ತುಳು ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸಿ
Team Udayavani, May 13, 2019, 3:05 AM IST
ಬೆಂಗಳೂರು: ಪಂಚಭೂತಗಳೊಂದಿಗೆ ಸೇರಿಕೊಂಡಿರುವ ತುಳುನಾಡಿನ ಬದುಕು, ಕಲೆ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ತುಳುವೆರೆಂಕುಲು ಬೆಂಗಳೂರಿನ ಹಿರಿಯ ಉಪಾಧ್ಯಕ್ಷ ಡಾ.ಉದಯ ಧರ್ಮಸ್ಥಳ ಅಭಿಪ್ರಾಯ ವ್ಯಕ್ತಪಡಿಸಿದರು.
ತುಳುವೆರೆಂಕುಲು ಬೆಂಗಳೂರು ಸಂಸ್ಥೆ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ ಬಿಸುಪರ್ಬ-ವಸಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲೆಯನ್ನು ಜನರ ಆಸಕ್ತಿಗೆ ತಕ್ಕಂತೆ ಪರಿವರ್ತಿಸಿಕೊಳ್ಳಬೇಕು ಅಥವಾ ಹೊಸ ಅಂಶಗಳನ್ನು ಅಳವಡಿಸಿಕೊಳ್ಳಬೇಕು.
ಆದರೆ, ಮೂಲ ಸತ್ವವನ್ನು ಬಿಟ್ಟುಕೊಡಬಾರದು. ಜನರಿಗೆ ಏನು ಬೇಕು ಅದನ್ನು ಕೊಡಬೇಕು. ಆದರೆ, ನಮ್ಮ ಮೂಲವನ್ನು ಯಾರಿಗೂ ಬಿಟ್ಟುಕೊಡಬಾರದು ಎಂದರು. ತುಳು ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ತುಳುನಾಡಿನ ಬದುಕು ಪಂಚಭೂತಗಳೊಂದಿಗೆ ಸೇರಿಕೊಂಡಿದೆ.
ವೇದದಲ್ಲಿ ಹೇಳಿದಂತೆ ತುಳುವರ ಜೀವನ ನಡೆಯುತ್ತಿದೆ. ಆಧ್ಯಾತ್ಮಿಕ ಶಿಖರವಾದ ಮಧ್ವಾಚಾರ್ಯರು ತುಳುನಾಡಿನವರು. ಮಲೆಯಾಳ ಮತ್ತು ತುಳು ತಾಯಿ ಮಗು ಇದ್ದಂತೆ, ಶಂಕರಾಚಾರ್ಯರಿಗೂ ಇಲ್ಲಿನ ನಂಟಿದೆ. ತುಳುವರು ಸ್ವಂತಿಕೆಯನ್ನು ಉಳಿಸಿಕೊಂಡು ಸ್ವಂತಿಕೆಯಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, ಸರ್ಕಾರಗಳು ಅಥವಾ ರಾಜಕೀಯ ಪಕ್ಷಗಳು ಓಟ್‌ಬ್ಯಾಂಕ್ ಹಾಗೂ ರಾಜಕೀಯ ಲಾಭಕ್ಕಾಗಿ ಧನಸಹಾಯ ಅಥವಾ ಸಬ್ಸಿಡಿ ಘೋಷಣೆ ಮಾಡುವ ಬದಲು ಉದ್ಯೋಗಾವಕಾಶಗಳು ಹೆಚ್ಚಿಸಬೇಕು.
ಉದ್ಯೋಗ ಹೆಚ್ಚು ನೀಡುವ ಕ್ಷೇತ್ರಗಳ ಉತ್ತೇಜನಕ್ಕೂ ಶ್ರಮಿಸಬೇಕು. ಈ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳೊಂದಿಗೂ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು. 15 ವರ್ಷಗಳ ಹಿಂದೆ ಆಹಾರ ವ್ಯರ್ಥವಾಗುವ ಪ್ರಮಾಣ ಶೇ.10ರಷ್ಟಿತ್ತು.
ಈಗ ಅದು ಶೇ.30ಕ್ಕೆ ಏರಿಕೆಯಾಗಿದೆ. ಆಹಾರ ವ್ಯರ್ಥವಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ನೀರಿನ ಬವಣೆ ದಿನೇದಿನೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ನೀರಿನ ಅಪವ್ಯಯ ತಡೆಯಲು ಕೆಲವೊಂದು ಕ್ರಮ ತೆಗೆದುಕೊಳ್ಳುತ್ತಿದ್ದೇವೆ.
ಅಲ್ಲದೆ, ಮದುವೆ ಸೇರಿದಂತೆ ವಿವಿಧ ಸಭೆ ಸಮಾರಂಭ ನಡೆಯುವ ಸಂದರ್ಭದಲ್ಲಿ ನೀರನ್ನು ಅಗತ್ಯಕ್ಕೆ ತಕ್ಕಂತೆ ನೀಡುವಂತೆ ಹೋಟೆಲ್ ಸಂಘದ ವತಿಯಿಂದ ಮನವಿ ಮಾಡುತ್ತಿದ್ದೇವೆ ಎಂದರು. ಸಭಾ ಕಾರ್ಯಕ್ರಮಕ್ಕೂ ಮೊದಲು ತುಳುವೆರೆಂಕುಲು ಮಕ್ಕಳ ಬಳಗದಿಂದ ಪ್ರತಿಭಾ ಪ್ರದರ್ಶನ, ಕಡಲ್ದೂರು ಸುಧಾಕರ ಶೆಟ್ಟಿ ತಂಡದಿಂದ ಪದರಂಗೀತ,
-ಪ್ರಸಾದ್ ಚೇರ್ಕಾಡಿ ಅವರಿಂದ ತೆಂಕುತಿಟ್ಟು ಗಾನವೈಭವ, ಬಿಸುಹಬ್ಬದ ಆಚರಣೆ, ವಸಂತೋತ್ಸವ ಪೂಜೆ ನಡೆಯಿತು. ಬೆಂಗಳೂರು ಕರಾವಳಿಗರ ಒಕ್ಕೂಟದ ಅಧ್ಯಕ್ಷ ಸುಂದರಾಜ್ ಶೆಟ್ಟಿ, ಕೆ.ಸುಧಾಕರ ಶೆಟ್ಟಿ, ರೂಪದರ್ಶಿ ಹಾಗೂ ನಟಿ ಸೀಮಾ ಬುತೆಲ್ಲೊ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.