ವೈಮಾನಿಕ ಪ್ರದರ್ಶನಕ್ಕೆ ಸಂಚಾರ ಮಾರ್ಗ ಬದಲು
Team Udayavani, Feb 19, 2019, 6:41 AM IST
ಬೆಂಗಳೂರು: “ವೈಮಾನಿಕ ಪ್ರದರ್ಶನ 2019’ರ ವೀಕ್ಷಣೆಗೆ ಲಕ್ಷಾಂತರ ಸಾರ್ವಜನಿಕರು, ಗಣ್ಯರು ಮತ್ತು ಅತೀಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಲವಡೆ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ.
ಈಶಾನ್ಯ ವಿಭಾಗ ವ್ಯಾಪ್ತಿಯ ಹೆಬ್ಟಾಳ ಮೇಲ್ಸೇತುವೆಯಿಂದ ವಾಯು ನೆಲೆ ಕೇಂದ್ರದವರೆಗೆ ಹಾಗೂ ವಾಯು ನೆಲೆಯ ಸುತ್ತ-ಮುತ್ತ ರಸ್ತೆಗಳಾದ ಹುಣಸಮಾರನಹಳ್ಳಿ, ಸುಗ್ಗಟ್ಟ ರಸ್ತೆ, ನಾಗೇನಹಳ್ಳಿ ಗೇಟ್, ಗಂಟಿಗಾನಹಳ್ಳಿ, ದೊಡ್ಡಬಳ್ಳಾಪುರ ರಸ್ತೆ ಹಾಗೂ ಇತರೆ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.
ಬೆಂಗಳೂರು ಬಳ್ಳಾರಿ ಮುಖ್ಯರಸ್ತೆಯಲ್ಲಿ ಹೆಬ್ಟಾಳ ಮೇಲ್ಸೇತುವೆಯಿಂದ ಎಂವಿಐಟಿ ಕಡೆಗೆ ಸಾಗುವ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಪೂರ್ವ ಮತ್ತು ಆಗ್ನೇಯ ವಿಭಾಗದ ಕೆ.ಆರ್.ಪುರಂ ಮತ್ತು ಹಳೇ ಮದ್ರಾಸ್ ರಸ್ತೆ ಕಡೆಯಿಂದ ಹೂರ ವರ್ತುಲ ರಸ್ತೆ, ಪಶ್ಚಿಮ ಮತ್ತು ಉತ್ತರ ವಿಭಾಗದ ಗೊರಗುಂಟೆ ಪಾಳ್ಯದಿಂದ ಹೆಬ್ಟಾಳ ಕಡೆ ಹಾಗೂ ದಕ್ಷಿಣ ವಿಭಾಗದ ಮೈಸೂರು ರಸ್ತೆ ಕಡೆಯಿಂದ ಬರುವ ಎಲ್ಲ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗಗಳು: ಕೆ.ಆರ್.ಪುರಂ ಮತ್ತು ಹಳೇ ಮದ್ರಾಸ್ ರಸ್ತೆ ಕಡೆಯಿಂದ ಬರುವ ಸಾರ್ವಜನಿಕರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು, ಕೆ.ಆರ್.ಪುರಂನಿಂದ ಹೆಣ್ಣೂರು ಕ್ರಾಸ್, ಬಾಗಲೂರು, ಮೈಲನಹಳ್ಳಿ, ಬೇಗೂರು ನೈರುತ್ಯ, ಗೊರಗುಂಟೆಪಾಳ್ಯ, ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಮದರ್ ಡೈರಿ, ಉನ್ನಿ ಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗಾನಹಳ್ಳಿ, ಎಂವಿಐಟಿ ಕ್ರಾಸ್, ವಿದ್ಯಾನಗರ ಕ್ರಾಸ್ ಕಡೆಯಿಂದ, ಮೈಸೂರು ರಸ್ತೆ, ನಾಯಂಡಹಳ್ಳಿ, ಚಂದ್ರಾಲೇಔಟ್, ಗೊರಗುಂಟೆ ಪಾಳ್ಯ, ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಮದರ್ ಡೈರಿ, ಉನ್ನಿ ಕೃಷ್ಣನ್ ಜಂಕ್ಷನ್ ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅಡಿಗಾನಹಳ್ಳಿ, ಎಂವಿಐಟಿ ಕ್ರಾಸ್, ವಿದ್ಯಾನಗರ ಕ್ರಾಸ್ ಕಡೆಯಿಂದ ವಿಮಾನ ನಿಲ್ದಾಣ ತಲುಪಬಹುದು.
