ಮಿಂಟೋದಲ್ಲಿ 500 ಮಂದಿಗೆ ಚಿಕಿತ್ಸೆ
Team Udayavani, Oct 21, 2017, 11:43 AM IST
ಬೆಂಗಳೂರು: ಕಳೆದ ಹತ್ತುವರ್ಷಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡವರ ಸಂಖ್ಯೆ ಶುಕ್ರವಾರಕ್ಕೆ ಬರೋಬ್ಬರಿ 502ಕ್ಕೇರಿದೆ. ಇದಲ್ಲದೆ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿಯೂ ನೂರಾರು ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಹತ್ತುವರ್ಷಗಳ ಅವಧಿಯಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಅವಘಡಗಳಿಂದ ಗಾಯಗೊಂಡ ಮಕ್ಕಳು, ವಯಸ್ಕರ ಪೈಕಿ ಹಲವು ಮಂದಿ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡವರಿದ್ದಾರೆ. ಪಟಾಕಿ ದುರಂತಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸಿದ್ದರೂ ಈ ವರ್ಷವೂ 17 ಮಂದಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಪಟಾಕಿ ಸಿಡಿಸಿದವರಷ್ಟೇ ಅಲ್ಲದೆ ಅಕ್ಕ-ಪಕ್ಕ ನಿಂತವರು, ರಸ್ತೆಯಲ್ಲಿ ನಡೆದು ಹೋಗುವವರು ಸಹ ದೊಡ್ಡ ಪ್ರಮಾಣದಲ್ಲಿ ಗಾಯಾಳುಗಳಾಗುತ್ತಿದ್ದಾರೆ. ಹೀಗಾಗಿ ಸಾಧ್ಯವಾದಷ್ಟು ಪಟಾಕಿ ಹೊಡೆಯುವುದು ಕಡಿಮೆ ಮಾಡಬೇಕು. ಮಕ್ಕಳ ಕೈಗೆ ಪಟಾಕಿ ನೀಡಬಾರದು. ಪಟಾಕಿ ಸಿಡಿತ ಸಂದರ್ಭದಲ್ಲಿ ದೊಡ್ಡವರು ಜೊತೆಯಲ್ಲಿರಬೇಕು. ಪೋಷಕರು ಎಚ್ಚರಿಕೆ ವಹಿಸಿದರೇ ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಕಡಿಮೆಯಾಗಲಿದೆ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕ ಸತೀಶ್ ತಿಳಿಸಿದರು.
(2008ರಿಂದ ಚಿಕಿತ್ಸೆ ಪಡೆದವರ ಅಂಕಿ ಸಂಖ್ಯೆ)
ವರ್ಷ ಗಂಡುಮಕ್ಕಳು ಹೆಣ್ಣು ಮಕ್ಕಳು ಪುರುಷರು ಮಹಿಳೆಯರು ಒಟ್ಟು
-2008 23 6 23 5 57
-2009 28 4 24 1 57
-2010 25 9 24 3 61
-2011 27 7 26 3 63
-2012 14 6 25 2 47
-2013 23 1 29 8 61
-2014 25 6 29 5 65
-2015 17 2 12 1 32
-2016 15 3 12 3 33
-2017 (ಅ.20) ವಯಸ್ಕರು ಮಕ್ಕಳು ಸೇರಿ 7 ಮಂದಿಗೆ ಗಂಭೀರ ಗಾಯ, 10 ಮಂದಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
-ಬಾಲಕಿಯರು 53
-ಬಾಲಕರು 197
-ಒಟ್ಟು 250
-ಪುರುಷರು 204
-ಮಹಿಳೆಯರು 31
-ವಯಸ್ಕರು 235
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.