ಅಡಕತ್ತರಿಯಲ್ಲಿ ಸಾರಿಗೆ ನೌಕರರ ಬದುಕು


Team Udayavani, Apr 30, 2021, 1:11 PM IST

Transportation Employee Life

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರಜಾರಿಗೊಳಿಸಿದ ಬಿಗಿ ಕರ್ಫ್ಯೂ ನಿಯಮವು ಅಮಾನತುಗೊಂಡ ಸಾವಿರಾರು ಸಾರಿಗೆ ನೌಕರರನ್ನುಅಕ್ಷರಶಃ ಅಡ್ಡಕತ್ತರಿಯಲ್ಲಿ ಸಿಲುಕಿಸಿದೆ! ಸಾರಿಗೆ ನೌಕರರಿಗೂ ಸರ್ಕಾರದ ಬಿಗಿ ಕರ್ಫ್ಯೂಗೂ ಎತ್ತಣದಿಂದೆತ್ತ ಸಂಬಂಧ ಅನಿಸಬಹುದು.

ಆದರೆ, ಇವೆರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿವೆ.ಅಷ್ಟೇ ಅಲ್ಲ, ಕೆಲ ನೌಕರರ ಜೀವನನಿರ್ವಹಣೆಯನ್ನೇ  ದುಸ್ತರಗೊಳಿಸಿದೆ. ಇತ್ತೀಚೆಗೆ ನಡೆದ ಸಾರಿಗೆ ಮುಷ್ಕರದಲ್ಲಿ ನಿಗಮಗಳ ಕೆಂಗಣ್ಣಿಗೆ ಗುರಿಯಾದ ಸುಮಾರು ಮೂರುಸಾವಿರ ನೌಕರರನ್ನುಅಮಾನತುಗೊಳಿಸಲಾಗಿದೆ.

ಆದರೆ, ಸಾರಿಗೆ ನಿಗಮಗಳ ನಿಯಮದ ಪ್ರಕಾರ ಅಮಾನತುಗೊಂಡವರು ಕಡ್ಡಾಯವಾಗಿ ನಿತ್ಯ ಆಯಾಘಟಕಗಳಿಗೆ ಆಗಮಿಸಿ, ಸಹಿ ಹಾಕಬೇಕು. ಆಗ ಮಾತ್ರ ಅವರಿಗಿದ್ದ ಒಟ್ಟು ಸಂಬಳದಲ್ಲಿ ಅರ್ಧದಷ್ಟು ವೇತನ ಬಿಡುಗಡೆ ಮಾಡಲು ಅವಕಾಶ ಇರುತ್ತದೆ. ಆದರೆ, ಅಮಾನತುಗೊಂಡವರಲ್ಲಿ ಬಹುತೇಕರು ಬೇರೆ ಊರುಗಳಿಂದ ಬಂದು ಕರ್ತವ್ಯ ನಿರ್ವಹಿಸುವವರಾಗಿದ್ದು, ಕರ್ಫ್ಯೂ ಇರುವುದರಿಂದ ಎಲ್ಲರೂ ಕುಟುಂಬ ಸಮೇತರಾಗಿ ತಮ್ಮ ಊರುಗಳಿಗೆತೆರಳಿದ್ದಾರೆ.

ಸಂಚಾರವೂ ಸಂಪೂರ್ಣ ಸ್ತಬ್ಧಗೊಂಡಿದೆ.ಇಂತಹ ಸಂದರ್ಭದಲ್ಲಿ ನಿತ್ಯ ಡಿಪೋಗಳಿಗೆ ಬಂದು ಸಹಿ ಹಾಕುವುದು ದುಸ್ತರವಾಗಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ವೇತನ ಬಿಡುಗಡೆ ಅನುಮಾನ. ಈ ಹಿನ್ನೆಲೆಯಲ್ಲಿ ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ನೌಕರರು ಅಲವತ್ತುಕೊಳ್ಳುತ್ತಾರೆ.

ಈ ಹಿನ್ನೆಲೆಯಲ್ಲಿ ತುಸು ವಿನಾಯ್ತಿ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ನಡುವೆ ಸಾರಿಗೆ ನೌಕರರ ಕೂಟವೂ ಅಮಾನತುಗೊಂಡ ನೌಕರರ ವಿಚಾರದಲ್ಲಿ ಮೌನವಹಿಸಿದೆ. ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೊರತುಪಡಿಸಿದರೆ, ಯಾವುದೇ ಮುಖಂಡರು ನಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಚಿಕ್ಕೋಡಿ ಮೂಲದ ಬಿಎಂಟಿಸಿ ನಿರ್ವಾಹಕ ಪಂಚಾಕ್ಷರಿ ಬೇಸರವ್ಯಕ್ತಪಡಿಸುತ್ತಾರೆ.

