ಕೋವಿಡ್-19 ಸಮರಕ್ಕೆ ಟಿವಿಎಸ್ ಕಂಪನಿ ನೆರವು
Team Udayavani, May 9, 2021, 2:56 PM IST
ಬೆಂಗಳೂರು: ಕೋವಿಡ್-19ವಿರುದ್ಧದ ಸಮರಕ್ಕೆ ನೆರವು ನೀಡಲು ಸಮಗ್ರ ಯೋಜನೆ ರೂಪಿ ಸಿರುವ ಟಿವಿಎಸ್ ಮೋಟಾರ್ ಕಂಪನಿಸುಂದರಂ ಕ್ಲೇಟಾನ್ ಹಾಗೂ ಇತರ ಸಮೂಹ ಸಂಸ್ಥೆಗಳ ಜೊತೆಗೊಡಿ ವೈದ್ಯ ಕೀಯ ಹಾಗೂ ಇತರ ಸೌಲಭ್ಯಗಳನ್ನು ಪೂರೈಸಲು 40 ಕೋಟಿ ರೂಪಾಯಿಗಳ ವಾಗ್ಧಾನ ಮಾಡಿದೆ.
ಟಿವಿಎಸ್ ಮೋಟಾರ್ ಮತ್ತು ಸುಂದರಂ ಕ್ಲೇಟಾನ್ ಲಿಮಿಟೆಡ್‌ನ ಸಾಮಾಜಿಕ ಅಂಗವಾಗಿರುವ ಶ್ರೀನಿವಾಸನ್ ಸರ್ವಿಸೆಸ್ ಟ್ರಸ್ಟ್ ಈ ಯೋಜನೆ ಕಾರ್ಯಗತಗೊಳಿಸಲಿದೆ. 40 ಕೋಟಿ ರೂ.ಮೊತ್ತವನ್ನು ಆಕ್ಸಿಜನ್ ಕಾನ್ಸನ್ಟ್ರೆಟರ್, ಪಿಪಿಇ ಕಿಟ್,ಔಷಧಿಗಳು, ವೈದ್ಯಕೀಯ ಉಪಕರಣಗಳು ಸೇರಿದಂತೆ ಜೀವರಕ್ಷಕ ಸೌಲಭ್ಯಗಳನ್ನು ಇಡೀದೇಶದಲ್ಲಿ ಪೂರೈಸಲು ಬಳಸಲಾಗುವುದು.
ಈ ಯೋಜನೆಯ ಭಾಗವಾಗಿ ಕರ್ನಾಟಕ,ತಮಿಳುನಾಡು, ಹಿಮಾಚಲ ಪ್ರದೇಶ ರಾಜ್ಯಗಳ ವಿವಿಧ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ 2 ಸಾವಿರ ಆಕ್ಸಿಜನ್ ಕಾನ್ಸನ್ಟ್ರೆಟರ್ ಒದಗಿಸಲಾಗುವುದು. ಪ್ರತಿದಿನ 20 ಸಾವಿರ ಆಹಾರದ ಪ್ಯಾಕೇಟ್‌ಗಳನ್ನು ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ತೊಡಗಿಸಿಕೊಂvವ ರಿಗೆ ವಿತರಿಸ ಲಾಗುವುದು.ಇದಲ್ಲದೆ ಈ ರಾಜ್ಯಗಳ 500ಕ್ಕೂಹೆಚ್ಚು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಕ್ಷಾಂತರ ಮಾಸ್ಕ್, ಸಾವಿರಾರು ಆಕ್ಸಿಮೀಟರ್ ಹಾಗೂಪಿಪಿಇ ಕಿಟ್‌ಗಳನ್ನು, ಹ್ಯಾಂಡ್ ಸ್ಯಾನಿಟೈಸರ್, ಅಗತ್ಯ ಔಷಧಿಗಳುನ್ನು ಪೂರೈಸಲಾಗುವುದು.
ಜೊತೆಗೆ ದೇಶದ ಗ್ರಾಮೀಣ ಭಾಗದ ಕೋವಿಡ್‌ಕೇರ್ ಸೆಂಟರ್‌ಗಳಲ್ಲಿ ಅಗತ್ಯ ನೆರವು ಒದಗಿಸಲು ಕಂಪೆನಿ ನಿರಂತರವಾಗಿ ಪ್ರಯತ್ನಿಸಲಿದೆ. ಯೋಜನೆ ಕುರಿತು ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಅಧ್ಯಕ್ಷ ವೇಣು ಶ್ರೀನಿವಾಸನ್, ಕೊರೊನಾ ಎರಡನೇ ಅಲೆ ಉಲ್ಬಣಗೊಂಡ ಪರಿಣಾಮ ಇಡೀದೇಶ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ಈ ಸಾಂಕ್ರಾಮಿಕದ ಪ್ರಭಾವದಿಂದ ಹೊರಬರಬೇಕಾ ದರೆಸಂಘಟಿತ ಪ್ರಯತ್ನಗಳನ್ನು ನಡೆಸಬೇಕಾ ಗಿದೆ. ಈನಿಟ್ಟಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಲು ಟಿವಿಎಸ್ ಮೋಟಾರ್ ಸಿದ œವಿದೆ ಎಂದು ಹೇಳಿದರು.
ಚೆನೈ„ನ ರಾಜೀವಗಾಂಧಿ ಸಾರ್ವಜನಿಕ ಆಸ ³ತ್ರೆ,ಸ್ಟೇನ್ಲ ಮೆಡಿಕಲ್ ಕಾಲೇಜು ಆಸ ³ತ್ರೆಯ ಜೊತೆಗೆಟಿವಿಎಸ್ ಮೋಟಾರ್ ಕೆಲಸ ಮಾಡುತ್ತಿದೆ.ಕಾರ್ಖಾನೆ ಇರುವ ಹೊಸೂರು, ಮೈಸೂರಿನಲ್ಲಿಎರಡು ಆ್ಯಂಬುಲೆನ್ಸ್‌ಗಳನ್ನು ಸ್ಥಳೀಯ ಆಡಳಿತಕ್ಕೆಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.