ಪಾರ್ಕಿಂಗ್ ವ್ಯವಸ್ಥೆ: ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಆಗಮಿಸುವವರು ವಾಯು ನೆಲೆ ಸಮೀಪದ ಎಡಿವಿಎನಲ್ಲಿ ವಾಹನ ನಿಲುಗಡೆಗೆ ಸೂಚಿಸಲಾಗಿದೆ. ಕೆ.ಆರ್.ಪುರಂ-ನಾಗವಾರ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, ಥಣಿಸಂದ್ರ-ನಾರಾಯಣಪುರ ಕ್ರಾಸ್‌ನಲ್ಲಿ ಎಡ ತಿರುವು ಪಡೆದು ಟೆಲಿಕಾಂ ಲೇಔಟ್-ಜಕ್ಕೂರು ಕ್ರಾಸ್ ಜಂಕ್ಷನ್‌ನಲ್ಲಿ ಬಲ ತಿರುವು ತೆಗೆದುಕೊಂಡು ಯಲಹಂಕ ಬೈಪಾಸ್-ಅಲ್ಲಾಳ ಸಂದ್ರ ಮೇಲ್ಸೇತುವೆ-ಯಲಹಂಕ ಸರ್ಕಲ್‌ನಲ್ಲಿ ಎಡ ತಿರುವು ಪಡೆದು ಉನ್ನಿಕೃಷ್ಮನ್ ಜಂಕ್ಷನ್ ಮಾರ್ಗವಾಗಿ ನಾಗೇನಹಳ್ಳಿ ಗೇಟ್-ಹಾರೋಹಳ್ಳಿ-ಗಂಟಿಗಾನಹಳ್ಳಿ ಮೂಲಕ ಸಾಗಬಹುದು.
-ಗೊರಗೊಂಟೆಪಾಳ್ಯ-ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಮದರ್ ಡೈರಿ, ಉನ್ನಿ ಕೃಷ್ಣನ್ ಜಂಕ್ಷನ್ ದೊಡ್ಡಬಳ್ಳಾಪುರ ರಸ್ತೆ, ನಾಗೇನಹಳ್ಳಿ ಗೇಟ್-ಹಾರೋಹಳ್ಳಿ-ಗಂಟಿಗಾನಹಳ್ಳಿ ಮಾರ್ಗವಾಗಿ ಬರಬೇಕು.
-ಮೈಸೂರು ರಸ್ತೆ, ನಾಯಂಡಹಳ್ಳಿ-ಚಂದ್ರಾ ಲೇಔಟ್, ಗೊರಗುಂಟೆಪಾಳ್ಯ-ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಮಂದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ನಾಗೇನಹಳ್ಳಿ ಗೇಟ್ ಹಾರೋಹಳ್ಳಿ-ಗಂಟಿಗಾನಹಳ್ಳಿ ಕಡೆಯಿಂದ ಬಂದು ಎಡಿವಿಎಯಲ್ಲಿ ಪಾರ್ಕಿಂಗ್ ಮಾಡಬಹುದು.
-ಹುಣಸಮಾರನಹಳ್ಳಿ ಸಮೀಪವು ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
-ಕೆ.ಆರ್.ಪುರಂ-ಹೆಣ್ಣೂರು ಕ್ರಾಸ್-ಬಾಗಲೂರು ಲೇಔಟ್, ರಜಾಕ್ ಪಾಳ್ಯ-ವಿದ್ಯಾನಗರ ಕ್ರಾಸ್ ಕಡೆಯಿಂದ ಬಂದು ಹುಣಸಮಾರನಹಳ್ಳಿ ಬಳಿ ವಾಹನ ನಿಲುಗಡೆ ಮಾಡಬಹುದು.
-ಗೊರಗುಂಟೆಪಾಳ್ಯ-ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾಜನುಕುಂಟೆಯಿಂದ ಬಲತಿರುವು ಪಡೆದು ಅದ್ದಿಗಾನಹಳ್ಳಿ-ಎಂವಿಐಟಿ ಕ್ರಾಸ್ ಕಡೆಯಿಂದ ವಿದ್ಯಾನಗರ ಕ್ರಾಸ್ ಬಳಿ ಯುಟರ್ನ್ ಪಡೆದು ಹುಣಸಮಾರನಹಳ್ಳಿ ಪ್ರವೇಶಿಸಬಹುದು.
