ಸಿಲಿಕಾನ್ ಸಿಟಿಯಲ್ಲಿ ತುಳುನಾಡ ದರ್ಶನ
Team Udayavani, Dec 18, 2017, 12:52 PM IST
ಬೆಂಗಳೂರು: ತೆಂಗಿನ ಗರಿಯ ನೇಯ್ಗೆ, ಬಿದಿರಿನ ಬುಟ್ಟಿ ಹೆಣೆಯುವುದು, ತೊಟ್ಟಿಲಿಗೆ ಹಾಸುವ ಚಾಪೆ ಸಿದ್ಧಪಡಿಸುವುದು, ಅಕ್ಕಿ ಕುಟ್ಟುವುದು, ರಾಗಿ ಬೀಸುವುದರ ಪ್ರಾತ್ಯಕ್ಷಿಕೆಯ ಜತೆಗೆ ತುಳುನಾಡ ಪರಂಪರೆ ವಿವರಿಸುವ ಪ್ರಾಚಿನ ವಸ್ತುಗಳ ಪ್ರದರ್ಶನ ತುಳುನಾಡ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
ವಿಜಯ ನಗರದ ಬಂಟರ ಸಂಘದಲ್ಲಿ ಹಮ್ಮಿಕೊಂಡಿದ್ದ “ಸುಗ್ಗಿದ ಐಸಿರಿ’ ತುಳುನಾಡ ಉತ್ಸವದಲ್ಲಿ ಭಾನುವಾರ ಬೆಳಗ್ಗೆಯಿಂದ ರಾತ್ರಿಯ ತನಕ ತುಳು ಸಾಂಸ್ಕೃತಿಕ ಹಾಗೂ ಸಾಹಿತ್ಯಾತ್ಮಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ತುಳುನಾಡಿನ ಹಲವು ವೈವಿದ್ಯತೆಗಳ ಪ್ರಾತ್ಯಕ್ಷಿಕೆ ನೆರೆದವರನ್ನು ತನ್ಮಯಗೊಳಿಸಿದೆ.
ತೆಂಗಿನ ಮರದ ಹಸಿ ಗರಿ ನೇಯುವುದು, ತಾಳೆಗೆರೆಯಲ್ಲಿ ಮಕ್ಕಳ ತೊಟ್ಟಿಲಿಗೆ ಕಟ್ಟುವ ಚಾಪೆ ಸಿದ್ಧಪಡಿಸುವುದು, ಮಳೆಗಾಲದಲ್ಲಿ ಕೃಷಿ ಚಟುವಟಿಕೆಗೆ ಬಳಸುವ ಅಡಿಕೆ ಮರದ ಹಾಳೆ ಟೋಪಿ ಸಿದ್ಧಪಡಿಸುವುದು ಇತ್ಯಾದಿಗಳ ಪ್ರಾತ್ಯಕ್ಷಿಕೆ ಎಲ್ಲರ ಮನಸೂರೆಗೊಳಿಸಿದೆ. ತುಳುನಾಡಿನಲ್ಲಿ ಹಸುಗಳ ಕಾಲಡಿಗೆ ಹಾಕಲು ಒಣಗಿದ ಎಲೆಗಳನ್ನು ಕಾಡಿನಿಂದ ಹೊತ್ತು ತರುತ್ತಾರೆ.
ಅದಕ್ಕಾಗಿ ಬೃಹಧಾಕಾರದ ಬಿದಿರಿನ ಬುಟ್ಟಿಯನ್ನು ಬಳಸುತ್ತಾರೆ. ಅಂತಹ ಬುಟ್ಟಿಯನ್ನು ಸಿದ್ಧಪಡಿಸುವ ವಿವಿಧ ಹಂತವನ್ನು ತುಳು ಉತ್ಸವದಲ್ಲಿ ಪರಿಚರಿಸಿದ್ದಾರೆ. ಹಾಗೆಯೇ ಮಡಿಕೆ, ಮಡಿಕೆಯಿಂದ ಅನ್ನ ಬಸೆಯುವ ಪರಿಕರ, ರಾಗಿ ಬೀಸುವುದು, ಅಕ್ಕಿ ಕುಟ್ಟುವುವು ಹೀಗೆ ತುಳುನಾಡಿನ ಸಾಂಸ್ಕೃತಿಕ ವೈಭವವೇ ಇಲ್ಲಿ ಮೇಳೈಸಿತ್ತು.
