ಸುರಂಗ ಸಂಚಾರದ ಸಂಕಟ
Team Udayavani, Mar 1, 2019, 6:12 AM IST
ಬೆಂಗಳೂರು: ಗೃಹೋಪಯೋಗಿ ಉಪಕರಣ, ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳು, ಮೊಬೈಲ್ ಬಿಡಿ ಭಾಗಗಳು, ತಿಂಡಿ-ತಿನಿಸು, ಹಣ್ಣು-ಹಂಪಲು, ಎಲೆಕ್ಟ್ರಾನಿಕ್ ಉಪಕರಣಗಳು ಹೀಗೆ ನಾನಾ ವಸ್ತುಗಳು ದೊರೆಯುವ ಈ ಜಾಗ ಮಾರುಕಟ್ಟೆ ಇಲ್ಲವೇ ಸೂಪರ್ ಮಾರ್ಕೆಟ್ ಅಲ್ಲ. ಬದಲಿಗೆ ಲಕ್ಷಾಂತರ ಜನ ನಿತ್ಯ ಸಂಚರಿಸುವ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸಂಪರ್ಕಿಸುವ ಪಾದಚಾರಿ ಸುರಂಗ ಮಾರ್ಗ.
ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಧನ್ವಂತರಿ ರಸ್ತೆ ಬಳಿಯಿಂದ ಆರಂಭವಾಗುವ ಪಾದಚಾರಿ ಸುರಂಗ ಮಾರ್ಗ ಹಾಗೂ ನಗರ ರೈಲು ನಿಲ್ದಾಣದ ಬಳಿಯಿರುವ ಸುರಂಗ ಮಾರ್ಗಗಳು ಅವ್ಯವಸ್ಥೆಯ ಆಗರವೆನಿಸಿವೆ. ಅನೈರ್ಮಲ್ಯ, ಬೀದಿ ವ್ಯಾಪಾರಿಗಳ ಹಾವಳಿಯಿಂದ ಜನರು ನೆಮ್ಮದಿಯಾಗಿ ನಡೆದಾಡಲು ಸಾಧ್ಯವಾಗದ ಸ್ಥಿತಿಯಿದೆ.
ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಕೆಂಪೇಗೌಡ ಬಸ್ ನಿಲ್ದಾಣಗಳಿಗೆ ಅಂದಾಜು ಐದು ಲಕ್ಷ ಜನ ನಿತ್ಯ ಬಂದು ಹೋಗುತ್ತಾರೆ. ಜತೆಗೆ ನಗರ ರೈಲು ನಿಲ್ದಾಣ ಹಾಗೂ ನಮ್ಮ ಮೆಟ್ರೋ ನಿಲ್ದಾಣಗಳಲ್ಲೂ ಲಕ್ಷಾಂತರ ಜನ ಸಂಚರಿಸುತ್ತಾರೆ. ಪರಿಣಾಮ ಪಾದಚಾರಿ ಸುರಂಗ ಮಾರ್ಗ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ.
ಆದರೆ, ಸುರಂಗ ಮಾರ್ಗದಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸಲು ಬಿಬಿಎಂಪಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ರೈಲ್ವೆ ಇಲಾಖೆ, ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಶಾಸಕರು ಸೇರಿ ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ. ಇದರಿಂದ ಸುರಂಗ ಮಾರ್ಗದಲ್ಲಿ ಸಂಚರಿಸಲು ಹಿಂದೇಟು ಹಾಕುವ ಪ್ರಯಾಣಿಕರು, ಗುಬ್ಬಿ ತೋಟದಪ್ಪ ಛತ್ರ ರಸ್ತೆಯಲ್ಲಿನ ನಾಲ್ಕೈದು ಅಡಿ ಎತ್ತರದ ಉಕ್ಕಿನ ವಿಭಜಕ ಹತ್ತಿಳಿಯುವ ಅಪಾಯಕಾರಿ ಸಾಹಸ ಮಾಡುತ್ತಿದ್ದಾರೆ.
ಪ್ರಮುಖ ನಿಲ್ದಾಣಗಳಿಗೆ ಸಂಪರ್ಕಿಸುವ ಉದ್ದೇಶದಿಂದ ಹತ್ತಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸುರಂಗ ಮಾರ್ಗದಲ್ಲಿ ಬೀದಿ ವ್ಯಾಪಾರಿಗಳೇ ತುಂಬಿದ್ದು, ಕೆಲವೆಡೆ ಮಲ-ಮೂತ್ರ ವಿಸರ್ಜನೆ, ತ್ಯಾಜ್ಯ ಸುರಿಯುವುದರಿಂದ ಅನೈರ್ಮಲ್ಯ ತಾಂಡವವಾಡುತ್ತಿದೆ.
