ಟಿಟಿಕೆ ಪ್ರೇಸ್ಟಿಜ್ಗೆ ನಟಿ ವಿದ್ಯಾಬಾಲನ್ ರಾಯಭಾರಿ
Team Udayavani, Apr 25, 2018, 11:40 AM IST
ಬೆಂಗಳೂರು: ಅಡುಗೆ ಮನೆ ಉಪಕರಣಗಳ ತಯಾರಕ ಸಂಸ್ಥೆ ಟಿಟಿಕೆ ಪ್ರೇಸ್ಟಿಜ್ ತಮ್ಮ ಕಂಪನಿಯ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರನ್ನು ನೇಮಕ ಮಾಡಿದೆ.
ಇತೀಚೆಗೆ ನಗರದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಟಿ.ಟಿ.ಜಗನ್ನಾಥನ್ ಅವರು ಮಾತನಾಡಿ, ದೇಶದ ಮಾರುಕಟ್ಟೆಯಲ್ಲಿ ಮುಂಚೂಣಿ ಬ್ರ್ಯಾಂಡ್ ಆಗಿರುವ ಪ್ರೇಸ್ಟಿಜ್ಗೆ ನೂತನ ರಾಯಭಾರಿ ದೊರೆತಿದ್ದಾರೆ. ಹೆಸರಾಂತ ನಟಿ ವಿದ್ಯಾ ಬಾಲನ್ ಅವರು ನಮ್ಮ ಜತೆ ಕೆಲಸ ಮಾಡಲು ಒಪ್ಪಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಈ ಒಪ್ಪಂದದಿಂದ ಸಂಸ್ಥೆಗೂ ಮತ್ತು ಅವರಿಗೂ ಅನುಕೂಲವಾಗಲಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಪ್ರೇಸ್ಟಿಜ್ ಕಂಪನಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಹಾಯವಾಗಲಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಚಂದ್ರು ಕಾಲೊ ಅವರು, ಪ್ರೇಸ್ಟಿಜ್ ಬ್ರ್ಯಾಂಡ್ಗೆ ವಿದ್ಯಾ ಬಾಲನ್ ಅವರು ಸೂಕ್ತ ರಾಯಭಾರಿಯಾಗಿದ್ದಾರೆ. ಇತೀ¤ಚಿನ ದಿನಗಳಲ್ಲಿ ಪ್ರೇಸ್ಟಿಜ್ ಅಡುಗೆ ಮನೆ ಹೊರತಾಗಿಯೂ ಬಳಸುವ ಉತ್ಪನ್ನಗಳನ್ನು ತಯಾರಿಸುತ್ತಿದೆ. ಈ ಎಲ್ಲ ಉತ್ಪನ್ನಗಳಿಗೆ ಆಧುನಿಕ ಭಾರತೀಯ ಹೋಮ್-ಮೇಕರ್ ಆಗಿರುವ ಈ ನಟಿ ರಾಯಭಾರಿಯಾಗಿರುವುದು ಸೂಕ್ತವೆನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ನಟಿ ವಿದ್ಯಾ ಬಾಲನ್ ಅವರು ಮಾತನಾಡಿ, ಟಿಟಿಕೆ ಪ್ರೇಸ್ಟಿಜ್ ಜತೆ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡುವುದು ಹೆಮ್ಮೆಯ ವಿಷಯ. ಮತ್ತೂಂದು ಸಂಗತಿ ಏನೆಂದರೆ, ಚಿಕ್ಕಂದಿನಿಂದ ನಮ್ಮ ಅಡುಗೆ ಮನೆಯಲ್ಲಿದ್ದ ಪ್ರೇಸ್ಟಿಜ್ ಪರಿಕರಗಳನ್ನು ನೋಡಿಕೊಂಡೇ ನಾನು ಬೆಳೆದಿದ್ದೇನೆ. ಪ್ರೇಸ್ಟಿಜ್ ಉತ್ಪನ್ನಗಳು ಅಡುಗೆಮನೆ ಪರಿಕರಗಳ ಸಂಗ್ರಹದಿಂದಾಗಿ ಪ್ರಸಿದ್ಧಿ ಪಡೆದಿವೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.