-ಮೈಸೂರು ರಸ್ತೆ, ನಾಯಂಡಹಳ್ಳಿ, ಚಂದ್ರಾಲೇಔಟ್, ಗೊರಗುಂಟೆ ಪಾಳ್ಯ, ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಮಂದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್-ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆಯಲ್ಲಿ ಬಲತಿರುವು ಪಡೆದು ಅಡಿಗಾನಹಳ್ಳಿ-ಎಂವಿಐಟಿ ಕ್ರಾಸ್-ವಿದ್ಯಾನಗರ ಕ್ರಾಸ್‌ನಲ್ಲಿ ಯುಟರ್ನ್ ಪಡೆದು ಹುಣಸಮಾನರಹಳ್ಳಿ ಪ್ರವೇಶಿಸಿ ವಾಹನ ನಿಲುಗಡೆ ಮಾಡಬಹುದು.
-ದೊಡ್ಡಬಳ್ಳಾಪುರ ರಸ್ತೆಯ ನಾಗೇನಹಳ್ಳಿ ಗೇಟ್‌ನಿಂದ ಬೆಂಗಳೂರು-ಬಳ್ಳಾರಿ ರಸ್ತೆಯ ಆಂಬಿಯನ್ಸ್ ಡಾಬಾ ಕ್ರಾಸ್‌ವರೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಸಂಚಾರ ನಿಷೇಧ ಎಲ್ಲೆಲ್ಲಿ?
-ಬೇಗೂರು ಪವರ್ ಸ್ಟೇಷನ್‌ನಿಂದ ಚಿಕ್ಕಜಾಲ ಕಡೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
-ಬೆಂಗಳೂರು-ಬಳ್ಳಾರಿ ರಸ್ತೆ, ಮೇಖೀ ವೃತ್ತ, ಎಂವಿಐಟಿ ಗೇಟ್‌ವರೆಗೆ ಮತ್ತು ಎಂವಿಐಟಿ ಗೇಟ್‌ನಿಂದ ಮೇಖೀ ವೃತ್ತದವರೆಗೆ ಎರಡು ದಿಕ್ಕಿನಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಹೊರತು ಪಡಿಸಿ ಲಾರಿ, ಟ್ರಕ್, ಖಾಸಗಿ ಬಸ್‌ಗಳು ಹಾಗೂ ಇತರೆ ಭಾರೀ ಸರಕು ಸಾಗಣಿಕೆಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
-ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮೂಲಕ ಬಿ.ಬಿ.ರಸ್ತೆ ಸೇರುವ ಆಂಬಿಯನ್ಸ್ ಡಾಬಾ ಕ್ರಾಸ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
-ಹೈದರಾಬಾದ್ ಮತ್ತು ಚಿಕ್ಕಬಳ್ಳಾಪುರ ಕಡೆಗಳಿಂದ ಬರುವ ಲಾರಿ, ಟ್ರಕ್, ಖಾಸಗಿ ಬಸ್‌ಗಳು ಹಾಗೂ ಇತರೆ ಸರಕು ಸಾಗಾಣಿಕೆಯ ಭಾರೀ ವಾಹನಗಳು ತುಮಕೂರು-ಪುಣೆ-ಎನ್‌ಎಚ್-4 ಮತ್ತು ದಾಬಸ್‌ಪೇಟೆ-ನೆಲಮಂಗಲ ಮೂಲಕ ಎನ್‌ಎಚ್-4 ಮೂಲಕ ಸಂಚರಿಸಬೇಕು. ಮತ್ತೂಂದೆಡೆ ಕೆ.ಆರ್.ಪುರಂ-ಹೊಸೂರು-ಚೆನ್ನೈ-ಬೆಂಗಳೂರು ನಗರ ಕಡೆಗೆ ಹೋಗಲು ದೇವನಹಳ್ಳಿಯಿಂದ ಸೂಲಿಬೆಲೆ-ಹೊಸಕೋಟೆ ಮೂಲಕ ಸಂಚರಿಸಬೇಕು ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.