ಅಪಾಯಕಾರಿ ಜಂಪಿಂಗ್: ಸುರಂಗ ಮಾರ್ಗದ ಅವ್ಯವಸ್ಥೆಗೆ ಬೇಸತ್ತ ಪಾದಚಾರಿಗಳು ಪ್ರಮುಖ ನಿಲ್ದಾಣಗಳಿಗೆ ಹೋಗಲು ನಾಲ್ಕೈದು ಅಡಿ ಎತ್ತರದ ಉಕ್ಕಿನ ವಿಭಜಕ ಹತ್ತಿ ಇಳಿಯುತ್ತಾರೆ. ಯುವಕರು, ವಯಸ್ಕರು ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳು ಸಹ ವಿಭಜಕ ಜಿಗಿದು ರಸ್ತೆ ದಾಟುತ್ತಿದ್ದಾರೆ. ಇದರಿಂದಾಗಿ ಹಲವು ಬಾರಿ ಅಪಘಾತ ಸಂಭವಿಸಿವೆ. ಶಾಂತಲಾ ಸಿಲ್ಕ್ಹೌಸ್, ಓಕಳಿಪುರ ಕಡೆಯಿಂದ ವೇಗವಾಗಿ ಬರುವ ವಾಹನಗಳಿಗೆ ದಿಢೀರ್ ಜನರು ಅಡ್ಡಬರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಅನೈರ್ಮಲ್ಯ ವಾತಾವರಣ: ಸ್ಥಳೀಯ ಸಂಸ್ಥೆಗಳು ಪಾದಚಾರಿ ಸುರಂಗಗಳ ನಿರ್ವಹಣೆ ಮಾಡದ ಕಾರಣ, ಹಗಲು ಕತ್ತಲೆ, ರಾತ್ರಿಯೂ ಕತ್ತಲೆ ಎಂಬ ಸ್ಥಿತಿಯಿದೆ. ಬಹುತೇಕ ಕಡೆ ಬಲ್ಬ್ಗಳು ನಿಷ್ಕ್ರಿಯಗೊಂಡಿವೆ. ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯಿಲ್ಲ. ಜತೆಗೆ ಸುರಂಗ ಮಾರ್ಗದ ಗೋಡೆಗಳು ಪಾನ್ ಉಗುಳಿನಿಂದ ವಿಕಾರವಾಗಿವೆ.
ಬೀದಿ ವ್ಯಾಪಾರಿಗಳ ಹಾವಳಿ: ಮೆಜೆಸ್ಟಿಕ್‌ನ ಪಾದಚಾರಿ ಸುರಂಗ ಮಾರ್ಗದ ಎರಡೂ ಬದಿಗಳಲ್ಲಿ ಬಟ್ಟೆ, ಗೃಹ ಬಳಕೆ ವಸ್ತು, ಅಲಂಕಾರಿಕ ವಸ್ತುಗಳು, ಆಟಿಕೆ ಇನ್ನಿತರ ವಸ್ತುಗಳ ಮಾರಾಟ ಮಾಡುವುದರಿಂದ ಪಾದಚಾರಿಗಳು ಓಡಾಡಲು ಸ್ಥಳವೇ ಇಲ್ಲದಂತಾಗಿದೆ. ಮತ್ತೂಂದೆಡೆ ಕೆಲ ವ್ಯಾಪಾರಿಗಳು ಉತ್ಪನ್ನಗಳನ್ನು ಖರೀದಿಸುವಂತೆ ಪ್ರಯಾಣಿಕರ ದುಂಬಾಲು ಬೀಳುವುದು ಕಿರಿಕಿರಿ ಉಂಟುಮಾಡುತ್ತದೆ.
ಸ್ವಚ್ಛತೆಗೆ ಕ್ರಮ ಕೈಗೊಳ್ಳುವರೇ ಮೇಯರ್?: ನಗರದ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ತಿಳಿಸಿರುವ ಮೇಯರ್ ಗಂಗಾಂಬಿಕೆ, ಈಗಾಗಲೇ ಕೆ.ಆರ್.ಮಾರುಕಟ್ಟೆಯ ಪಾದಚಾರಿ ಸುರಂಗ ಮಾರ್ಗ ಪರಿಶೀಲಿಸಿ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದಾರೆ. ಅದೇ ಮಾದರಿಯಲ್ಲಿ ನಗರದ ಹೃದಯ ಭಾಗದಲ್ಲಿರುವ ಈ ಪಾದಚಾರಿ ಸುರಂಗ ಮಾರ್ಗದ ಅವ್ಯವಸ್ಥೆಗಳಿಗೂ ಪರಿಹಾರ ಕಲ್ಪಿಸವರೇ ಎಂದು ಕಾದು ನೋಡಬೇಕಾಗಿದೆ.
ಪಬ್ಲಿಕ್ ಅಪೀಲ್: ರಾಜಧಾನಿಯಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ “ಮೆಟ್ರೋ ಫೋಕಸ್’ ಮೂಲಕ ಸ್ಥಳೀಯ ಸಂಸ್ಥೆಗಳ ಗಮನಕ್ಕೆ ತಂದು, ಪರಿಹಾರ ಕಲ್ಪಿಸುವ ಪ್ರಯತ್ನ “ಉಯದವಾಣಿ’ಯದ್ದು. ಈ ಹಿನ್ನೆಲೆಯಲ್ಲಿ, ತಮ್ಮ ಹೊಣೆ ನಿರ್ವಹಿಸುವಲ್ಲಿ ಸ್ಥಳೀಯ ಸಂಸ್ಥೆಗಳು ವಿಫಲವಾಗಿರುವುದು, ಎಷ್ಟೇ ದೂರು ಕೊಟ್ಟರೂ ತಿರುಗಿ ನೋಡದಿರುವುದು, ಕಾಮಗಾರಿ ಪೂರ್ಣಗೊಳಿಸದಿರುವುದು ಸೇರಿ ಪರಿಹಾರ ದೊರೆಯದ ಯಾವುದೇ ಸಮಸ್ಯೆ ನಿಮ್ಮ ಸುತ್ತ ಇದ್ದರೆ ನೀವೂ ನಮಗೆ ತಿಳಿಸಬಹುದು.
ವಾಟ್ಸ್‌ಆ್ಯಪ್: 88611 96369
ಇ-ಮೇಲ್: [email protected]
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.