ಎಚ್‌ಎಎಲ್ ರಸ್ತೆ ಸಿಗ್ನಲ್ ಮುಕ್ತವಾಗಿಸಲು ಒಡಂಬಡಿಕೆ
Team Udayavani, Jul 10, 2018, 11:40 AM IST
ಬೆಂಗಳೂರು: ಎಚ್‌ಎಎಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ರಸ್ತೆಯನ್ನು ಸಿಗ್ನಲ್ ಮುಕ್ತ ಕಾರಿಡಾರ್‌ಗೊಳಿಸುವ ಕುರಿತಂತೆ ಬಿಬಿಎಂಪಿ ಹಾಗೂ ಎಚ್‌ಎಎಲ್ ಅಧಿಕಾರಿಗಳು ಸೋಮವಾರ ಒಪ್ಪಂದ ಮಾಡಿಕೊಂಡಿದ್ದಾರೆ.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹಾಗೂ ಎಚ್‌ಎಎಲ್ ಬೆಂಗಳೂರು ಸಂಕೀರ್ಣದ ಮುಖ್ಯ ಕಾರ್ಯನಿರ್ವಣಾಧಿಕಾರಿ ಶೇಖರ್ ಶ್ರೀವಾತ್ಸವ ಅವರು ಸೋಮವಾರ ಒಡಂಬಡಿಗೆ ಸಹಿ ಹಾಕಿದ್ದಾರೆ. ಒಪ್ಪಂದದ ಪ್ರಕಾರ ಎಚ್‌ಎಎಲ್ ಸಂಸ್ಥೆ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಸುರಂಜನ್‌ದಾಸ್ ಜಂಕ್ಷನ್ ಬಳಿ ಸಂಸ್ಥೆಗೆ ಸೇರಿದ 31,000 ಅಡಿ ಜಾಗವನ್ನು ಪಾಲಿಕೆಗೆ ನೀಡಲಿದೆ.
ಎಚ್‌ಎಎಲ್ ರಸ್ತೆಯಲ್ಲಿ ದಟ್ಟಣೆ ಮುಕ್ತ ಸಂಚಾರಕ್ಕಾಗಿ ಮೂರು ಅಂಡರ್‌ಪಾಸ್‌ಗಳು ಹಾಗೂ ವಿಂಡ್ ಟನಲ್ ರಸ್ತೆ ಅಭಿವೃದ್ಧಿಪಡಿಸಲಿರುವ ಪಾಲಿಕೆ ಕಾಮಗಾರಿ ನಂತರದಲ್ಲಿ ಜಾಗವನ್ನು ಎಚ್‌ಎಎಲ್‌ಗೆ ವಾಪಸ್ ನೀಡಲಿದೆ. ಈಗಾಗಲೇ ಪಾಲಿಕೆಯಿಂದ ಎಚ್‌ಎಎಲ್ ರಸ್ತೆಯ 17 ಕಿ.ಮೀ ಉದ್ದದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಿದೆ.
ಆದರೆ, ಎಚ್‌ಎಎಲ್ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ ಎಚ್‌ಎಎಲ್‌ನ 31,000 ಅಡಿ ಜಾಗ ಅಗತ್ಯವಿದೆ. ಇದೀಗ ಎಚ್‌ಎಎಲ್ ಅಧಿಕಾರಿಗಳು ಜಾಗ ನೀಡಲು ಒಪ್ಪಿದ್ದು, ಜಾಗಕ್ಕೆ ಪರಿಹಾರದ ಬದಲಿಗೆ ಹಳೆ ವಿಮಾನ ನಿಲ್ದಾಣಕ್ಕೆ ಹೋಗುವ 1.7 ಕಿ.ಮೀ. ಉದ್ದದ ವಿಂಡ್ ಟನಲ್ ರಸ್ತೆ ಹಾಗೂ ರಾಜಕಾಲುವೆಗಳ ಸೇತುವೆಗಳನ್ನು ಅಭಿವೃದ್ಧಿಪಡಿಸುವಂತೆ ಕೋರಿದ್ದಾರೆ.
ವಿಂಡ್ ಟನಲ್ ರಸ್ತೆಯ ಅಭಿವೃದ್ಧಿಯಿಂದ ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಹೀಗಾಗಿ ರಸ್ತೆ ನಿರ್ಮಿಸಿ ಮಾರ್ಗ ಮಧ್ಯೆ ಬರುವ ಸೇತುವೆ ಹಾಗೂ ರಸ್ತೆಯನ್ನು 55 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಪಾಲಿಕೆ ಒಪ್ಪಿದ್ದು, ರಸ್ತೆ ಅಭಿವೃದ್ಧಿ ನಂತರದಲ್ಲಿ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೂ ಅವಕಾಶ ನೀಡಬೇಕೆಂಬ ಪಾಲಿಕೆಯ ಷರತ್ತಿಗೆ ಎಚ್‌ಎಎಲ್ ಒಪ್ಪಿಗೆ ಸೂಚಿಸಿದೆ.
ಒಡಂಬಡಿಕೆ ವೇಲೆ ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಟಿ.ಸುವರ್ಣರಾಜು ಸೇರಿ ಪ್ರಮುಖರು ಹಾಜರಿದ್ದರು.
ಸಿಗ್ನಲ್ ಮುಕ್ತ ಕಾಮಗಾರಿಯ ವಿವರ: ವೆಲ್ಲಾರ ಜಂಕ್ಷನ್‌ನಿಂದ ಹೋಫ್ ಫಾರಂವರೆಗೆ 17 ಕಿ.ಮೀ. ಉದ್ದದ ರಸ್ತೆಯನ್ನು ಸಿಗ್ನಲ್ ಮುಕ್ತಗೊಳಿಸುವುದು ಪಾಲಿಕೆಯ ಉದ್ದೇಶವಾಗಿದೆ. ಅದರಂತೆ ಸುರಂಜನ್‌ದಾಸ್ ಜಂಕ್ಷನ್ (ಕುವೆಂಪು ವೃತ್ತ), ವಿಂಡ್ ಟನಲ್ ರಸ್ತೆ ಜಂಕ್ಷನ್ ಹಾಗೂ ಕುಂದಲಹಳ್ಳಿ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಮುಖ್ಯಮಂತ್ರಿಗಳ ನಗರೋತ್ಥಾನ ಅಡಿಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕುವೆಂಪು ವೃತ್ತದಲ್ಲಿ ಅಂಡರ್‌ಪಾಸ್ ನಿರ್ಮಾಣವಾಗಲಿದ್ದು, 55 ಕೋಟಿ ರೂ. ವೆಚ್ಚದ ವಿಂಡ್ ಟನಲ್ ರಸ್ತೆ ಅಭಿವೃದ್ಧಿ 12 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಎಚ್‌ಎಎಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
-ಕೆ.ಟಿ.ನಾಗರಾಜ್, ಮುಖ್ಯ ಎಂಜಿನಿಯರ್ (ಯೋಜನೆ)
ಅಂಡರ್‌ಪಾಸ್‌ಗಳ ನಿರ್ಮಾಣ ಎಲ್ಲೆಲ್ಲಿ?
-ಸುರಂಜನ್‌ದಾಸ್ ಜಂಕ್ಷನ್ (ಕುವೆಂಪು ವೃತ್ತ)
-ವಿಂಡ್ ಟನಲ್ ರಸ್ತೆ ಜಂಕ್ಷನ್
-ಕುಂದಲಹಳ್ಳಿ ಜಂಕ್ಷನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.