಬಟ್ಟೆಗಳನ್ನು ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. “ಜನಸ್ನೇಹಿ’ ಪೊಲೀಸ್ ಆಗುವ ನಿಟ್ಟಿನಲ್ಲಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಸೂಚನೆ ಮೇರೆಗೆ ನಗರದ 44 ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಭಾನುವಾರ ತಮ್ಮ ಠಾಣೆ ಒಳ ಮತ್ತು ಹೊರ ಆವರಣಗಳನ್ನು ಸ್ವಚ್ಛಗೊಳಿಸಿದರು.
ಅಲ್ಲದೆ, ರಸ್ತೆಗಳಲ್ಲಿರುವ ಸೂಚನಾ ಫಲಕಗಳ ಸ್ವಚ್ಛತೆ, ಗುಂಡಿ ಮುಚ್ಚುವುದು, ಡಿವೈಡರ್‌ನಲ್ಲಿ ಬೆಳೇದ ಗಿಡ ತೆರವು, ಸೂಚನಾ ಫಲಕಗಳ ದುರಸ್ತಿ, ಸಿಗ್ನಲ್ ಲೈಟ್‌ಗಳ ಪರಿಶೀಲನೆ ಮಾಡಿದರಲ್ಲದೆ, ಠಾಣೆಗಳ ಆವರಣ ಹಾಗೂ ಮೇಲ್ಚಾವಣಿ ಮೇಲೆ ಬಹಳ ವರ್ಷಗಳಿಂದ ಬಿದ್ದಿದ್ದ ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಿದರು. ಠಾಣೆಗಳಲ್ಲಿರುವ ಶೌಚಾಲಯಗಳನ್ನು ತಾವೇ ಶುಚಿಗೊಳಿಸಿದರು.
ವಾಹನಗಳ ವಿಲೇವಾರಿಗೆ ಕ್ರಮ: ನಗರದ ಎಲ್ಲ 44 ಸಂಚಾರ ಠಾಣೆಗಳ ಆವರಣದಲ್ಲಿರುವ ಅಪರಾಧ ಪ್ರಕರಣಗಳಲ್ಲಿ ಪತ್ತೆಯಾದ ನೂರಾರು ವಾಹನಗಳ ವಿಲೇವಾರಿಗೆ ಶೀಘ್ರವೇ ಕ್ರಮಕೈಗೊಳ್ಳಲಾಗುವುದು. ಅಪರಾಧ ಕೃತ್ಯಗಳಲ್ಲಿ ಬಳಕೆಯಾದ ವಾಹನಗಳನ್ನು ಪ್ರಕರಣ ವಿಚಾರಣೆ ಮುಗಿದ ಬಳಿಕ ವಾರಸುದಾರರಿಗೆ ಹಿಂದಿರುಗಿಸುವ ಬಗ್ಗೆ ಆಯಾ ಠಾಣೆ ಇನ್‌ಸ್ಪೆಕ್ಟ್ರ್‌ಗಳಿಗೆ ಸೂಚಿಸಲಾಗಿದೆ.
ಜತೆಗೆ ಬಹಳ ವರ್ಷಗಳಿಂದ ಇರುವ ವಾಹನಗಳನ್ನು ಕೋರ್ಟ್ ಸೂಚನೆ ಮೇರೆಗೆ ಹರಾಜು ಹಾಕಲಾಗುವುದು ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಸ್ವಚ್ಛತಾ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್, ಕೆಲ ದಿನಗಳ ಹಿಂದೆ ನಗರದ ಎಲ್ಲಾ ಸಂಚಾರ ಠಾಣೆಗಳಿಗೆ ಭೇಟಿ ನೀಡಿದಾಗ, ಆವರಣದಲ್ಲಿ ಅನೈರ್ಮಲ್ಯ ಕಂಡು ಬಂದಿತ್ತು.
ಈ ಹಿನ್ನೆಲೆಯಲ್ಲಿ ಹೊಸವರ್ಷದ ಮೊದಲ ಭಾನುವಾರ ಎಲ್ಲಾ ಠಾಣೆಗಳ ಒಳ ಮತ್ತು ಹೊರ ಆವರಣ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿತ್ತು. ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.