![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jan 2, 2023, 10:15 AM IST
ಬೆಂಗಳೂರು: ಮದ್ಯದ ಅಮಲಿನಲ್ಲಿ ಕಟ್ಟಡದಿಂದ ಮತ್ತೂಂದ ಕಟ್ಟಡ ಮೇಲೆ ಜಿಗಿಯಲು ಯತ್ನಿಸಿದ ಯುವಕನೊಬ್ಬ 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಒಡಿಶಾ ಮೂಲದ ಬಪ್ಪಿ(29) ಮೃತ ಕಾರ್ಮಿಕ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಬಪ್ಪಿ ಕಾಮಾಕ್ಷಿಪಾಳ್ಯದಕೊಟ್ಟಿಗೇಪಾಳ್ಯದ ಕಾಟನ್ ಬ್ಯಾಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.ಪಕ್ಕದ ಕಟ್ಟಡದಲ್ಲಿರುವ ಬಾಡಿಗೆ ಮನೆಯಲ್ಲಿ ಸ್ನೇಹಿತರ ಜತೆ ವಾಸವಾಗಿದ್ದ.
ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಹೋಗಲು ತಮ್ಮ ಮನೆಯ ಕಿಟಕಿಯನ್ನು ತೆಗೆದು, 3 ಅಡಿ ಅಂತರ ಇರುವಪಕ್ಕದ ಕಟ್ಟಡಕ್ಕೆ ನಿತ್ಯ ಜೀವ ಭಯದಲ್ಲೇದಾಟುತ್ತಿದ್ದರು. ಹೊಸವರ್ಷ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಬೇರೆಡೆ ಸ್ನೇಹಿತರ ಜತೆ ಪಾರ್ಟಿ ಮಾಡಿಕೊಂಡು ಬಂದಿದ್ದ ಬಪ್ಪಿ, ಮನೆ ಪಕ್ಕದ ಕಟ್ಟಡದ ಮೇಲೆ ಸ್ನೇಹಿತರು ಪಾರ್ಟಿಗೆ ಕೇಕ್, ಮದ್ಯದ ಬಾಟಲಿಗಳನ್ನು ತಂದು ಸಿದ್ಧತೆ ನಡೆಸಿದ್ದರು.
ಮದ್ಯದ ಅಮಲಿನಲ್ಲಿ ಬಂದ ಬಪ್ಪಿ, ರಾತ್ರಿ 11 ಗಂಟೆ ಸುಮಾರಿಗೆಮನೆಯಿಂದ ಪಕ್ಕದ ಕಟ್ಟಡದ ಟೆರೆಸ್ ದಾಟಲು ಮನೆಯ ಕಿಟಕಿ ಮೂಲಕ ದಾಟಲು ಮುಂದಾಗಿದ್ದಾನೆ. ಈ ವೇಳೆ ಆಯತಪ್ಪಿ ಕೆಳಗೆಬಿದ್ದು, ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.