ಅನಾದಿ ಕಾಲದಲ್ಲಿ ತುಳುನಾಡಿಗರು ಬಳಸುತ್ತಿದ್ದ ಗೃಹ ಉಪಯೋಗಿ ವಸ್ತುಗಳು, ಆಟಿಕೆ, ಕೃಷಿ ಪರಿಕರ, ಅಳತೆ ಸಾಮಗ್ರಿ, ಬುಟ್ಟೆ, ಕತ್ತಿ, ಇಸ್ತ್ರೀಪೆಟ್ಟಿಗೆ, ತೆಂಗಿನ ಚಿಪ್ಪಿನ ಸೌಟು ಹೀಗೆ ಹಲವು ವಸ್ತುಗಳ ಪ್ರದರ್ಶನ ಜನರನ್ನು ಆಕರ್ಷಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ಹಾಡಿಗೆ ನೃತ್ಯ ಸ್ಪರ್ಧೆ. ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ದಯಾನಂದ ಕತ್ತಲ್‌ಸಾರ್ ಇವರಿಂದ ಯಕ್ಷಗಾನ ತಾಳಮದ್ದಳೆ ಮತ್ತು ಬಲಿಯೇಂದ್ರ ಪೂಜೆ ನೆರವೇರಿತು.
ಕವಿಗೋಷ್ಠಿ, ವಿಚಾರ ಸಂಕಿರಣದ ಜತೆಗೆ ಕಾಪು ಪ್ರಶಂಸ ತಂಡದಿಂದ ಬಲೇ ತೆಲಿಪುಲೆ ನಾಟಕ, ಗಿರೀಶ್ ರೈ ಕಕ್ಕೆಪದವು, ಸತ್ಯನಾರಾಯಣ ಪಣಿಂಚಿತ್ತಾಯ ಮೊದಲಾದ ಕಲಾವಿದರಿಂದ ಯಕ್ಷಗಾನ ಗಾನ-ನೃತ್ಯ- ವೈಭವ- ಆದಿತ್ಯ ಮಂಜರಿ, ಜಾನಪದ ನಲಿಕೆಯಡಿ ದಯಾನಂದ ಕತ್ತಲ್‌ಸಾರ್ ನೇತೃತ್ವದಲ್ಲಿ ಕಂಗೀಲು ನೃತ್ಯ, ಕರ್‌ಂಗೋಲು ನೃತ್ಯ, ಚಿನ್ನು ನಲಿಕೆ, ಮಾದಿರ ನೃತ್ಯ ನಡೆಯಿತು.
ಬುಟ್ಟಿ ಹೆಣೆಯುವುದು, ಚಾಪೆ ಸಿದ್ಧಪಡಿಸುವುದು ನಮ್ಮ ಕುಲಕಸುಬು. ಕಳೆದ ಹಲವು ವರ್ಷಗಳಿಂದ ಇದೇ ವೃತ್ತಿ ಮಾಡಿಕೊಂಡು ಬರುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಪರಿಕರಗಳು ಬಂದು, ಸ್ಪರ್ಧೆ ಹೆತ್ಛಗಿರುವುದರಿಂದ ಬೇರೆ ಉದ್ಯೋಗ ಮಾಡುತ್ತಿದ್ದೇವೆ.
-ಗುಲಾಬಿ, ಕಾರ್ಕಳ ಇನೋಳಿ
ಕಂಬಳಕ್ಕೆ ಸ್ಥಳ ನೀಡಲು ಸರ್ಕಾರಕ್ಕೆ ಮನವಿ
ಬೆಂಗಳೂರಿನ ಜನರಿಗೆ ಪರಿಚಯಿಸಲು ಕಂಬಳ ಆಯೋಜನೆ ಮಾಡುವುದಕ್ಕೆ ಸಾಧ್ಯವಾಗುವಷ್ಟು ಜಾಗವನ್ನು ತುಳು ಕೂಟಕ್ಕೆ ನೀಡಬೇಕು, ತುಳುಭಾಷೆಯನ್ನು ಸಂವಿಧಾನದ 8ನೇ ಅನುಚ್ಛೇಧಕ್ಕೆ ಸೇರಿಸಬೇಕು. ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರು ಹಾಗೂ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ನಾಡೋಜ ಕಯ್ನಾರ ಕಿಞ್ಞಣ್ಣರೈ ಹೆಸರು ನಾಮಕರಣ ಮಾಡುವಂತೆ ಬೆಂಗಳೂರು ತುಳು ಕೂಟದ ಅಧ್ಯಕ್ಷ ಕೆ.ಜಯರಾಮ ಸೂಡ ಸೇರಿದಂತೆ ಪ್ರಮುಖರು ರಾಜ್ಯಪಾಲರಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರು.
ಸೆಲ್ಫಿ, ವಿಡಿಯೋ: ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡಲು ಪ್ರತಿಷ್ಠಾಪಿಸಿದ್ದ ಯಕ್ಷಗಾನ ಕಲಾಕೃತಿ, ತುಳುನಾಡಿನ ಸಂಸ್ಕೃತಿಕ ವೈಭವದ ಹಲವು ವುಸ್ತುಗಳ ಎದುರು ನಿಂತು ಸೆಲ್ಫಿ ತೆಗೆಯುವುದು, ಅದರ ವಿಡಿಯೋ ಚಿತ್ರಿಕರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.