ಹೋರಾಟಕ್ಕೆ ಕೈಜೋಡಿಸಿದ್ದರಿಂದ ನಾನು ಸೇರಿದಂತೆ ನೂರಾರು ಸಹೋದ್ಯೋಗಿಗಳನ್ನುಅಮಾನತುಗೊಳಿಸಲಾಯಿತು. ನಿಯಮದ ಪ್ರಕಾರ ನಿತ್ಯ ಕಡ್ಡಾಯವಾಗಿ ಬೆಳಗ್ಗೆ 10ರಿಂದ ಸಂಜೆ 5ರ ಒಳಗೆ ಘಟಕಕ್ಕೆ ತೆರಳಿ ಸಹಿ ಹಾಕಿ ಬರಬೇಕು. ಲಾಕ್‌ಡೌನ್‌ ಆಗಿದ್ದರಿಂದ ಊರಿಗೆ ಬಂದಿದ್ದೇನೆ. ನೂರಾರು ಕಿ.ಮೀ.ದೂರದಿಂದ ಹೋಗಿ ಬರುವುದು ಕಷ್ಟ.

ಬೆಂಗಳೂರಲ್ಲಿ ಕೊರೊನಾ ಹಾವಳಿ ತೀವ್ರವಾಗಿದ್ದು, ಆಮ್ಲಜನಕಮತ್ತು ಹಾಸಿಗೆಗಳ ಸಮಸ್ಯೆ ಹೆಚ್ಚಿದೆ. ಇದೆಲ್ಲದರಿಂದ ಹೆದರಿ, ತಾಯಿ, ಪತ್ನಿ, ಮಕ್ಕಳೊಂದಿಗೆ ಊರಿಗೆ ಬಂದುಬಿಟ್ಟಿದ್ದೇನೆ. ಇಂತಹದ್ದರಲ್ಲಿ ಸಹಿ ಹಾಕಿ ಬರಲು ಹೇಗೆ ಸಾಧ್ಯ ನೀವೇ ಹೇಳಿ ಸರ್‌? ಈ ಸಮಸ್ಯೆ ಬಗ್ಗೆ ಕೂಟವೂಚಕಾರ ಎತ್ತುತ್ತಿಲ್ಲ ಎಂದು ಬಿಎಂಟಿಸಿ ಚಾಲಕಚಂದ್ರಶೇಖರ್‌ ಅಸಹಾಯಕತೆ ತೋಡಿಕೊಂಡರು.

ಮೇ 8ರ ಒಳಗೆ ವರದಿ ಸಲ್ಲಿಸುವಂತೆ ಸೂಚನೆ

ಹೈಕೋರ್ಟ್‌ ಮಧ್ಯಂತರ ಆದೇಶದ ಬೆನ್ನಲೆ ‌ಮತ್ತು ವಜಾ ಮತ್ತು ಅಮಾನತುಗೊಂಡ ಹಾಗೂ ವರ್ಗಾವಣೆಗೊಂಡ ನೌಕರರ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡುಮೇ 8ರ ಒಳಗೆ ವರದಿ ಸಲ್ಲಿಸುವಂತೆ ಕಾನೂನು ಇಲಾಖೆ ಕೆಎಸ್‌ಆರ್‌ಟಿಸಿಯ ಎಲ್ಲ ಇಲಾಖಾಮುಖ್ಯಸ್ಥರಿಗೆ ಸೂಚಿಸಿದೆ. ಕಾರ್ಮಿಕ ಸಂಘದ ಬೇಡಿಕೆಗಳನ್ನು ಪಕ್ಷಗಾರರು ಸೌಹಾರ್ದಯುತ ಮಾತುಕತೆಮೂಲಕ ಇತ್ಯರ್ಥಪಡಿಸಿಕೊಂಡು ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ವಿಫ‌ಲರಾದಲ್ಲಿ, ಹೈಕೋರ್ಟ್‌ ನಿವೃತ್ತನ್ಯಾಯಾಧೀಶರನ್ನು ಕಾರ್ಮಿಕ ವಿವಾದಕ್ಕೆ ಸಂಬಂಧಿಸಿದಂತೆ ನೇಮಿಸಲಾಗುವುದು ಎಂದೂ ಸೂಚಿಸಲಾಗಿದೆ.

ಟಾಪ್ ನ್ಯೂಸ್

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.